ಇದಪ್ಪಾ ಏಟು ಅಂದ್ರೆ, ದೊಡ್ಡ ಪಟ್ಟ ಕಳೆದುಕೊಂಡ ಮುಖೇಶ್ ಅಂಬಾನಿ

Published : Mar 10, 2020, 09:08 PM ISTUpdated : Mar 10, 2020, 09:16 PM IST
ಇದಪ್ಪಾ ಏಟು ಅಂದ್ರೆ, ದೊಡ್ಡ ಪಟ್ಟ ಕಳೆದುಕೊಂಡ ಮುಖೇಶ್ ಅಂಬಾನಿ

ಸಾರಾಂಶ

ಮುಖೇಶ್ ಅಂಬಾನಿಗೆ ಮತ್ತೊಂದು ದೊಡ್ಡ ಆಘಾತ/ ಏಷ್ಯಾದ ನಂಬರ್ 1 ಶ್ರೀಮಂತ ಪಟ್ಟ ಕಳೆದುಕೊಂಡ ರಿಲಯನ್ಸ್ ದೊರೆ/  ಷೇರು ಮಾರುಕಟ್ಟೆಯಲ್ಲಿನ ತಲ್ಲಣ ತಂದ ಸಮಸ್ಯೆ

ಮುಂಬೈ[ಮಾ. 10]  ಕರೋನಾ ವೈರಸ್ ಯಾರ ಯಾರದ್ದೋ ಸ್ಥಾನ ಬದಲಾಯಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಮತ್ತು ಷೇರು ಮಾರುಕಟ್ಟೆಯ ಕುಸಿತದ ಕಾರಣದಿಂದ ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟವನ್ನು ಕಳೆದುಕೊಂಡಿದ್ದಾರೆ. ಮುಖೇಶ್ ಜಾಗವನ್ನು ಅಲಿಬಾಬಾ ಖ್ಯಾತಿಯ ಜಾಕ್ ಮಾ  ಅಲಂಕರಿಸಿದ್ದಾರೆ.

ಈ ಮೂಲಕ ಏಷ್ಯಾದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆ ಇಂದಿನ ದಿನಕ್ಕೆ ಜಾಕ್ ಮಾ ಪಾಲಾಗಿದೆ.  ತೈಲ ದರ ಸಮರ, ಕೊರೋನಾ ಭೀತಿಯ ಕಾರಣದಿಂದ ಷೇರು ಮಾರುಕಟ್ಟೆ ಪಾತಾಳಕ್ಕೆ ಮುಖ ಮಾಡಿ ಶೇರು ಮಾರುಕಟ್ಟೆಯಲ್ಲಿ ದಿಢೀರ್ ಬದಲಾವಣೆಗಳು ನಡೆದಿದ್ದವು. ಸೋಮವಾರ ರಿಲಯನ್ಸ್ ಸೇರಿದಂತೆ ಹಲವಾರು ಕಂಪನಿಗಳ ಶೇರುಗಳು ಕುಸಿತ ಕಂಡಿದ್ದವು. ಸೋಮವಾರ ಒಂದೇ ದಿನ ಮುಖೇಶ್ ಅಂಬಾನಿ 42,855 ಕೋಟಿ ರೂ. ಕಳೆದುಕೊಂಡಿದ್ದರು.

ಪ್ರತಿ ಗಂಟೆಗೆ ಅಂಬಾನಿ ಗಳಿಕೆ 9 ಕೋಟಿ ರೂ. !

ಸದ್ಯ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನಕ್ಕೆ ತಲುಪಿರುವ ಜಾಕ್ ಮಾ ಆಸ್ತಿ 44.5 ಬಿಲಿಯನ್ ಡಾಲರ್ ಇದ್ದರೆ  ಅಂಬಾನಿ ಬಳಿ 42  ಬಿಲಿಯನ್ ಡಾಲರ್ ಮೊತ್ತದ ಆಸ್ತಿ ಇದೆ. 2018ರಲ್ಲಿ ಮುಖೇಶ್ ಅಂಬಾನಿ ಏಷ್ಯಾದ ನಂ.1 ಶ್ರೀಮಂತ ಸ್ಥಾನಕ್ಕೇರಿದ್ದರು. ತಮ್ಮ ಜಿಯೋ ಸಾಮ್ರಾಜ್ಯದ ಮೂಲಕ ಕೋಟ್ಯಂತರ ಗ್ರಾಹಕರನ್ನು ಪಡೆದುಕೊಂಡಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!