ಪೋಸ್ಟ್ ಆಫೀಸ್ನಲ್ಲಿ ಮಾಸಿಕ ಆದಾಯ ಯೋಜನೆ ಅಡಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಬಹುದು. ಅದರ ಡಿಟೇಲ್ಸ್ ಇಲ್ಲಿದೆ...
ಗಳಿಸಿರುವ ಹಣಕ್ಕೆ ತಕ್ಕನಾದ ಬಡ್ಡಿದರದ ಜೊತೆಗೆ ಪ್ರತಿ ತಿಂಗಳೂ ಹಣವನ್ನು ಪಡೆದುಕೊಳ್ಳಲು ಯಾವ ಸ್ಕೀಮ್, ಯಾವ ಬ್ಯಾಂಕ್ ಬೆಸ್ಟ್ ಎನ್ನುವ ಯೋಚನೆಯಲ್ಲಿದ್ದೀರಾ? ಅತಿ ಹೆಚ್ಚು ಬಡ್ಡಿ ಪಡೆಯುವ ಜೊತೆಗೆ, ಅದೇ ರೀತಿಯ ವಿಶ್ವಾಸಾರ್ಹವಾಗಿರುವ ಜಾಗವನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ ಬ್ಯಾಂಕ್‌ಗಳಿಗಿಂತಲೂ ಅತಿ ಹೆಚ್ಚು ಬಡ್ಡಿ ಸಿಗುವುದು ಎಂದು ಅದು ಅಂಚೆ ಕಚೇರಿ ಮಾತ್ರ. ಕೆಲವು ಸಹಕಾರಿ ಸಂಸ್ಥೆಗಳು ಬಡ್ಡಿಯನ್ನು ಹೆಚ್ಚಿಗೆ ನೀಡಿದರೂ ಅದರಲ್ಲಿ ಹೂಡಿಕೆ ಮಾಡುವುದು ಅಷ್ಟೇ ತೊಂದರೆ ಇದೆ. ಮೋಸ, ವಂಚನೆಗಳ ಹೆಚ್ಚಾಗುತ್ತವೆ. ಯಾವಾಗ ಈ ಸಂಸ್ಥೆಗಳು ಜಾಗ ಖಾಲಿ ಮಾಡಿಕೊಂಡು ಹೋಗುತ್ತದೆ ಎನ್ನುವುದನ್ನು ಹೇಳುವುದೇ ಕಷ್ಟ. ಆದ್ದರಿಂದ ನಿಮ್ಮ ಹಣ ಸಂಪೂರ್ಣ ಸುರಕ್ಷಿತವಾಗಿ ಇರಬೇಕು ಜೊತೆಗೆ ಹೆಚ್ಚಿಗೆ ಬಡ್ಡಿ ಸಿಗಬೇಕು ಎಂದರೆ, ಅಂಚೆ ಕಚೇರಿಗಿಂತಲೂ ಮತ್ತೊಂದು ಜಾಗವಿಲ್ಲ. ಅಷ್ಟಕ್ಕೂ ಕೆಲ ವರ್ಷಗಳಿಂದ ಅಂಚೆ ಕಚೇರಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ. ಜನಸಾಮಾನ್ಯರು ತಮ್ಮದೇ ಸ್ಥಳಗಳಲ್ಲಿ ಅಂಚೆ ಸೌಲಭ್ಯ ಪಡೆಯಬಹುದಾಗಿದ್ದರಿಂದ ಇದು ಕೂಡ ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ.
ಕೇಂದ್ರ ಸರ್ಕಾರ, ಇದಾಗಲೇ ಪೋಸ್ಟ್ ಆಫೀಸ್ನಲ್ಲಿ ಹಲವಾರು ಸ್ಕೀಮ್ಗಳನ್ನು ಜಾರಿಗೆ ತಂದಿದೆ. ನಿಮಗೆ ಅಗತ್ಯವಾಗಿರುವ ಯೋಜನೆ ಕುರಿತು ಅಂಚೆ ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಬಹುದು. ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ... ಹೀಗೆ ವಿವಿಧ ಉಳಿತಾಯ ಸ್ಕೀಮ್ಗಳು ಇದಾಗಲೇ ಜಾರಿಯಾಗಿವೆ. ಇಲ್ಲಿ ಹೇಳ ಹೊರಟಿರುವುದು ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಗೆ (Post Office Monthly Income Scheme) ಕುರಿತು. ಕಳೆದ ವರ್ಷದ ಅಂದ್ರೆ 2023ರ ಬಜೆಟ್ನಲ್ಲಿ ಈ ಬಗ್ಗೆ ಘೋಷಣೆಯಾಗಿದ್ದರೂ ಇದರ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದಿಲ್ಲ. ಮಾಸಿಕವಾಗಿ ಒಂದಿಷ್ಟು ಹಣ ಬರಬೇಕು ಎಂಬ ಯೋಚನೆ ನಿಮ್ಮಲ್ಲಿದ್ದರೆ ನೀವು ಪ್ರತಿ ತಿಂಗಳೂ 9,250 ರೂಪಾಯಿವರೆಗೆ ಹಣವನ್ನು ಪಡೆಯಲು ಇದು ಅವಕಾಶ ಮಾಡಿಕೊಡುತ್ತದೆ.
