ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಗೆ ಜಾಕ್ ಪಾಟ್; 5,980 ಕೋಟಿ ರೂ. ನಿಧಿ ಸಂಗ್ರಹ

By Suvarna News  |  First Published Jul 25, 2023, 1:56 PM IST

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಎಥೆರಿಯಲ್ ಮಷಿನ್ಸ್ ಪ್ರಾರಂಭಿಕ ಹಂತದಲ್ಲಿರುವ ನವೋದ್ಯಮಗಳಿಗೆ  ಹಣಕಾಸಿನ ನೆರವು ಒದಗಿಸುವ ಕಾರ್ಯಕ್ರಮವೊಂದರಲ್ಲಿ 59.80 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ನಿಧಿ ಸಂಗ್ರಹಿಸಿದೆ. 
 


ಬೆಂಗಳೂರು (ಜು.25): ಬೆಂಗಳೂರು ಮೂಲದ ಇಂಜಿನಿಯರ್ ಹಾರ್ಡ್ ವೇರ್ ಸ್ಟಾರ್ಟ್ ಅಪ್ ಎಥೆರಿಯಲ್ ಮಷಿನ್ಸ್ ಪ್ರಾರಂಭಿಕ ಹಂತದಲ್ಲಿರುವ ನವೋದ್ಯಮಗಳಿಗೆ  ಹಣಕಾಸಿನ ನೆರವು ಒದಗಿಸುವ ಕಾರ್ಯಕ್ರಮವೊಂದರಲ್ಲಿ 59.80 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ನಿಧಿ ಸಂಗ್ರಹಿಸಿದೆ. ಪ್ರಾರಂಭಿಕ ಹಂತದಲ್ಲಿರುವ ಸ್ಟಾರ್ಟ್ ಅಪ್ ಗಳ ನಿಧಿ ಸಂಗ್ರಹಕ್ಕೆ ನೆರವು ನೀಡಲು  ಪೀಕ್ ಎಕ್ಸ್ ವಿ ಪಾರ್ಟನರ್ಸ್, ಬ್ಲೂಮ್ ವೆಂಚರ್ಸ್ ಹಾಗೂ ಏಂಜೆಲ್ ಹೂಡಿಕೆದಾರರು  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  59.80 ಕೋಟಿ ರೂ. ನಿಧಿ ಸಂಗ್ರಹಿಸಿರೋದಾಗಿ ಎಥೆರಿಯಲ್ ಮಷಿನ್ಸ್ ಜುಲೈ 24ರಂದು ಮಾಹಿತಿ ನೀಡಿದೆ. ಈ ನಿಧಿ ಸಂಗ್ರಹ ಭಾರತದ ಉತ್ಪಾದನಾ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆ ಹಾಗೂ ಅವಕಾಶಗಳ ಮೇಲೆ ಬೆಳಕು ಚೆಲ್ಲಿದೆ. ಪ್ರಾಡಕ್ಷನ್ ಲಿಂಕ್ಡ್ ಇನ್ಸೆಟಿವ್ ಸ್ಕೀಮ್ ನಂತಹ ಕಾರ್ಯಕ್ರಮಗಳ ಮೂಲಕ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ತುಂಬುವ ಕೆಲಸವನ್ನು ಇದು ಮಾಡಿದೆ. ಈ ಸ್ಟಾರ್ಟ್ಅಪ್ ಸಿಎನ್ ಸಿ ಮಷಿನ್ಸ್ ಉತ್ಪಾದಿಸುತ್ತದೆ. ಇದು ಇಂಜಿನಿಯರಿಂಗ್ ಬಿಡಿ ಭಾಗಗಳನ್ನು ಅತ್ಯಂತ ಕಡಿಮೆ ದರದಲ್ಲಿ ಉತ್ಪಾದಿಸಿ ಗ್ರಾಹಕರಿಗೆ ನೀಡುತ್ತಿದೆ. ಈ ಸಂಸ್ಥೆಯನ್ನು ನವೀನ್ ಜೈನ್ ಹಾಗೂ ಟಿಇಡಿಎಕ್ಸ್ ಸ್ಪೀಕರ್ ಕೌಶಿಕ್ ಮುದ್ದಾ ಸ್ಥಾಪಿಸಿದ್ದು, 2019ರ ಫೋರ್ಬ್ಸ್ ಏಷ್ಯಾದ 30 ಅಂಡರ್ 30 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 

