
ಲೆದರ್ ಬ್ಯಾಗ್, ಬೆಲ್ಟ್ ಸೇರಿದಂತೆ ಲೆದರ್ ವಸ್ತುಗಳ ತಯಾರಿಕೆಗೆ ಪ್ರಾಣಿಗಳ ಚರ್ಮ ಬಳಕೆ ಮಾಡಲಾಗುತ್ತದೆ. ಆದ್ರೆ ಈ ಕಂಪನಿ ಸಂಪೂರ್ಣ ಭಿನ್ನ ರೂಪದಲ್ಲಿ ಲೆದರ್ ತಯಾರಿಸುತ್ತಿದೆ. ಈ ಲೆದರ್ ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಕೇರಳದಲ್ಲಿ ಶುರುವಾಗಿರುವ ಈ ಲೆದರ್ ಕಂಪನಿಯಲ್ಲಿ ಅನೇಕ ವಸ್ತುಗಳು ಸಿದ್ಧವಾಗ್ತಿವೆ.
ತೆಂಗಿನ ಕಾಯಿ (Coconut) ಎಂದ್ರೆ ನೆನಪಾಗೋದು ಭಾರತ. ನಮ್ಮ ದೇಶ ಜಾಗತಿಕವಾಗಿ ಮೂರನೇ ಅತಿದೊಡ್ಡ ತೆಂಗಿನಕಾಯಿ ಉತ್ಪಾದಕ ಎಂದು ಗುರುತಿಸಿದೆ. ಭಾರತ (India) ದಲ್ಲಿ ಬಹುತೇಕ ಜನರು ತೆಂಗಿನಕಾಯಿ ಎಣ್ಣೆ (Coconut Oil), ತೆಂಗಿನಕಾಯಿ ಉತ್ಪನ್ನವನ್ನು ಬಳಕೆ ಮಾಡುತ್ತಾರೆ. ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಸಂಸ್ಕರಣಾ ಘಟಕಗಳ ಸಂಖ್ಯೆ ಸಾಕಷ್ಟಿದೆ. ಆದ್ರಿಲ್ಲಿ ಅನೇಕ ವಸ್ತುಗಳನ್ನು ಹಾಳು ಮಾಡಲಾಗುತ್ತದೆ. ಈ ಹಿಂದೆ ತೆಂಗಿನ ಚಿಪ್ಪು ವ್ಯರ್ಥವಾಗೋದನ್ನು ನೋಡಿ, ಅದ್ರಲ್ಲೇ ಬ್ಯುಸಿನೆಸ್ (Business) ಶುರು ಮಾಡಿದ ಮಹಿಳೆಯ ಸುದ್ದಿಯನ್ನು ನಾವೇ ನೀಡಿದ್ವಿ. ಈಗ ತೆಂಗಿನಕಾಯಿ ನೀರಿನಿಂದ ಲೆದರ್ ವಸ್ತುಗಳನ್ನು ತಯಾರಿಸುತ್ತಿರುವ ಕಂಪನಿ ಬಗ್ಗೆ ಮಾಹಿತಿ ನೀಡ್ತೇವೆ.
SIPಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದೀರಾ? ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ
ಭಾರತದ ಸಣ್ಣ ತೆಂಗಿನಕಾಯಿ ಸಂಸ್ಕರಣಾ ಘಟಕದಲ್ಲೂ ಸುಮಾರು 4000 ಲೀಟರ್ ತೆಂಗಿನ ನೀರನ್ನು ವ್ಯರ್ಥ ಮಾಡುತ್ತದೆ. ಜುಜಾನಾ ಮತ್ತು ಸುಸ್ಮಿತ್ ಎನ್ನುವವರು ಈ ವ್ಯರ್ಥವಾಗ್ತಿರುವ ತೆಂಗಿನ ನೀರನ್ನು ಲೆದರ್ ಆಗಿ ಪರಿವರ್ತಿಸುವ ಕೆಲಸ ಮಾಡ್ತಿದ್ದಾರೆ.
ಪ್ಲಾಸ್ಟಿಕ್, ಪರಿಸರ ವಿರೋಧಿ ವಸ್ತುಗಳಿಂದ ಬೇಸತ್ತಿದ್ದ ಜುಜಾನಾ ಮತ್ತು ಕೇರಳ ಮೂಲದ ಸುಸ್ಮಿತ್, ಹೊಸದನ್ನು ಮಾಡಬಯಸಿದ್ದರು. ತೆಂಗಿನ ನೀರಿನಿಂದ ಲೆದರ್ ವಸ್ತು ತಯಾರಿಸುವ ಟೆಕ್ನಿಕನ್ನು ಅವರು ಲಂಡನ್ ನಲ್ಲಿ ಕಲಿತರು. ಅದರ ಉತ್ಪಾದನಾ ಪ್ರಕ್ರಿಯೆ, ಗುಣಲಕ್ಷಣಗಳು ಮತ್ತು ಸಾಮರ್ಥ್ಯದಿಂದ ಅವರು ಪ್ರಭಾವಿತರಾದರು. ಆದ್ರೆ ಅಲ್ಲಿ ಅವರಿಗೆ ಅಗತ್ಯವಿರುಷ್ಟು ತೆಂಗಿನ ನೀರು ಸಿಗ್ತಿರಲಿಲ್ಲ. ಆಗ ಅವರು ಬಂದಿದ್ದು ನಮ್ಮ ನೆರೆಯ ಕೇರಳಕ್ಕೆ. ಇಲ್ಲಿರುವ ತೆಂಗಿನ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ನಿರ್ಧರಿಸಿದ ಜುಜಾನಾ ಮತ್ತು ಸುಸ್ಮಿತ್, ಮಲೈ (Malai) ಬಯೋಮೆಟೀರಿಯಲ್ಸ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ಶುರು ಮಾಡಿದ್ರು. ಸುಸ್ಮೀತ್ ಈ ಕಂಪನಿಯನ್ನು ತೊರೆದಿದ್ದು, ಕೇರಳದ ಅಕಿಲ್ ಸೇಟ್ ಎಂಬ ಹೊಸ ವ್ಯಾಪಾರ ಪಾಲುದಾರರೊಂದಿಗೆ ಜುಜಾನಾ ಕಂಪನಿಯ ಜವಾಬ್ದಾರಿಯನ್ನು ತೆಗೆದುಕೊಂಡಿದಾರೆ.
