ಫೇಸ್‌ಬುಕ್ ಭಾರತದ ವ್ಯವಹಾರಕ್ಕೆ ಹೊಸ ಮುಖ್ಯಸ್ಥೆ: ಸಂಧ್ಯಾ ದೇವನಾಥನ್ ನೇಮಕ

By Anusha KbFirst Published Nov 17, 2022, 5:34 PM IST
Highlights

ಫೇಸ್‌ಬುಕ್ ಪೋಷಕ ಮೆಟಾ ಸಂಸ್ಥೆ ತನ್ನ ಭಾರತ ಮೂಲದ ವ್ಯವಹಾರಗಳಿಗೆ ಹೊಸ ಮುಖ್ಯಸ್ಥರನ್ನು ನೇಮಿಸಿದೆ. ಸಂಸ್ಥೆಯಿಂದ ಹಲವು ದೊಡ್ಡ ತಲೆಗಳ ನಿರ್ಗಮನದ ನಂತರ ಸಂಧ್ಯಾ ದೇವನಾಥನ್ ಅವರನ್ನು ಸಂಸ್ಥೆಯ ಭಾರತದ ವ್ಯವಹಾರಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ನವದೆಹಲಿ: ಫೇಸ್‌ಬುಕ್ ಪೋಷಕ ಮೆಟಾ ಸಂಸ್ಥೆ ತನ್ನ ಭಾರತ ಮೂಲದ ವ್ಯವಹಾರಗಳಿಗೆ ಹೊಸ ಮುಖ್ಯಸ್ಥರನ್ನು ನೇಮಿಸಿದೆ. ಸಂಸ್ಥೆಯಿಂದ ಹಲವು ದೊಡ್ಡ ತಲೆಗಳ ನಿರ್ಗಮನದ ನಂತರ ಸಂಧ್ಯಾ ದೇವನಾಥನ್ ಅವರನ್ನು ಸಂಸ್ಥೆಯ ಭಾರತದ ವ್ಯವಹಾರಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದಕ್ಕೂ ಮೊದಲು ಭಾರತದ ವ್ಯವಹಾರಗಳಿಗೆ ಅಜಿತ್ ಮೋಹನ್ ಅಧ್ಯಕ್ಷರಾಗಿದ್ದರು. ಅವರ ನಿರ್ಗಮನದ  ಎರಡು ವಾರಗಳ ನಂತರ ಈಗ ಹೊಸ ಅಧ್ಯಕ್ಷರ ನೇಮಕ ಮಾಡಲಾಗಿದೆ.ಈ ಬಗ್ಗೆ ಮೆಟಾ ಸಂಸ್ಥೆ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಸಂಧ್ಯಾ ದೇವನಾಥನ್ ಅವರು ಮೆಟಾ ಇಂಡಿಯಾದ ಮುಖ್ಯಸ್ಥರಾಗಿ ಮುಂದಿನ ವರ್ಷದಿಂದ ಕಾರ್ಯನಿರ್ವಹಿಸಲಿದ್ದಾರೆ. ಜನವರಿ 1, 2023ರಿಂದ ಅವರು ಮೆಟಾ ಇಂಡಿಯಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. 

ಪ್ರಸ್ತುತ ಸಂಧ್ಯಾ ದೇವನಾಥನ್ ಅವರು ಮೆಟಾ ಸಂಸ್ಥೆಯಲ್ಲೇ ಉದ್ಯೋಗಿಯಾಗಿದ್ದು, ಮೆಟಾ ಏಷಿಯಾ ಪೆಸಿಫಿಕ್ ((APAC) ವಿಭಾಗದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.  ಇನ್ನು ಅವರ ಹೊಸ ಕೆಲಸದ ಬಗ್ಗೆ ಅವರು ಮೆಟಾದ ಏಷಿಯಾ ಪೆಸಿಫಿಕ್ ಸಂಪೂರ್ಣ ವ್ಯವಹಾರದ ಉಪಾಧ್ಯಕ್ಷ ಡ್ಯಾನ್ ನಿಯರಿ (Dan Neary) ಅವರಿಗೆ ವರದಿ ಒಪ್ಪಿಸಲಿದ್ದಾರೆ. ಇದಕ್ಕೂ ಮೊದಲು ಸಂಧ್ಯಾ ಸಿಂಗಾಪುರ (Singapore) ಹಾಗೂ ವಿಯೆಟ್ನಾಂನ (Vietnam) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

ವಾಟ್ಸಾಪ್‌ನ ಭಾರತದ ಮುಖ್ಯಸ್ಥ ಅಭಿಜಿತ್ ಮತ್ತು ಮೆಟಾದ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀವ್ ರಾಜೀನಾಮೆ!

