Shocking News: ವಿಮೆ ಹಣಕ್ಕಾಗಿ ತನ್ನೆರಡು ಕಾಲನ್ನೇ ಕತ್ತರಿಸಿಕೊಂಡ ಭೂಪ…!

By Suvarna News  |  First Published Feb 26, 2024, 5:21 PM IST

ವಿಮೆ ಹಣಕ್ಕೆ ಸಣ್ಣಪುಟ್ಟ ತಪ್ಪು ಮಾಡುವ ಜನರಿದ್ದಾರೆ. ಆದ್ರೆ ಕೆಲವರು ಅತಿಯಾಗಿ ಆಡ್ತಾರೆ. ದೊಡ್ಡ ಅಪರಾಧ ಮಾಡಿದ ವ್ಯಕ್ತಿಯೊಬ್ಬನಿಗೆ ಈಗ ಹಣವೂ ಇಲ್ಲ ಕಾಲೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. 
 


ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಹಣಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಅನೇಕರು ವಿಮೆ ಮಾಡಿಸಿಕೊಳ್ಳುತ್ತಾರೆ. ವೈದ್ಯಕೀಯ ವಿಮೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಕೊರೊನಾ ನಂತ್ರ ಆರೋಗ್ಯ ವಿಮೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆರೋಗ್ಯ ವಿಮೆ ಎಷ್ಟು ಅಗತ್ಯ ಎನ್ನುವುದರ ಅರಿವು ಕೊರೊನಾ ಸಮಯದಲ್ಲಿ ಅನೇಕರಿಗಾಗಿದೆ.  ವಿಮೆ ಮಾಡಿದವರು ಅದ್ರ ರೂಲ್ಸ್ ಅರಿತಿರುತ್ತಾರೆ. ಬೇರೆ ಬೇರೆ ವಿಮೆ ಬೇರೆ ಬೇರೆ ನಿಯಮವನ್ನು ಹೊಂದಿರುತ್ತದೆ. ಕೆಲ ವಿಮೆಯಲ್ಲಿ ಏನಾದ್ರೂ ಅಪಘಾತ ಸಂಭವಿಸಿದಾಗ ಮಾತ್ರ ಹಣ ನೀಡಲಾಗುತ್ತದೆ. ಅಲ್ಲದೆ ಎಲ್ಲ ರೋಗಗಳು ಈ ವಿಮೆ ಅಡಿ ಬರದ ಕಾರಣ, ಕೆಲವೊಮ್ಮೆ ವ್ಯಕ್ತಿ ಸಾವನ್ನಪ್ಪಿದ್ರೂ ಆತನಿಗೆ ಆತನ ವಿಮೆ ಹಣ ಸಿಗೋದಿಲ್ಲ. 

ಈ ವಿಮೆ (Insurance) ಹಣವನ್ನು ಪಡೆಯಲು ಜನರು ಅನೇಕ ರೀತಿಯ ನಾಟಕ ಆಡ್ತಾರೆ. ನಷ್ಟದಲ್ಲಿರುವ ಕೆಲವರು ತಾವೇ ಕಾರ್ಖಾನೆ ಅಥವಾ ಅಂಗಡಿಗೆ ಬೆಂಕಿ ಹಚ್ಚಿ, ಅದ್ರ ವಿಮೆ ಪಡೆಯುವವರಿದ್ದಾರೆ. ವಿಮೆಗಾಗಿ ರಕ್ತ ಸಂಬಂಧಿಗಳನ್ನೇ ಹತ್ಯೆ ಮಾಡಿದವರಿದ್ದಾರೆ. ಆದ್ರೆ ಆರೋಗ್ಯ (Health) ವಿಷ್ಯದಲ್ಲಿ ಆಟ ಆಡೋದು ಸ್ವಲ್ಪ ಕಷ್ಟ. ಯಾಕೆಂದ್ರೆ ನಮ್ಮ ವಿಮೆ ಹಣ (Money) ಪಡೆಯಲು ನಾವೇ ನೋವು ತಿನ್ನಬೇಕಾಗುತ್ತದೆ ಇಲ್ಲವೆ ರೋಗಕ್ಕೆ ಅಥವಾ ಅಪಘಾತಕ್ಕೆ ಒಳಗಾಗಬೇಕಾಗುತ್ತದೆ. ಹಣಕ್ಕಾಗಿ ಜನ ಅಂಥ ಸಾಹಸಕ್ಕೂ ಕೈ ಹಾಕ್ತಾರೆ ಅಂದ್ರೆ ನೀವು ನಂಬಲೇಬೇಕು.  ಅಮೆರಿಕಾ (America) ದಲ್ಲಿ ನಡೆದ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.

Tap to resize

Latest Videos

BANK HOLIDAYS: ಮಾರ್ಚ್ ತಿಂಗಳಲ್ಲಿ 14 ದಿನ ಬ್ಯಾಂಕ್ ಕ್ಲೋಸ್; ಆರ್ ಬಿಐ ಹಾಲಿಡೇ ಲಿಸ್ಟ್ ಹೀಗಿದೆ..

