'ನನ್ನ ಹೆಂಡ್ತಿ ವಂಡರ್‌ಫುಲ್‌, ಅವಳನ್ನ ದಿಟ್ಟಿಸೋದೆ ನನಗೆ ಖುಷಿ' L&T ಚೇರ್ಮನ್‌ಗೆ ಟಾಂಗ್‌ ನೀಡಿದ್ರು ಆನಂದ್‌ ಮಹೀಂದ್ರಾ!

By Santosh Naik  |  First Published Jan 11, 2025, 7:29 PM IST

ಎಲ್&ಟಿ ಚೇರ್ಮನ್ ವಾರಕ್ಕೆ 90 ಗಂಟೆ ಕೆಲಸದ ಹೇಳಿಕೆಗೆ ಆನಂದ್ ಮಹೀಂದ್ರಾ ತಿರುಗೇಟು ನೀಡಿದ್ದಾರೆ. ಕೆಲಸದ ಗಂಟೆಗಳಿಗಿಂತ ಗುಣಮಟ್ಟ ಮುಖ್ಯ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ವೈಯಕ್ತಿಕ ಜೀವನದ ಬಗ್ಗೆಯೂ ಅವರು ಮಾತನಾಡಿದ್ದಾರೆ.


ಬೆಂಗಳೂರು (ಜ.11): ದೇಶದಲ್ಲಿ ವಾರದಲ್ಲಿ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ, ದೇಶದ ಯುವ ಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದಿದ್ದರು. ಈ ಬಗ್ಗೆ ಸಾಕಷ್ಟು ಪರ-ವಿರೋಧದ ಮಾತುಗಳಾದವು. ಇದರ ನಡುವೆ ದೇಶದ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಮಾಡುವ ಕಂಪನಿ ಎಲ್‌ & ಟಿ ಚೇರ್ಮನ್‌ ಎಸ್‌ಎನ್‌ ಸುಬ್ರಹ್ಮಣ್ಯನ್‌ ಇತ್ತೀಚೆಗೆ ಕಂಪನಿಯ ಆಂತರಿಕ ಸಭೆಯಲ್ಲಿ ಆಡಿರುವ ಮಾತುಗಳು ದೇಶದ ಜನರ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ವಾರಕ್ಕೆ ಕನಿಷ್ಠ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋದು ತಮ್ಮ ಅಭಿಪ್ರಾಯ ಎಂದಿದ್ದರು. ಅದರೊಂದಿಗೆ ಭಾನುವಾರವೂ ನಿಮ್ಮಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ ಅನ್ನೋದರ ಬಗ್ಗೆ ವಿಷಾದವಿದೆ. ಭಾನುವಾರ ಎಷ್ಟೂ ಅಂತಾ ಹೆಂಡ್ತಿಯ ಮುಖವನ್ನು ನೋಡುತ್ತಾ ಇರುತ್ತೀರಿ ಎಂದು ಹೇಳಿದ್ದರು.

ಎಲ್‌&ಟಿ ಚೇರ್ಮನ್‌ ಅವರ ಈ ಮಾತಿಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈಗ ಮಹೀಂದ್ರಾ & ಮಹೀಂದ್ರಾ ಕಂಪನಿಯ ಚೇರ್ಮನ್‌ ವರ್ಕ್‌ ಲೈಫ್‌ ಬ್ಯಾಲೆನ್ಸ್‌ ಬಗ್ಗೆ ಮಾತನಾಡುತ್ತಾ,ಎಲ್‌&ಟಿ ಚೇರ್ಮನ್‌ ಅವರ ಮಾತಿಗೂ ತಿರುಗೇಟು ನೀಡಿದ್ದಾರೆ.

Tap to resize

Latest Videos

ನೀವು ವಾರದಲ್ಲಿ ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತೀರಿ ಅನ್ನೋ ಪ್ರಶ್ನೆಗೆ, 'ನಾನು ಈ ಪ್ರಶ್ನೆಯನ್ನು ಯಾವಾಗಲೂ ಅವಾಯ್ಡ್‌ ಮಾಡಲು ಬಯಸುತ್ತೇನೆ. ಎಷ್ಟು ಸಮಯ ಕೆಲಸ ಮಾಡುತ್ತೀರಿ ಅನ್ನೋದು ನನಗೆ ಯಾವತ್ತಿಗೂ ಪ್ರಶ್ನೆಯಲ್ಲ. ನನ್ನ ವರ್ಕ್‌ ಎಷ್ಟು ಕ್ವಾಲಿಟಿಯಲ್ಲಿತ್ತು ಅನ್ನೋದೇ ಮುಖ್ಯ. ನಾನು ಎಷ್ಟು ಗಂಟೆ ಕೆಲಸ ಮಾಡುತ್ತೀನಿ ಅನ್ನೋ ಪ್ರಶ್ನೆಗಳನ್ನ ಕೇಳಬೇಡಿ'ಎಂದು ಹೇಳಿದ್ದಾರೆ.

