ಇನ್ನು ಮಾನಸಿಕ ಅಸ್ವಸ್ಥರಿಗೂ ಆರೋಗ್ಯ ವಿಮೆ: ಐಆರ್‌ಡಿಎ ಸೂಚನೆ

By Web DeskFirst Published Aug 18, 2018, 11:17 AM IST
Highlights

ಮಾನಸಿಕ ಸ್ವಾಸ್ಥ್ಯ ಬಹಳ ಮುಖ್ಯವಾದದ್ದು. ಆದರೆ, ಇದಕ್ಕೆ ಯಾವುದೇ ವಿಮಾ ಕಂಪನಿಗಳಿಂದಲೂ ಸೌಲಭ್ಯ ದಕ್ಕುತ್ತಿರಲಿಲ್ಲ. ಆದರಿನ್ನೂ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆದರೂ ವಿಮಾ ಸೌಲಭ್ಯ ಸಿಗುತ್ತದೆ.

ನವದೆಹಲಿ: ಮಾನಸಿಕ ಅಸ್ವಸ್ಥರಾದವರೂ ಇನ್ನು ಮುಂದೆ ತಮ್ಮ ಚಿಕಿತ್ಸೆಗೆ ಆರೋಗ್ಯ ವಿಮೆ ಪಡೆಯಬಹುದು. ಮಾನಸಿಕ ಅನಾರೋಗ್ಯಕ್ಕೂ, ದೈಹಿಕ ಆರೋಗ್ಯ ಸಮಸ್ಯೆಗಳ ರೀತಿಯಲ್ಲೇ ವೈದ್ಯಕೀಯ ವಿಮೆ ಸೌಲಭ್ಯ ನೀಡುವಂತೆ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎ) ವಿಮಾ ಕಂಪೆನಿಗಳಿಗೆ ಸೂಚಿಸಿದೆ.

ಮಾನಸಿಕ ಆರೋಗ್ಯ ಸಂರಕ್ಷಣೆ ಕಾಯ್ದೆಯ ಕಲಂ 21(4)ರ ಅನ್ವಯ ಐಆರ್‌ಡಿಎ ವಿಮಾ ಕಂಪೆನಿಗಳಿಗೆ ಈ ನಿರ್ದೇಶನ ನೀಡಿದೆ. ಕಾಯ್ದೆಯ ಪ್ರಕಾರ, ದೈಹಿಕ ಅನಾರೋಗ್ಯದ ಚಿಕಿತ್ಸೆಗೆ ದೊರೆಯುವ ವಿಮಾ ಸೌಲಭ್ಯ ಮಾನಸಿಕ ಅನಾರೋಗ್ಯದ ಚಿಕಿತ್ಸೆಗೂ ದೊರೆಯುವಂತೆ ವಿಮಾ ಸಂಸ್ಥೆಗಳು ನಿಯಮ ರೂಪಿಸುವಂತೆ ನಿರ್ದೇಶಿಸಲ್ಪಟ್ಟಿದೆ.

click me!