1 ಲಕ್ಷಕ್ಕೆ, 17 ದಿನದಲ್ಲಿ 100 ಕೋಟಿ ಸಂಪಾದನೆ; ನಂಬಲು ಆಗ್ತಿಲ್ವಾ? ಇಲ್ಲಿ ಎಲ್ಲವೂ ಸಾಧ್ಯ!

By Mahmad Rafik  |  First Published Oct 1, 2024, 1:12 PM IST

ಒಬ್ಬ ವ್ಯಕ್ತಿ ಕೇವಲ ₹1 ಲಕ್ಷ ಹೂಡಿಕೆ ಮಾಡಿ ಕೇವಲ 17 ದಿನಗಳಲ್ಲಿ ₹100 ಕೋಟಿ ಗಳಿಸಿದ್ದಾರೆ ಎಂದು ವರದಿಯಾಗಿದೆ. ಈ ವ್ಯಕ್ತಿ ತನ್ನ ಹಣವನ್ನು ಮೂ ಡೆಂಗ್ ಮಿಮಿಕಾಯಿನ್‌ನಲ್ಲಿ ಹೂಡಿಕೆ ಮಾಡಿದ್ದಾರೆ, ಇದು ಇತ್ತೀಚೆಗೆ ಬಿಡುಗಡೆಯಾದ ಕ್ರಿಪ್ಟೋಕರೆನ್ಸಿಯಾಗಿದೆ. 


ನವದೆಹಲಿ: ಇಂದು ಜೇಬಿನಲ್ಲಿ 10 ರೂಪಾಯಿ ಉಳಿದರೂ ಅದನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂದು ಬಹುತೇಕ ಜನರು ಯೋಚಿಸುತ್ತಾರೆ. ಕಡಿಮೆ ಹಣ ಹೂಡಿಕೆ ಮಾಡಿ, ಅಲ್ಪಾವಧಿಯಲ್ಲಿ ಹೆಚ್ಚು ಆದಾಯ ಪಡೆಯೋದು ಹೇಗೆ ಅಂತ ಹೂಡಿಕೆದಾರರು ಯೋಚನೆ ಮಾಡುತ್ತಿರುತ್ತಾರೆ. ಇಲ್ಲೊಬ್ಬ ವ್ಯಕ್ತಿ ಕೇವಲ 1 ಲಕ್ಷ ರೂ. ಹೂಡಿಕೆ ಮಾಡಿ ಕೇವಲ 17 ದಿನದಲ್ಲಿ ಬರೋಬ್ಬರಿ 100 ಕೋಟಿ ರೂ. ಹಣವನ್ನು ಸಂಪಾದಿಸಿದ್ದಾನೆ ಅಂದ್ರೆ ನೀವು ನಂಬಲೇಬೇಕು. ಈ ವ್ಯಕ್ತಿ ತನ್ನ 1 ಲಕ್ಷ ರೂಪಾಯಿ ಹಣವನ್ನ ಕ್ರಿಪ್ಟೋಕರೆನ್ಸಿಯಲ್ಲಿ (Cryptocurrency) ಹೂಡಿಕೆ ಮಾಡಿ, ಒಳ್ಳೆಯ ರಿಟರ್ನ್ ತನ್ನದಾಗಿಸಿಕೊಂಡಿದ್ದಾನೆ. 

ಈ ವ್ಯಕ್ತಿ ತನ್ನ ಬಳಿಯಲ್ಲಿದ್ದ 1300 ಡಾಲರ್ (ಅಂದಾಜು 1 ಲಕ್ಷ ರೂ) ಹಣವನ್ನು ಇತ್ತೀಚೆಗಷ್ಟೇ ಲಾಂಚ್ ಆಗಿದ್ದ ಮೂ ಡೆಂಗ್ ಮಿಮಕಾಯಿನ್‌ನಲ್ಲಿ (Moo Deng memecoin)  ಹೂಡಿಕೆ ಮಾಡಿದ್ದನು. ಹೂಡಿಕೆ ಮಾಡಿದ 17ನೇ ದಿನಕ್ಕೆ 1 ಲಕ್ಷ ರೂಪಾಯಿ 1.2 ಕೋಟಿ ಡಾಲರ್ (ಅಂದಾಜು 100 ಕೋಟಿ ರೂ) ಆಗಿದೆ.

