4000 ಕೋಟಿ ಮೌಲ್ಯದ ಅರಮನೆಯಲ್ಲಿದ್ದರೂ ಸ್ವಂತ ದುಡಿಮೆಗೆ ತರಕಾರಿ ಮಂಡಿ ತೆರೆದ ರಾಜವಂಶಸ್ಥ ಸಿಂಧಿಯಾ ಮಗ!

By Gowthami K  |  First Published Jul 25, 2023, 4:47 PM IST

ದೇಶದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಜಮನೆತನದಿಂದ ಬಂದವರು. ಅವರ ಮಗ ತನ್ನ ಸ್ವಂತ ದುಡಿಮೆಗೆ ತರಕಾರಿ ಮಂಡಿಯನ್ನು ತೆರೆದಿದ್ದಾರೆ.


ದೇಶದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಜಮನೆತನದಿಂದ ಬಂದವರು. 400 ಕೊಠಡಿಗಳನ್ನು ಹೊಂದಿರುವ 4000 ಕೋಟಿ ಬೆಲೆ ಬಾಳುವ ಬೃಹತ್ ಅರಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ಇವರ ಅಪಾರ ಸಂಪತ್ತಿನ ಹೊರತಾಗಿಯೂ, ಅವರ ಮಗ ಮಹಾನಾರಾಯಮನ್ ಸಿಂಧಿಯಾ ತಮ್ಮದೇ ಆದ ಹೆಸರನ್ನು ಮಾಡಲು ತಮ್ಮದೇ ಆದ ಸ್ಟಾರ್ಟಪ್ ಅನ್ನು ಆರಂಭಿಸಿದ್ದಾರೆ. 

ಗ್ವಾಲಿಯರ್‌ನ ರಾಜಮನೆತನದ ವಂಶಸ್ಥರಾದ  ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರ ಮಹಾನಾರಾಯಮನ್ ಸಿಂಧಿಯಾ ಅವರು ತಮ್ಮ ಸ್ವಂತ ಕಂಪೆನಿ ಸ್ಥಾಪಿಸಿದ್ದಾರೆ. ಅದು ಕೇವಲ 11 ಲಕ್ಷ ರೂಪಾಯಿಗಳ ಸ್ಥಾಪಿಸಿದ ಕಂಪನಿ ಈಗ 5 ಕೋಟಿ ರೂಪಾಯಿಗಳ ಮೌಲ್ಯದವರೆಗೆ ಬೆಳೆದಿದೆ.

Tap to resize

Latest Videos

ಲಾಕ್‌ಡೌನ್ ವೇಳೆ ಚಾಕೊಲೇಟ್ ಕಂಪನಿ ತೆರೆದು ಕೋಟ್ಯಧಿಪತಿಯಾದ ಹುಡುಗನಿಗೀಗ 19ವರ್ಷ!

ಸಿಂಧಿಯಾ ಸಾಮ್ರಾಜ್ಯದ ಉತ್ತರಾಧಿಕಾರಿ ತನ್ನ ಕುಟುಂಬದ ರಾಜಕೀಯ ಚಟುವಟಿಕೆ ಮತ್ತು ರಾಜಮನೆತನದ ಪರಂಪರೆಯಿಂದ ಹೊರಗುಳಿಯಲು ನಿರ್ಧರಿಸಿದ್ದು, ತನ್ನದೇ ಆದ ಉದ್ಯಮವನ್ನು ಆರಂಭಿಸುವ ಮೂಲಕ ಉದ್ಯಮಿಯಾಗಿ ತನ್ನ ಕಾಲು ಮೇಲೆ ತಾನೇ ನಿಲ್ಲಲು ನಿರ್ಧರಿಸಿದ್ದಾರೆ. ಇವರ ಕಂಪೆನಿಯು ಮಂಡಿಯಿಂದ ನೇರವಾಗಿ ಗ್ರಾಹಕರಿಗೆ ಗುಣಮಟ್ಟದ ತರಕಾರಿಗಳನ್ನು ಒದಗಿಸುವ ಸ್ಟಾರ್ಟಪ್ ಕಂಪನಿ "ಮೈ ಮಂಡಿ"  ಆಗಿದೆ.

