ಗ್ರಾಹಕನ ಅಕೌಂಟ್‌ನಲ್ಲಿದ್ದ 16 ಕೋಟಿ ಎಗರಿಸಿದ ಐಸಿಐಸಿಐ ಬ್ಯಾಂಕ್‌ ಮ್ಯಾನೇಜರ್‌!

By Santosh Naik  |  First Published Feb 26, 2024, 4:28 PM IST

ಈ ಘಟನೆ ಮಾತ್ರವಲ್ಲ, ಇತ್ತೀಚೆಗೆ ರಾಜಸ್ಥಾನದ ಐಸಿಐಸಿಐ ಬ್ಯಾಂಕ್‌ ಶಾಕೆಯ ಮ್ಯಾನೇಜರ್‌ ಹಾಗೂ ಸಹಾಯಕ ಠೇವಣಿದಾರರ ಶತಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪ ಎದುರಾಗಿತ್ತು.
 


ನವದೆಹಲಿ (ಫೆ.26): ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ನ ಮ್ಯಾನೇಜರ್‌ಗಳ ವಂಚನೆ ಪ್ರಕರಣಗಳು ಸಾಕಷ್ಟು ವರದಿಯಾಗುತ್ತಿವೆ. ಹೊಸ ಪ್ರಕರಣದಲ್ಲಿ ಶ್ವೇತಾ ಶರ್ಮ ಎನ್ನುವ ಭಾರತೀಯ ಮಹಿಳೆ, ಐಸಿಐಸಿಐ ಬ್ಯಾಂಕ್‌ನ ಮ್ಯಾನೇಜರ್‌ ತಮ್ಮ ಖಾತೆಯಲ್ಲಿದ್ದ 16 ಕೋಟಿ ರೂಪಾಯಿ (1.9 ಮಿಲಿಯನ್‌ ಯುಎಸ್‌ ಡಾಲರ್‌) ಹಣವನ್ನು ಕದ್ದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಅಮೆರಿಕಾ ಅಕೌಂಟ್‌ನಿಂದ ಅವರು ಐಸಿಐಸಿಐ ಬ್ಯಾಂಕ್‌ಗೆ ಈ ಹಣವನ್ನು ವರ್ಗಾವಣೆ ಮಾಡಿದ್ದರು. ಈ ಹಣವನ್ನು ಎಫ್‌ಡಿಯಲ್ಲಿ ಇಡುವ ಸಲುವಾಗಿ ತಮ್ಮ ಖಾತೆಗೆ ಹಾಕಿದ್ದರು ಎಂದು ತಿಳಿಸಿದ್ದಾರೆ. ಆದರೆ, ಬ್ಯಾಂಕ್‌ ಅಧಿಕಾರಿ ಫೇಕ್‌ ಅಕೌಂಟ್‌ಅನ್ನು ರಚಿಸಿದ್ದಲ್ಲದೆ, ತಮ್ಮ ಸಹಿಯನ್ನೂ ಕೂಡ ನಕಲಿ ಮಾಡಿದ್ದಾರೆ. ಸಾಕಷ್ಟು ದಾಖಲೆಯನ್ನೂ ಬದಲಾಯಿಸುವ ಮೂಲಕ ನನ್ನ ಗಮನಕ್ಕೆ ಬರದೇ ಕನ್ನ ಖಾತೆಯಲ್ಲಿರುವ ಹಣವನ್ನು ಬ್ಯಾಂಕ್ ಮ್ಯಾನೇಜರ್‌ ಕಡ್ಡಿದ್ದಾರೆ ಎಂದು ಮಹಿಳೆ ವಾದಿಸಿದ್ದಾರೆ.

