
ಬೆಂಗಳೂರು(ನ.04): ಉದ್ಯಮ ಆರಂಭಿಸಲು ಬಯಸುವ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ, ಸರ್ಕಾರಗಳಿಂದ ಸಹಾಯಧನ ಹಾಗೂ ಅವರ ಕಾರ್ಯಕ್ಷಮತೆ ಬಗ್ಗೆ ಹೆಚ್ಚು ವಿಶ್ವಾಸ ಮೂಡಿಸುವ ಕೆಲಸ ಆಗಬೇಕಿದೆ ಎಂದು ಜುಕರ್ ಬಗ್‌ರ್ ಮೀಡಿಯಾ ಸಂಸ್ಥಾಪಕಿ ರ‍್ಯಾಂಡಿ ಜುಕರ್‌ಬರ್ಗ್ ಹೇಳಿದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಗುರುವಾರ ‘ಆವಿಷ್ಕಾರ ಮತ್ತು ಕೋವಿಡ್ ನಂತರದಲ್ಲಿ ನವೋದ್ಯಮ’ ವಿಷಯ ಕುರಿತು ಮಾತನಾಡಿದ ಅವರು, ತಮ್ಮ ಪ್ರಕಾರ ಉದ್ಯಮ ಕ್ಷೇತ್ರ ಪ್ರವೇಶಿಸಿರುವ ಮಹಿಳೆಯರ ಪ್ರಮಾಣ ಶೇ.2ರಷ್ಟಿರಬಹುದು. ಕೋವಿಡ್ ನಂತರ ಅದು ಇನ್ನಷ್ಟು ಕಡಿಮೆಯಾಗಿದೆ. ಮಹಿಳೆಯರು ಉದ್ಯಮ ಕ್ಷೇತ್ರಕ್ಕೆ ಕಾಲಿಡುವುದು, ಯಶಸ್ಸು ಸಾಧಿಸುವುದು ಸುಲಭದ ಮಾತಲ್ಲ. ಹಲವು ವರ್ಷಗಳ ನಿರಂತರ ಶ್ರಮ ಬೇಕು. ತಮಗೂ ಕೂಡ ಈ ಕ್ಷೇತ್ರದಲ್ಲಿ ಯಶಸ್ಸು ಸಿಗಲು ಆರು ವರ್ಷ ಕಾಯಬೇಕಾಯಿತು. ಪ್ರಮುಖವಾಗಿ ಮಹಿಳೆಯರಿಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರೋತ್ಸಾಹ, ಆರ್ಥಿಕ ಸಹಕಾರ ಮತ್ತು ಆತ್ಮವಿಶ್ವಾಸ ಮೂಡಿಸುವ ಕೆಲಸಗಳಾಗಬೇಕು. ಮಹಿಳಾ ಪ್ರಧಾನ ಕಂಪನಿಗಳ ಮೇಲೆ ಹೂಡಿಕೆ ಹೆಚ್ಚಾಗಬೇಕು ಎಂದರು.
Invest Karnataka 2022: ಮೊದಲ ದಿನವೇ ದಾಖಲೆಯ ₹7.6 ಲಕ್ಷ ಕೋಟಿ ಹೂಡಿಕೆ!
ನನ್ನ ಸಹೋದರ ಫೇಸ್‌ಬುಕ್ ತೆರೆದ ಮೇಲೆ ನಾನು 12 ಸ್ನೇಹಿತರ ಜತೆಗೆ ಮೊದಲ ಬಾರಿಗೆ ‘ಫೇಸ್‌ಬುಕ್ ಲೈವ್’ ಆರಂಭಿಸಿದೆ. ಆ ಸಮಯದಲ್ಲಿ ಯಾರೂ ಅದನ್ನು ಬಳಕೆ ಮಾಡಲಿಲ್ಲ. ಅಂದಾಜು ಆರು ವರ್ಷಗಳ ನಂತರ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡುವುದಕ್ಕೆ ಮುಂದಾದರು. ಯಾರು ಸಹ ಉದ್ಯಮ ಆರಂಭಿಸಿದ ತಕ್ಷಣವೇ ಯಶಸ್ಸು ನಿರೀಕ್ಷೆ ಮಾಡುವುದು ಕಷ್ಟ. ನನಗೆ ಮ್ಯೂಸಿಕ್ ಅಂದರೆ, ಪ್ರಾಣ. ಈ ಕ್ಷೇತ್ರದಲ್ಲೇ ಉದ್ಯಮ ಆರಂಭಿಸಬೇಕೆಂದುಕೊಂಡಿದ್ದೆ. ಆದರೆ, ಇದರಲ್ಲಿ ಲಾಭ ಪಡೆಯವುದು ಕಷ್ಟಎಂದು ತಿಳಿದ ಮೇಲೆ, ತಾವು ಜಾಹಿರಾತು ಏಜೆನ್ಸಿ ಆರಂಭಿಸಿದ್ದರಿಂದ ಲಾಭ ನೋಡುವಂತಾಯಿತು ಎಂದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.