ಆರ್ಥಿಕ ಹಿಂಜರಿತ ತಡೆಗೆ ಮನಮೋಹನ್ 5 ಸೂತ್ರ| ಜಾರಿಗೆ ಮುನ್ನ ಹಿಂಜರಿತ ಇದೆ ಎಂದು ಒಪ್ಪಿಕೊಳ್ಳಲು ಷರತ್ತು| ಹಿಂಜರಿತಕ್ಕೆ ಅಪನಗದೀಕರಣ ವೈಫಲ್ಯ, ಜಿಎಸ್‌ಟಿ ಎಡವಟ್ಟು ಕಾರಣ
ನವದೆಹಲಿ[ಸೆ.13]: ಅತ್ಯಂತ ಗಂಭೀರ ಸ್ವರೂಪದ ಆರ್ಥಿಕ ಹಿಂಜರಿತ ದೇಶವನ್ನು ಆವರಿಸಿದೆ. ಇದಕ್ಕೆ ಮುಖ್ಯ ಕಾರಣ- ಅಪನಗದೀಕರಣದ ವೈಫಲ್ಯ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ದೋಷಪೂರಿತ ಅನುಷ್ಠಾನ ಎಂದು ಮಾಜಿ ಪ್ರಧಾನಿ ಹಾಗೂ ವಿಶ್ವ ಶ್ರೇಷ್ಠ ಹಣಕಾಸು ತಜ್ಞ ಮನಮೋಹನ ಸಿಂಗ್ ಅವರು ಟೀಕಿಸಿದ್ದಾರೆ. ಇದೇ ವೇಳೆ, ಹಿಂಜರಿತದಿಂದ ದೇಶದ ಆರ್ಥಿಕತೆಯನ್ನು ಮೇಲಕ್ಕೆತ್ತಲು 5 ಸಲಹೆಗಳನ್ನೂ ನರೇಂದ್ರ ಮೋದಿ ಸರ್ಕಾರಕ್ಕೆ ನೀಡಿದ್ದಾರೆ.
ವ್ಯಾಲೆಟ್ ಆಯ್ತು ಬಂದಿದೆ ಫೇಷಿಯಲ್ ಪೇಮೆಂಟ್!
undefined
ಆದರೆ ಈ ಸಲಹೆಗಳ ಅನುಷ್ಠಾನಕ್ಕೆ ಒಂದು ಷರತ್ತು ವಿಧಿಸಿದ್ದಾರೆ. ಅದೇನೆಂದರೆ, ದೇಶ ಆರ್ಥಿಕ ಹಿಂಜರಿತದಲ್ಲಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕು.
ಹಿಂದಿ ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಜ್ಞರು ಹಾಗೂ ಸಂಬಂಧಿಸಿದ ವ್ಯಕ್ತಿಗಳನ್ನು ಕೇಂದ್ರ ಸರ್ಕಾರ ಮುಕ್ತ ಮನಸ್ಸಿನಿಂದ ಆಲಿಸಬೇಕು. ಆದರೆ, ಸರ್ಕಾರದ ಕಡೆಯಿಂದ ಅಂತಹ ನಡೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆರ್ಥಿಕತೆ ನಿಜಕ್ಕೂ ಕುಸಿಯುತ್ತಿದೆಯಾ?: ಭರವಸೆಯ ಬೆಳಕೊಂದು ಕಾಣುತ್ತಿದೆಯಾ?
ಮನಮೋಹನ್ 5 ಸೂತ್ರಗಳು
1. ಅಲ್ಪಾವಧಿಗೆ ಆದಾಯ ನಷ್ಟವಾದರೂ ಪರವಾಗಿಲ್ಲ ಜಿಎಸ್‌ಟಿಯನ್ನು ತಾರ್ಕಿಕಗೊಳಿಸಬೇಕು.
2. ಕೃಷಿ ಕ್ಷೇತ್ರದ ಪುನಶ್ಚೇತನ ಹಾಗೂ ಗ್ರಾಮೀಣ ಬಳಕೆ ಉತ್ತೇಜಿಸಲು ಹೊಸ ವಿಧಾನ ಕಂಡುಹಿಡಿಯಬೇಕು.
3. ಬಂಡವಾಳ ಸೃಷ್ಟಿಗಾಗಿ ಆರ್ಥಿಕ ವ್ಯವಸ್ಥೆಗೆ ಹಣ ತುಂಬಬೇಕು.
4. ಅಗಾಧ ಸಂಖ್ಯೆಯ ಉದ್ಯೋಗಿಗಳನ್ನು ಬೇಡುವ ಜವಳಿ, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಅಗ್ಗದ ವಸತಿಯಂತಹ ವಲಯಗಳಿಗೆ ಜೀವ ತುಂಬಬೇಕು. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಸುಲಭ ಸಾಲ ಒದಗಿಸಬೇಕು.
5. ಅಮೆರಿಕ ಹಾಗೂ ಚೀನಾ ನಡುವೆ ದರ ಸಮರ ನಡೆಯುತ್ತಿದೆ. ಅದರಿಂದ ಸೃಷ್ಟಿಯಾಗುತ್ತಿರುವ ರಫ್ತು ಅವಕಾಶಗಳನ್ನು ಬಾಚಿಕೊಳ್ಳಬೇಕು.