Tap to resize

Latest Videos

ಬ್ಯುಸಿನೆಸ್ ಟುಡೇ ವರದಿ ಪ್ರಕಾರ, ಲೋಕೋನಚೆನ್ (Lookonchain) ಹೆಸರಿನ ಅಕೌಂಟ್ ಬ್ಲಾಕ್‌ಚೆನ್ ಇನ್ವೆಸ್ಟೆಮೆಂಟ್ ಮೇಲೆ ಪೋಕಸ್ ಮಾಡಿರುತ್ತಾನೆ. ಹೂಡಿಕೆದಾರ 1300 ಡಾಲರ್ ನಲ್ಲಿ 9.8 ಸೊಲಾನಾ ಟೋಕನ್ ಪಡೆದುಕೊಂಡು ಮೂ ಡೆಂಗ್ ಮಿಮಕಾನ್ ನಲ್ಲಿ ಸೆಪ್ಟೆಂಬರ್ 10ರಂದು ಹೂಡಿಕೆ ಮಾಡಿದ್ದಾನೆ. ಇದು 27ನೇ ಸೆಪ್ಟೆಂಬರ್‌ ವೇಳೆಗೆ 1.2 ಕೋಟಿ ಡಾಲರ್ ಆಗಿತ್ತು. 

21 ವರ್ಷಕ್ಕೆ 71 ಲಕ್ಷ ರೂಪಾಯಿ! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಹೇಗೆ?

ಈ ಹೂಡಿಕೆ ಮೇಲೆ ಅನುಮಾನ ವ್ಯಕ್ತವಾಗಿದೆ. ಹೂಡಿಕೆದಾರನಿಗೆ ಮೊದಲೇ ಮಾಹಿತಿ ಇರೋದರಿಂದಲೇ ಇಷ್ಟ ಹಣ ಹೂಡಿಕೆ ಮಾಡಿದ್ದಾನೆ. ಇದನ್ನು ಇನ್‌ಸೈಡರ್ ಟ್ರೇಡಿಂಗ್ ಎಂದು ಆರೋಪಿಸಿದ್ದಾರೆ. ಕಡಿಮೆ ಸಮಯದಲ್ಲಿ ಇಷ್ಟು ಆದಾಯ ಸಂಪಾದಿಸೋದು ಸಾಧ್ಯವಿಲ್ಲ ಎಂದು ಹೂಡಿಕೆದಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೂ ಡೆಂಗ್ ಕಾಯಿನ್ ಡಾಗ್‌ಕಾಯಿನ್‌ನಂತೆಯೇ ಅದೇ ಆನ್‌ಲೈನ್ ಪ್ರೊಡೆಕ್ಟ್ ಆಗಿದೆ. ಮೂ ಡೆಂಗ್ ಕಾಯಿನ್ ಸೆಪ್ಟೆಂಬರ್ 27 ರಂದು ಕೇವಲ 24 ಗಂಟೆಗಳಲ್ಲಿ 90 ಪ್ರತಿಶತದಷ್ಟು ಜಿಗಿತ ಕಂಡಿದೆ ಎಂದು ವರದಿಯಾಗಿದೆ. ಮೂ ಡೆಂಗ್ ಕಾಯಿನ್  ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗಿರುವ ಕಾರಣ ಮೂ ಡೆಂಗ್ ಕಾಯಿನ್ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. 

ಮನೆಯಲ್ಲಿಯೇ ಕುಳಿತು ಆಗಿ ಲಕ್ಷಾಧಿಪತಿ, ಕೋಟ್ಯಧಿಪತಿ; ಕೆಲವರಿಗೆ ಮಾತ್ರ ಗೊತ್ತಿರೋ ವ್ಯವಹಾರದ್ದು 99% ರಷ್ಟಿದೆ ಸಕ್ಸಸ್ ರೇಟ್

click me!