ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಶ್ರೀಮಂತ

By Suvarna News  |  First Published Aug 9, 2020, 9:53 AM IST

ರಿಲಯನ್ಸ್ ಇಂಡಸ್ಟ್ರೀಸ್ ಮಾಲಿಕ ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಸಿರಿವಂತನಾಗಿ ಹೊರ ಹೊಮ್ಮಿದ್ದಾರೆ.  ಬ್ಲೂಮ್‌ಬರ್ಗ್ ಬಿಲಿಯನೆರ್ಸ್ ಸೂಚ್ಯಂಕದ ಅನ್ವಯ 6.048 ಲಕ್ಷ ಕೋಟಿ ರೂ ಆಸ್ತಿಯೊಂದಿಗೆ 5 ನೇ ಸ್ಥಾನಕ್ಕೆ ಜಿಗಿದಿದ್ದಾರೆ. 


ಬೆಂಗಳೂರು (ಆ. 09): ರಿಲಯನ್ಸ್ ಇಂಡಸ್ಟ್ರೀಸ್ ಮಾಲಿಕ ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಸಿರಿವಂತನಾಗಿ ಹೊರ ಹೊಮ್ಮಿದ್ದಾರೆ.  ಬ್ಲೂಮ್‌ಬರ್ಗ್ ಬಿಲಿಯನೆರ್ಸ್ ಸೂಚ್ಯಕ್ಯಂದ ಅನ್ವಯ 6.048 ಲಕ್ಷ ಕೋಟಿ ರೂ ಆಸ್ತಿಯೊಂದಿಗೆ 5 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ವರೆಗೆ ಫ್ರಾನ್ಸ್‌ನ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್‌ (6.18 ಲಕ್ಷ ಕೋಟಿ ರೂ) 4 ನೇ ಸ್ಥಾನದಲ್ಲಿದ್ದರು. 

ಪ್ರಸಕ್ತ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ 14 ಲಕ್ಷ ಕೋಟಿ (187.8 ಬಿಲಿಯನ್ ಡಾಲರ್) ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರು.  ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್ ಗೆಟ್ಸ್  9 ಲಕ್ಷ ಕೋಟಿ ರೂ (121 ಬಿಲಿಯನ್ ಡಾಲರ್) ಆಸ್ತಿಯೊಂದಿಗೆ 2 ನೇ ಸ್ಥಾನದಲ್ಲಿ, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕನ್ ಬರ್ಗ್ ಅವರು 7.6 ಲಕ್ಷ ಕೋಟಿ ರೂ (102 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

Latest Videos

10 ಸಾವಿರ ಕೋಟಿಗಳೊಂದಿಗೆ ಓಡಿಹೋದ ವಿಜಯ ಮಲ್ಯ ಈಗ ಹೇಗಿದ್ದಾರೆ ಗೊತ್ತಾ?

click me!