ಬಾತ್ ರೂಂ, ಬೆಡ್ ರೂಂ 'ರಹಸ್ಯ' ಹೊರ ಬಿತ್ತು: ವೆಂಕಯ್ಯ ನಾಯ್ಡು!

By Web DeskFirst Published Aug 31, 2018, 11:33 AM IST
Highlights

ನೋಟು ಅಮಾನ್ಯೀಕರಣ ಕ್ರಮ ಸಮರ್ಥಿಸಿಕೊಂಡ ಉಪರಾಷ್ಟ್ರಪತಿ! ಬಾತ್ ರೂಂ, ಬೆಡ್ ರೂಂ ರಹಸ್ಯ ಹಣ ಹೊರಬರಲು ಕಾರಣ! ಕಪ್ಪುಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದ್ದೇ ನೋಟು ಅಮಾನ್ಯೀಕರಣದಿಂದ!
ನೋಟ್ ಬ್ಯಾನ್ ಉತ್ತಮ ಕ್ರಮ ಎಂದ ವೆಂಕಯ್ಯ ನಾಯ್ಡು 

ನವದೆಹಲಿ(ಆ.31): ನೋಟು ನಿಷೇಧ ಕ್ರಮವನ್ನು ಟೀಕಿಸುತ್ತಿರುವವರಿಗೆ ತಿರುಗೇಟು ನೀಡಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ನೋಟು ಅಮಾನ್ಯೀಕರಣದಿಂದಾಗಿ ಬಾತ್ ರೂಂ ಮತ್ತು ಬೆಡ್ ರೂಂನಲ್ಲಿದ್ದ ರಹಸ್ಯ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಯಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧಗೊಂಡಿದ್ದ 500 ಮತ್ತು 1000 ರು ಮುಖ ಬೆಲೆಯ ಬಹುತೇಕ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಆಗಿದೆ ಎಂದು ವರದಿ ನೀಡಿತ್ತು. ಈ ವರದಿ ಹಿನ್ನಲೆಯಲ್ಲಿ ಮೋದಿ ಸರ್ಕಾರದ ವಿರುದ್ಧ ವ್ಯಾಪಕ ಟೀಕಾ ಪ್ರಹಾರಗಳು ನಡೆದಿದ್ದವು. ಇದರ ಬೆನ್ನಲ್ಲೇ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕೂಡ ನೋಟು ನಿಷೇಧ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಇದೀಗ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ನೋಟು ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವೆಂಕಯ್ಯ ನಾಯ್ಡು, ನೋಟು ನಿಷೇಧ ಬಗ್ಗೆ ಸುಖಾ ಸುಮ್ಮನೆ ವಿವಾದ ಹುಟ್ಟು ಹಾಕಲಾಗುತ್ತಿದೆ. ಚಲಾವಣೆಯಾಗದೇ ಬಾತ್ ರೂಂ ಮತ್ತು ಬೆಡ್ ರೂಂನಲ್ಲಿ ಅಡಗಿಸಿಡಲಾಗಿದ್ದ ಅಪಾರ ಪ್ರಮಾಣದ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಆಗಿದೆ. ಆದರೆ ಈ ಪೈಕಿ ಎಷ್ಟು ಹಣ ವೈಟ್ ಮನಿ ಮತ್ತು ಎಷ್ಟು ಹಣ ಬ್ಲಾಕ್ ಮನಿ ಎಂಬುದನ್ನು ಆರ್ ಬಿಐ ಮತ್ತು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಬೇಕಿದೆ. 

ನೋಟು ನಿಷೇಧ ಕ್ರಮದಿಂದ ಕೇಂದ್ರ ಸರ್ಕಾರಕ್ಕೆ ಅಪಾರ ಪ್ರಮಾಣದ ತೆರಿಗೆ ಹರಿದುಬಂದಿದೆ. ಡ್ರೈವರ್ ಗಳಿಂದ ಹಿಡಿದು ಪ್ಯೂನ್ ಗಳ ವರೆಗೂ ಇಂದು ಬ್ಯಾಂಕ್ ಖಾತೆ ತೆರೆದು ಸಕ್ರಮವಾಗಿ ವಹಿವಾಟು ನಡೆಸುತ್ತಿದ್ದಾರೆ. ಅನುಮಾನಾಸ್ಪದ ಖಾತೆಗಳ ವಿರುದ್ಧ ತನಿಖೆ ಕೂಡ ಮುಂದುವರೆದಿದೆ ಎಂದು ನಾಯ್ಡು ಹೇಳಿದ್ದಾರೆ.

ಹೊರಬಿತ್ತು ಜೇಟ್ಲಿ ಮನದಾಳದ ಮಾತು: ನೋಟ್ ಬ್ಯಾನ್, ಇದು ಸಿಕ್ರೇಟ್ ಪ್ಲ್ಯಾನ್!

ನೋಟ್ ಬ್ಯಾನ್: ಉತ್ತರಿಸಬೇಕಾಗಿರುವುದೂ ಒನ್ ಮ್ಯಾನ್!

ನೀವ್ ಕೊಟ್ರಲ್ಲಾ ಹಳೇ ನೋಟು, ಕ್ರಾಸ್ ಆಗಿದೆ ಆರ್‌ಬಿಐ ಗೇಟು!

click me!