ಮಿಸೌರಿಯಲ್ಲಿ ನೆಲೆಸಿರುವ ವ್ಯಕ್ತಿ ಮಾಡಿದ ಅಪರಾಧ ಪೊಲೀಸರೇ ಬೆರಗಾಗುವಂತೆ ಮಾಡಿದೆ.  ಘಟನೆ ಕಳೆದ ವರ್ಷ ನಡೆದಿದ್ದು, ಪೊಲೀಸರು ಕೊನೆಗೂ ಸತ್ಯ ಬಯಲು ಮಾಡಿದ್ದಾರೆ. ಹೊವೆಲ್ ಕೌಂಟಿ ಶೆರಿಫ್ ಪೊಲೀಸರ ಪ್ರಕಾರ, 60 ವರ್ಷದ ವ್ಯಕ್ತಿಯೊಬ್ಬ ಟ್ರ್ಯಾಕ್ಟರ್ ಹಿಂದೆ ಅಳವಡಿಸಿದ್ದ ಮೊವರ್ ಗೆ ಕಾಲು ಸಿಕ್ಕಿ ಕಾಲೆರಡು ಕಟ್ ಆಗಿದೆ ಎಂದು ತಿಳಿಸಿದ್ದ. ಅಲ್ಲದೆ ವಿಮೆಗೆ ಅರ್ಜಿ ಸಲ್ಲಿಸಿದ್ದ. ಆದ್ರೆ ಕಟ್ ಆಗಿದ್ದ ಈತನ ಕಾಲುಗಳು ಸಿಕ್ಕಿರಲಿಲ್ಲ. ಇದ್ರಿಂದ ಅನುಮಾನಗೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಆಗ ಎಲ್ಲ ಸತ್ಯ ಹೊರಬಿದ್ದಿದೆ.

ವ್ಯಕ್ತಿಯ ಕಾಲಿನ ಗಾಯಗಳು ಕೂಡ ನಿಖರವಾಗಿದ್ದವು. ಮೊವರ್ ನಿಂದ ಕತ್ತರಿಸಿದಂತೆ ಕಂಡು ಬರ್ತಿರಲಿಲ್ಲ. ಈ ಎಲ್ಲ ನ್ಯೂನ್ಯತೆ ಹಿಡಿದು ತನಿಖೆಗೆ ಹೊರಟ ಪೊಲೀಸರಿಗೆ ಮತ್ತೊಂದು ವಿಷ್ಯ ಗೊತ್ತಾಯ್ತು. 60 ವರ್ಷದ ವ್ಯಕ್ತಿ ಪಾರ್ಶ್ವವಾಯುವಿಗೆ ಒಳಗಾಗಿದ್ದ. ಆತನ ಸೊಂಟದ ಕೆಳಗಿನ ಭಾಗ ಕೆಲಸ ಮಾಡ್ತಿರಲಿಲ್ಲ. ಇಂಥ ವ್ಯಕ್ತಿ ಹೇಗೆ ಟ್ರ್ಯಾಕ್ಟರ್ ಬಳಿ ಹೋದ ಎನ್ನುವ ಪ್ರಶ್ನೆ ಕೂಡ ಎದ್ದಿತ್ತು.

ಅನಂತ್- ರಾಧಿಕಾ ನಿಶ್ಚಿತಾರ್ಥಕ್ಕೆ ಉಂಗುರ ತಂದವರು ಅಂಬಾನಿ ಕುಟುಂಬಕ್ಕೆ ಅದೃಷ್ಟವಂತೆ, ಯಾರವರು ಗೆಸ್‌ ಮಾಡಿ!

ವಿಮೆ ಹಣ ಪಡೆಯಲು ವ್ಯಕ್ತಿ ಭಯಾನಕ ಕೆಲಸಕ್ಕೆ ಕೈ ಹಾಕಿದ್ದ. ಆತನಿಗೆ ಪಾರ್ಶ್ವವಾಯುವಾದ ಕಾರಣ ಕಾಲುಗಳು ಶಕ್ತಿ ಕಳೆದುಕೊಂಡಿದ್ದವು. ಕಾಲಿನಿಂದ ಯಾವುದೇ ಪ್ರಯೋಜನ ಇರಲಿಲ್ಲ. ಹಾಗಾಗಿ ವ್ಯಕ್ತಿಯೊಬ್ಬನನ್ನು ಮನೆಗೆ ಕರೆಸಿದ ಈತ, ತನ್ನೆರಡು ಕಾಲುಗಳನ್ನು ಕತ್ತರಿಸುವಂತೆ ಹೇಳಿದ್ದಾನೆ. ಇದಕ್ಕೆ ಆತನಿಗೆ ಹಣ ಕೂಡ ನೀಡಿದ್ದಾನೆ. ಮನೆಗೆ ಬಂದ ವ್ಯಕ್ತಿ ಈತನ ಕಾಲುಗಳನ್ನು ಕತ್ತರಿಸಿದ್ದಾನೆ. ಕಾಲು ಕಟ್ ಆದ್ಮೇಲೆ ಟ್ರ್ಯಾಕ್ಟರ್ ನಿಂದ ಈ ಅಪಘಾತ ಸಂಭವಿಸಿದೆ ಎಂದ ವೃದ್ಧ, ವಿಮೆ ಹಣ ಪಡೆಯಲು ಮುಂದಾಗಿದ್ದಾನೆ. ಆದ್ರೆ ತನಿಖೆ ವೇಳೆ ಈತನ ಬಣ್ಣ ಬಯಲಾಗಿದೆ. ಈತನ ಕತ್ತರಿಸಿದ ಕಾಲುಗಳು ಕೂಡ ಮನೆಯಲ್ಲಿ ಸಿಕ್ಕಿವೆ. ಬಕೆಟ್ ಒಂದರಲ್ಲಿ ಕಾಲುಗಳನ್ನು ಹಾಕಿ ಅದ್ರ ಮೇಲೆ ಟೈರ್ ಮುಚ್ಚಿದ್ದ ಈತ. 

click me!