
ಮುಂಬೈ(ಅ.27): ವ್ಯಾಪಾರಸ್ಥರ ಸ್ವರ್ಗ ಗುಜರಾತ್ ರಾಜ್ಯದಲ್ಲಿ ಬರೋಬ್ಬರಿ 58 ಜನ ಕುಬೇರರಿದ್ದಾರೆ. ಇವರ ಬಳಿ ಸಾವಿರ ಕೋಟಿಗೂ ಅಧಿಕ ನಿವ್ವಳ ಆಸ್ತಿ ಇದೆ. ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ 2018ರ ವರದಿ ಪ್ರಕಾರ ಅತಿಹೆಚ್ಚು ಶತಕೋಟ್ಯಾಧಿಪತಿಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ನಾಲ್ಕನೇ ಸ್ಥಾನ ಪಡೆದಿದೆ.
ಆದರೆ ಮತ್ತೊಂದು ಅಚ್ಚರಿ ವಿಷಯವೆಂದರೆ ಗುಜರಾತ್‌ನ ಎಲ್ಲಾ ಶ್ರೀಮಂತರ ಬಳಿ ಇರುವ ಆಸ್ತಿಗಿಂತ ಹೆಚ್ಚಿನ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಒಬ್ಬರೇ ಹೊಂದಿದ್ದಾರೆ.
ಗುಜರಾತ್‌ನ 58 ಶತಕೋಟ್ಯಾಧಿಪತಿಗಳ ಒಟ್ಟು ಆಸ್ತಿ ಸೇರಿಸಿದರೆ 2.54 ಲಕ್ಷ ಕೋಟಿ ರೂ. ಆಗುತ್ತದೆ. ಆದರೆ ಮುಖೇಶ್ ಅಂಬಾನಿ ಒಬ್ಬರೇ ಬರೋಬ್ಬರಿ 3.71 ಲಕ್ಷ ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ವಿಶೇಷ ಸಂಗತಿ ಎಂದರೆ ಅಂಬಾನಿ ಕೂಡ ಗುಜರಾತ್ ಮೂಲದವರಾಗಿದ್ದಾರೆ.
ಗುಜರಾತ್ ಮೋದಿ ತವರೂರು: ಇಲ್ಲಿದ್ದಾರೆ 58 ಕುಬೇರರು!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.