
ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ನಿಜ ಬದುಕಿನ ಉದಾಹರಣೆಗಳನ್ನು ನೀಡುತ್ತಾ ವಿವರಿಸಿದರೆ ಸುಲಭವಾಗಿ ಅರ್ಥವಾಗುತ್ತದೆ. ಆದರೆ ಬಹುತೇಕ ಶಾಲಾ ಕಾಲೇಜುಗಳಲ್ಲಿ ನಿಜ ಬದುಕಿನ ಉದಾಹರಣೆಗಿಂತ ಪುಸ್ತಕದಲ್ಲಿರುವ ಥಿಯರಿ ಮೂಲಕವೇ ವಿವರಿಸುವುದು ಹೆಚ್ಚು ಬಹುತೇಕರಿಗೆ ಇದು ಅರ್ಥವೂ ಆಗುವುದಿಲ್ಲ. ಪಾಠವನ್ನು ಮಕ್ಕಳಿಗೆ ನಗುತರಿಸುವ ಜೊತೆ ಆಸಕ್ತಿಕರವಾಗಿ ವಿವರಿಸುವ ಶಿಕ್ಷಕರು ತೀರಾ ವಿರಳ. ಮಜಾವಾಗಿ ಕೆಲ ತಮಾಷೆಗಳ ಮೂಲಕ ಪಠ್ಯವನ್ನು ವಿವರಿಸಿದರೆ ಎಂಥಾ ದಡ್ಡರಿಗೂ ಪಾಠ ಬೋರಿಂಗ್ ಎನಿಸದು ಹಾಗೂ ಆ ಶಿಕ್ಷಕನ ತರಗತಿಗೆ ಮಕ್ಕಳು ಎಂದೂ ಗೈರಾಗಲಾರರು. ಈ ರೀತಿ ಪಾಠ ಮಾಡುವುದು ಒಂದೂ ಕಲೆ ಎಲ್ಲಾ ಶಿಕ್ಷಕರಿಗೆ ಈ ರೀತಿ ಕಲೆ ಒಲಿಯುವುದಿಲ್ಲ.
ಆದರೂ ಇಲ್ಲೊಬ್ಬರು ಫ್ರೊಫೆಸರ್ ಎಂಬಿಎ ವಿದ್ಯಾರ್ಥಿಗಳಿಗೆ ಮಾರ್ಕೆಟಿಂಗ್ ಅಂದರೆ ಏನು ಎಂಬುದನ್ನು ಮಜಾವಾಗಿ ನಿಜ ಬದುಕಿನ ಉದಾಹರಣೆ ನೀಡಿ ವಿವರಿಸಿದ್ದಾರೆ ಎನ್ನಲಾದ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಜೊತೆಗೆ ಅನೇಕರ ಮೊಗದಲ್ಲಿ ನಗು ತರಿಸಿದೆ.
ಹಾಗಿದ್ರೆ ಪೋಸ್ಟ್‌ನಲ್ಲಿ ಅವರು ಮಾರ್ಕೆಟಿಂಗ್ ಬಗ್ಗೆ ಹೇಗೆ ವಿವರಿಸಿದ್ದಾರೆ ನೋಡೋಣ
ಡೈರೆಕ್ಟ್ ಮಾರ್ಕೆಟಿಂಗ್(Direct Marketing)
ನೀವು ಸುಂದರವಾದ ಹುಡುಗಿಯನ್ನು ಪಾರ್ಟಿಯಲ್ಲಿ ನೋಡುತ್ತೀರಿ, ನೀವು ಅವಳ ಬಳಿ ಹೋಗಿ, ನಾನು ತುಂಬಾ ಶ್ರೀಮಂತ ನನ್ನನ್ನು ಮದುವೆಯಾಗು ಎಂದು ಹೇಳುತ್ತೀರಿ ಇದು ಡೈರೆಕ್ಟ್ ಅಥವಾ ನೇರವಾದ ಮಾರ್ಕೆಟಿಂಗ್.
