
ವಾಷಿಂಗ್ಟನ್[ಅ.18]: ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಳ್ಲಾ 2018-19ನೇ ಸಾಲಿನಲ್ಲಿ ಭರ್ಜರಿ 300 ಕೋಟಿ ರು. ಆದಾಯ ಪಡೆದುಕೊಂಡಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.66ರಷ್ಟುಹೆಚ್ಚು ಎಂದು ಸಿಎನ್‌ಎನ್ ಬ್ಯುಸಿನೆಸ್ ವರದಿ ಮಾಡಿದೆ.
52 ವರ್ಷದ ಭಾರತೀಯ ಮೂಲದ ನಾದೆಳ್ಲಾ ಅವರ ಮೂಲ ವೇತನ 16.37 ಕೋಟಿ ರು.. ಉಳಿದ ಆದಾಯವನ್ನು ಅವರು ಷೇರು ಆದಾಯದ ಮೂಲಕ ಪಡೆದುಕೊಂಡಿದ್ದಾರೆ.
ಕಂಪನಿಯ ಲಾಭಾಂಶದಲ್ಲಿ ಭಾರೀ ಏರಿಕೆಯಾಗಿರುವ ಕಾರಣ, ಸತ್ಯಾ ಅವರಿಗೆ ನೀಡಲಾಗುವ ಫಲಿತಾಂಶ ಆಧರಿತ ಷೇರುಗಳ ಮೌಲ್ಯವೂ ಭರ್ಜರಿ ಏರಿಕೆಗೊಂಡ ಕಾರಣ, ಅವರ ಆದಾಯ ಹೆಚ್ಚಳಗೊಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.