ಮನೆಯಲ್ಲಿ ಹಣವನ್ನು ಕೂಡಿಟ್ಟರೆ ಅಪಾಯ ಜಾಸ್ತಿ ಎನ್ನುವ ಕಾರಣಕ್ಕೆ ಹೆಚ್ಚಿನ ಮಂದಿ ಬ್ಯಾಂಕ್‌ನಲ್ಲಿ ಎಫ್‌ಡಿ ಇಡುವ ಮೂಲಕ ತಮ್ಮ ಹಣವನ್ನು ಸುರಕ್ಷಿತವಾಗಿರಿಸುವ ಬಗ್ಗೆ ಗಮನ ನೀಡುತ್ತಾರೆ. ಆದರೆ, ಶ್ವೇತಾ ಶರ್ಮ ಅವರಿಗೆ ಹೀಗಾಗಿಲ್ಲ. ಅಮೆರಿಕ ಹಾಗೂ ಹಾಂಕಾಂಗ್‌ನಲ್ಲಿ ಕೆಲಸ ಮಾಡಿದ್ದ ಶ್ವೇತಾ ಶರ್ಮ 2016ರಲ್ಲಿ ವಿದೇಶದಿಂದ ಭಾರತಕ್ಕೆ ವಾಪಸಾಗಿದ್ದರು. ತಾವು ಜೀವಮಾನದಲ್ಲಿ ಕೂಡಿಟ್ಟ ಉಳಿತಾಯದ ಹಣವಾದ 13.5 ಕೋಟಿ ರೂಪಾಯಿಗಳನ್ನು ನಾಲ್ಕು ವರ್ಷಗಳ ಕಾಲ ಐಸಿಐಸಿಐ ಬ್ಯಾಂಕ್‌ನಲ್ಲಿ ಎಫ್‌ಡಿ ಇರಿಸಿದ್ದರು. ನಾಲ್ಕು ವರ್ಷಗಳಲ್ಲಿ ಬಡ್ಡಿ ಸೇರಿ 16 ಕೋಟಿಗೆ ಏರುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದರು. ಜನವರಿಯಲ್ಲಿ ಬ್ಯಾಂಕ್‌ನ ಹೊಸ ಉದ್ಯೋಗಿ ಅವರು ಇಟ್ಟ ಹಣದ ಮೇಲೆ ಉತ್ತಮ ಆದಾಯ ಬರುವ ಆಫರ್‌ ನೀಡಿದಾಗ ವಂಚನೆ ಬೆಳಕಿಗೆ ಬಂದಿದೆ. ತನ್ನ ಖಾತೆಯಲ್ಲಿದ್ದ ಎಫ್‌ಸಿ ಹಣ ನಾಪತ್ತೆಯಾಗಿರುವುದನ್ನು ಅವರು ಗಮನಿಸಿದ್ದಾರೆ.

Tap to resize

Latest Videos

ಈ ವಿಚಾರ ತಿಳಿದ ಬೆನ್ನಲ್ಲಿಯೇ ಐಸಿಐಸಿಐ ಬ್ಯಾಂಕ್‌, ಆರೋಪಿಯಾಗಿರುವ ಶಾಖೆಯ ವ್ಯವಸ್ಥಾಪಕರನ್ನು ತನಿಖೆಗಾಗಿ ಅಮಾನತುಗೊಳಿಸಿದೆ ಮತ್ತು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗಕ್ಕೆ (ಇಒಡಬ್ಲ್ಯು) ದೂರು ನೀಡಿದೆ.  'ನಮ್ಮ ಗ್ರಾಹಕರೇ ನಮಗೆ ಮುಖ್ಯ ಆದ್ಯತೆ. ಅವರ ಹಿತಾಸಕ್ತಿಗಳನ್ನು ಕಾಪಾಡಲು ಬ್ಯಾಂಕ್‌ ಸಂಪೂರ್ಣವಾಗಿ ಬದ್ಧವಾಗಿದೆ. ಈ ವಿಚಾರದಲ್ಲೂ ಕೂಡ ಗ್ರಾಹಕರ ಆರ್ಥಿಕ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ನಾವು ಖಚಿತಪಡಿಸಿಕೊಂಡಿದ್ದೆವೆ. ನಾವು ಗ್ರಾಹಕರಿಗೆ ₹9.27 ಕೋಟಿಯ ವಿವಾದಿತ ಮೊತ್ತವನ್ನು (ಅವರು ಈಗಾಗಲೇ ₹ 2 ಕೋಟಿಯ ಸ್ಥಿರ ಠೇವಣಿಯನ್ನು ಎನ್‌ಕ್ಯಾಶ್ ಮಾಡಿದ್ದಾರೆ) ಅವರ ಖಾತೆಗೆ ಲೈನ್‌ನೊಂದಿಗೆ ವರ್ಗಾಯಿಸಲು ಸಿದ್ಧರಿದ್ದೇವೆ. ಉಳಿದ ಮೊತ್ತವನ್ನು ತನಿಖೆಯ ಬಳಿಕ ನೀಡಲಿದ್ದೇವೆ' ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಖಾತೆಗಳನ್ನು ತೆರೆದಾಗಿನಿಂದ ಅವರು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗೆ ವಹಿವಾಟಿನ ವಿವರಗಳನ್ನು ಸತತವಾಗಿ ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಮಾರುಕಟ್ಟೆ ಮೌಲ್ಯದಲ್ಲಿ ಭಾರತದ ಟಾಪ್‌ 10 ಕಂಪನಿಗಳಿವು!

