ನಾನು ಮೋದಿ ಅಭಿಮಾನಿ,ಅವರೊಬ್ಬ ಅತ್ಯುತ್ತಮ ಪ್ರಧಾನಿ: ಟೆಸ್ಲಾ ಸಿಇಒ ಎಲಾನ್ ಮಸ್ಕ್

Published : Jun 21, 2023, 10:00 AM ISTUpdated : Jun 21, 2023, 10:24 AM IST
ನಾನು ಮೋದಿ ಅಭಿಮಾನಿ,ಅವರೊಬ್ಬ ಅತ್ಯುತ್ತಮ ಪ್ರಧಾನಿ: ಟೆಸ್ಲಾ ಸಿಇಒ ಎಲಾನ್ ಮಸ್ಕ್

ಸಾರಾಂಶ

ವಿಶ್ವದ ಶ್ರೀಮಂತ ಉದ್ಯಮಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ನಾನು ಮೋದಿ ಅಭಿಮಾನಿ ಎಂದಿರುವ ಮಸ್ಕ್, ಅವರ ನೇತೃತ್ವದಲ್ಲಿ ಭಾರತ ಸಾಧಿಸಿರುವ ಪ್ರಗತಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಇಂಗಿತ ಕೂಡ ವ್ಯಕ್ತಪಡಿಸಿದ್ದಾರೆ.   

ನ್ಯೂಯಾರ್ಕ್ (ಜೂ.21): ಟೆಸ್ಲಾ  ಸಿಇಒ ಎಲಾನ್ ಮಸ್ಕ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿಯಾದ ಎಲಾನ್ ಮಸ್ಕ್ 'ನಾನು ಮೋದಿ ಅವರ ಅಭಿಮಾನಿ. ಅವರು ಒಬ್ಬ ಅತ್ಯುತ್ತಮ ಪ್ರಧಾನಿ' ಎಂದು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಇಂಗಿತವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗಿನ ಭೇಟಿ ಸಂದರ್ಭದಲ್ಲಿ ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಸೇರಿದಂತೆ ಅನೇಕ ಭವಿಷ್ಯದ ಯೋಜನೆಗಳ ಬಗ್ಗೆ ಹಾಗೂ ಬಾಹ್ಯಾಕಾಶ ಕಾರ್ಯಕ್ರಮ ಸ್ಪೇಸ್ ಎಕ್ಸ್ ಕುರಿತು ಕೂಡ ಚರ್ಚೆ ನಡೆಸಿದ್ದಾರೆ. ಇನ್ನು ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನೆ ಘಟಕ ಸ್ಥಾಪಿಸುವ ಬಗ್ಗೆ ಕೂಡ ಈ ಭೇಟಿ ಬಳಿಕ ಮಸ್ಕ್ ಒಲವು ವ್ಯಕ್ತಪಡಿಸಿರೋದು ಹೊಸ ಭರವಸೆ ಮೂಡಿಸಿದೆ. ಇತ್ತೀಚೆಗಷ್ಟೇ ಟೆಸ್ಲಾ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹಗಳ ಬಿಡಿ ಭಾಗಗಳ ಜೋಡಣೆ ಘಟಕದ  ಹೊರತಾಗಿ ಮಾರಾಟಗಾರರ ಕೇಂದ್ರ ತೆರೆಯಲು ಒಪ್ಪಿಗೆ ಸೂಚಿಸಿತ್ತು.

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್, ಪ್ರಸಕ್ತ ಸರ್ಕಾರದ ಆಡಳಿತದಲ್ಲಿ ಭಾರತದ ಅಭಿವೃದ್ಧಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾರತದ ಭವಿಷ್ಯದ ಬಗ್ಗೆ ನಾನು ಉತ್ಸುಕತೆ ಹೊಂದಿದ್ದೇನೆ ಎಂದಿದ್ದಾರೆ. 'ಮೋದಿ ಅವರು ಭಾರತದ ಬಗ್ಗೆ ತುಂಬಾ ಕಾಳಜಿ ಹೊಂದಿದ್ದಾರೆ. ಅದಕ್ಕಾಗಿಯೇ ಅವರು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದಾರೆ' ಎಂದು ಮಸ್ಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಮೋದಿ ಅವರ ಜೊತೆಗಿನ ಭೇಟಿ ಅತ್ಯುತ್ತಮವಾಗಿತ್ತು ಎಂದು ಬಣ್ಣಿಸಿರುವ ಮಸ್ಕ್, ಇದೊಂದು ಅದ್ಭುತ ಮಾತುಕತೆಯಾಗಿತ್ತು ಎಂದಿದ್ದಾರೆ. 

'ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕಾಗಿ ಸರಿಯಾದ ಕೆಲಸಗಳನ್ನೇ ಮಾಡಲು ಬಯಸುತ್ತಾರೆ. ಹೊಸ ಕಂಪನಿಗಳಿಗೆ ಅವರು ಉದಾರ ನೀತಿ ತೋರುತ್ತಿದ್ದಾರೆ. ಹಾಗೆಯೇ ಭಾರತದಲ್ಲಿ ಹೊಸ ಕಂಪನಿಗಳನ್ನು ತೆರೆದ ತೋಳುಗಳಿಂದ ಸ್ವಾಗತಿಸಲು ಬಯಸುತ್ತಾರೆ' ಎಂದು ಮಸ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಟೆಸ್ಲಾ ಪ್ರಾಜೆಕ್ಟ್ ಪ್ರಾರಂಭಿಸುವ ಸುಳಿವು ನೀಡಿದ ಮಸ್ಕ್
ಟೆಸ್ಲಾ ಸಿಇಒ ಎಲಾನ್ ಮಸ್ಕ್, ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ಕಾರ್ಖಾನೆ ಸ್ಥಾಪಿಸುವ ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ, ಭಾರತದಲ್ಲಿ ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಈಗಲೇ ಘೋಷಣೆ ಮಾಡುವ ಯಾವುದೇ ಆತುರತೆ ತೋರುವುದಿಲ್ಲ ಎಂದು ಕೂಡ ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಪ್ರಮುಖ ಎಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿ ಟೆಸ್ಲಾ ಇಂಕ್ (Tesla Inc) ಬಹುಸಮಯದಿಂದ ಭಾರತಕ್ಕೆ ಆಗಮಿಸಲು ಪ್ರಯತ್ನ ನಡೆಸುತ್ತ ಬಂದಿದೆ. ಕೇಂದ್ರ ಸರ್ಕಾರ ಹಾಗೂ ಟೆಸ್ಲಾ ಅಧಿಕಾರಿಗಳ ನಡುವೆ ಈ ಸಂಬಂಧ ಈ ಹಿಂದೆ ಅನೇಕ ಸುತ್ತಿನ ಮಾತುಕತೆಗಳು ಕೂಡ ನಡೆದಿವೆ. ಇತ್ತೀಚೆಗಷ್ಟೇ ಟೆಸ್ಲಾ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹಗಳ ಬಿಡಿ ಭಾಗಗಳ ಜೋಡಣೆ ಘಟಕದ  ಹೊರತಾಗಿ ಮಾರಾಟಗಾರರ ಕೇಂದ್ರ ತೆರೆಯಲು ಒಪ್ಪಿಗೆ ಸೂಚಿಸಿತ್ತು ಕೂಡ.  'ಟೆಸ್ಲಾ ಭಾರತದಲ್ಲಿ ಇರಲಿದೆ ಹಾಗೂ ಇದು ಆದಷ್ಟು ಶೀಘ್ರದಲ್ಲಿ ಸಾಧ್ಯವಾಗಲಿದೆ ಎಂಬ ವಿಶ್ವಾಸ ನನಗಿದೆ' ಎಂದು ಮಸ್ಕ್ ತಿಳಿಸಿದ್ದಾರೆ.

ಮೋದಿ ಶ್ವೇತ​ಭ​ವನ ಔತ​ಣಕ್ಕೆ ಕರ್ನಾಟಕದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ಗೆ ಆಹ್ವಾ​ನ

ಇನ್ನು ಭಾರತದಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿರುವ ಮಸ್ಕ್, ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆ ಸ್ಟಾರ್ ಲಿಂಕ್ ಅನ್ನು ಭಾರತಕ್ಕೆ ತರುವ ಬಗ್ಗೆ ಹೇಳಿದ್ದಾರೆ. ಇದರಿಂದ ಇಂಟರ್ನೆಟ್ ಸಂಪರ್ಕವಿಲ್ಲದ ಭಾರತದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದು ಮಸ್ಕ್ ತಿಳಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ (ಜೂ.21) ಜೂ.24ರ ತನಕ ಅಂದ್ರೆ ನಾಲ್ಕು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿದ್ದಾರೆ. ಅಮೆರಿಕ ಪ್ರಧಾನಿ ಜೋ ಬಿಡೆನ್ ಹಾಗೂ ಪ್ರಥಮ ಮಹಿಳೆ ಜಿಲ್ ಬೈಡೆನ್ ಆಹ್ವಾನದ ಮೇರೆಗೆ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