ಕೇಂದ್ರ ಸರ್ಕಾರದಿಂದ 100 ರೂಪಾಯಿ ನಾಣ್ಯ, ಇಲ್ಲಿದೆ ವಿಶೇಷತೆ,ಬಿಡುಗಡೆ ದಿನಾಂಕ!

Published : Apr 22, 2023, 05:08 PM ISTUpdated : Apr 22, 2023, 05:10 PM IST
ಕೇಂದ್ರ ಸರ್ಕಾರದಿಂದ 100 ರೂಪಾಯಿ ನಾಣ್ಯ, ಇಲ್ಲಿದೆ ವಿಶೇಷತೆ,ಬಿಡುಗಡೆ ದಿನಾಂಕ!

ಸಾರಾಂಶ

ಭಾರತದಲ್ಲಿ 1,2,5,10, 20 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದೆ. ಇದೀಗ ಕೇಂದ್ರ ಸರ್ಕಾರ ಕೆಲವೇ ದಿನಗಳಲ್ಲಿ 100 ರೂಪಾಯಿ ವಿಶೇಷ ನಾಣ್ಯ ಬಿಡುಗಡೆ ಮಾಡುತ್ತಿದೆ. 100 ರೂಪಾಯಿ ನಾಣ್ಯ ಬಿಡುಗಡೆಗೆ ಕಾರಣವೇನು? ಇಲ್ಲಿದೆ ವಿವರ.

ನವದೆಹಲಿ(ಏ.22): ಕೆಲ ವಿಶೇಷ ಸಂದರ್ಭಗಳನ್ನು ಸ್ಮರಣೀಯವಾಗಿಸಲು ಭಾರತ ಸರ್ಕಾರ ಹಲವು ಬಾರಿ ಅಂಚೇ ಚೀಟಿ ಬಿಡುಗಡೆ ಸೇರಿದಂತೆ ಹಲವು ಮಹತ್ವ ನಿರ್ಧಾರ ತೆಗೆದುಕೊಂಡಿದೆ. ಇದೀಗ ಕೇಂದ್ರ ಸರ್ಕಾರ ವಿಶೇಷ 100 ರೂಪಾಯಿ ನಾಣ್ಯ ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತದಲ್ಲಿ ಸದ್ಯ 1,2,5,10 ಹಾಗೂ 20 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದೆ. ಇದೀಗ 100 ರೂಪಾಯಿ ನಾಣ್ಯ ಬಿಡುಗಡೆಯಾಗಲಿದೆ. ಈ ನಾಣ್ಯ ಬಿಡುಗಡೆ ಮಾಡಲು ಮುಖ್ಯಕಾರಣ, ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮ. ದೇಶದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್ 100ನೇ ಕಂತು ಈ ತಿಂಗಳ ಅಂತ್ಯದಲ್ಲಿ ಪ್ರಸಾರವಾಗಲಿದೆ. 100ನೇ ಕಂತಿನ ಪ್ರಯುಕ್ತ ಕೇಂದ್ರ ಸರ್ಕಾರ 100 ರೂಪಾಯಿ ನಾಣ್ಯ ಮಾರುಕಟ್ಟೆಗೆ ಬಿಡುಡೆ ಮಾಡುತ್ತಿದೆ.

ಎಪ್ರಿಲ್ 20 ರಂದು ಮನ್ ಕಿ ಬಾತ್ 100ನೇ ಕಂತು ಪ್ರಸಾರವಾಗಲಿದೆ. ಇದೇ ದಿನ ಕೇಂದ್ರ ಸರ್ಕಾರ 100 ರೂಪಾಯಿ ನಾಣ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಆಪ್ರಿಲ್ 30 ರಿಂದ ಮಾರುಕಟ್ಟೆಯಲ್ಲಿ 100 ರೂಪಾಯಿ ನಾಣ್ಯ ಜನರಿಗೆ ಲಭ್ಯವಾಗಲಿದೆ. ಆದರೆ 100 ರೂಪಾಯಿ ನಾಣ್ಯ ಸೀಮಿತ ಪ್ರಮಾಣದಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನಾಣ್ಯಗಳಂತೆ ಹೆಚ್ಚಾಗಿ ಈ 100 ರೂಪಾಯಿ ನಾಣ್ಯ ಲಭ್ಯವಿರುವುದಿಲ್ಲ.

ಆರ್ ಬಿಐ ಹಳೆಯ 5ರೂ. ನಾಣ್ಯ ಸ್ಥಗಿತಗೊಳಿಸಿದ್ದು ಏಕೆ? ಇದರ ಹಿಂದಿದೆ ಬಾಂಗ್ಲಾದೇಶೀಯರ ಕೈವಾಡ!

