65,000 ಕೋಟಿ ರೂ ಹೆಚ್ಚು ಮೌಲ್ಯದ ಸ್ಟಾರ್ಟ್‌ಅಪ್‌ ತೆರೆದು ತಂತ್ರಜ್ಞಾನ ಕ್ಷೇತ್ರಕ್ಕೆ ನಾಂದಿ ಹಾಡಿದ ಐಐಟಿ ಪದವೀಧರ

By Gowthami K  |  First Published Dec 22, 2023, 7:35 PM IST

ಐಐಟಿ ಪದವೀಧರರೊಬ್ಬರು 65000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪ್ರಮುಖ ಕಂಪನಿಯನ್ನು ಸ್ಥಾಪಿಸಿದರು. ದೇಶದ ಅತಿದೊಡ್ಡ ಸ್ಟಾರ್ಟ್‌ಅಪ್‌ಗಳಲ್ಲಿ ಒಂದನ್ನು ಪ್ರಾರಂಭಿಸಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಭಿನ್ನ ಪ್ರಯಾಣಕ್ಕೆ ನಾಂದಿ ಹಾಡಿದರು.


ದೇಶದ ಕೆಲವು ಬೃಹತ್‌ ಟೆಕ್ ಕಂಪನಿಗಳನ್ನು ಮುನ್ನಡೆಸುತ್ತಿವುದು ಐಐಟಿ ಪದವೀಧರರು. ಕೆಲವು ಪ್ಲಾಟ್‌ಫಾರ್ಮ್‌ಗಳನ್ನು ಪ್ರತಿದಿನ ಲಕ್ಷಾಂತರ ಜನ ಬಳಸುತ್ತಾರೆ. ಐಐಟಿ ಪದವೀಧರರ ಹೊಸತನದ ಹೆಜ್ಜೆಗಳು  ಮನುಷ್ಯ ಜೀವನವನ್ನು ತುಂಬಾ ಉತ್ತಮಗೊಳಿಸಿದೆ. ಕೆಲವೊಂದು ಕ್ರಾಂತಿಕಾರಿ ಉತ್ಪನ್ನಗಳಿಲ್ಲದೆ ಬದುಕುವುದು ಕೂಡ  ತುಂಬಾ ಕಷ್ಟ ಎನ್ನುವ ಹಂತಕ್ಕೆ ಬಂದು ತಲುಪಿದೆ. 

ಅಂತಹ ಐಐಟಿ ಪದವೀಧರರೊಬ್ಬರು 65000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪ್ರಮುಖ ಕಂಪನಿಯನ್ನು ಸ್ಥಾಪಿಸಿದರು. ದೇಶದ ಅತಿದೊಡ್ಡ ಸ್ಟಾರ್ಟ್‌ಅಪ್‌ಗಳಲ್ಲಿ ಒಂದನ್ನು ಪ್ರಾರಂಭಿಸಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಭಿನ್ನ ಪ್ರಯಾಣಕ್ಕೆ ನಾಂದಿ ಹಾಡಿದರು.  ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಸಮರ್ಥರಾಗುವುದಕ್ಕೂ ಮುನ್ನ ಒಂದೆರಡು ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡರು. ನಾವು ಹೇಳುತ್ತಿರುವ ಐಐಟಿ ಪದವೀಧರ ರಾಹುಲ್ ಜೈಮಿನಿ.

Tap to resize

Latest Videos

ಕೊಡಗಿನ ಮೊಮ್ಮಗಳು ಸನ್‌ರೈಸರ್ಸ್ ಹೈದರಾಬಾದ್ ಟೀಂ ಸಿಇಒ ಕಾವ್ಯ ಮಾರನ್‌!

