ಮುಖೇಶ್ ಅಂಬಾನಿಗಿಂತ ಹತ್ತು ಪಟ್ಟು ಮುಂದಿದ್ದ ರತನ್ ಟಾಟಾ, ದಿಗ್ಗಜನ ಸಾವಿನಿಂದ ಲಾಭ ಯಾರಿಗೆ?

By Roopa Hegde  |  First Published Oct 14, 2024, 1:16 PM IST

ದೇಶದ ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಕಳೆದುಕೊಂಡ ದೇಶ ಅನಾಥವಾಗಿದೆ. ಅವರ ನಿಧನದ ನಂತ್ರ ಬ್ಯುಸಿನೆಸ್ ಲೆಕ್ಕಾಚಾರ ಶುರುವಾಗಿದೆ. ಎಲ್ಲರ ಕಣ್ಣು ಈಗ ಮುಖೇಶ್ ಅಂಬಾನಿ ಮೇಲೆ ನೆಟ್ಟಿದೆ. 
 

Mukesh Ambani benefits after Ratan Tata demise roo

ದೇಶದ ಅತಿದೊಡ್ಡ ಕೈಗಾರಿಕೋದ್ಯಮಿ ರತನ್ ಟಾಟಾ (Industrialist Ratan Tata) ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ರತನ್ ಟಾಟಾ ನಿಧನಕ್ಕೆ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Rich businessman Mukesh Ambani) ಸಂತಾಪ ಸೂಚಿಸಿದ್ದಾರೆ. ಮುಖೇಶ್ ಅಂಬಾನಿ ಕುಟುಂಬ, ರತನ್ ಟಾಟಾ ಅಂತಿಮ ದರ್ಶನ ಪಡೆದಿತ್ತು. ರತನ್ ಟಾಟಾ ನಿಧನದ ನಂತ್ರ ಲಾಭ ನಷ್ಟದ ಲೆಕ್ಕಾಚಾರ ಶುರುವಾಗಿದೆ. ಇಡೀ ದೇಶವೇ ರತನ್ ಕಳೆದುಕೊಂಡು ನಷ್ಟ ಅನುಭವಿಸ್ತಿದ್ರೆ ಮುಖೇಶ್ ಅಂಬಾನಿಗೆ ಇದ್ರಿಂದ ಲಾಭವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ರತನ್ ಟಾಟಾ ಸಾವನ್ನು ಅಂಬಾನಿ ಕುಟುಂಬ ಸಂಭ್ರಮಿಸ್ತಿಲ್ಲ. ಇದ್ರಿಂದ ಇಡೀ ಕುಟುಂಬಕ್ಕೆ ದುಃಖ, ನೋವಾಗಿದೆ. ಆದ್ರೆ ಲಾಭವ ವಿಚಾರದಲ್ಲಿ ನೋಡೋದಾದ್ರೆ, ಅಂಬಾನಿ ಬ್ಯುಸಿನೆಸ್ ಗೆ ಇನ್ಮುಂದೆ ಮತ್ತಷ್ಟು ಲಾಭವಾಗಲಿದೆ. ದೇಶದಲ್ಲಿ ರಿಲಯನ್ಸ್ ಗ್ರೂಪ್‌ (Reliance Group) ಗೆ ಸ್ಪರ್ಧಿಗಳೇ ಇಲ್ಲದಂತಾಗಿದೆ.

