ಡಿಜಿಲಾಕರ್ ಸಹಾಯದಿಂದ, ನಾಗರಿಕರು ಪಾಸ್‌ಪೋರ್ಟ್ ಸೇವಾ ಕೇಂದ್ರದ ಮೂಲಕ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬಹುದು.
ಬೆಂಗಳೂರು (ಮೇ.25): ಸರ್ಕಾರದ ಸೇವೆಗಳು ಜನರಿಗೆ ಅತ್ಯಂತ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಆರಂಭವಾಗಿದ್ದ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ (Digital India campaign) ದೊಡ್ಡ ಮಟ್ಟದ ಉತ್ತೇಜನ ನೀಡಲಾಗಿದೆ. ಈಗ ಪಾಸ್ ಪೋರ್ಟ್ ಸೇವೆಗಳು (passport services ) ಕೂಡ ಡಿಜಿಲಾಕರ್ ಮೂಲಕ ಲಭ್ಯವಾಗುತ್ತಿದೆ. ಯಾವುದೇ ಭೌತಿಕ ದಾಖಲೆಗಳನ್ನು ನೀಡುವ ತೊಂದರೆಗಳಿಲ್ಲದೆ ಪಾಸ್‌ಪೋರ್ಟ್ ಸೇವೆಗಳನ್ನು ಪಡೆಯಲು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ.
ಡಿಜಿ ಲಾಕರ್ (DigiLocker) ಡಿಜಿಟಲ್ ಇಂಡಿಯಾ ಅಡಿಯಲ್ಲಿ ಪ್ರಮುಖ ಉಪಕ್ರಮವಾಗಿದೆ, ಇದು ಭಾರತವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನದ ಆರ್ಥಿಕತೆಯಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ ಪ್ರಮುಖ ಯೋಚನೆಯಾಗಿದೆ. ಡಿಜಿಲಾಕರ್ ಸಾರ್ವಜನಿಕ ಕ್ಲೌಡ್‌ನಲ್ಲಿ ನಾಗರಿಕರು ತಮ್ಮ ದಾಖಲೆಗಳನ್ನು ಹಂಚಿಕೊಳ್ಳುವ ವೇದಿಕೆಯನ್ನು ಒದಗಿಸುತ್ತದೆ, ಈ ಕ್ಲೌಡ್‌ನಲ್ಲಿ ಒದಗಿಸಲಾದ ಎಲ್ಲಾ ದಾಖಲೆಗಳು/ಪ್ರಮಾಣಪತ್ರಗಳ ಲಭ್ಯತೆಯನ್ನು ಸಕ್ರಿಯಗೊಳಿಸುತ್ತದೆ. ಡಿಜಿ ಲಾಕರ್ ಡಿಜಿಟಲ್ ರೀತಿಯಲ್ಲಿ ದಾಖಲೆಗಳು / ಪ್ರಮಾಣಪತ್ರಗಳ (documents/ certificates) ವಿತರಣೆ ಮತ್ತು ಪರಿಶೀಲನೆಗಾಗಿ ಒಂದು ವೇದಿಕೆಯಾಗಿದೆ, ಹೀಗಾಗಿ ಭೌತಿಕ ದಾಖಲೆಗಳ ಬಳಕೆಯನ್ನು ಇದು ತೆಗೆದುಹಾಕುತ್ತದೆ. ಇದು ಕಾಗದ ರಹಿತ ಆಡಳಿತಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದು ಸರ್ಕಾರದ ಗುರಿಯಾಗಿದೆ.
ಡಿಜಿಲಾಕರ್ ಸಹಾಯದಿಂದ, ನಾಗರಿಕರು ಪಾಸ್‌ಪೋರ್ಟ್ ಸೇವಾ ಕೇಂದ್ರದ ಮೂಲಕ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಪೂರಕ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ಪಾಸ್‌ಪೋರ್ಟ್ ಸೇವಾ ಕೇಂದ್ರವು ಆಧಾರ್ (Aadhaar ), ಪ್ಯಾನ್ ಕಾರ್ಡ್ (PAN Card), ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ (SSLC marks sheet), ಡಿಎಲ್ (DL), ರೇಷನ್ ಕಾರ್ಡ್ (Ration Card) ಮತ್ತು ಹೆಚ್ಚಿನವುಗಳಂತಹ ನಿರ್ಣಾಯಕ ದಾಖಲೆಗಳನ್ನು ಅರ್ಜಿಯ ಪ್ರಕ್ರಿಯೆಗೆ ಸರಿಯಾದ ಸಮಯದಲ್ಲಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಇದು ಮೂಲ ಭೌತಿಕ ದಾಖಲೆಗಳನ್ನು ಸಾಗಿಸುವ ಅಗತ್ಯವನ್ನು ನಿವಾರಿಸುತ್ತದೆ, ಇದು ಅಪ್ಲಿಕೇಶನ್ ಕಾರ್ಯವಿಧಾನ ಮತ್ತು ಪ್ರಕ್ರಿಯೆಯ ಸಮಯವನ್ನು ಸರಳಗೊಳಿಸುತ್ತದೆ.
ಡಿಜಿಲಾಕರ್‌ಗೆ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡುವುದು ಹೇಗೆ?