ವಾರಕ್ಕೆ 90 ಗಂಟೆ ಕೆಲಸ ಮಾಡಿ ಎನ್ನುವ L&T ಚೇರ್ಮನ್‌ ಸ್ಯಾಲರಿ ಸಾಮಾನ್ಯ ಉದ್ಯೋಗಿಗಿಂತ 530 ಪಟ್ಟು ಹೆಚ್ಚು!

ನೀವು ಸೋಶಿಯಲ್‌ ಮೀಡಿಯಾದಲ್ಲಿ ದಿನಕ್ಕೆ ಎಷ್ಟು ಗಂಟೆಯನ್ನು ಕಳೆಯುತ್ತೀರಿ ಎನ್ನುವ ಪ್ರಶ್ನೆಗೆ, 'ನಾನು ಒಮ್ಮೊಮ್ಮೆ ನನ್ನಲ್ಲೇ ಈ ಪ್ರಶ್ನೆ ಕೇಳುತ್ತಿರುತ್ತೇನೆ. ನನ್ನ ಟ್ವೀಟ್‌ಅನ್ನು ನೋಡಿದವರಿಗೆ ಗೊತ್ತಿರುತ್ತದೆ. ನನಗೆ ಕಚೇರಿಯಲ್ಲಿ ಅದ್ಭುತವಾದ ಟೀಮ್‌ ಇದೆ. ಅವರು ನನ್ನ ತಲೆಯಲ್ಲೇ ಉಳಿದುಕೊಂಡು ಬಿಟ್ಟಿದ್ದಾರೆ. ನೀವ್ಯಾಕೆ ಟ್ವಿಟರ್‌ನಲ್ಲಿದ್ದೀರಿ, ಕೆಲಸ ಮಾಡಿ ಅನ್ನೋ ಕಾಮೆಂಟ್‌ಗಳು ಬರುತ್ತಲೇ ಇರುತ್ತದೆ. ಒಂದು ವಿಚಾರ ಇಲ್ಲಿ ತಿಳಿಸುತ್ತೇನೆ. ನನಗೆ ಏಕಾಂಗಿತನ ಕಾಡುತ್ತಿದ್ದೆ ಅನ್ನೋ ಕಾರಣಕ್ಕಾಗಿ ನಾನು ಎಕ್ಸ್‌ನಲ್ಲಿಲ್ಲ. ನನಗೆ ಸುಂದರವಾದ ಹೆಂಡತಿಯಿದ್ದಾಳೆ. ಆಕೆಯನ್ನು ದಿಟ್ಟಿಸಿ ನೋಡೋದು ನನಗೆ ಖುಷಿ ಕೊಡುತ್ತದೆ. ಆಕೆಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೇನೆ. ನಾನು ಅಲ್ಲಿ ಸ್ನೇಹಿತರಲ್ಲಿ ಮಾಡಿಕೊಳ್ಳುವ ಸಲುವಾಗಿ ಇಲ್ಲ. ಆದರೆ, ಎಕ್ಸ್‌ ಒಂದು ಅಮೇಜಿಂಗ್‌ ಬ್ಯುಸಿನೆಸ್‌ ಟೂಲ್‌ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಅದೊಂದೇ ಫ್ಲಾಟ್‌ಫಾರ್ಮ್‌ನಿಂದ ನನಗೆ 11 ಮಿಲಿಯನ್‌ ಜನರಿಂದ ಫೀಡ್‌ಬ್ಯಾಕ್‌ ಬರುತ್ತದೆ' ಎಂದು ಆನಂದ್‌ ಮಹೀಂದ್ರಾ ಹೇಳಿದ್ದಾರೆ.

'ನಿಮ್ಮ ಮನೆಯ ಐರನ್ ಡೋಮ್' ಡೆಂಗ್ಯೂ ತಡೆಯಲು ಆನಂದ್‌ ಮಹೀಂದ್ರಾ ಹೊಸ ಐಡಿಯಾ!

ಆನಂದ್‌ ಮಹೀಂದ್ರಾ ಅವರ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅದರಲ್ಲೂ ಅವರ ತಮ್ಮ ಪತ್ನಿಯ ಬಗ್ಗೆ ಹೇಳಿದಾಗ ಇಡೀ ಆವರಣದಲ್ಲಿದ್ದ ವೀಕ್ಷಕರು ಕರತಾಡನ ಮಾಡಿದ್ದಾರೆ.
 

 
 
 
 
 
 
 
 
 
 
 
 
 
 
 

A post shared by Firstpost (@firstpost)

click me!