ಕಾರ್ಪೋರೇಟ್ ವಲಯದ ಕೈತುಂಬಾ ವೇತನ ಬರೋ ಉದ್ಯೋಗ ತೊರೆದು ಫ್ಯಾಷನ್ ಉದ್ಯಮಕ್ಕೆ ಕೈಹಾಕಿದ ಯುವತಿಯೊಬ್ಬರು ಇಂದು 300 ಕೋಟಿ ಮೌಲ್ಯದ ಕಂಪನಿಯ ಒಡತಿಯಾಗಿದ್ದಾರೆ. ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ, ಕಠಿಣ ಪರಿಶ್ರಮವಿದ್ದರೆ ಉದ್ಯಮ ಜಗತ್ತಿನಲ್ಲಿ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಈಕೆ ಅತ್ಯುತ್ತಮ ನಿದರ್ಶನ.
Business Desk: ಕೆಲವರಿಗೆ ಕೈತುಂಬಾ ಸಂಬಳ ಬರುವ ಉದ್ಯೋಗ, ಉನ್ನತ ಹುದ್ದೆಯಿದ್ದರೂ ಇನ್ನೂ ಸಾಧಿಸುವ ಬಯಕೆ. ಇದೇ ಕಾರಣಕ್ಕೆ ರಿಸ್ಕ್ ತೆಗೆದುಕೊಂಡು ಸ್ವಂತ ಉದ್ಯಮ ಪ್ರಾರಂಭಿಸುವ ಸಾಹಸಕ್ಕೆ ಕೈಹಾಕುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಈ ಟ್ರೆಂಡ್ ಹೆಚ್ಚಿದೆ. ಇದೇ ಕಾರಣಕ್ಕೆ ದೇಶದಲ್ಲಿ ಸ್ಟಾರ್ಟ್ ಅಪ್ ಗಳ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಮಹಿಳೆಯರು ಕೂಡ ಉನ್ನತ ಹುದ್ದೆಗಳನ್ನು ತೊರೆದು ಉದ್ಯಮ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಕೆಲವರಂತೂ ಈ ಸಾಹಸದಲ್ಲಿ ಅಭೂತಪೂರ್ವ ಯಶಸ್ಸನ್ನು ಕೂಡ ಕಂಡಿದ್ದಾರೆ. ಕಡಿಮೆ ಬಂಡವಾಳದೊಂದಿಗೆ ಉದ್ಯಮ ಪ್ರಾರಂಭಿಸಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆ. ಈ ಮೂಲಕ ಸ್ವಂತ ಉದ್ಯಮ ಪ್ರಾರಂಭಿಸುವ ಅನೇಕರಿಗೆ ಪ್ರೇರಣೆ ಆಗಿದ್ದಾರೆ. ಈ ರೀತಿ ಕಡಿಮೆ ಬಂಡವಾಳದೊಂದಿಗೆ ಉದ್ಯಮ ಪ್ರಾರಂಭಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಕಟ್ಟಿದ ಯುವ ಉದ್ಯಮಿಗಳಲ್ಲಿ ನಿಧಿ ಯಾದವ್ ಕೂಡ ಒಬ್ಬರು. ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರೆಯಾಗಿರುವ ನಿಧಿ, ಪ್ರಸಿದ್ಧ ಕಂಪನಿಯಲ್ಲಿನ ಕೈತುಂಬಾ ಸಂಬಳ ಬರೋ ಉದ್ಯೋಗ ತೊರೆದು ಕೇವಲ 3.5ಲಕ್ಷ ಹೂಡಿಕೆಯೊಂದಿಗೆ ಮನೆಯಿಂದಲೇ ಅತ್ಯಾಧುನಿಕ ಉಡುಗೆಗಳ ಉದ್ಯಮ ಪ್ರಾರಂಭಿಸಿದರು. ಇಂದು ಅವರ ಕಂಪನಿ ಮೌಲ್ಯ 300 ಕೋಟಿ ರೂ.
ರಿಸ್ಕ್ ತೆಗೆದುಕೊಳ್ಳುವ ಧೈರ್ಯವಿದ್ದರೆ ಮಾತ್ರ ಬದುಕಿನಲ್ಲಿ ಉನ್ನತವಾದ ಸಾಧನೆ ಮಾಡಬಹುದು ಎಂಬುದಕ್ಕೆ ಅನೇಕ ನಿದರ್ಶನಗಳು ಸಿಗುತ್ತಲೇ ಇರುತ್ತವೆ. ಅದರಲ್ಲೂ ಉದ್ಯಮ ಜಗತ್ತಿನಲ್ಲಿ ಇಂಥ ರಿಸ್ಕ್ ಎದುರಿಸಿ ಯಶಸ್ಸು ಕಾಣಲು ಸಾಕಷ್ಟು ಪರಿಶ್ರಮ, ದೃಢಸಂಕಲ್ಪ ಅಗತ್ಯ. ನಿಧಿ ಯಾದವ್ ಈ ಎರಡನ್ನೂ ಹೊಂದಿದ್ದರು. ಇದೇ ಕಾರಣಕ್ಕೆ ಉದ್ಯಮದಲ್ಲಿ ಯಶಸ್ಸು ಕಂಡಿದ್ದಾರೆ. ಕಂಪ್ಯೂಟರ್ ಇಂಜಿನಿಯರಿಂಗ್ ಮಾಡಿರುವ ನಿಧಿ ಯಾದವ್ ಡೆಲೊಟ್ಟೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಉತ್ತಮ ವೇತನ ಕೂಡ ಹೊಂದಿದ್ದರು. ಆದರೆ, ನಿಧಿಗೆ ಆಫೀಸ್ ಗೆ ಹೋಗೋದಂದ್ರೆ ಅಲರ್ಜಿ. ಒಮ್ಮೆ ಪ್ರೆಸೆಂಟೇಷನ್ ನೀಡುವ ಸಂದರ್ಭದಲ್ಲಿ 'ಯಾವಾಗ ನಿಧಿಗೆ ಕೊನೆಯದಾಗಿ ಆಫೀಸ್ ಗೆ ಬರಬೇಕು ಎಂಬ ಮನಸ್ಸಾಗಿತ್ತು ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನಿಧಿ ಎಂದೂ ಆ ರೀತಿ ಅನ್ನಿಸಿಲ್ಲ ಎಂಬ ಉತ್ತರ ನೀಡಿದ್ದರು. ಈ ಉತ್ತರವೇ ನಿಧಿಗೆ ಉದ್ಯಮ ಜಗತ್ತಿಗೆ ಕಾಲಿಡಲು ಪ್ರೇರಣೆಯಾಯಿತು.