ಮಹಾನಾರಾಯಮನ್ ಸಿಂಧಿಯಾ ಅವರ ಮೈ ಮಂಡಿ (MyMandi) ಕಂಪನಿಯು ಕಳೆದ ಎರಡು ವರ್ಷಗಳಿಂದ ಚಾಲನೆಯಲ್ಲಿದೆ. ಕೇವಲ 11 ಲಕ್ಷ ರೂ.ಗಳ ಬಂಡವಾಳದಲ್ಲಿ ಈ ತರಕಾರಿ ಕಂಪನಿಯನ್ನು ಸ್ಥಾಪಿಸಲಾಯಿತು. ಒಂದು ವರ್ಷದ ನಂತರ ಕಂಪೆನಿಯು 60 ಲಕ್ಷಕ್ಕೆ ಬೆಳೆಯಿತು. ಅಕ್ಟೋಬರ್ 2022 ರಲ್ಲಿ  ಈ ಕಂಪೆನಿ ಮೌಲ್ಯ ರೂ 4.1 ಕೋಟಿಗೆ ಬಂದು ತಲುಪಿತು. ಪ್ರಸ್ತುತ ಈ ಕಂಪನಿಯ ಮೌಲ್ಯವು ರೂ 5 ಕೋಟಿಗೆ ಏರಿಕೆಯಾಗಿದೆ.

ಕೃಷಿ ವಲಯದಲ್ಲಿ ಹೊಸತನಕ್ಕೆ ಪ್ರಯತ್ನಿಸುತ್ತಿರುವ 27 ವರ್ಷದ ಸಿಂಧಿಯಾ ಪುತ್ರ,  25 ವರ್ಷದ ಸೂರ್ಯಾಂಶ್ ರಾಣಾ ಜೊತೆಗೂಡಿ ತಾಜಾ ತರಕಾರಿಗಳ ಸಂಗ್ರಹಣೆ ಮತ್ತು ಮಾರಾಟದಲ್ಲಿನ ತ್ಯಾಜ್ಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಮೈಮಂಡಿಯನ್ನು ಸ್ಥಾಪಿಸಿದರು ಮತ್ತು ಉತ್ಪನ್ನವನ್ನು ಕೈಗೆಟಕುವ ದರದಲ್ಲಿ ನೀಡುವುದು ಮುಖ್ಯ ಉದ್ದೇಶವಾಗಿದೆ.

ತರಕಾರಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಹುಡುಗನೀಗ 8200 ಕೋಟಿ ರೂ ಆಸ್ತಿಗೆ ಒಡೆಯ!

ವರದಿ ಪ್ರಕಾರ, ಜ್ಯೋತಿರಾದಿತ್ಯ ಸಿಂಧಿಯಾ ಅವರ ಮಗ ತನ್ನ ಗುರುತನ್ನು ಮರೆಮಾಚಲು ಮುಖವನ್ನು ಮುಚ್ಚಿಕೊಂಡು ಕೆಲಮೊಮ್ಮೆ ಮಂಡಿಗಳಿಗೆ ತಾವೇ ಹೋಗುತ್ತಿರುತ್ತಾರೆ. ಉತ್ತಮ ಗುಣಮಟ್ಟದ ತಾಜಾ ತರಕಾರಿಗಳನ್ನು ಖರೀದಿಸಿ,  ಅವುಗಳನ್ನು ಸ್ಥಳೀಯ ಮೈಲಿ ವಿತರಣಾ ಪಾಲುದಾರರಿಗೆ ಸರಬರಾಜು ಮಾಡುತ್ತಾರೆ. ಅವರೆಂದರೆ ತರಕಾರಿ ಗಾಡಿ ತಳ್ಳುವವರು ಮತ್ತು ಬೀದಿ ವ್ಯಾಪಾರಿಗಳು.

ಮಹಾನಾರಾಯಮನ್ ಸಿಂಧಿಯಾ ತನ್ನ ಉದ್ಯಮಶೀಲತೆಯ ದೃಷ್ಟಿಯ ಮೂಲಕ, ಗ್ವಾಲಿಯರ್‌ನಾದ್ಯಂತ ತಾಜಾ, ಕಡಿಮೆ-ವೆಚ್ಚದ ತರಕಾರಿಗಳು ಮತ್ತು ದಿನಸಿಗಳನ್ನು ಪೂರೈಸುವ ಗುರಿಯನ್ನು ಹೊಂದಿದ್ದಾರೆ. ಕುಟುಂಬದ ಅಪಾರ ಸಂಪತ್ತನ್ನು ಅವಲಂಭಿಸದೆ ಭವಿಷ್ಯದಲ್ಲಿ  ಇಡೀ ಮಧ್ಯಪ್ರದೇಶ ರಾಜ್ಯಕ್ಕೆ ತನ್ನ ಕಂಪೆನಿ ವಿಸ್ತರಿಸುವುದು ಅವರ ಗುರಿಯಾಗಿದೆ. ಈ ಮೂಲಕ ತಾನೊಬ್ಬ ಉದ್ಯಮಿಯಾಗಲು ಪಣತೊಟ್ಟಿದ್ದಾರೆ.

click me!