ಐಷಾರಾಮಿ ಮನೆ ನಿರ್ಮಾಣ ಮಾಡಲು ಜನರು ಇಡೀ ಜೀವನವನ್ನು ಮುಡುಪಾಗಿಡ್ತಾರೆ. ಆದ್ರೆ ಕೆಲ ವ್ಯಕ್ತಿಗಳ ಆಲೋಚನೆ ಭಿನ್ನವಾಗಿರುತ್ತದೆ. ಕಡಿಮೆ ಬೆಲೆಗೆ ಅದ್ಭುತ ಮನೆ ನಿರ್ಮಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡ್ತಾರೆ.
ಐಷಾರಾಮಿ ಮನೆ ನಿರ್ಮಾಣ ಮಾಡ್ಬೇಕು ಎನ್ನುವ ಆಸೆಯಿಂದ ಜನರು ಕಷ್ಟಪಟ್ಟು ದುಡಿದು, ಹಣ ಸಂಪಾದನೆ ಮಾಡಿ ಅದನ್ನೆಲ್ಲ ಮನೆಗೆ ಹಾಕ್ತಾರೆ. ಆದ್ರೆ ಇನ್ನು ಕೆಲವರು ಸಣ್ಣ ಜಾಗದಲ್ಲೇ ತಮ್ಮ ಬುದ್ಧಿ ಉಪಯೋಗಿಸಿ ಚೆಂದದ ಮನೆ ನಿರ್ಮಾಣ ಮಾಡ್ತಾರೆ. ಅದು ಎಷ್ಟೇ ಸಣ್ಣ ಮನೆಯಾಗ್ಲಿ ಅದನ್ನು ನಾವು ಸಾವಿರ ರೂಪಾಯಿಗೆ ಖರೀದಿ ಮಾಡಲು ಸಾಧ್ಯವೇ ಇಲ್ಲ. ಕೋಟಿ, ಲಕ್ಷದಲ್ಲಿಯೇ ಮನೆ ಬೆಲೆ ಇರುತ್ತದೆ. ಹಾಗಿರುವಾಗ ಈ ವ್ಯಕ್ತಿ ಕೇವಲ 105 ರೂಪಾಯಿಗೆ ಮನೆ ಖರೀದಿ ಮಾಡಿದ್ದಾನೆ. ನೀವು ನಂಬಲು ಇದು ಸಾಧ್ಯವೇ ಇಲ್ಲ. ಕುಡಿದ ಮತ್ತಿನಲ್ಲಿ, ಆನ್ಲೈನ್ ನಲ್ಲಿ ಈ ವ್ಯಕ್ತಿ 105 ರೂಪಾಯಿಗೆ ಮನೆ ಖರೀದಿ ಮಾಡಿದ್ದಾನೆ. ಈ ಮನೆ ಖರೀದಿ ಮಾಡಿರೋದ್ರಿಂದ ವ್ಯಕ್ತಿಗೆ ಬೇಸರವೇನೂ ಆಗಿಲ್ಲ. ಆತ ಪತ್ನಿ ಜೊತೆ ಈ ಮನೆಯಲ್ಲಿ ಆರಾಮವಾಗಿ ವಾಸವಾಗಿದ್ದಾನೆ.
ಇಂಗ್ಲೆಂಡ್ (England) ನ ಡರ್ಬಿಶೈರ್‌ನಲ್ಲಿ ವಾಸವಾಗಿರುವ ವ್ಯಕ್ತಿ ಇಷ್ಟು ಕಡಿಮೆ ಬೆಲೆಗೆ ಮನೆ (Home) ಖರೀದಿ ಮಾಡಿದ್ದಾನೆ. ಬಾಬ್ ಕ್ಯಾಂಪ್‌ಬೆಲ್ ಮತ್ತು ಅವರ ಪತ್ನಿ ಕರೋಲ್ ಆನ್ ಈ ಮನೆಯಲ್ಲಿ ವಾಸವಾಗಿದ್ದಾರೆ. ಇಷ್ಟು ಕಡಿಮೆ ಬೆಲೆಯ ಮನೆಯಲ್ಲಿ ಇವರು ಹೇಗೆ ವಾಸಿಸ್ತಾರೆ ಎನ್ನುವ ಪ್ರಶ್ನೆ ನಮಗೆ ಮೂಡದೆ ಇರದು. ಇದು ಮಣ್ಣು, ಸಿಮೆಂಟ್, ಇಟ್ಟಿಗೆ ಬಳಸಿ ನಿರ್ಮಿಸಿದ ಮನೆಯಲ್ಲ. ಈ ಮನೆ ಭಿನ್ನವಾಗಿದೆ.
ಭಾರತದಲ್ಲಿ ಅತಿಹೆಚ್ಚು ಹುಡುಕಲ್ಪಡುವ ಟಾಪ್-10 ನಟಿಯರು ಇಲ್ಲಿದ್ದಾರೆ ನೋಡಿ...