ಸರ್ಕಾರಿ ನೌಕರಿ ಬಿಟ್ಟು ಡಿಟರ್ಜೆಂಟ್ ಪೌಡರ್ ಮಾರುತ್ತಿದ್ದ ವ್ಯಕ್ತಿ ಈಗ 23,000 ಕೋಟಿ ಮೌಲ್ಯದ ಕಂಪನಿ ಒಡೆಯ!
ಇಂದೋರ್ ಮೂಲದ ನಿಧಿಗೆ ಸಾಫ್ಟ್ ವೇರ್ ಜಗತ್ತು ನನ್ನ ಆಸಕ್ತಿಯಲ್ಲ ಎಂಬುದು ತಿಳಿದು ಹೋಗಿತ್ತು. ಫ್ಯಾಷನ್ ಕ್ಷೇತ್ರದಲ್ಲಿ ಏನಾದರೂ ಸಾಧಿಸುವ ಹಂಬಲ ಒಡಮೂಡಿತ್ತು. ಆದರೆ, ಈ ವಿಷಯದಲ್ಲಿ ಅವರಿಗೆ ಸೂಕ್ತವಾದ ಶೈಕ್ಷಣಿಕ ಹಿನ್ನೆಲೆ ಇರಲಿಲ್ಲ. ಹೀಗಾಗಿ ನಿಧಿ ಫ್ಲೋರೆನ್ಸ್ ಪಾಲಿಮೋಡ ಫ್ಯಾಷನ್ ಸ್ಕೂಲ್ ನಲ್ಲಿ ಒಂದು ವರ್ಷಗಳ ಅವಧಿಯ ಕೋರ್ಸ್ ಅಧ್ಯಯನ ಮಾಡಿದರು. ಇಟಲಿಯಲ್ಲಿ ಅವರಿಗೆ ಉದ್ಯೋಗ ಕೂಡ ಸಿಕ್ಕಿತು. ಆದರೆ, ಕುಟುಂಬದ ಜೊತೆಗಿದ್ದು, ಉದ್ಯಮ ಪ್ರಾರಂಭಿಸುವ ಉದ್ದೇಶದಿಂದ ನಿಧಿ ಭಾರತಕ್ಕೆ ಮರಳಿದರು.
'ಪ್ರೇರಣಾ'ದಾಯಕ ಕತೆ; ಅಂದು ಸ್ಕೂಲ್ ಟೀಚರ್; ಇಂದು 330 ಕೋಟಿ ಕಂಪನಿಯ ಒಡತಿ
2014ರಲ್ಲಿನಿಧಿ ಅಕ್ಸ್ ( Aks) ಎಂಬ ಕಂಪನಿ ಪ್ರಾರಂಭಿಸಿದರು. ಈ ಕಂಪನಿ ಪ್ರಾರಂಭಿಸಲು ಅವರು ಕೇವಲ 3.5 ಕೋಟಿ ರೂ. ಹೂಡಿಕೆ ಮಾಡಿದ್ದರು. 18-35 ವರ್ಷ ವಯಸ್ಸಿನ ಮಹಿಳೆಯರಿಗೆ ಕೈಗೆಟುಕುವ ಬೆಲೆಯಲ್ಲಿ ಸದ್ಯ ಟ್ರೆಂಡ್ ನಲ್ಲಿರುವ ಸಾಂಪ್ರದಾಯಿಕ ಉಡುಗೆಗಳನ್ನು ಒದಗಿಸೋದು ಈ ಕಂಪನಿ ಉದ್ದೇಶವಾಗಿತ್ತು. ಪ್ರಾರಂಭದ ಐದು ವರ್ಷಗಳ ಅವಧಿಯಲ್ಲಿ ಈ ಕಂಪನಿ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ಆದರೆ, 2019-2020ನೇ ಸಾಲಿನಲ್ಲಿ ಕಂಪನಿ ಆದಾಯ 100 ಕೋಟಿ ರೂ. ದಾಟಿತ್ತು. 2021ನೇ ಸಾಲಿನಲ್ಲಿ ಆದಾಯ 200 ಕೋಟಿ ರೂ. ದಾಟಿತ್ತು.