
Business Desk: ಶ್ರೀಮಂತ ಉದ್ಯಮಿಗಳು ಹಾಗೂ ಅವರ ಜೀವನಶೈಲಿ ಆಗಾಗ ಸುದ್ದಿಯಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಉದ್ಯಮಿಗಳಲ್ಲಿ ಜೈ ಅನ್ಮೋಲ್ ಅಂಬಾನಿ ಕೂಡ ಒಬ್ಬರು. ಅನಿಲ್ ಅಂಬಾನಿ ಅವರ ಹಿರಿಯ ಪುತ್ರರಾಗಿರುವ ಜೈ ಅನ್ಮೋಲ್ ಅಂಬಾನಿ, ಶ್ರೀಮಂತ ಕುಟುಂಬದಲ್ಲಿ ಜನಿಸಿ ಯಶಸ್ಸು ಹಾಗೂ ಸಂಪತ್ತು ಎರಡನ್ನೂ ಒಟ್ಟಿಗೆ ಗಳಿಸಿದವರು. ಧೀರೂಬಾಯಿ ಅಂಬಾನಿ ನಿಧನದ ಬಳಿಕ ರಿಲಯನ್ಸ್ ಸಾಮ್ರಾಜ್ಯ ಒಡೆದು ಎರಡು ಹೋಳಾಯಿತು. ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ ಹಾಗೂ ಮುಖೇಶ್ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜನ್ಮ ತಾಳಿದವು. ರಿಲಯನ್ಸ್ ನಿಪ್ಪನ್ ಲೈಫ್ ಇನ್ಯೂರೆನ್ಸ್ ಸ್ಥಾಪನೆಯಲ್ಲಿ ಜೈ ಅನ್ಮೋಲ್ ಪ್ರಮುಖ ಪಾತ್ರ ವಹಿಸಿದ್ದರು. ಇನ್ನುಐಷಾರಾಮಿ ಕಾರುಗಳೆಂದ್ರೆ ಜೈ ಅನ್ಮೋಲ್ ಅವರಿಗೆ ಅಚ್ಚುಮೆಚ್ಚು. ಇವರ ಬಳಿ ಲಂಬೋರ್ಗಿನಿ ಗ್ಯಾಲ್ಲರಡೋ ಹಾಗೂ ರಾಲ್ಸ್ ರಾಯ್ಸ್ ಫ್ಯಾಂಟಮ್ ಮುಂತಾದ ದುಬಾರಿ ಮೌಲ್ಯದ ಕಾರುಗಳಿವೆ ಕೂಡ. ಹಾಗೆಯೇ ಉದ್ಯಮ ಪ್ರಯಾಣಕ್ಕೆ ಸಂಬಂಧಿಸಿ ಸ್ವಂತ ಹೆಲಿಕಾಪ್ಟರ್ ಹಾಗೂ ವಿಮಾನಗಳಿವೆ ಕೂಡ. ಜೈ ಅನ್ಮೋಲ್ ಅವರ ಬಾಲ್ಯ, ವೈವಾಹಿಕ ಜೀವನ ಮುಂತಾದ ಮಾಹಿತಿ ಇಲ್ಲಿದೆ.
ಬಾಲ್ಯದ ಜೀವನ
ಜೈ ಅನ್ಮೋಲ್ 1991ರ ಡಿಸೆಂಬರ್ 12ರಂದು ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರ ಬಾಲ್ಯ ಖುಷಿಯಿಂದಲೇ ಕೂಡಿತ್ತು. ಶೈಕ್ಷಣಿಕವಾಗಿ ಕೂಡ ಜೈ ಅನ್ಮೋಲ್ ಉತ್ತಮ ಸಾಧನೆ ಮಾಡಿದ್ದರು. ಮುಂಬೈಯ ಪ್ರತಿಷ್ಠಿತ ಕ್ಯಾಥೆಡ್ರಲ್ ಹಾಗೂ ಜಾನ್ ಕ್ಯಾನನ್ ಸ್ಕೂಲ್ ನಲ್ಲಿ ಶಿಕ್ಷಣ ಪಡೆದ ಬಳಿಕ ಇವರು ಯುನೈಟೆಡ್ ಕಿಂಗ್ ಡಮ್ ಸೆವೆನ್ ಒಕ್ಸ್ ಸ್ಕೂಲ್ ನಲ್ಲಿ ಶಿಕ್ಷಣ ಪಡೆದರು. ಹಾಗೆಯೇ ಉನ್ನತ ಶಿಕ್ಷಣ ಪಡೆದ ಇವರು, ಇಂಗ್ಲೆಂಡ್ ನ ವಾರ್ ವಿಕ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ವಿಜ್ಞಾನ ವಿಷಯದಲ್ಲಿ ಬ್ಯಾಚುಲರ್ ಡಿಗ್ರಿ (ಬಿಎಸ್ಸಿ) ಪಡೆದರು.
ಐಟಿ ಉದ್ಯೋಗ ತೊರೆದು ಸ್ಟಾಂಡ್ ಅಪ್ ಕಾಮಿಡಿಯನ್ ಆದ ಈತನ ವಾರ್ಷಿಕ ದುಡಿಮೆ 1 ಕೋಟಿ!
