
ಪಿಟಿಐ ಮುಂಬೈ (ಮಾ.14): ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷ ಮತ್ತು ತೈಲ ಬೆಲೆಗಳ ಏರಿಕೆಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಮಾನದಂಡ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ- ಸತತ 3ನೇ ದಿನವಾದ ಶುಕ್ರವಾರ ತೀವ್ರವಾಗಿ ಕುಸಿತ ಕಂಡಿವೆ. ಇದರೊಂದಿಗೆ ಇದು ಜೂನ್ 2022ರ ನಂತರ ಪೇಟೆಯ ಪಾಲಿಗೆ ಅತಿ ಕರಾಳ ವಾರವಾಗಿದೆ ಹಾಗೂ ಒಂದೇ ವಾರದಲ್ಲಿ ಹೂಡಿಕೆದಾರರ 19 ಲಕ್ಷ ಕೋಟಿ ರು. ಕರಗಿದೆ. ಮೇಲಾಗಿ ಯುದ್ಧ ಆರಂಭವಾದ 14 ದಿನದಲ್ಲಿ 33.68 ಲಕ್ಷ ಕೋಟಿ ರು. ಪೇಟೆಯ ಸಂಪತ್ತು ಇಳಿಕೆಯಾಗಿದೆ.
ಶುಕ್ರವಾರ ಸೆನ್ಸೆಕ್ಸ್, ಮಧ್ಯಂತರದಲ್ಲಿ 1,579.82 ಅಂಕ ಅಥವಾ ಶೇ.2ರಷ್ಟು ಕುಸಿತ ಕಂಡು 74,454.60 ಕ್ಕೆ ತಲುಪಿತ್ತು. ಅಂತಿಮವಾಗಿ 1,470.50 ಅಂಕ ಅಥವಾ ಶೇ.1.93 ರಷ್ಟು ಕುಸಿತ ಕಂಡು 74,563.92 ಕ್ಕೆ ತಲುಪಿತು. ಇದರಿಂದ ಹೂಡಿಕೆದಾರರು ಒಂದೇ ದಿನ 9.08 ಲಕ್ಷ ಕೋಟಿ ರು. ಹಾನಿ ಅನುಭವಿಸಿದರು.
ಇನ್ನು ರಾಷ್ಟ್ರೀಯ ಷೇರುಪೇಟೆ ನಿಫ್ಟಿ 488.05 ಅಂಕ ಅಥವಾ ಶೇ. 2.06 ರಷ್ಟು ಕುಸಿತ ಕಂಡು 23,151.10 ಕ್ಕೆ ತಲುಪಿತು.
ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಮಾರಾಟ, ವಿದೇಶಿ ನಿಧಿಯ ನಿರಂತರ ಹೊರಹರಿವು ಮತ್ತು ರುಪಾಯಿ ದುರ್ಬಲತೆಯು ಹೂಡಿಕೆದಾರರ ಆತ್ಮವಿಶ್ವಾಸವನ್ನು ಕುಗ್ಗಿಸಿತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.