ಹೆಣ್ಣುಕೊಟ್ಟಅತ್ತೆ ಕೈಗೇ 800 ಕೋಟಿ ಮೌಲ್ಯದ ಕಂಪನಿ ನೀಡಿದ ಧೋನಿ; ಸಿಇಒ ಶೀಲಾ ಸಿಂಗ್ ಕುರಿತ ಮಾಹಿತಿ ಇಲ್ಲಿದೆ

By Suvarna News  |  First Published Jun 14, 2023, 6:16 PM IST

ಎಂ.ಎಸ್.ಧೋನಿ ಒಬ್ಬ ಯಶಸ್ವಿ ಕ್ರಿಕಟಿಗ ಮಾತ್ರವಲ್ಲ,ಉದ್ಯಮಿ ಕೂಡ ಹೌದು.'ಧೋನಿ ಎಂಟರ್ ಟೈನ್ಮೆಂಟ್ ಲಿಮಿಟೆಡ್' ಎಂಬ 800 ಕೋಟಿ ರೂ. ಮೌಲ್ಯದ ಪ್ರಾಡಕ್ಷನ್ ಹೌಸ್ ಅನ್ನು ಧೋನಿ ಹೊಂದಿದ್ದಾರೆ.ಈ ಕಂಪನಿಯ ಸಿಇಒ ಶೀಲಾ ಸಿಂಗ್ ಬೇರೆ ಯಾರೂ ಅಲ್ಲ, ಧೋನಿಗೆ ಹೆಣ್ಣು ಕೊಟ್ಟ ಅತ್ತೆ.ಅಂದರೆ ಪತ್ನಿ ಸಾಕ್ಷಿ ಸಿಂಗ್ ಧೋನಿ ಅವರ ತಾಯಿ.
 


Business Desk:ಎಂ.ಎಸ್ . ಧೋನಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರೂ ಇಷ್ಪಪಡುವ ಕ್ರಿಕೆಟಿಗ. ಇತ್ತೀಚೆಗೆ ಧೋನಿ ಐಪಿಎಲ್ ನಿಂದ ನಿವೃತ್ತಿಯಾಗುತ್ತಿದ್ದಾರೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಐಪಿಎಲ್ ನಿಂದ ಧೋನಿ ನಿವೃತ್ತಿಯಾದರೆ ಎಲ್ಲ ಕ್ರಿಕೆಟ್ ಪ್ರಕಾರಗಳಿಂದಲೂ ದೂರ ಸರಿದಂತೆಯೇ. ಆದರೆ, ಈ ಸುದ್ದಿಯನ್ನು ಧೋನಿ ದೃಢೀಕರಿಸಿಲ್ಲ. ಇನ್ನು ಧೋನಿಗೆ ಕ್ರಿಕೆಟ್ ಬಿಟ್ಟರೆ ಬೇರೆ ಆದಾಯದ ಮೂಲಗಳು ಏನಿವೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿರಬಹುದು. ಧೋನಿ ಕೋಟಿಗಟ್ಟಲೆ ಬೆಲೆ ಬಾಳುವ ಉದ್ಯಮ ಜಗತ್ತನ್ನು ಈಗಾಗಲೇ ಕಟ್ಟಿಕೊಂಡಿದ್ದಾರೆ. ಅದರಲ್ಲೂ ಧೋನಿ ಅವರ ಕೋಟಿಗಟ್ಟಲೆ ಮೌಲ್ಯದ ಕಂಪನಿಯನ್ನು ಶೀಲಾ ಸಿಂಗ್ ಎಂಬ ಮಹಿಳಾ ಸಿಇಒ ಮುನ್ನಡೆಸುತ್ತಿದ್ದಾರೆ. ಅಂದ ಹಾಗೇ ಈ ಶೀಲಾ ಸಿಂಗ್  ಧೋನಿಗೆ ಹತ್ತಿರದ ಸಂಬಂಧಿ ಕೂಡ. ಧೋನಿ ಅವರ ಪ್ರಾಡಕ್ಷನ್ ಹೌಸ್ 'ಧೋನಿ ಎಂಟರ್ ಟೈನ್ಮೆಂಟ್ ಲಿಮಿಟೆಡ್' ಸಿಇಒ ಆಗಿ ಬಹುಕೋಟಿಯ ಉದ್ಯಮವನ್ನು ಶೀಲಾ ಸಿಂಗ್ ಮುನ್ನಡೆಸುತ್ತಿದ್ದಾರೆ. ಹಾಗಾದ್ರೆ ಈ ಶೀಲಾ ಸಿಂಗ್ ಯಾರು? ಅವರಿಗೂ ಧೋನಿಗೂ ಏನು ಸಂಬಂಧ? ಇಲ್ಲಿದೆ ಮಾಹಿತಿ.

