ಇಂದು ದೇಶಾದ್ಯಂತ ‘ಚೀನಾ ಕ್ವಿಟ್‌ ಇಂಡಿಯಾ’ ಆಂದೋಲನ

Kannadaprabha News   | Asianet News
Published : Aug 07, 2020, 12:05 PM IST
ಇಂದು ದೇಶಾದ್ಯಂತ ‘ಚೀನಾ ಕ್ವಿಟ್‌ ಇಂಡಿಯಾ’ ಆಂದೋಲನ

ಸಾರಾಂಶ

ಚೀನೀ ವಸ್ತುಗಳಿಗೆ ಬಹಿಷ್ಕಾರದ ಕೂಗು ಜೋರಾಗಿರುವ ಬೆನ್ನಲ್ಲೇ, ದೇಶದ ಉದ್ಯಮಿಗಳ ಸಂಘಟನೆಯಾದ ಅಖಿಲ ಭಾರತ ಉದ್ಯಮಿಗಳ ಕಾನ್ಫಿಡರೇಷನ್‌ ಸಂಘಟನೆ(ಸಿಎಐಟಿ) ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷರ ವಿರುದ್ಧ ಕರೆ ನೀಡಲಾಗಿದ್ದ ಕ್ವಿಟ್‌ ಇಂಡಿಯಾ ರೀತಿ ಶುಕ್ರವಾರ ‘ಚೀನಾ ಕ್ವಿಟ್‌ ಇಂಡಿಯಾ’ ಆಂದೋಲನಕ್ಕೆ ಕರೆ ನೀಡಿದೆ.  ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನೋಯ್ಡಾ(ಆ.07): ಗಲ್ವಾನ್‌ ಗಡಿ ಬಿಕ್ಕಟ್ಟು ಬಳಿಕ ದೇಶಾದ್ಯಂತ ಚೀನೀ ವಸ್ತುಗಳಿಗೆ ಬಹಿಷ್ಕಾರದ ಕೂಗು ಜೋರಾಗಿರುವ ಬೆನ್ನಲ್ಲೇ, ದೇಶದ ಉದ್ಯಮಿಗಳ ಸಂಘಟನೆಯಾದ ಅಖಿಲ ಭಾರತ ಉದ್ಯಮಿಗಳ ಕಾನ್ಫಿಡರೇಷನ್‌ ಸಂಘಟನೆ(ಸಿಎಐಟಿ) ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷರ ವಿರುದ್ಧ ಕರೆ ನೀಡಲಾಗಿದ್ದ ಕ್ವಿಟ್‌ ಇಂಡಿಯಾ ರೀತಿ ಶುಕ್ರವಾರ ‘ಚೀನಾ ಕ್ವಿಟ್‌ ಇಂಡಿಯಾ’ ಆಂದೋಲನಕ್ಕೆ ಕರೆ ನೀಡಿದೆ. 

ದೇಶಾದ್ಯಂತ 40 ಸಾವಿರ ಉದ್ಯಮಿಗಳ ಸಂಘಟನೆಗಳನ್ನು ಒಳಗೊಂಡಿರುವ ಸಿಎಐಟಿಯ ನೇತೃತ್ವದಲ್ಲಿ ಭಾರತದ ಸರಕುಗಳು ನಮ್ಮ ಹೆಮ್ಮೆ ಎಂಬ ಅಭಿಯಾನದ ಭಾಗವಾಗಿ ದೇಶದ 600 ನಗರಗಳಲ್ಲಿ ಆಗಸ್ಟ್‌ 9ರಂದು ‘ಚೀನಾ ಕ್ವಿಟ್‌ ಇಂಡಿಯಾ’ ಆಂದೋಲನದ ಆಚರಣೆ ನಡೆಸುವುದಾಗಿ ಸಿಎಐಟಿ ಗುರುವಾರದ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಶಿಕ್ಷಣ ರೀತಿ ಬಗ್ಗೆ ಪ್ರಧಾನಿ ಮಾತು..! ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ಮೋದಿ

ಈ ಸಂದರ್ಭದಲ್ಲಿ ತತ್‌ಕ್ಷಣವೇ ದೇಶದ 5ಜಿ ನೆಟ್‌ವರ್ಕ್ ಯೋಜನೆಯಡಿ ಚೀನಾದ ಕಂಪನಿ ಹುವಾಯ್‌ ಮೇಲೆ ನಿಷೇಧ, ದೇಶದ ಸ್ಟಾರ್ಟಪ್‌ಗಳಲ್ಲಿ ಚೀನೀ ಕಂಪನಿಗಳ ಹೂಡಿಕೆ ಹಿಂತೆಗೆತಕ್ಕೆ ಸರ್ಕಾರ ಕ್ರಮ ವಹಿಸಬೇಕು. ಅಲ್ಲದೆ, ಭಾರತದ ಉದ್ಯಮಿಗಳಿಗೆ ಆರ್ಥಿಕ ನೆರವು ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ಸಿಎಐಟಿಯ ಎನ್‌ಸಿಆರ್‌ ಘಟಕದ ಅಧ್ಯಕ್ಷ ಸುಶೀಲ್‌ ಕುಮಾರ್‌ ಜೈನ್‌ ಹೇಳಿದ್ದಾರೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?