ಅವರ ಮೊಬೈಲ್‌ ನಂಬರ್‌ ಹಾಗೂ ಈಮೇಲ್‌ ಐಡಿಯನ್ನು ನನ್ನ ಒಪ್ಪಿಗೆಯಿಲ್ಲದೆ ಬದಲಾವಣೆ ಮಾಡಲಾಗಿದೆ ಎಂದು ಮಹಿಳೆ ದೂರಿಸಿದ್ದಾರೆ.  ನನ್ನ ಹೆಸರಿನ ನಕಲಿ ಡೆಬಿಟ್‌ ಕಾರ್ಡ್‌ ಕೂಡ ಮಾಡಲಾಗಿದೆ. ನನಗೆ ಬ್ಯಾಂಕ್‌ ಮ್ಯಾನೇಜರ್‌ ಹಣದ ಕುರಿತು ನಿಯಮಿತವಾಗಿ ಮಾಹಿತಿ ನೀಡುತ್ತಿದ್ದರು. ದಾಖಲೆಗಳನ್ನು ಕೂಡ ಒದಗಿಸುತ್ತಿದ್ದರು. ಹಾಗಾಗಿ, ನನ್ನ ಹಣದ ಬಗ್ಗೆ ಯೋಚನೆ ಇರಲಿಲ್ಲ. ಆದರೆ, ಖಾತೆಯಲ್ಲಿ ಹಣ ಇಲ್ಲದೇ ಇದ್ದಾಗಲೇ ವಂಚನೆಯ ಬಗ್ಗೆ ತಿಳಿಯಿತು ಎಂದಿದ್ದಾರೆ. ಆದರೆ, ಎರಡೂ ಬದಲಾವಣೆಗಳಿಗೆ ಸಂಬಂಧಿಸಿದ ಸೂಚನೆಗಳನ್ನು ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಆಕೆಯ ಮೂಲ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸಕ್ಕೆ ಕಳುಹಿಸಲಾಗಿದೆ ಎಂದು ನಮ್ಮ ದಾಖಲೆಗಳು ಸೂಚಿಸುತ್ತವೆ. ಅದಲ್ಲದೆ, ಹೊಸ ಸಂಖ್ಯೆಯನ್ನು ಗ್ರಾಹಕರ ಮಾಲೀಕತ್ವದ ಕಂಪನಿಯ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಹೊಸ ವರ್ಷಕ್ಕೆ ಎಫ್‌ಡಿ ಇಡಲು ಬಯಸ್ತಿದ್ದೀರಾ? ಹಾಗಾದ್ರೆ ಪ್ರಮುಖ ಬ್ಯಾಂಕ್‌ಗಳು ಎಷ್ಟು ಬಡ್ಡಿ ದರ ನೀಡ್ತಿವೆ ನೋಡಿ..

ಕೆಲ ದಿನಗಳ ಹಿಂದೆ ರಾಜಸ್ಥಾನದ ಐಸಿಐಸಿಐ ಬ್ಯಾಂಕ್‌ನ ಶಾಖೆಯ ವ್ಯವಸ್ಥಾಪಕ ಮತ್ತು ಸಹಾಯಕ ಠೇವಣಿದಾರರ ಶತಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪ ಎದುರಾಗಿತ್ತು. ಈ ಹಂತದಲ್ಲಿ ತ್ವರಿತವಾಗಿ ಕೆಲಸ ಮಾಡಿದ ಬ್ಯಾಂಕ್‌, ಯಾವುದೇ ಗ್ರಾಹಕರು ಹಣ ಕಳೆದುಕೊಳ್ಳದಂತೆ ಕೆಲಸ ಮಾಡಿತ್ತು.
 

click me!