ಕೇಳ್ ಚಿನ್ನಾ, ಚಿನ್ನದ ಬೆಲೆ ಇದೀಗ ಕೇಳಲು ಚೆನ್ನ!

By Web DeskFirst Published Aug 16, 2018, 3:04 PM IST
Highlights

ಮತ್ತೆ ಇಳಿಕೆಯಾದ ಚಿನ್ನದ ಬೆಲೆ! ಜಾಗತಿಕ ವಾಣಿಜ್ಯ ಏರುಪೇರು ಬೆಲೆ ಇಳಿಕೆಗೆ ಕಾರಣ! 19 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಚಿನ್ನ! 10 ಗ್ರಾಂ ಬಂಗಾರದ ಬೆಲೆಯಲ್ಲಿ 1.4 ರಷ್ಟು ಇಳಿಕೆ! ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ
 

ನವದೆಹಲಿ(ಆ.16): ಕಳೆದ 19 ತಿಂಗಳಲ್ಲೇ ಬಂಗಾರದ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಗುರುವಾರ ಬೆಳಗ್ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯಲ್ಲಿ ಸುಮಾರು 338 ರೂ. ಇಳಿಕೆ ಕಂಡು ಬಂದಿದೆ.

10 ಗ್ರಾಂ ಬಂಗಾರದ ಬೆಲೆಯಲ್ಲಿ 1.4 ರಷ್ಟು ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ 29,397 ರೂ. ಆಗಿದೆ.   ಹಾಗೆ ಬೆಳ್ಳಿ ಬೆಲೆ ಸಹ ಭಾರಿ ಕುಸಿತ ಕಂಡು ಬಂದಿದೆ. ಕೆಜಿ ಬೆಳ್ಳಿಗೆ 1078 ರೂ ಕಡಿಮೆ ಆಗಿದ್ದು, 36,721ಕ್ಕೆ ನಿಗದಿಯಾಗಿದೆ. 

Latest Videos

ಇದು ಬಂಗಾರದ ಖರೀದಿದಾರರಿಗೆ ಸಂತಸ ನೀಡಿದರೆ, ವ್ಯವಹಾರ ಮಾಡುವವರಿಗೆ ದೊಡ್ಡ ಹೊಡೆತ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಕುಸಿತ ಹಾಗೂ ಟರ್ಕಿಯಲ್ಲಿ ಆರ್ಥಿಕ ತಲ್ಲಣದಿಂದ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ ಎನ್ನಲಾಗಿದೆ. ಚೀನಾ- ಅಮೆರಿಕ ನಡುವಣ ವ್ಯಾಪಾರ ಯುದ್ಧ ಮುಂದುವರೆದಿರುವುದು ಈ ಇಳಿತಕ್ಕೆ ಕಾರಣ ಎಂದು  ಹೇಳಲಾಗುತ್ತಿದೆ.

click me!