ರಿಲಯನ್ಸ್ ಇಂಡಸ್ಟ್ರೀಸ್ ಇತ್ತೀಚಿನ ದಿನಗಳಲ್ಲಿ ತನ್ನ ಉದ್ಯಮವನ್ನು ವಿಸ್ತರಿಸುತ್ತಿದೆ. ಈಗಾಗಲೇ ಹಲವು ಕ್ಷೇತ್ರಗಳಿಗೆ ಹೊಸದಾಗಿ ಪ್ರವೇಶಿಸಿದೆ ಕೂಡ. ಇದೀಗ ಆಕಾಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಇನ್ಫಾರ್ಮೇಷನ್ ಸಂಸ್ಥೆ ಹಣಕಾಸು ಸೇವಾ ಕ್ಷೇತ್ರಕ್ಕೆ ಕಾಲಿಡಲು ಸಜ್ಜಾಗಿದೆ. ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಮೂಲಕ ಗ್ರಾಹಕರಿಗೆ ಹಣಕಾಸು ಸೇವೆಗಳನ್ನು ನೀಡಲಿದೆ.
Business Desk:ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇತ್ತೀಚಿನ ದಿನಗಳಲ್ಲಿ ತಮ್ಮ ಉದ್ಯಮ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದಾರೆ. ಇದಕ್ಕಾಗಿ ಅವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಕೂಡ ಹಿಂದೇಟು ಹಾಕುವುದಿಲ್ಲ. ಅಲ್ಲದೆ, ದೊಡ್ಡ ರಿಸ್ಕ್ ಗಳನ್ನು ತೆಗೆದುಕೊಳ್ಳುವುದು ಹಾಗೂ ಹೊಸ ಕ್ಷೇತ್ರಕ್ಕೆ ಪ್ರವೇಶಿಸುವ ಮೂಲಕ ಅಲ್ಲಿನ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ತರುವುದರಲ್ಲಿ ಅವರು ನಿಸ್ಸೀಮರು ಕೂಡ. ಈ ಗುಣವನ್ನು ಅವರು ತಮ್ಮ ಮಕ್ಕಳಲ್ಲೂ ಬೆಳೆಸುತ್ತಿದ್ದಾರೆ. ಮೂವರು ಮಕ್ಕಳಿಗೂ ಉದ್ಯಮದ ಜವಾಬ್ದಾರಿಗಳನ್ನು ಮುಖೇಶ್ ಅಂಬಾನಿ ಈಗಾಗಲೇ ಹಂಚಿಕೆ ಮಾಡಿದ್ದಾರೆ. ಹಿರಿಯ ಪುತ್ರ ಆಕಾಶ್ ಅಂಬಾನಿ ಅವರಿಗೆ ರಿಲಯನ್ಸ್ ಜಿಯೋ ಇನ್ಫಾರ್ಮೇಷನ್ ಮುಖ್ಯಸ್ಥನ ಹುದ್ದೆ ವಹಿಸಿದ್ದಾರೆ. ಈ ಸಂಸ್ಥೆ ಈಗ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಮೂಲಕ ಗ್ರಾಹಕರ ಹಣಕಾಸು ಸೇವಾ ಕ್ಷೇತ್ರಕ್ಕೆ ಪ್ರವೇಶಿಸಲು ನಿರ್ಧರಿಸಿದೆ. ಈ ಮೂಲಕ ಈಗಾಗಲೇ ಈ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡಿರುವ ಬಜಾಜ್ ಫಿನ್ ಸರ್ವ್, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಇತರರಿಗೆ ನೇರ ಸ್ಪರ್ಧೆ ನೀಡಲಿದೆ.
ಕೆಲವು ವರದಿಗಳ ಪ್ರಕಾರ ರಿಲಯನ್ಸ್ ಸಂಸ್ಥೆ ತನ್ನ ಪೈಲೆಟ್ ಯೋಜನೆಗಳನ್ನು ಪ್ರಸ್ತುತ ಆಯ್ದ ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ಪರೀಕ್ಷಿಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಕಂಪನಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಈಗಾಗಲೇ ರಿಲಯನ್ಸ್ ಜಿಯೋ ಬಿಡುಗಡೆಗೊಳಿಸಿರುವ ಪೈಲಟ್ ಪ್ರಾಜೆಕ್ಟ್ ಅಡಿಯಲ್ಲಿ ಇಎಂಐ ಆಧಾರದಲ್ಲಿ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೂಡ ಇದೇ ರೀತಿ ಮಾಡುವ ಸಾಧ್ಯತೆಯಿದೆ.
ಜನಪ್ರಿಯ ವಿದೇಶಿ ಬ್ರ್ಯಾಂಡ್ಸ್ ಭಾರತಕ್ಕೆ ತರಲು ರಿಲಯನ್ಸ್ ಯೋಜನೆ; ಈ ಪಟ್ಟಿಯಲ್ಲಿರುವ ಕಂಪನಿಗಳು ಯಾವುವು?
ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸಿದರೂ ರಿಲಯನ್ಸ್ ಅಲ್ಲಿ ಹೊಸ ಉದ್ಯಮ ತಂತ್ರಗಳ ಮೂಲಕ ನೆಲೆಯೂರುತ್ತಲೇ ಬಂದಿದೆ. ಹೀಗಾಗಿ ಫೈನಾನ್ಷಿಯಲ್ ಸರ್ವೀಸಸ್ ಕ್ಷೇತ್ರದಲ್ಲಿ ಕೂಡ ಮುಂದಿನ ದಿನಗಳಲ್ಲಿ ರಿಲಯನ್ಸ್ ಭದ್ರ ನೆಲೆ ಕಂಡುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದು ಈಗಾಗಲೇ ಈ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿರುವ ಬಜಾಜ್ ಫಿನ್ ಸರ್ವ್, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಇತರ ಸಂಸ್ಥೆಗಳಿಗೆ ನೇರ ಸ್ಪರ್ಧೆ ನೀಡುವುದು ಖಚಿತ.
ವರದಿಗಳ ಅನ್ವಯ ಗ್ರಾಹಕರನ್ನು ಸೆಳೆಯಲು ಜಿಯೋ ಅನೇಕ ಆಕರ್ಷಕ ಆಫರ್ ಗಳನ್ನು ನೀಡಲಿದೆ. ಇದು ಸಹಜವಾಗಿ ರಿಲಯನ್ಸ್ ರಿಟೇಲ್ ಉದ್ಯಮದ ಆದಾಯ ಹೆಚ್ಚಿಸಲು ನೆರವು ನೀಡಲಿದೆ. ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ರಿಲಯನ್ಸ್ ರಿಟೇಲ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ದೇಶದಲ್ಲಿ ಕಳೆದ ಆರ್ಥಿಕ ಸಾಲಿನಲ್ಲಿ ಅತೀಹೆಚ್ಚು ತೆರಿಗೆ ಪಾವತಿಸಿದ ಕಂಪನಿ ಯಾವುದು? ಇಲ್ಲಿದೆ ಟಾಪ್ 10 ಪಟ್ಟಿ
ವಿದೇಶಿ ಬ್ರ್ಯಾಂಡ್ ಭಾರತಕ್ಕೆ ತರಲು ಯತ್ನ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ನಿರ್ದೇಶಕಿ ಇಶಾ ಅಂಬಾನಿ ಇಬ್ಬರೂ ಜೊತೆಯಾಗಿ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಪಣ ತೊಟ್ಟಿದ್ದಾರೆ. ಇದರ ಭಾಗವಾಗಿಯೇ ಅನೇಕ ಜನಪ್ರಿಯ ವಿದೇಶಿ ಬ್ರ್ಯಾಂಡ್ ಗಳನ್ನು ಭಾರತಕ್ಕೆ ತರಲು ಬಹು ಬಿಲಿಯನ್ ಡಾಲರ್ ಒಪ್ಪಂದಗಳಿಗೆ ರಿಲಯನ್ಸ್ ಮುಂದಾಗಿದೆ. ಈ ಮೂಲಕ ರತನ್ ಟಾಟಾ ಹಾಗೂ ಕೆ.ಎಂ. ಬಿರ್ಲಾ ಅವರಂತಹ ದೇಶದ ಇತರ ಪ್ರಮುಖ ಉದ್ಯಮಿಗಳಿಗೆ ಪೈಪೋಟಿ ನೀಡಲು ಸಿದ್ಧತೆ ನಡೆಸಿದ್ದಾರೆ. ಪ್ರಸ್ತುತ ಮುಖೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥರು ಹಾಗೂ ಎಂಡಿ ಆಗಿದ್ದರೆ, ಇಶಾ ಅಂಬಾನಿ ನಿರ್ದೇಶಕರಾಗಿದ್ದಾರೆ. ಇವರಿಬ್ಬರೂ ಸೇರಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನಿಷೇಧಿಸಿದ್ದ ಚೀನಾದ ಆನ್ ಲೈನ್ ಜವಳಿ ಮಳಿಗೆ ಶೀನ್ ಸೇರಿದಂತೆ ಕ್ಯಾಂಪ ಕೋಲಾ,ಪ್ರೆಟ್ ಎ ಮ್ಯಾಂಗೆರ್ ಹಾಗೂ ಬಾಲೆನ್ಸಿಯಗ ಬ್ರ್ಯಾಂಡ್ ಗಳನ್ನು ಮರಳಿ ಭಾರತಕ್ಕೆ ತರಲು ಮುಂದಾಗಿದ್ದಾರೆ.