ರತನ್ ಟಾಟಾ ಒಡೆತನದ ಟಾಟಾ ಗ್ರೂಪ್ (Tata Group)  ಹಾಗೂ ಮುಖೇಶ್ ಅಂಬಾನಿ ಒಡೆತನದ ರಿಯಲನ್ಸ್ ಗ್ರೂಪ್ ತಮ್ಮದೇ ಕ್ಷೇತ್ರದಲ್ಲಿ ಮೈಲುಗಲ್ಲು ಸಾಧಿಸಿದೆಯಾದ್ರೂ, ರಿಲಯನ್ಸ್ ಗ್ರೂಪ್ ಗಿಂತ ಟಾಟಾ ಗ್ರೂಪ್ ಒಂದು ಹೆಜ್ಜೆ ಮುಂದಿತ್ತು. ಟೆಲಿಕಾಂ ಕ್ಷೇತ್ರವಾಗಲಿ, ವೈದ್ಯಕೀಯ ಕ್ಷೇತ್ರವಾಗಲಿ ಅಥವಾ ಇನ್ನಾವುದೇ ಆಗಿರಲಿ, ಟಾಟಾ ಗ್ರೂಪ್ ಪ್ರಾಬಲ್ಯ ಹೊಂದಿದೆ. ಟಾಟಾ ಸಮೂಹದ ನಾಯಕ ರತನ್ ಟಾಟಾ ನಿರ್ಗಮನದ ನಂತರ ಟಾಟಾ ಉದ್ಯಮವನ್ನು ನಿಭಾಯಿಸಲು ಅವರಂತ ನಾಯಕ ಸಿಗೋದು ಕಷ್ಟ. 

Tap to resize

Latest Videos

ರತನ್ ಟಾಟಾ ಅಗಲಿಕೆಗೆ ಇಸ್ರೇಲ್ ಪ್ರಧಾನಿ ನೇತನ್ಯಾಹು ಸಂತಾಪ

ರತನ್ ಟಾಟಾ ನಿರ್ಧಾರಗಳು ಸ್ಪಷ್ಟ ಹಾಗೂ ದೃಢವಾಗಿರುತ್ತಿದ್ದವು. ಇದ್ರಿಂದಾಗಿ ಕಂಪನಿ ಲಾಭದಲ್ಲಿ ಸಾಗಿತ್ತು. ರತನ್ ಟಾಟಾ ಪ್ಲಾನ್ ಗಳಿಂದ ಮುಖೇಶ್ ಅಂಬಾನಿ ಸ್ವಲ್ಪ ಹಿನ್ನಡೆ ಅನುಭವಿಸುತ್ತಿದ್ದರು. ಈಗ ರತನ್ ಟಾಟಾ ನಿಧನದ ನಂತ್ರ ಮುಖೇಶ್ ಅಂಬಾನಿಗೆ ಟಕ್ಕರ್ ನೀಡಲು ಯಾರೂ ಇಲ್ಲದಂತಾಗಿದೆ, 

ಟಾಟಾ ಗ್ರೂಪ್‌ನ ದೇಶದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ (ಟಿಸಿಐ) ಈಗ ದೇಶದ ಅತಿದೊಡ್ಡ ಕಂಪನಿಯಾಗಿದೆ. ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಿಗೆ ಟಿಸಿಎಸ್ ಕಠಿಣ ಪೈಪೋಟಿ ನೀಡಿದೆ. ಬರೀ ಪೈಪೋಟಿಯಲ್ಲ ಈಗ ಎರಡೂ ಕಂಪನಿಗಳ ಮಾರುಕಟ್ಟೆ 14 ಲಕ್ಷ ಕೋಟಿ ದಾಟಿದೆ. ಷೇರುದಾರರು  ಖುಷಿಯಾಗಿದ್ದಾರೆ. ಎರಡೂ ಮಾರುಕಟ್ಟೆ ಮೌಲ್ಯಗಳು 32 ಸಾವಿರ ಕೋಟಿ ರೂಪಾಯಿಯಾಗಿದೆ. 

