
ನವದೆಹಲಿ: ದೇಶೀಯವಾಗಿಯೇ ಮೊಬೈಲ್ (Mobile) ಉತ್ಪಾದಿಸಲು ವಿದೇಶಿ ಕಂಪನಿಗಳನ್ನು (Foreign Companies) ಪ್ರೋತ್ಸಾಹಿಸುವ ಕೇಂದ್ರ ಸರ್ಕಾರದ ಯೋಜನೆ ಭರ್ಜರಿಯಾಗಿ ಫಲ ಕೊಟ್ಟಿದ್ದು, ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಿಂದ 1 ಶತಕೋಟಿ ಡಾಲರ್ (1 Billion Dollar) (8200 ಕೋಟಿ ರೂ.) ಮೌಲ್ಯದ ಮೊಬೈಲ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ. ಇದು ದೇಶದ ಇತಿಹಾಸದಲ್ಲೇ ಯಾವುದೇ ತಿಂಗಳೊಂದರಲ್ಲಿ ಮಾಡಲಾದ ಗರಿಷ್ಠ ಪ್ರಮಾಣದ ಮೊಬೈಲ್ ರಫ್ತಾಗಿದೆ. ವಿದೇಶಿ ಕಂಪನಿಗಳು ದೇಶೀಯವಾಗಿ ಉತ್ಪಾದನೆ ಮಾಡಿದರೆ ನೀಡುವ ಉತ್ಪಾದಕತೆ ಆಧರಿತ ಬೋನಸ್ ಯೋಜನೆ ಫಲವಾಗಿ ಸ್ಯಾಮ್‌ಸಂಗ್ (Samsung), ಆ್ಯಪಲ್‌ನಂಥ (Apple) ಜಾಗತಿಕ ದೈತ್ಯ ಕಂಪನಿಗಳು ಭಾರತದಲ್ಲೇ ತಮ್ಮ ಉತ್ಪನ್ನಗಳನ್ನು ಉತ್ಪಾದಿಸಿ ವಿದೇಶಗಳಿಗೆ ರಫ್ತು ಮಾಡಲು ಮುಂದಾಗಿದ್ದೇ ಈ ಬೆಳವಣಿಗೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ವರ್ಷ ಏಪ್ರಿಲ್- ಸೆಪ್ಟೆಂಬರ್
2021 13,940 ಕೋಟಿ ರೂ.
2022 34,440 ಕೋಟಿ ರೂ.
ವರ್ಷ ಉತ್ಪಾದನೆಯಲ್ಲಿ ರಫ್ತು ಪ್ರಮಾಣ
2016-17 ಶೇ.1
2021-22 ಶೇ.16
ಇದನ್ನು ಓದಿ: ಭಾರತ ಈಗ ಜಗತ್ತಿನ ಎರಡನೇ ಅತೀದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರ: ರಾಜೀವ್ ಚಂದ್ರಶೇಖರ್
ಮೋದಿ ನಾಯಕತ್ವ ಕಾರಣ: ರಾಜೀವ್ ಚಂದ್ರಶೇಖರ್
2022ರ ಸೆಪ್ಟೆಂಬರ್‌ನಲ್ಲಿ ಮೊಬೈಲ್ ಫೋನ್‌ಗಳ ರಫ್ತಿನಲ್ಲಿ ಭಾರತದ ಒಟ್ಟು ವಹಿವಾಟು ಒಂದು ಬಿಲಿಯನ್ ಗುರಿ ತಲುಪಿದೆ. ಇದು ಸಾಧ್ಯವಾಗಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಿಂದ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಮೊಬೈಲ್ ಫೋನ್‌ಗಳ ಮಾಸಿಕ ರಫ್ತು 2021 ಸೆಪ್ಟೆಂಬರ್‌ಗೆ ಹೋಲಿಸಿದರೆ ಶೇ.200 ರಷ್ಟು ಬೆಳವಣಿಗೆ ಸಾಧಿಸಿದೆ. ಭಾರತ ಈಗ ಕೇವಲ ವಿದೇಶಗಳಿಂದ ಮೊಬೈಲ್ ಫೋನುಗಳನ್ನು ಆಮದು ಮಾಡಿಕೊಳ್ಳುವ ದೇಶವಾಗಿ ಉಳಿದಿಲ್ಲ, ಬದಲಾಗಿ ವಿದೇಶಗಳಿಗೆ ಬ್ರ್ಯಾಂಡೆಡ್ ಮೊಬೈಲ್ ಫೋನ್‌ಗಳನ್ನು ರಫ್ತು ಮಾಡುವ ದೇಶವಾಗಿದೆ.
ಇದನ್ನೂ ಓದಿ: ಶಿಯೋಮಿ 12ಟಿ, 12ಟಿ ಪ್ರೋ ಅನಾವರಣ, ವಿಶೇಷತೆಗಳೇನು?
ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟೀವ್ಸ್ (Production Linked Incentives) (ಪಿಎಲ್‌ಐ) (PLI) ಮೂಲಕ ಭಾರತ ಸರ್ಕಾರವು ಆರಂಭಿಸಿದ ರಫ್ತು ಯೋಜನೆ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಹೊಸ ಹೂಡಿಕೆಗಳು, ಹೊಸ ಉದ್ಯೋಗವಕಾಶಗಳು ,ಹೊಸ ಕಾರ್ಖಾನೆಗಳು ಮತ್ತು ಜಾಗತಿಕ ಪೂರೈಕೆ ಸರಪಳಿಗಳು ಎಲ್ಲವೂ ಭಾರತದತ್ತ ಬರುತ್ತಿವೆ. ಎಲೆಕ್ಟ್ರಾನಿಕ್ಸ್ (Electronics) ಉದ್ಯಮಗಳ ಉತ್ಪಾದನೆ ಮತ್ತು ವಿಸ್ತರಣೆ, ಹೂಡಿಕೆ, ಹೊಸ ಉದ್ಯೋಗ ಸೃಷ್ಟಿಯ ಮಹತ್ವದ ಗುರಿಯಲ್ಲಿ ಇದು ಭಾರತಕ್ಕೆ ಹೊಸ ಮೈಲುಗಲ್ಲಾಗಿದೆ ಎಂದು ಅವರು ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.