ಆನ್ಲೈನ್ (Online) ವೆಬ್ಸೈಟ್ ಇಬೇಯಲ್ಲಿ ಬಾಬ್ ಕ್ಯಾಂಪ್ ಬೆಲ್ ಈ ಮನೆಯನ್ನು ಓಕೆ ಮಾಡಿದ್ದನಂತೆ. ಕೇವಲ 1 ಪೌಂಡ್ ಅಂದರೆ 105 ರೂಪಾಯಿಗಳನ್ನು ಪಾವತಿಸಿ, ಬಾಬ್ ಕ್ಯಾಂಪ್ ಬೆಲ್ ಧಾನ್ಯಗಳನ್ನು ಸಂಗ್ರಹಿಸುವ ಡ್ರಮ್ ಒಂದನ್ನು ಖರೀದಿ ಮಾಡಿದ್ದ. ನಂತ್ರ ಈ ಡ್ರಮ್ ಬಳಸಿ ಮನೆ ನಿರ್ಮಾಣ ಮಾಡಿದ್ದಾನೆ.
ಬಾಬ್ ಕ್ಯಾಂಪ್ ಬೆಲ್ ಹಾಗೂ ಕರೋಲ್ ಆನ್ ತಮ್ಮ ಸೃಜನಶೀಲತೆಯಿಂದ ಈ ಮನೆ ನಿರ್ಮಾಣ ಮಾಡಿದ್ದಾರೆ. ಇದರ ನಿರ್ಮಾಣಕ್ಕೆ ಅವರು ಆರು ವರ್ಷ ತೆಗೆದುಕೊಂಡಿದ್ದಾರೆ. ಧಾನ್ಯದ ಡ್ರಮ್ ಗೆ ಅವರು 105 ರೂಪಾಯಿ ನೀಡಿದ್ದಾರೆ. ಆದ್ರೆ ಮನೆ ನಿರ್ಮಾಣಕ್ಕೆ ನಾಲ್ಕು ಲಕ್ಷ ರೂಪಾಯಿ ಖರ್ಚಾಗಿದೆ. ಈ ಮನೆ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಅವರು ಹಳೆಯ ಬಾಟಲಿಗಳನ್ನು ಮತ್ತು ಪ್ಯಾಲೆಟ್ ಬಳಸಿ ಗೋಡೆ ನಿರ್ಮಾಣ ಮಾಡಿದ್ದಾರೆ. ಮನೆಯಲ್ಲಿ ಅಗತ್ಯವಿರುವ ಎಲ್ಲ ವಸ್ತುಗಳೂ ಇವೆ. ಕೆಟಲ್, ಸಿಂಕ್, ಓವನ್ ಇದೆ. ಮಲಗಲು ಮೇಲೆ ವ್ಯವಸ್ಥೆ ಮಾಡಲಾಗಿದೆ. ಏಣಿ ಹತ್ತಿ ಮೇಲೆ ಹೋಗ್ಬೇಕು. ಆ ಏಣಿಯನ್ನು ಅವಶ್ಯಕತೆ ಇಲ್ಲದ ಸಮಯದಲ್ಲಿ ತೆಗೆಯಬಹುದು.
ಬಿರುಬಿಸಿಲು ದೇಹ ಮಾತ್ರವಲ್ಲ,ಜೇಬನ್ನೂ ಸುಡುತ್ತಿದೆ;ಆಹಾರ ಪದಾರ್ಥಗಳ ಬೆಲೆಯೇರಿಕೆಗೆ ಬಿಸಿ ಗಾಳಿಯೇ ಕಾರಣನಾ?
ಪತಿ ಐಡಿಯಾ ಮೊದಲು ಪತ್ನಿಗೆ ಇಷ್ಟವಾಗಿರಲಿಲ್ಲ. ಆದ್ರೆ ಈ ಮನೆಯಲ್ಲಿ ವಾಸ ಮಾಡಲು ಶುರು ಮಾಡಿ ಐದು ವರ್ಷ ಕಳೆದಿದೆ. ಪ್ರಕೃತಿ ಮಧ್ಯೆ ಈ ಮನೆಯಲ್ಲಿರೋದು ಖುಷಿ ತಂದಿದೆ ಎಂದು ಕರೋಲ್ ಆನ್ ಹೇಳ್ತಾಳೆ. ದಂಪತಿ ಮನೆ ಸುತ್ತ ಕೊಳ ನಿರ್ಮಿಸಿದ್ದು, ಮರಗಳನ್ನು ಬೆಳೆಸಿದ್ದಾರೆ. ಮನೆ ಕೇವಲ 4 ಮೀಟರ್ ಎತ್ತರ ಮತ್ತು 4 ಮೀಟರ್ ಅಗಲವಿದೆ. ಮನೆ ಯಾವುದೇ ಇರಲಿ ಅಲ್ಲಿ ನೆಮ್ಮದಿ (Peace of Mind), ಸಂತೋಷ (Happiness) ಮುಖ್ಯ ಎಂಬುದನ್ನು ಈ ದಂಪತಿ (Couple) ಕಂಡುಕೊಂಡಿದ್ದಾರೆ. ಸಣ್ಣ ಜಾಗದಲ್ಲಿ ಕಡಿಮೆ ಬೆಲೆಗೆ ಮನೆ ನಿರ್ಮಾಣ ಮಾಡಿ ಹಣ ಉಳಿಸಿದ್ದಾರೆ. ಮೊದಲು ಈ ಮನೆಯನ್ನು ಕಲಾಕೃತಿಯಾಗಿ ಇಡಲು ಅವರು ಬಯಸಿದ್ದರು. ಆದ್ರೆ ನಂತ್ರ ಇದೇ ಮನೆಯಲ್ಲಿ ವಾಸಿಸುವ ನಿರ್ಧಾರಕ್ಕೆ ಬಂದ್ರು.