Business News: ಕೋಟಿ ಕೋಟಿ ಹಣ, ಆಸ್ತಿಯಿದ್ರೂ ತರಕಾರಿ ವ್ಯಾಪಾರ ಮಾಡ್ತಾರೆ ಈ ಮಂತ್ರಿ ಮಗ!

By Suvarna News  |  First Published Jul 24, 2023, 2:17 PM IST

ಪಿತ್ರಾರ್ಜಿತ ಆಸ್ತಿ ಎಷ್ಟೇ ಇರಲಿ, ಅದು ನಮ್ಮ ಸ್ವಂತ ಗಳಿಕೆಯ ಖುಷಿ ನೀಡೋದಿಲ್ಲ. ತಿಂಗಳಿಗೆ ನಾಲ್ಕು ಕಾಸೇ ಸಂಪಾದನೆ ಮಾಡಿದ್ರೂ ಅದ್ರಲ್ಲಿ ಸಿಗುವ ಸಂತೋಷ ಅಪಾರ. ಇದು ಜ್ಯೋತಿರಾದಿತ್ಯ ಸಿಂಧಿಯಾ ಮಗನಿಗೆ ಚೆನ್ನಾಗಿ ತಿಳಿದಿದೆ. ಹಾಗಂತ ಅವರ ಗಳಿಕೆ ಲಕ್ಷದ ಕೆಳಗಿಲ್ಲ, ಕೋಟಿ ಮೇಲಿದೆ. 
 


ಕೋಟಿ ಕೋಟಿ ಸಂಪತ್ತು ಇರುವವವರ ಮಕ್ಕಳಿಗೆ ಎಷ್ಟು ಆರಾಂ. ಸುಖವಾಗಿ ಕುಳಿತು ಜೀವನ ಸವೆಸಬಹುದು ಅಂತಾ ನಾವೆಲ್ಲ ಅಂದುಕೊಳ್ತೇವೆ. ಆದ್ರೆ ಕೋಟ್ಯಾಧಿಪತಿಯ ಮಕ್ಕಳೆಲ್ಲ ಹೀಗೆ ಇರೋದಿಲ್ಲ. ತಾವೂ ಸ್ವಂತ ದುಡಿಮೆ ಮಾಡ್ಬೇಕು, ಸಮಾಜದಲ್ಲಿ ಹೆಸರು ಮಾಡ್ಬೇಕು, ನಮ್ಮ ದುಡಿಮೆಯಿಂದ್ಲೇ ಜೀವನ ಸಾಗಿಸಬೇಕು ಎನ್ನುವವರು ಬಹಳಷ್ಟು ಜನರಿದ್ದಾರೆ. ಅದ್ರಲ್ಲಿ ಕೇಂದ್ರ ಮಂತ್ರಿಯಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಮಗ ಕೂಡ ಸೇರಿದ್ದಾರೆ.

ಗ್ವಾಲಿಯರ್ (Gwalior) ರಾಜಮನೆತನದಲ್ಲಿ ಜನಿಸಿದವರು ಮಹಾನ್ ಆರ್ಯಮನ್ (Mahanaryaman) ಸಿಂಧಿಯಾ. ರಾಜಮನೆತನದ ಸಂಪ್ರದಾಯಗಳನ್ನು ಮುರಿದಿರುವ ವ್ಯಾಪಾರ (Business) ಜಗತ್ತಿಗೆ ಕಾಲಿಟ್ಟಿದ್ದಾರೆ. ತಂದೆ ರಾಜಕೀಯದಲ್ಲಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿ. ರಾಜಕೀಯ ವಂಶಪಾರಂಪರ್ಯವಾಗಿ ಬಂದಿದ್ದರೂ ಮಹಾನ್ ಆರ್ಯಮನ್ ಅದ್ರಿಂದ ಸದ್ಯಕ್ಕೆ ದೂರ ಉಳಿದಿದ್ದಾರೆ. ಗೆಳೆಯನ ಜೊತೆ ಸೇರಿ ಸ್ವಂತ ಕಂಪನಿ ಆರಂಭಿಸಿದ್ದಾರೆ. ರಾಜಕೀಯದಲ್ಲಿ ತಂದೆಗೆ ಸಹಾಯ ಮಾಡುತ್ತಲೇ ವ್ಯಾಪಾರ ಮುಂದುವರೆಸಿಕೊಂಡು ಹೋಗ್ತಿರುವ ಮಹಾನ್ ಆರ್ಯಮನ್ ಕಳೆದ ವರ್ಷವಷ್ಟೆ ಸ್ಟಾರ್ಟ್ ಅಪ್ ಶುರು ಮಾಡಿದ್ದಾರೆ.

Tap to resize

Latest Videos

ತರಕಾರಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಹುಡುಗನೀಗ 8200 ಕೋಟಿ ರೂ ಆಸ್ತಿಗೆ ಒಡೆಯ!

ಮಹಾನ್ ಆರ್ಯಮನ್ ಸಿಂಧಿಯಾ ಯಾರು? : 2022 ರಲ್ಲಿ ಗ್ವಾಲಿಯರ್ ರಾಜಮನೆತನದ ಉತ್ತರಾಧಿಕಾರಿಯಾದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರ ಮಹಾನ್ ಆರ್ಯಮನ್ ಸಿಂಧಿಯಾ. ಶತಕೋಟಿ ಸಂಪತ್ತಿನ ಹೊರತಾಗಿಯೂ ಸ್ನೇಹಿತ ಸೂರ್ಯಾಂಶ್ ರಾಣಾ ಜೊತೆ ಸೇರಿ ಕೃಷಿ ಸ್ಟಾರ್ಟಪ್ ಕಂಪನಿ MYMandi ಅನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಅವರ ಸ್ಟಾರ್ಟಪ್ 1 ಕೋಟಿ ಆದಾಯ ಗಳಿಸಿದೆ.