ಇಂಜಿನಿಯರಿಂಗ್ ಬಿಡಿ ಭಾಗಗಳ ಉತ್ಪಾದನೆಗೆ ದೇಶಾದ್ಯಂತ ಕಾರ್ಖಾನೆಗಳನ್ನು ನಿರ್ಮಿಸಲು ತಾಜಾ ಬಂಡವಾಳವನ್ನು ಬಳಸಲು ಎಥೆರಿಯಲ್ ಮಷಿನ್ಸ್ ಸ್ಟಾರ್ಟ್ ಅಪ್ ಯೋಜನೆ ರೂಪಿಸಿದೆ. 'ಹೊಸ ನಿಧಿಯನ್ನು ನಾವು ನಮ್ಮ ಕಾರ್ಯಗಳ ವಿಸ್ತರಣೆ ಜೊತೆಗೆ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಹೈ ಎಂಡ್ ಇಂಜಿನಿಯರಿಂಗ್ ಅಪ್ಲಿಕೇಷನ್ ಗಳ ವಿಸ್ತರಣೆಗೆ ಬಳಸಲಾಗುತ್ತದೆ' ಎಂದು ಅಪ್ ಎಥೆರಿಯಲ್ ಮಷಿನ್ಸ್  ಸಹಸಂಸ್ಥಾಪಕ ಕೌಶಿಕ್ ಮುದ್ದಾ ತಿಳಿಸಿದ್ದಾರೆ.

Tap to resize

Latest Videos

Business News: ಕೋಟಿ ಕೋಟಿ ಹಣ, ಆಸ್ತಿಯಿದ್ರೂ ತರಕಾರಿ ವ್ಯಾಪಾರ ಮಾಡ್ತಾರೆ ಈ ಮಂತ್ರಿ ಮಗ!

ಬ್ಲ್ಯೂಮೆ ವೆಂಚರ್ಸ್ ಹಾಗೂ ಪೀಕ್ ಎಕ್ಸ್ ವಿ ಪಾರ್ಟನರ್ಸ್ ಜೊತೆಗೆ ಈ ಕಾರ್ಯಕ್ರಮದಲ್ಲಿ ಸೆಲೆಸ್ಟ ಕ್ಯಾಪಿಟಲ್ ಪಾರ್ಟನರ್ ಗಣಪತಿ ಸುಬ್ರಹ್ಮಣ್ಯಂ, ಬ್ಲಾಕ್ ಸ್ಟೋನ್ ಇಂಡಿಯಾದ ಮಾಜಿ ಮುಖ್ಯಸ್ಥ ಮ್ಯಾಥ್ಯು ಸೈರಿಯಕ್ ಹಾಗೂ ಕ್ಯಾಡೆನ್ಸ್ ಡಿಸೈನ್ ಸಿಸ್ಟಂ ಕಾರ್ಯನಿರ್ವಾಹಕ ಮುಖ್ಯಸ್ಥ ಹಾಗೂ ವ್ಲಾಡೆನ್ ಇಂಟರ್ ನ್ಯಾಷನಲ್ ಕಾರ್ಯನಿರ್ವಾಹಕ ಮುಖ್ಯಸ್ಥ ಲಿಪ್ ಬು ಟ್ಯಾನ್ ಭಾಗವಹಿಸಿದ್ದರು. 