ನೂರು ರೂಪಾಯಿ ನಾಣ್ಯದಲ್ಲಿ ಹಲವು ವಿಶೇಷತೆಗಳಿವೆ. ನಾಣ್ಯದ ಗಾತ್ರ ಕೊಡ ಬದಲಾಗಲಿದೆ. 44 mm ಡಯಾಮೀಟರ್ ಹಾಗೂ 200 ಸೆರೇಶನ್ ಗಾತ್ರಹೊಂದಿರಲಿದೆ.35 ಗ್ರಾಮ್ ಲೋಹದ ನಾಣ್ಯದಲ್ಲಿ ಶೇಕಡಾ 50 ರಷ್ಟು ಬೆಳ್ಳಿ, ತಾಮ್ರ ಶೇಕಡಾ 50, ಜಿಂಕ್ ಶೇಕಡಾ ಶೇಕಡಾ 5 ಹಾಗೂ ನಿಕೆಲ್ ಶೇಕಡಾ 5 ರಷ್ಟು ಮಿಶ್ರಣವಾಗರಲಿದೆ. 

100 ರೂಪಾಯಿ ನಾಣ್ಯದಲ್ಲಿ ಅಶೋಕ ಸ್ಥಂಭದ ಮುದ್ರೆ ಇರಲಿದೆ. ಇನ್ನು ಕೆಳಭಾಗದಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ದೇವನಾಗರಿ ಲಿಪಿಯಲ್ಲಿ ಭಾರತ್ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ಇಂಡಿಯಾ ಎಂದು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಇದು ಮನ್ ಕಿ ಬಾತ್ 100ನೇ ಕಂತಿನ ವಿಶೇಷ ನಾಣ್ಯವಾಗಿರುವ ಕಾರಣ ನಾಣ್ಯದಲ್ಲಿ ಮನ್ ಕಿ ಬಾತ್ 100 ಹಾಗೂ ಮನ್ ಕಿ ಬಾತ್ ಮೈಕ್ರೋಫೋನ್ ಚಿಹ್ನೆ ಇರಲಿದೆ. 100 ರೂಪಾಯಿ ನಾಣ್ಯ ಈಗಾಗಲೇ ಹಲವರ ಕುತೂಹಲ ಹೆಚ್ಚಿಸಿದೆ. ಎಪ್ರಿಲ್ 30 ರಂದು ಮಾರುಕಟ್ಟೆ ಪ್ರವೇಶಿಸಲಿರುವ ಈ ನಾಣ್ಯಕ್ಕಾಗಿ ಕಾತರವೂ ಹೆಚ್ಚಾಗಿದೆ. 

ಇನ್ಮುಂದೆ ನಾಣ್ಯಗಳು ಬೇಕಾದ್ರೆ ಬ್ಯಾಂಕಿಗೆ ಹೋಗ್ಬೇಕಾಗಿಲ್ಲ, ವೆಂಡಿಂಗ್ ಮಷಿನ್ ನಲ್ಲೇ ಪಡೆಯಬಹುದು!

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿ ಮನ್ ಕಿ ಬಾತ್ ಕಾರ್ಯಕ್ರಮ ಈಗಾಗಲೇ 99 ಕಂತಗಳು ಪ್ರಸಾರವಾಗಿದೆ. ರೆಡಿಯೋ ಮೂಲಕ ಪ್ರಸಾರವಾಗುವ ಅತ್ಯಂತ ಜನಪ್ರಿಯ ಕಾರ್ಯಕ್ರಮ ಇದಾಗಿದೆ. ವಿಶೇಷ ಅಂದರೆ 56 ಭಾಷೆಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಅತೀ ಹೆಚ್ಚಿನ ಜನರು ಆಲಿಸುವ ಕಾರ್ಯಕ್ರಮ ಇದಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಮೂಲೆ ಮೂಲೆಯ ಜನರೊಂದಿಗೆ ಸಂಪರ್ಕ ಬೆಸೆದಿದ್ದಾರೆ. ದೇಶದದ ಸಾಧಕರು, ಎಲೆಮರೆ ಕಾಯಿಗಳು, ಮಾದರಿ ನಡೆ, ಸ್ಪೂರ್ತಿಯ ಸೆಲೆಗಳ ಕುರಿತು ಮೋದಿ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದಾರೆ.ಮೋದಿ ಉಲ್ಲೇಖಿಸಿದ ಬಳಿಕ ಹಲವರ ಸಾಧನೆಗಳು ದೇಶ ವಿದೇಶಕ್ಕೆ ಪರಿಚಯವಾಗಿದ್ದಾರೆ. ಬಳಿಕ ಜನಪ್ರಿಯರಾಗಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!