ಮಲೈ ಕಂಪನಿ ವಿನಾಶವನ್ನು ವಿಸ್ಮಯವನ್ನಾಗಿ ಪರಿವರ್ತಿಸುವ ಅವಕಾಶವಾಗಿ ಕಂಡುಕೊಂಡಿದ್ದಾರೆ. ತಿರಸ್ಕರಿಸಿದ ತೆಂಗಿನ ನೀರನ್ನು ಸಂಗ್ರಹಿಸಿ ಹುದುಗಿಸುವ ಮೂಲಕ ಅದನ್ನು ಜೆಲ್ ಆಗಿ ಪರಿವರ್ತಿಸುತ್ತಾರೆ. ನಂತ್ರ ಅದನ್ನು ಬಾಳೆ ನಾರು ಮತ್ತು ಗಮ್‌ನೊಂದಿಗೆ ಬೆರೆಸಲಾಗುತ್ತದೆ. ಇದ್ರಿಂದ ಯಾವುದೇ ಪ್ರಾಣಿಗೆ ಹಾನಿಯಾಗೋದಿಲ್ಲ. ಪರಿಸರ ಸ್ನೇಹಿ ಲೆದರ್ ಸಿದ್ಧವಾಗುತ್ತದೆ.
ಅಂಬಾನಿ ಮಗನ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ವಿಶ್ವದ ಕೋಟ್ಯಧಿಪತಿಗಳು!
ಮಲೈ ಕಂಪನಿ ಪ್ರಸ್ತುತ ಬಾಳಿಕೆ ಬರುವ ಚರ್ಮದ ಪರ್ಯಾಯವಾದ ಕೈಚೀಲಗಳು, ವ್ಯಾಲೆಟ್‌ಗಳು, ಲ್ಯಾಪ್‌ಟಾಪ್ ಬ್ಯಾಗ್ ಸೇರಿದಂತೆ ಅನೇಕ ವಸ್ತುಗಳನ್ನು ತಯಾರಿಸುತ್ತಿದೆ. ಮಲೈ ಉತ್ಪನ್ನಗಳ ವಿಶೇಷವೆಂದ್ರೆ ನೀವು ಇಲ್ಲಿ ತಯಾರಾದ ಲೆದರ್ ವಸ್ತುಗಳನ್ನು ವಿಲೇವಾರಿ ಮಾಡಲು ಬಯಸಿದರೆ, ಈ ಉತ್ಪನ್ನವನ್ನು ಮಿಶ್ರಗೊಬ್ಬರ ತ್ಯಾಜ್ಯದೊಂದಿಗೆ ಹಾಕಬಹುದು. ಇದು ನೈಸರ್ಗಿಕವಾಗಿ ಜೈವಿಕ ವಿಘಟನೆಯಾಗುತ್ತದೆ.
ಮಲೈ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ (Foreign) ಪ್ರಸಿದ್ಧಿ ಪಡೆದಿದೆ. ಅನೇಕ ಪ್ರಶಸ್ತಿಗಳನ್ನು ಅದು ಪಡೆದುಕೊಂಡಿದೆ. ಲಂಡನ್ ಡಿಸೈನ್ ವೀಕ್ ಮತ್ತು ಪ್ರೇಗ್ ಡಿಸೈನ್ ವೀಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರದರ್ಶನವು ಮಲೈಗೆ ಸಾಕಷ್ಟು ಮಾನ್ಯತೆ ನೀಡಿದೆ. ಯುಕೆ ಮೂಲದ ಎಥಿಕಲ್ ಲಿವಿಂಗ್ ಮತ್ತು ಜರ್ಮನಿಯ ಲಕ್ಕಿ ನೆಲ್ಲಿಯಂತಹ ಬ್ರ್ಯಾಂಡ್‌ಗಳು ಸಹ ಮಲೈನಿಂದ ಪ್ಲೆದರ್ ಅನ್ನು ಖರೀದಿಸುತ್ತಿವೆ. ಮಲೈ ಉತ್ಪನ್ನಗಳನ್ನು ನೀವು ವೆಬ್ಸೈಟ್ ನಲ್ಲೂ ಖರೀದಿ ಮಾಡಬಹುದು. 1,800 ರೂಪಾಯಿಯಿಂದ 9,500 ರೂಪಾಯಿವರೆಗಿನ ಬ್ಯಾಗ್‌ಗಳು ಮತ್ತು ಶೂಗಳು ಇಲ್ಲಿ ಲಭ್ಯವಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.