ವ್ಯವಹಾರದಲ್ಲಿ ಮುಖೇಶ್ ಅವರಿಗಿಂತ ಹಲವು ಹೆಜ್ಜೆ ಮುಂದಿದ್ದ ರತನ್ ಟಾಟಾ :  ಮುಕೇಶ್ ಅಂಬಾನಿ ಮುಂಬೈನಲ್ಲಿ ತಮ್ಮ ಮೊದಲ ಪ್ರೆಟ್ ಎ ಮ್ಯಾಂಗರ್  ಮತ್ತು ಸ್ಟಾಕ್ ಅನ್ನು ಪ್ರಾರಂಭಿಸಿದ್ದಾರೆ. ಪ್ರೆಟ್ ಎ ಮ್ಯಾಂಗರ್ ಬ್ರಿಟನ್ ಮೂಲದ ಡೈನಾಮಿಕ್ ಮತ್ತು ಆಹಾರಪ್ರೇಮಿಗಳ ಸರಣಿ. ಪ್ರೆಟ್ ಎ ಮ್ಯಾಂಗರ್ ನ್ನು ಭಾರತಕ್ಕೆ ತಂದ ಕೀರ್ತಿ ಮುಖೇಶ್ ಅಂಬಾನಿಗೆ ಸಲ್ಲುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಬ್ರಿಟಿಷ್ ಚೈನ್ ನಡುವೆ ಪಾಲುದಾರಿಕೆ ಇದೆ. ಕಳೆದ ವರ್ಷ ಎರಡು ದೈತ್ಯರ ನಡುವೆ ಒಪ್ಪಂದವಾಗಿದ್ದು, ಇಬ್ಬರೂ ಫ್ರಾಂಚೈಸ್ ಮಾರಾಟ ಮಾಡಿದ್ದಾರೆ. ಈ ಕಾರಣದಿಂದಾಗಿ ಟಾಟಾ ಗ್ರೂಪ್‌ನ ಸ್ಟಾರ್‌ಬಕ್ಸ್‌ಗೆ ಕಠಿಣ ಸ್ಪರ್ಧೆಯನ್ನು ನೀಡಲು ಬಯಸಿದ್ದರು.

ಡಿಜಿಟಲ್ ವ್ಯವಹಾರಗಳು ಜಾಸ್ತಿಯಾಗಿರುವುದರಿಂದ ₹10 ನೋಟುಗಳು ಮಾಯವಾಗಿದೆಯಂತೆ: ಅಷ್ಟಕ್ಕೂ ಏನಾಯ್ತು?

ಅದೇ ನಿಟ್ಟಿನಲ್ಲಿ ಮೊದಲ ಮಳಿಗೆಯನ್ನು ಮುಂಬೈನಲ್ಲಿ ತೆರೆಯಲಾಯಿತು. ಈ ವರ್ಷ ದೇಶದಲ್ಲಿ ಸುಮಾರು 10 ಮಳಿಗೆಗಳನ್ನು ತೆರೆಯಲಾಗುವುದು. ಈಗ ಟಾಟಾ ಇನ್ನಿಲ್ಲ, ಸ್ಟಾರ್‌ಬಕ್ಸ್ ಅನ್ನು ನಿಭಾಯಿಸೋದು ದೊಡ್ಡ ಸಮಸ್ಯೆ. ಮುಖೇಶ್ ಅವರ ಹೊಸ ವ್ಯವಹಾರಕ್ಕೆ ಇದರಿಂದ ಲಾಭವಾಗಲಿದೆ. ಭಾರತದಲ್ಲಿ ಸ್ಟಾರ್‌ಬಕ್ಸ್‌ನ ಪ್ರವೇಶ ರತನ್ ಟಾಟಾ ಅವರಿಂದ ಆಗಿತ್ತು. ಭಾರತದಲ್ಲಿ ವ್ಯಾಪಾರ ಪ್ರಾರಂಭಿಸಲು, ರತನ್ ಟಾಟಾ ಮತ್ತು ಸ್ಟಾರ್‌ಬಕ್ಸ್ ನಡುವೆ ಶೇಕಡಾ 50-50 ಪಾಲುದಾರಿಕೆ ಇತ್ತು. ಸ್ಟಾರ್‌ಬಕ್ಸ್ ದೇಶದ 30ಕ್ಕೂ ಹೆಚ್ಚು ನಗರಗಳಲ್ಲಿ ಮಳಿಗೆಗಳನ್ನು ಹೊಂದಿದೆ. ಆದರೆ ರತನ್ ಟಾಟಾ ನಿಧನದ ನಂತರ ಸ್ಪರ್ಧೆ ಕಡಿಮೆಯಾಗಿ, ಮುಕೇಶ್ ಅಂಬಾನಿ ಮುಂದಿನ ದಿನಗಳಲ್ಲಿ ವ್ಯಾಪಾರದಲ್ಲಿ ಭಾರೀ ಲಾಭ ಗಳಿಸುವ ಸಾಧ್ಯತೆ ಇದೆ. 

vuukle one pixel image
click me!
vuukle one pixel image vuukle one pixel image