ನೀವು ಡಿಜಿಲಾಕರ್ ಖಾತೆಯನ್ನು ರಚಿಸಿದ್ದರೆ ಮತ್ತು ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿದ್ದರೆ, ಪ್ರಾಂಪ್ಟ್ ಮಾಡಿದಾಗ ನಿಮ್ಮ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳಲು ಪಾಸ್‌ಪೋರ್ಟ್ ಸೇವಾ ವಿಭಾಗವನ್ನು ತೆರೆಯಿರಿ.
ನೀವು ಖಾತೆಯನ್ನು ಹೊಂದಿಲ್ಲದಿದ್ದರೆ, ಪೂರ್ಣ ಹೆಸರು, ಜನ್ಮದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಆಧಾರ್ ಸಂಖ್ಯೆಯಂತಹ ನಿಮ್ಮ ವಿವರಗಳನ್ನು ನಮೂದಿಸುವ ಮೂಲಕ ನೀವು ಸೈನ್ ಅಪ್ ಮಾಡಬಹುದು. ಒಟಿಪಿ ಪರಿಶೀಲನೆಯನ್ನು ಪೂರ್ಣಗೊಳಿಸಿದಾಗ ಖಾತೆ ಓಪನ್ ಆಗುತ್ತದೆ.
POST OFFICE SAVINGS ACCOUNT:ಅಂಚೆ ಕಚೇರಿ ಖಾತೆಯಿಂದ ಹಣ ವರ್ಗಾವಣೆ ಇನ್ನು ಸುಲಭ; ಗ್ರಾಹಕರಿಗೆ ನೆಫ್ಟ್, ಆರ್ ಟಿಜಿಎಸ್ ಸೌಲಭ್ಯ
undefined
ಅಲ್ಲಿಂದ, ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು ನಿಮಗೆ ಸಾಧ್ಯವಾಗುತ್ತದೆ. ನೀವು ನಿರ್ದಿಷ್ಟ ಡಾಕ್ಯುಮೆಂಟ್ ಅನ್ನು ಟ್ಯಾಪ್ ಮಾಡಿದಾಗ, ದಾಖಲೆಗಳಿಂದ ಅದನ್ನು ಪಡೆದುಕೊಳ್ಳಲು ಅಪ್ಲಿಕೇಶನ್‌ಗೆ ಸಹಾಯ ಮಾಡುವ ನಿರ್ದಿಷ್ಟ ಮಾಹಿತಿಯನ್ನು ನಿಮಗೆ ಕೇಳಲಾಗುತ್ತದೆ.
Davos 2022: ಕರ್ನಾಟಕದಲ್ಲಿ 50,000 ಕೋಟಿ ಹೂಡಿಕೆಗೆ ಸಿಎಂ ಒಪ್ಪಂದ
ಪಾಸ್ ಪೋರ್ಟ್ ಗೆ ಅರ್ಜಿ: ಎಲ್ಲಾ ಪೂರಕ ದಾಖಲೆಗಳನ್ನು ನಿಮ್ಮ ಡಿಜಿಲಾಕರ್ ಖಾತೆಗೆ ಅಪ್‌ಲೋಡ್ ಮಾಡಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಂತರ ನೀವು ಪಾಸ್‌ಪೋರ್ಟ್ ಸೇವಾಗೆ ಲಾಗ್ ಇನ್ ಮಾಡಬಹುದು, ವಿವರಗಳನ್ನು ಭರ್ತಿ ಮಾಡಿ ಮತ್ತು ಕೇಳಲಾದ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು. ಈ ವೇಳೆ ನೀವು ಡಿಜಿಲಾಕರ್‌ಗೆ ಪ್ರವೇಶವನ್ನು ನೀಡಬೇಕಾಗುತ್ತದೆ. ನಿಮ್ಮ ಡಿಜಿಲಾಕರ್ ಖಾತೆಗೆ ಸೈನ್ ಇನ್ ಮಾಡುವ ಮೂಲಕ ನೀವು ಹಾಗೆ ಮಾಡಬಹುದು. ನೀವು ಒಟಿಪಿ ಅನ್ನು ನಮೂದಿಸಿದಾಗ ಮತ್ತು ನಿಮ್ಮ ಡಿಜಿಲಾಕರ್ ಖಾತೆಯನ್ನು ಪ್ರವೇಶಿಸಲು ಪಾಸ್‌ಪೋರ್ಟ್ ಸೇವಾಗೆ ಒಪ್ಪಿಗೆ ನೀಡಿದಾಗ, "ಡಿಜಿಲಾಕರ್ ಪ್ರವೇಶವನ್ನು ನೀಡಿ" ಬದಲಿಗೆ "ಡಿಜಿಲಾಕರ್‌ನಿಂದ ಪಡೆದುಕೊಳ್ಳಿ" ಆಯ್ಕೆಯನ್ನು ನೀವು ನೋಡುತ್ತೀರಿ. ನೀವು ಅದನ್ನು ಕ್ಲಿಕ್ ಮಾಡಿದಾಗ, ನೀವು ದೃಢೀಕರಣವನ್ನು ಪಡೆಯುತ್ತೀರಿ.