ರಾಹುಲ್ ಜೈಮಿನಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಖರಗ್‌ಪುರದ ಹಳೆಯ ವಿದ್ಯಾರ್ಥಿ. ಅವರ ಪದವಿ ಓದುತ್ತಿದ್ದ ವರ್ಜೀನಿಯಾ ಟೆಕ್ ಮತ್ತು ಫಿಲಿಪ್ಸ್ ರಿಸರ್ಚ್‌ನಲ್ಲಿ ಇಂಟರ್ನ್ ಆಗಿದ್ದರು. ಐಐಟಿಯಿಂದ ಪದವಿ ಪಡೆದ ನಂತರ, ಅವರು ಮಿಂತ್ರಾದಲ್ಲಿ ಕೆಲಸ ಗಿಟ್ಟಿಸಿಕೊಂಡರು. ಅಲ್ಲಿ ಕೆಲಸ ಬಿಟ್ಟ ಬಳಿಕ ಅವರು 2014 ರಲ್ಲಿ ಶ್ರೀಹರ್ಷ ಮೆಜೆಟಿ ಮತ್ತು ನಂದನ್ ರೆಡ್ಡಿ ಅವರೊಂದಿಗೆ ಸೇರಿ Swiggy ಅನ್ನು ಪ್ರಾರಂಭಿಸಿದರು. ಇದು ಬೆಂಗಳೂರಿನಲ್ಲಿ ಒಂದು ಸಣ್ಣ ಸ್ಟಾರ್ಟ್ಅಪ್ ಆಗಿ ಪ್ರಾರಂಭವಾಯಿತು. ಆದರೆ  ತ್ವರಿತವಾಗಿ ಭಾರತದ ಪ್ರಮುಖ ಆಹಾರ ವಿತರಣಾ ಸೇವೆಗಳಲ್ಲಿ ಬೃಹತ್‌ ಆಗಿ ಬೆಳೆಯಿತು. ಸ್ವಿಗ್ಗಿಯ ತಾಂತ್ರಿಕ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ರಾಹುಲ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. 

ಸಮಸ್ಯೆಗಳನ್ನು ಪರಿಹರಿಸುವ ನವೀನ ವಿಧಾನಕ್ಕೆ ಹೆಸರುವಾಸಿಯಾದ ರಾಹುಲ್, ಹಲವಾರು ಹೊಸತನವನ್ನು ಅಳವಡಿಸಿಕೊಳ್ಳುವ ಮೂಲಕ ಭಾರತದಾದ್ಯಂತ  ಸ್ವಿಗ್ಗಿ ಬೆಳೆಯಲು ಸಹಾಯ ಮಾಡಿದರು. ಸ್ವಿಗ್ಗಿಯಲ್ಲಿ ಸುಮಾರು 6 ವರ್ಷಗಳ ನಂತರ, ವೃತ್ತಿಜೀವನದ ವೇಗವರ್ಧನೆಯ ಮೇಲೆ ಕೇಂದ್ರೀಕರಿಸಿದ ಸ್ಟಾರ್ಟಪ್ ಪೆಸ್ಟೊ ಟೆಕ್‌ಗೆ ಸೇರಲು ರಾಹುಲ್ CTO ಗೆ ರಾಜೀನಾಮೆ ನೀಡಿದರು. ಅವರ ಪ್ರಯಾಣವು ಅನೇಕ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ, ವಿಶೇಷವಾಗಿ ಟೆಕ್ ಮತ್ತು ಆಹಾರ-ತಂತ್ರಜ್ಞಾನದ ಉದ್ಯಮಗಳಿಗೆ ಸ್ಫೂರ್ತಿಯಾಗಿದೆ.

ಪ್ರಭಾವಶಾಲಿ ಕುಟುಂಬದ ಕುಡಿಯನ್ನು ಮದುವೆಯಾದ ಅಂಬಾನಿ ಸೊಸೆ, 37 ಸಾವಿರ ಮೌಲ್ಯದ ಕಂಪನಿ ಒಡೆಯ

Swiggy ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ ಮತ್ತು 500 ಕ್ಕೂ ಹೆಚ್ಚು ಭಾರತೀಯ ನಗರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಆಹಾರ ವಿತರಣೆಯ ಜೊತೆಗೆ,   ಇನ್‌ಸ್ಟಾಮಾರ್ಟ್ ಹೆಸರಿನಲ್ಲಿ ಬೇಡಿಕೆಯ ದಿನಸಿ ವಿತರಣೆಗಳನ್ನು ಮತ್ತು ಸ್ವಿಗ್ಗಿ ಜಿನೀ ಎಂಬ ಅದೇ ದಿನದ ಪ್ಯಾಕೇಜ್ ವಿತರಣಾ ಸೇವೆಯನ್ನು ಒದಗಿಸುತ್ತದೆ. ಇದು ಆಹಾರ ವಿತರಣೆ ಮತ್ತು ಹೈಪರ್‌ಲೋಕಲ್ ಮಾರುಕಟ್ಟೆಯಲ್ಲಿ ಸ್ವದೇಶಿ ಸ್ಟಾರ್ಟಪ್ ಝೊಮಾಟೊಗೆ ಪ್ರತಿಸ್ಪರ್ಧಿಯಾಗಿದೆ.
 

click me!