ಭಾರತದ ಮೆಟಾ ಸಂಸ್ಥೆಯ ವ್ಯವಹಾರಗಳಿಂದ ಹಲವು ಹಿರಿಯ ನಾಯಕರು ತೊರೆದ ಹೋದ ಬಳಿಕ ಸಂಧ್ಯಾ ದೇವನಾಥನ್ ಅವರ ನೇಮಕವಾಗಿದೆ. ನವಂಬರ್ 3 ರಂದು ಮೆಟಾ ಸಂಸ್ಥೆ ಅದರ ಭಾರತದ ಮುಖ್ಯಸ್ಥ ಅಜಿತ್ ಮೋಹನ್ (Ajit Mohan) ಅವರು ತಕ್ಷಣದಿಂದಲೇ ಸಂಸ್ಥೆಗೆ ರಾಜೀನಾಮೆ ನೀಡಿದ ಬಗ್ಗೆ ಘೋಷಣೆ ಮಾಡಿತ್ತು. ನಂತರ ನವಂಬರ್ 15 ರಂದು ಸಂಸ್ಥೆಯ ಮತ್ತೊಂದು ದೊಡ್ಡ ತಲೆ ಅಭಿಜಿತ್ ಬೋಸ್ (Abhijit Bose) (ವಾಟ್ಸಾಪ್ ಇಂಡಿಯಾದ ಅಧ್ಯಕ್ಷರಾಗಿದ್ದ ಅಭಿಜಿತ್) ಹಾಗೂ ಮೆಟಾ ಇಂಡಿಯಾದ (Meta India) ಸಾರ್ವಜನಿಕ ನಿಯಾಮವಳಿ ನಿರ್ದೇಶಕ ರಾಜೀವ್ ಅಗರ್‌ವಾಲ್ ಅವರು ಸಂಸ್ಥೆ ತೊರೆದ ಬಗ್ಗೆ ಘೋಷಣೆ ಮಾಡಿತ್ತು.

ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟ್ಟರ್‌ನ್ನು ಉದ್ಯಮಿ ಎಲನ್ ಮಸ್ಕ್ ಕೊಂಡುಕೊಂಡ ಬಳಿಕ ಉದ್ಯೋಗಿಗಳ ಕಡಿತವಾದ ನಂತರ ಎಲ್ಲಾ ಜಾಗತಿಕ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕಡಿತ (layoff) ಆರಂಭವಾಗಿದ್ದು, ಫೇಸ್‌ಬುಕ್ ಕೂಡ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಮಾಡಲು ನಿರ್ಧರಿಸಿತ್ತು. ಅದರಂತೆ ನವಂಬರ್ 9 ರಂದು ಮೆಟಾ ಹಾಗೂ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ (Mark Zuckerberg), ಸಂಸ್ಥೆಯಲ್ಲಿ 11,000 ಉದ್ಯೋಗಿಗಳ ಅಥವಾ ಶೇ.13 ರಷ್ಟು ಉದ್ಯೋಗಿಗಳ (employees) ಕಡಿತ ಮಾಡುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೇ ಎಲ್ಲಾ ಹೊಸ ನೇಮಕಾತಿಯನ್ನು ಮುಂದಿನ ವರ್ಷದ ಮಾರ್ಚ್‌ವರೆಗೆ ತಡೆ ಹಿಡಿಯಲಾಗಿದೆ ಎಂದು ಹೇಳಿದ್ದರು. 

ಶೀಘ್ರದಲ್ಲೇ 10,000 ಅಮೆಜಾನ್‌ ಸಿಬ್ಬಂದಿ ವಜಾ..! ಮೆಟಾ, ಟ್ವಿಟ್ಟರ್‌ ಬಳಿಕ ಮತ್ತೊಂದು ದೊಡ್ಡ ಶಾಕ್‌

ಅಂದಹಾಗೆ ಈಗ ಭಾರತದ ಮೆಟಾ ಮುಖ್ಯಸ್ಥರಾಗಿ ನೇಮಕವಾಗಿರುವ ಸಂಧ್ಯಾ ಅವರು 2016 ರಿಂದ ಮೆಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಂಗಾಪುರ ಹಾಗೂ ವಿಯೆಟ್ನಾಂನಲ್ಲಿ ಸಂಸ್ಥೆಯ ಅಭಿವೃದ್ಧಿಗೆ ನೆರವಾಗಿದ್ದಾರೆ. ಅಲ್ಲದೇ ದಕ್ಷಿಣ ಏಷಿಯಾದಲ್ಲಿ ಸಂಸ್ಥೆಯ ಇ ವ್ಯವಹಾರಗಳ ಏಳಿಗೆಗೆ ಸಹಕರಿಸಿದ್ದಾರೆ. 
ಮಗಳಿಗೆ ಹಾಲುಣಿಸಲು ಎದ್ದೆ; Meta ಕೆಲಸ ಕಳೆದುಕೊಂಡ ಮೇಲ್ ನೋಡಿದೆ: ಭಾರತೀಯ ಮೂಲದ ಮಹಿಳೆ ಭಾವುಕ ಪೋಸ್ಟ್‌

 

click me!