ಫಿನ್ ವಾಲ್ಯೂ, 9ಯುನಿಕಾರ್ನ್ಸ್, ವೆಂಚರ್ ಕ್ಯಾಟಲಿಸ್ಟ್ ಹಾಗೂ ಟಿ 2ಡಿ3 ಕ್ಯಾಪಿಟಲ್ ನಲ್ಲಿ ಕೂಡ ಭಾಗವಹಿಸಿದ್ದರು. ಮುದ್ದಾ ಹಾಗೂ ನವೀನ್ ಜೈನ್ ಇಥೆರಿಯಲ್ ಮಷಿನ್ಸ್ ಪ್ರೊಡ್ಯುಸ್ ಕಂಪ್ಯೂಟರ್ ನುಮೆರಿಕಲ್ ಕಂಟ್ರೋಲ್ (ಸಿಎನ್ ಸಿ) ಮಷಿನ್ಸ್ ಅನ್ನು 2014ರಲ್ಲಿ ಸ್ಥಾಪಿಸಿದರು. ಈ ಮಷಿನ್ ಗಳನ್ನು ಮಿಲ್ಲಿಂಗ್ ವರ್ಕ್ಸ್ ನಲ್ಲಿ ಬಳಸಲಾಗುತ್ತದೆ. ಆ ಮೂಲಕ ಇಂಜಿನಿಯರ್ ಗಳಿಗೆ ಫೋಟೋಟೈಪ್ಸ್ ಹಾಗೂ ಕಮರ್ಷಿಯಲ್ ಪ್ರಾಡಕ್ಟ್ಸ್  ಸಿದ್ಧಪಡಿಸಲು ಇಂಜಿನಿಯರ್ ಗಳಿಗೆ ನೆರವು ನೀಡುತ್ತದೆ. 

ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಮಹಿಳೆ ಇಂದು 9024 ಕೋಟಿ ರೂ. ಬೆಲೆ ಬಾಳುವ ಸ್ಟಾರ್ಟ್ಅಪ್ ಒಡತಿ

'ಎಥೆರಿಯಲ್ ಸಿಎನ್ ಸಿ ಮಷಿನ್ ಗಳು ಉತ್ಪಾದಕರಿಗೆ ಇಂಜಿನಿಯರಿಂಗ್ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಹಾಗೂ ವೇಗವಾಗಿ ಹಾಗೂ ಹೆಚ್ಚು ದರ ಪರಿಣಾಮಕಾರಿ ಬೆಲೆಯಲ್ಲಿ ಒದಗಿಸಲು ನೆರವು ನೀಡುತ್ತವೆ. ಇನ್ನು ಈ ಇಂಜಿನಿಯರಿಂಗ್ ಉತ್ಪನ್ನಗಳನ್ನು ಉತ್ಪಾದಿಸುವ ನಿರ್ಮಾಣ ಕಾರ್ಖಾನೆಗಳಲ್ಲಿಮರು ಹೂಡಿಕೆ ಮಾಡುತ್ತವೆ. ಇನ್ನು ಉತ್ಪಾದನಾ ಮೌಲ್ಯ ಸರಣಿಯಲ್ಲಿ ಬೇಡಿಕೆ ಗಳಿಸಲು ನೆರವು ನೀಡಲಿದೆ' ಎಂದು ಹೇಳಿಕೆಯಲ್ಲಿ ಸ್ಟಾರ್ಟ್ ಅಪ್ ತಿಳಿಸಿದೆ. 
ಈ ಇಂಜಿನಿಯರಿಂಗ್ ಉತ್ಪನ್ನಗಳನ್ನು ದೇಶದ ಏರೋಸ್ಪೇಸ್, ರಕ್ಷಣಾ, ಅಟೋಮೊಬೈಲ್ ಹಾಗೂ ಆರೋಗ್ಯ ಸೇವಾ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ ಎಂದು ಇದು ತಿಳಿಸಿದೆ. 


 

click me!