ಒಂದು ಲಕ್ಷ ಠೇವಣಿಗೆ 50 ಸಾವಿರ ರೂ. ಬಡ್ಡಿ: ಎಲ್ಲಕ್ಕಿಂತ ಬೆಸ್ಟ್ ಅಂಚೆ ಇಲಾಖೆಯ ಎಫ್‌ಡಿ!
ಇಲ್ಲಿಯವರೆಗೆ ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವವರು ಗರಿಷ್ಠ 4.5ಲಕ್ಷದವರೆಗೆ ಹೂಡಿಕೆ ಮಾಡಬಹುದಿತ್ತು. ಆದರೆ ಈಗ ಈ ಮಿತಿ 9 ಲಕ್ಷದವರೆಗೆ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಮಾಸಿಕ ಲಾಭ ಪಡೆದುಕೊಳ್ಳಬಹುದಾಗಿದೆ. ಮನೆಯ ಒಬ್ಬರೇ ಸದಸ್ಯರು ಬಯಸಿದರೆ, 9 ಲಕ್ಷದ ವರೆಗೆ ಹೂಡಿಕೆ ಮಾಡಬಹುದು, ಜಂಟಿಯಾಗಿದ್ದರೆ 15 ಲಕ್ಷದವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಕನಿಷ್ಠ 1 ಸಾವಿರ ರೂಪಾಯಿಯಿಂದ ಗರಿಷ್ಠ 15 ಲಕ್ಷ ರೂಪಾಯಿವರೆಗೆ (ಜಂಟಿಯಾಗಿದ್ದರೆ) ಹೂಡಿಕೆ ಮಾಡಲು ಅವಕಾಶವಿದೆ. ಸದ್ಯದ ಬಡ್ಡಿ ದರವು ಶೇಕಡಾ ಶೇ 7.4ರಷ್ಟು ಇದೆ. ಬಡ್ಡಿ ಪ್ರತಿ ತಿಂಗಳ ಕೊನೆಗೆ ನಿಮಗೆ ಲಭಿಸುತ್ತದೆ. ಒಂದು ವೇಳೆ ಪ್ರತಿ ತಿಂಗಳ ಬಡ್ಡಿಯನ್ನು ಹಾಗೆಯೇ ಇಟ್ಟು ಒಟ್ಟಿಗೇ ತೆಗೆದುಕೊಳ್ಳೋಣ ಎಂದುಕೊಂಡದ್ದೇ ಆದರೆ, ನೀವು ಹಾಗೆ ಮಾಡಬಹುದು. ಆದರೆ ಹೆಚ್ಚುವರಿ ಬಡ್ಡಿ ಲಾಭ ನಿಮಗೆ ಸಿಗುವುದಿಲ್ಲವಷ್ಟೇ. ಈ ಯೋಜನೆಯ ಅಡಿ ಹೂಡಿಕೆ ಐದು ವರ್ಷಗಳದ್ದು. ಯೋಜನೆ ಆರಂಭ ಮಾಡಿದ ಮೊದಲ ವರ್ಷ ನಿಮಗೆ ಹೂಡಿಕೆ ಮೊತ್ತವನ್ನು ತೆಗೆಯಲು ಅವಕಾಶ ಇಲ್ಲ. ಒಂದು ವೇಳೆ ಮೂರು ವರ್ಷಗಳ ಒಳಗೆ ಅಂದ್ರೆ ಒಂದು ವರ್ಷದಿಂದ 3 ವರ್ಷದ ಒಳಗೆ ಠೇವಣಿ ನೀವು ಹಿಂದಕ್ಕೆ ಪಡೆದುಕೊಂಡರೆ ಒಟ್ಟು ಅಸಲಿನ ಮೊತ್ತದಲ್ಲಿ ಶೇ 2ರಷ್ಟು ದಂಡ ವಿಧಿಸಲಾಗುತ್ತದೆ. 3-5 ವರ್ಷದ ಒಳಗಾದರೆ ಒಟ್ಟು ಅಸಲಿನ ಮೊತ್ತದಲ್ಲಿ ಶೇ 1ರಷ್ಟು ದಂಡ ಕಟ್ಟಬೇಕಾಗುತ್ತದೆ.
ಒಂದು ವೇಳೆ, ಠೇವಣಿದಾರರು ಮೆಚ್ಯೂರಿಟಿ ಅವಧಿಗೂ ಮುನ್ನ ಮೃತಪಟ್ಟರೆ ಖಾತೆಯನ್ನು ಮುಚ್ಚಿ ನಾಮಿನಿಗೆ ಅಸಲು ಹೂಡಿಕೆ ಮೊತ್ತ ಮತ್ತು ಬಡ್ಡಿಯನ್ನು ನೀ ಡಲಾಗುತ್ತದೆ. ನೀವು ಈ ಯೋಜನೆ ಅಡಿ, 9 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5,550 ರೂಪಾಯಿ ಲಭಿಸುತ್ತದೆ. ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 9,250 ರೂಪಾಯಿಗಳ ಬಡ್ಡಿ ಲಾಭ ಸಿಗುತ್ತದೆ. ಇದರ ಬಡ್ಡಿದರ ಈ ರೀತಿ ಇದೆ.