ನಿಮ್ಮ ಬೋನಸ್‌ನ ಸರಿಯಾದ ಬಳಕೆ ಹೇಗೆ?

Published : Jun 18, 2018, 04:51 PM ISTUpdated : Jun 18, 2018, 04:53 PM IST
ನಿಮ್ಮ ಬೋನಸ್‌ನ ಸರಿಯಾದ ಬಳಕೆ ಹೇಗೆ?

ಸಾರಾಂಶ

ತಿಂಗಳ ಆರಂಭದಲ್ಲಿ ನಿಮ್ಮ ಮೊಬೈಲ್ ಗೆ ನಿಮ್ಮ ಸ್ಯಾಲರಿ ಕ್ರೆಡಿಟ್ ಆದ ಮೆಸೇಜ್ ಬಂದಾಗ ನಿಮ್ಮ ಮುಖದಲ್ಲಿ ಅಂತಹ ಬದಲಾವಣೆ ಏನೂ ಇರುವುದದಿಲ್ಲ. ಆದರೆ ಅದಕ್ಕೆ ವಾರ್ಷಿಕ  ಬೋನಸ್ ಸಹ ಆಡ್ ಆಗಿದ್ದರೆ ನಿಮ್ಮ ಮುಖದ ಮಂದಹಾಸವೇ ಬೇರೆ ಇರುತ್ತದೆ.

ತಿಂಗಳ ಆರಂಭದಲ್ಲಿ ನಿಮ್ಮ ಮೊಬೈಲ್ ಗೆ ನಿಮ್ಮ ಸ್ಯಾಲರಿ ಕ್ರೆಡಿಟ್ ಆದ ಮೆಸೇಜ್ ಬಂದಾಗ ನಿಮ್ಮ ಮುಖದಲ್ಲಿ ಅಂತಹ ಬದಲಾವಣೆ ಏನೂ ಇರುವುದದಿಲ್ಲ. ಆದರೆ ಅದಕ್ಕೆ ವಾರ್ಷಿಕ  ಬೋನಸ್ ಸಹ ಆಡ್ ಆಗಿದ್ದರೆ ನಿಮ್ಮ ಮುಖದ ಮಂದಹಾಸವೇ ಬೇರೆ ಇರುತ್ತದೆ.

ವಾರ್ಷಿಕ ಬೋನಸ್ ಸಿಕ್ಕಿದೆ, ಇನ್ನೊಂದಿಷ್ಟು ಹೆಚ್ಚಿಗೆನೇ ಖರ್ಚು ಮಾಡಬಹುದು ಎಂದು ಲೆಕ್ಕ ಹಾಕಿ ಕುಳಿತುಕೊಳ್ಳಬೇಡಿ. ಈ ಹಣವನ್ನು ಹೇಗೆ ವ್ಯವಸ್ಥಿತವಾಗಿ ಬಳಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ

ತುರ್ತು ಅಗತ್ಯಕ್ಕೆಂದು ತೆಗೆದಿಡಿ: ಇಎಂಐ ಕಂತುಗಳಿರಬಹುದು, ಬಾಡಿಗೆ, ಶಾಲೆ ಫೀ, ವಿಮಾ ಕಂತು ಸೇರಿದಂತೆ ಅನೇಕ ಕಡೆ ಈ ಹೆಚ್ಚಿನ ಹಣವನ್ನು ಬಳಸಿಕೊಳ್ಳಬಹುದು. 

ಭವಿಷ್ಯದ ಆಲೋಚನೆ: ನಿಮಗಾಗಿ ಅಥವಾ ನಿಮ್ಮ ಪ್ರೀತಿ ಪಾತ್ರರಿಗೆಂದು ಈ ಹಣವನ್ನು ಭವಿಷ್ಯದ ಉದ್ದೇಶದಕ್ಕೆ ಎತ್ತಿಡಬಹುದು.  ಇದನ್ನೇ ಆಧಾರವಾಗಿ ಇಟ್ಟುಕೊಂಡು  ಒಂದು ಬಂಡವಾಳದ ರೀತಿ ಹೂಡಿಕೆ ಮಾಡಬಹುದು.

ಸಂಪೂರ್ಣ ನಿಮಗೋಸ್ಕರ: ಹೊಸ ವರ್ಷಕ್ಕೆಂದು ಕೆಲವು ತೀರ್ಮಾನ ತೆಗೆದುಕೊಂಡು ಅವು ಬಾಕಿ ಉಳಿದಿದ್ದರೆ ಅವೆಲ್ಲವನ್ನು ಪೂರೈಸಲು ಇದು ಒಳ್ಳೆಯ ಸಂದರ್ಭ. ದೇಹದ ಆರೋಗ್ಯ ಹೆಚ್ಚಿಸಲು ಜಿಮ್ ಸೇರಬಹುದು. ಯಾವುದಾದರೊಮದು ಅಗತ್ಯದ ಕೋರ್ಸ್ ಮಾಡಬಹುದು ಇಲ್ಲವೇ ಒಂದು ಅತ್ಯುತ್ತಮ ಪ್ರವಾಸದ ಯೋಜನೆಯನ್ನು ಹಾಕಿಕೊಳ್ಳಬಹುದು.

ರಿಸ್ಕ್ ಫ್ಯಾಕ್ಟರ್: ದೀರ್ಘಕಾಳದ ಹೂಡಿಕೆ ಯನ್ನು ಲೆಕ್ಕ ಹಾಕಿಕೊಂಡು ರಿಸ್ಕ್ ತೆಗೆದುಕೊಳ್ಳಬಹುದು. ಷೇರು ಮಾರುಕಟ್ಟೆ ಇಲ್ಲವೇ ಮ್ಯೂಚುವಲ್ ಫಂಡ್ ನಂತಹ ಆಯ್ಕೆಯನ್ನು ಹುಡುಕುಬಹುದು. ನಿಮ್ಮ ಹಣಕಾಸು ವ್ಯವಸ್ಥೆ ಸ್ಥಿಮಿತವಾಗಿ ಒಂದೇ ಹಂತದಲ್ಲಿ ಇದ್ದರೆ ನೀವು ರಿಸ್ಕ್ ತೆಗೆದುಕೊಳ್ಳಬಹುದು.

ಮತ್ತೊಬ್ಬರಿಗೆ ನೆರವು: ಹೌದು ನಿಮ್ಮ ಹಣಕಾಸು ವ್ಯವಸ್ಥೆ ಸರಿಯಾಗಿದ್ದಲ್ಲಿ ಬೋನಸ್ ಹಣವನ್ನು ನಿಮ್ಮ ಹತ್ತಿರದವರ ಶಿಕ್ಷಣಕ್ಕೆ ಇಲ್ಲವೇ ಅನಾರೋಗ್ಯ ಪೀಡಿತರ ನೆರವಿಗೆ ನೀಡಬಹುದು.  ಸಾಮಾಜಿಕ ಕೆಲಸಕ್ಕೆ ಬಳಸಿದರೆ ಒಂದು ಬಗೆಯ ತೃಪ್ತಿಯೂ ನಿಮ್ಮದಾಗುತ್ತದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!
ರುಪಾಯಿ ಮೌಲ್ಯ ಕುಸಿತದ ಎಫೆಕ್ಟ್‌: ಹೊಸ ವರ್ಷಕ್ಕೆ ದೇಶವಾಸಿಗಳಿಗೆ ಸಿಗಲಿದೆ ಶಾಕ್!