ಅತ್ತೆ ಕೈಗೆ ಉದ್ಯಮ ಕೊಟ್ಟ ಧೋನಿ
ಶೀಲಾ ಸಿಂಗ್ ಬೇರೆ ಯಾರೂ ಅಲ್ಲ. ಧೋನಿಗೆ ಹೆಣ್ಣು ಕೊಟ್ಟ ಅತ್ತೆ. ಅಂದ್ರೆ ಪತ್ನಿ ಸಾಕ್ಷಿ ಸಿಂಗ್ ಧೋನಿ ಅವರ ತಾಯಿ. ಇನ್ನು ಧೋನಿ ಎಂಟರ್ ಟೈನ್ಮೆಂಟ್ ಲಿಮಿಟೆಡ್'ಗೆ ಇನ್ನೂ ಒಬ್ಬರು ಸಿಇಒ ಇದ್ದಾರೆ. ಅದು ಬೇರೆ ಯಾರೂ ಅಲ್ಲ. ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್. ಧೋನಿ ತಲೆಯಲ್ಲಿ ತನ್ನ ಉದ್ಯಮ ಜಗತ್ತನ್ನು ಇನ್ನಷ್ಟು ವಿಸ್ತರಿಸುವ ಯೋಚನೆ ಬಂದ ತಕ್ಷಣ ಅವರು ಬೇರೆಲ್ಲೂ ಹುಡುಕಾಟ ನಡೆಸದೆ ತಮ್ಮ ಕುಟುಂಬ ಸದಸ್ಯರನ್ನೇ ಈ ಕೆಲಸಕ್ಕೆ ಆರಿಸಿಕೊಂಡರು. ಅತ್ತೆಯ ಮೇಲೆ ಭರವಸೆಯಿಟ್ಟು ಸಂಸ್ಥೆಯ ಸಿಇಒ ಹುದ್ದೆಯನ್ನು ಅವರಿಗೆ ನೀಡಿದರು. 2020ರಿಂದ ಧೋನಿ ಅವರ ಅತ್ತೆ ಶೀಲಾ ಸಿಂಗ್ ಕಂಪನಿಯ ಸಿಇಒ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ ಕೂಡ.

Tap to resize

Latest Videos

ಧೋನಿ ನಿವೃತ್ತಿ ಸುಳಿವು ನೀಡಿತಾ ಸಿಎಸ್‌ಕೆ, ಭಾವನಾತ್ಮಕ ವಿಡಿಯೋ ಹಂಚಿಕೊಂಡ ಫ್ರಾಂಚೈಸಿ!

ಯಶಸ್ಸಿನ ಹಾದಿಯಲ್ಲಿ ಸಂಸ್ಥೆ
ಶೀಲಾ ಸಿಂಗ್ ಒಂದು ಸಂಸ್ಥೆಯ ಸಿಇಒ ಹುದ್ದೆ ನಿಭಾಯಿಸುತ್ತಿರೋದು ಇದೇ ಮೊದಲ ಬಾರಿಗಾದರೂ, ಮಗಳು ಸಾಕ್ಷಿ ಜೊತೆ ಸೇರಿ ಎಂ.ಎಸ್. ಧೋನಿ ಪ್ರಾಡಕ್ಷನ್ ಹೌಸ್ ಅನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಸಂಸ್ಥೆಯ ಮೌಲ್ಯವನ್ನು ಮಿಲಿಯನ್ ಡಾಲರ್ ಗೆ ಏರಿಕೆ ಮಾಡಿರುವ ಜೊತೆಗೆ ಹೊಸ ಹೊಸ ಪ್ರಾಜೆಕ್ಟ್ ಗಳನ್ನು ಕೂಡ ಘೋಷಿಸುತ್ತಿದ್ದಾರೆ. ಒಂದು ವರದಿಯ ಪ್ರಕಾರ ಶೀಲಾ ಸಿಂಗ್ ಪತಿ ಆರ್.ಕೆ. ಸಿಂಗ್ ಹಾಗೂ ಎಂ.ಎಸ್.ಧೋನಿ ಅವರ ತಂದೆ ಪಾಸ್ ಸಿಂಗ್ ಧೋನಿ ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಇಬ್ಬರೂ ಒಟ್ಟಿಗೆ ಕನೋಯಿ ಗ್ರೂಪ್ 'ಬಿನಗುರಿ ಟೀ ಕಂಪನಿ'ಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಶೀಲಾ ಸಿಂಗ್ ಗೃಹಿಣಿಯಾಗಿದ್ದು, ಮನೆ ಹಾಗೂ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.

ಧೋನಿ ನಿರ್ಮಾಣದ Lets Get Married ಚಿತ್ರದ ಟೀಸರ್​ ಬಿಡುಗಡೆ: ಫ್ಯಾನ್ಸ್​ ಫಿದಾ

ಸಾಕ್ಷಿಗೆ ಸಂಸ್ಥೆಯಲ್ಲಿ ದೊಡ್ಡ ಪಾಲು
ಶೀಲಾ ಸಿಂಗ್ ಹಾಗೂ ಸಾಕ್ಷಿ ಧೋನಿ ಅವರ ನಾಲ್ಕು ವರ್ಷಗಳ ನಾಯಕತ್ವದಲ್ಲಿ ಧೋನಿ ಎಂಟರ್ ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಪ್ರಸ್ತುತ 800 ಕೋಟಿ ರೂ.ಗಿಂತಲೂ ಅಧಿಕ ನಿವ್ವಳ ಸಂಪತ್ತು ಹೊಂದಿದೆ. ಇನ್ನು ಎಂ.ಎಸ್. ಧೋನಿ ಪ್ರಾಡಕ್ಷನ್ ಹೌಸ್ ನಲ್ಲಿ ಸಾಕ್ಷಿ ಧೋನಿ ಸದ್ಯ ಅತೀಹೆಚ್ಚು ಷೇರುಗಳನ್ನು ಹೊಂದಿದ್ದಾರೆ. ಎಂ.ಎಸ್. ಧೋನಿ ಅವರ ನಿವ್ವಳ ಸಂಪತ್ತು 1030 ಕೋಟಿ ರೂ.

click me!