ಹಣ್ಣುಗಳು ಮತ್ತು ತರಕಾರಿಗಳಿಗೆ ಸಂಬಂಧಿಸಿದ ವ್ಯಾಪಾರ : ಮಹಾನ್ ಆರ್ಯಮನ್ ಸಿಂಧಿಯ ಕಂಪನಿ MYMandi , ತಾಜಾ ಹಣ್ಣುಗಳು ಮತ್ತು ತರಕಾರಿಗಳಲ್ಲಿ ವ್ಯವಹರಿಸುವ ಸ್ಟಾರ್ಟ್ಅಪ್ ಆಗಿದೆ. ಅವರ ಕಂಪನಿಯು ಹಣ್ಣುಗಳು ಮತ್ತು ತರಕಾರಿಗಳನ್ನು ಪೂರೈಸಲು ಆನ್‌ಲೈನ್ ಅಗ್ರಿಗೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಈ ಕಂಪನಿಯು ಜೈಪುರ, ಗ್ವಾಲಿಯರ್, ನಾಗ್ಪುರ ಮತ್ತು ಆಗ್ರಾ 4 ನಗರಗಳಲ್ಲಿ ವ್ಯವಹಾರ ನಡೆಸುತ್ತಿದೆ. ಕ್ರಮೇಣ ಇದನ್ನು ದೇಶದ ಇತರೆ ನಗರಗಳಿಗೂ ವಿಸ್ತರಿಸುವ ಯೋಜನೆ ಇದೆ.    

ಬೈಜುಸ್‌ಗೆ ಮತ್ತೊಂದು ಹೊಡೆತ, ಬೆಂಗಳೂರು ಕಚೇರಿ ಖಾಲಿ ಮಾಡಿದ ಕಂಪನಿ!

ರಾಜಮನೆತನಕ್ಕೆ ಸೇರಿದ ಸಿಂಧಿಯಾ ಮನೆಯಲ್ಲಿದೆ  400 ಕೋಣೆ:  ಮಹಾನ್ ಆರ್ಯಮನ್ ಸಿಂಧಿಯಾ ರಾಜಮನೆತನಕ್ಕೆ ಸೇರಿದವರು. 27 ವರ್ಷದ ಮಹಾನ್ ಆರ್ಯಮನ್ ಗ್ವಾಲಿಯರ್‌ನ ಜೈ ವಿಲಾಸ್ ಅರಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಅರಮನೆಯಲ್ಲಿ 400ಕ್ಕೂ ಹೆಚ್ಚು ಕೊಠಡಿಗಳಿವೆ.  ಮಹಾನ್ ಆರ್ಯಮನ್ ಸಿಂಧಿಯಾ ತಮ್ಮ ಆರಂಭಿಕ ಶಿಕ್ಷಣವನ್ನು ಡೂನ್ ಶಾಲೆಯಲ್ಲಿ ಮುಗಿಸಿದ್ದಾರೆ. ನಂತರ ಅವರು GAIL ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಮತ್ತು ಸಾಫ್ಟ್‌ಬ್ಯಾಂಕ್‌ನಂತಹ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ಅನುಭವವನ್ನೂ ಹೊಂದಿದ್ದಾರೆ.

4000 ಕೋಟಿ ಅರಮನೆ: ಜೈ ವಿಲಾಸ ಅರಮನೆಯನ್ನು 1874 ರಲ್ಲಿ ನಿರ್ಮಿಸಲಾಗಿದೆ. ಆಗ ಈ ಅರಮನೆಯ ನಿರ್ಮಾಣದ ವೆಚ್ಚ 1.1 ಕೋಟಿ ರೂಪಾಯಿಯಾಗಿತ್ತು. ಈಗ ಈ ಅರಮನೆಯ ವೆಚ್ಚ ಸುಮಾರು 4,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಅರಮನೆಯು 1,24,771 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಅರಮನೆಯ ಒಂದು ಭಾಗವನ್ನು ಈಗ ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಲಾಗಿದೆ. 

13ನೇ ವಯಸ್ಸಿನಿಂದ ಪ್ರಚಾರ :  ಮಹಾನ್ ಆರ್ಯಮನ್ ಸಿಂಧಿಯಾ ಅವರು ತಮ್ಮ ತಂದೆಗಾಗಿ 13 ವರ್ಷ ವಯಸ್ಸಿನಿಂದಲೂ ಚುನಾವಣಾ ಪ್ರಚಾರ ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಶೀಘ್ರವೇ ಅವರು ರಾಜಕೀಯಕ್ಕೆ ಬರ್ತಾರೆ ಎನ್ನಲಾಗ್ತಿದೆ. ಮಧ್ಯಪ್ರದೇಶದ ಜನರು ಅವರನ್ನು ಯುವರಾಜ್ ಎಂದು ಕರೆಯುತ್ತಾರೆ.

ಸಿಂಧಿಯಾ ಲೈಫ್‌ಸ್ಟೈಲ್ ಇದು

ಮಹಾ ಆರ್ಯನ್ ಆಸ್ತಿ ಎಷ್ಟಿದೆ ಗೊತ್ತಾ? : ಮಹಾನ್ ಆರ್ಯಮನ್ ಅವರ ನಿವ್ವಳ ಮೌಲ್ಯದ ಒಟ್ಟು ಆಸ್ತಿ 379 ಕೋಟಿ ರೂಪಾಯಿ. ಮಹಾನ್ ಆರ್ಯಮನ್ ಸಿಂಧಿಯಾರ ಒಬ್ಬನೇ ಮಗ. ಅವರಿಗೆ ಒಬ್ಬ ಮಗಳಿದ್ದಾಳೆ. 

click me!