ಜಾಹೀರಾತು ಅಥವಾ ಅಡ್ವರ್ಟೈಸಿಂಗ್(Advertising)
ನೀವು ಪಾರ್ಟಿಯೊಂದಕ್ಕೆ ಹೋಗುತ್ತಿರಿ ಅಲ್ಲಿ ನಿಮ್ಮ ಸ್ನೇಹಿತ ಒಬ್ಬಳು ಹುಡುಗಿ ಬಳಿ ಹೋಗಿ, ನಿಮ್ಮತ್ತ ಕೈ ತೋರಿಸುತ್ತಾ ಆತ ತುಂಬಾ ಶ್ರೀಮಂತ ಅವನನ್ನು ಮದುವೆ ಆಗಿ ಎನ್ನುತ್ತಾನೆ ಇದು ಜಾಹೀರಾತು.
ಬ್ರಾಂಡನ್ನು ಗುರುತಿಸುವುದು(brand recognition)
ಹುಡುಗಿಯೊಬ್ಬಳು ಅವಳಾಗೇ ನಿಮ್ಮ ಬಳಿ ಬರುತ್ತಾಳೆ. ಬಂದವಳೆ ನೀವು ತುಂಬಾ ಶ್ರೀಮಂತರು ನೀವು ನನ್ನನ್ನು ಮದುವೆಯಾಗುತ್ತೀರಾ ಎಂದು ಕೇಳುತ್ತಾಳೆ ಇದು ನಿಮ್ಮ ಬ್ರಾಂಡನ್ನು ಜನ ಗುರುತಿಸಿವುದಾಗಿದೆ.
ಗ್ರಾಹಕರ ಅಭಿಪ್ರಾಯ(customer feedback)
ನೀವು ನಾನು ಶ್ರೀಮಂತ ನನ್ನನ್ನು ಮದುವೆಯಾಗಿ ಎಂದು ಹುಡುಗಿ ಬಳಿ ಹೇಳುತ್ತೀರಿ. ಆದರೆ ಆಕೆ ಕೆನ್ನೆಗೆ ಬಾರಿಸುತ್ತಾಳೆ ಇದು ಕಸ್ಟಮರ್ ಪೀಡ್‌ಬ್ಯಾಕ್ ಅಥವಾ ಒಂದು ಬ್ರಾಂಡ್‌ನ ಬಗ್ಗೆ ಜನರ ಅಭಿಪ್ರಾಯ.
ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರ (demand & Supply Gap)
ನಾನು ತುಂಬಾ ಶ್ರೀಮಂತ ನನ್ನನ್ನು ಮದುವೆಯಾಗಿ ಎಂದು ನೀವು ಹೇಳುತ್ತೀರಿ, ಆದರೆ ಅದೇ ವೇಳೆ ಆಕೆ ಆಕೆಯ ಗಂಡನನ್ನು ನಿಮಗೆ ಪರಿಚಯಿಸುತ್ತಾಳೆ. ಇದು ಬೇಡಿಕೆ ಹಾಗೂ ಪೂರೈಕೆಯ ನಡುವಿನ ಅಂತರವಾಗಿದೆ.
ಹೊಸ ಮಾರುಕಟ್ಟೆ ಪ್ರವೇಶಕ್ಕೆ ಇರುವ ಅಡ್ಡಿ(Restriction entering Market)
ನೀವು ನಾನು ಶ್ರೀಮಂತ ಎಂದು ಹೇಳುವ ಮೊದಲೇ ನಿಮ್ಮ ಹೆಂಡತಿ ಅಲ್ಲಿಗೆ ಬಂದು ಬಿಡುತ್ತಾಳೆ. ಇದು ಮಾರುಕಟ್ಟೆಗೆ ಹೊಸದೊಂದು ವಸ್ತು ಪ್ರವೇಶಿಸುವುದಕ್ಕೆ ಇರುವ ಅಡ್ಡಿಯಾಗಿದೆ.
ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದ್ದು, ಈ ಪ್ರೊಫೆಸರ್ ನೀಡಿದ ಫನಿ ಉತ್ತರಗಳ ಬಗ್ಗೆ ನಿಮಗೇನನಿಸುತ್ತಿದೆ. ನೀವು ಎಂಬಿಎ ವಿದ್ಯಾರ್ಥಿಗಳ ಅಥವಾ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುವವರ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ. ಅನೇಕರು ಈ ಪೋಸ್ಟ್‌ಗೆ ಭೇಷ್ ಎಂದಿದ್ದಾರೆ. ತಮಾಷೆಯಾಗಿದೆ ಎಂದು ನಕ್ಕಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.