ಹೈ ಪ್ರೊಫೈಲ್ ವೆಡ್ಡಿಂಗ್
ಜೈ ಅನ್ಮೋಲ್ ಅಂಬಾನಿ ಅವರು ಇತ್ತೀಚೆಗೆ ಕ್ರಿಷಾ ಶಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇವರಿಬ್ಬರ ಮದುವೆ ವಿಜೃಂಭಣಿಯಿಂದ ನಡೆದಿತ್ತು. ಅಷ್ಟೇ ಅಲ್ಲ, ಮಾಧ್ಯಮದ ಗಮನ ಕೂಡ ಸೆಳೆದಿತ್ತು. ಮುಂಬೈಯ ಕಫೆ ಪ್ಯಾರಡೆ ಪ್ರದೇಶದಲ್ಲಿರುವ ಅಂಬಾನಿ ಅವರ ಸೀ ವಿಂಡ್ ನಿವಾಸದಲ್ಲಿ ವಿವಾಹ ಕಾರ್ಯಕ್ರಮ ನಡೆದಿತ್ತು. ಅನೇಕ ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ರಿಷಾ ಶಾ ನಿಕುಂಜ್ ಎಂಟರ್ ಪ್ರೈಸರ್ಸ್ ಲಿಮಿಟೆಡ್ ಮಾಜಿ ಮುಖ್ಯಸ್ಥ ನಿಕುಂಜ್ ಶಾ ಅವರ ಪುತ್ರಿ.
ನಿವ್ವಳ ಸಂಪತ್ತು
ಜೈ ಅನ್ಮೋಲ್ ಅಂಬಾನಿ 20,000 ಕೋಟಿ ರೂ. ನಿವ್ವಳ ಸಂಪತ್ತು ಹೊಂದಿದ್ದಾರೆ. ಇನ್ನು ಇವರ ಬಳಿ ಈಗಾಗಲೇ ತಿಳಿಸಿರುವಂತೆ ದುಬಾರಿ ಬೆಲೆಯ ಕಾರುಗಳು, ಪ್ರೈವೇಟ್ ಜೆಟ್ ಗಳು ಹಾಗೂ ಹೆಲಿಕ್ಯಾಪ್ಟರ್ ಗಳಿವೆ.
ರಿಲಯನ್ಸ್ ಸಾಮ್ರಾಜ್ಯದಲ್ಲಿನ ಅನುಭವ
ಜೈ ಅನ್ಮೋಲ್ ಅಂಬಾನಿ ಅವರ ವೃತ್ತಿ ಜೀವನ ಬಹುಬೇಗನೆ ಪ್ರಾರಂಭವಾಗಿತ್ತು. ರಿಲಯನ್ಸ್ ಮ್ಯೂಚುವಲ್ ಫಂಡ್ ನಲ್ಲಿ 18ನೇ ವಯಸ್ಸಿನಲ್ಲೇ ಸಮ್ಮರ್ ಇಂಟರ್ನ್ ಶಿಫ್ ಮುಗಿಸಿದ್ದರು. ಈ ಸಂದರ್ಭದಲ್ಲಿ ಕಂಪನಿ ಹಾಗೂ ಅದರ ಬೆಳವಣಿಗೆ ಬಗ್ಗೆ ಅನೇಕ ವಿಚಾರಗಳನ್ನು ತಿಳಿದುಕೊಂಡರು. ಈಅನುಭವ 2014ರಲ್ಲಿ ರಿಲಯನ್ಸ್ ಮ್ಯೂಚ್ಯುವಲ್ ಫಂಡ್ ಗೆ ಅವರು ಸೇರ್ಪಡೆಗೊಳ್ಳಲು ಕಾರಣವಾಯಿತು. ಹಾಗೆಯೇ ರಿಲಯನ್ಸ್ ಗ್ರೂಪ್ ನಲ್ಲಿ ಅವರು ಒಂದೊಂದೆ ಸ್ಥಾನಗಳನ್ನು ಮೇಲೇರುತ್ತ ಹೋಗಿದ್ದಾರೆ ಕೂಡ.
ಮುಕೇಶ್ ಅಂಬಾನಿ ನಂಬಿಕಸ್ಥ ರಿಲಯನ್ಸ್ ಗ್ರೂಪ್‌ನ ಹೈಯೆಸ್ಟ್ ಪೇಯ್ಡ್ ಉದ್ಯೋಗಿ, ಸ್ಯಾಲರಿ ಎಷ್ಟ್ ಗೊತ್ತಾ?
2017ರ ಸೆಪ್ಟೆಂಬರ್ ನಲ್ಲಿ ಜೈ ಅನ್ಮೋಲ್ ಅವರು ರಿಲಯನ್ಸ್ ಕ್ಯಾಪಿಟಲ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡರು. ಇದು ಅವರ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇನ್ನು 2018ರ ಏಪ್ರಿಲ್ ನಲ್ಲಿ ಇವರು ರಿಲಯನ್ಸ್ ನಿಪ್ಪನ್ ಹಾಗೂ ರಿಲಯನ್ಸ್ ಹೋಮ್ ಮಂಡಳಿಗಳಿಗೆ ನೇಮಕಗೊಂಡರು. 2019ರ ಅಕ್ಟೋಬರ್ ನಲ್ಲಿ ರಿಲಯನ್ಸ್ ಇನ್ಫ್ರಾ ನಿರ್ದೇಶಕರಾಗಿ ನೇಮಕಗೊಂಡರು. ಇದಾದ ಒಂದು ವರ್ಷದೊಳಗೆ ಮಂಡಳಿಯಿಂದ ನಿವೃತ್ತರಾದರು. ಆದರೂ ಕೂಡ ಜೈ ಅನ್ಮೋಲ್ ರಿಲಯನ್ಸ್ ಗ್ರೂಪ್ ಸೇರಿಕೊಂಡ ಬಳಿಕ ಅದರ ಷೇರು ಬೆಲೆಯಲ್ಲಿ ಶೇ.40ರಷ್ಟು ಏರಿಕೆ ಕಂಡುಬಂದಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.