ಅಕೌಂಟ್​ಗೆ ಅಚಾನಕ್​ ದುಡ್ಡು ಬಂದ್ರೆ ಕೂಡ್ಲೇ ಬ್ಯಾಲೆನ್ಸ್​ ಚೆಕ್​ ಮಾಡ್ಲೇಬೇಡಿ! ಇದು ಹೊಸ ಸ್ಕ್ಯಾಮ್- ಡಿಟೇಲ್ಸ್​ ಇಲ್ಲಿದೆ...

By Suchethana D  |  First Published Jan 11, 2025, 7:28 PM IST

ಅಕೌಂಟ್​ಗೆ ಅಚಾನಕ್​ ಹೆಚ್ಚು ದುಡ್ಡು ಬಂದ್ರೆ ಕೂಡ್ಲೇ ಬ್ಯಾಲೆನ್ಸ್​ ಚೆಕ್​ ಮಾಡ್ಲೇಬೇಡಿ! ಇದು ಹೊಸ ಸ್ಕ್ಯಾಮ್. ಏನಿದು Jumped deposit scam? 
 


ಈಗ ಹೊಸ ಹೊಸ ಡಿಟಿಜಲ್​ ಸ್ಕ್ಯಾಮ್​ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಯಾವ ರೀತಿಯಲ್ಲಿ ಜನರನ್ನು ಮರುಳು ಮಾಡಿ, ಕುಳಿತಲ್ಲಿಯೇ ಅವರಿಗೆ ಟೋಪಿ ಹಾಕಬಹುದು ಎಂದು ತಿಳಿದುಕೊಳ್ಳುವ ದೊಡ್ಡ ಗ್ಯಾಂಗ್​ ಕೆಲಸ ಮಾಡುತ್ತಿದೆ. ಜನರು ಒಂದು ಸ್ಕ್ಯಾಮ್​ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಂತೆಯೇ ಹೊಸ ಸ್ಕ್ಯಾಮ್​ ತೆರೆದುಕೊಳ್ಳುತ್ತದೆ. ನಿಮ್ಮ ಅರಿವಿಗೆ ಬಾರದೇ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ಇದಾಗಲೇ ಅದೆಷ್ಟೋ ರೀತಿಯ ಸೈಬರ್​ ಕ್ರೈಮ್​, ಡಿಜಿಟಲ್​ ಅರೆಸ್ಟ್​... ಹೀಗೆ ಬಂದಿವೆಯೋ ಲೆಕ್ಕಕ್ಕಿಲ್ಲ. ಅದರಲ್ಲೀಗ ಹೊಸ ಸೇರ್ಪಡೆ Jumped deposit scam. ನೀವು ನಿಮ್ಮ ಅಕೌಂಟ್​ಗೆ ಹೆಚ್ಚು ಹಣ ಕ್ರೆಡಿಟ್​ ಆಗಿದೆ ಎನ್ನುವ ಮೆಸೇಜ್​ ಬಂದ ತಕ್ಷಣ ಬ್ಯಾಂಕ್​ ಬ್ಯಾಲೆನ್ಸ್​ ನೋಡಲು ಹೋಗುವುದೇ ಈ ಖದೀಮರಿಗೆ ಇರುವ ಬಂಡವಾಳ. 

ಇದು ಹೇಗೆ ಕೆಲಸ ಮಾಡುತ್ತೆ ಎಂದರೆ, ಈ ಖದೀಮರು ಮೊದಲು ನಿಮ್ಮ ಅಕೌಂಟ್​ ಚಿಕ್ಕ ಮೊತ್ತದ ಹಣವನ್ನು ಹಾಕುತ್ತಾರೆ. 200, 300 ಹೀಗೆ. ನಿಮಗೆ ಮೆಸೇಜ್​ ಬಂದ ತಕ್ಷಣ, ನೀವು ಯುಪಿಐ, ಫೋನ್​ಪೇ, ಪೇಟಿಎಂ ಇವುಗಳ ಮೂಲಕ ಚೆಕ್​ ಮಾಡುತ್ತೀರಿ ಎನ್ನುವುದು ಅವರಿಗೆ ಗೊತ್ತು. ಅದನ್ನೇ ಅವರು ಕಾಯುತ್ತಲೇ ಇರುತ್ತಾರೆ. ನೀವು ಬ್ಯಾಲೆನ್ಸ್​ ಚೆಕ್​ ಮಾಡಿದ್ದು ಗೊತ್ತಾದ ತಕ್ಷಣ, ನಿಮಗೆ ಅಲ್ಲೊಂದು ಮೆಸೇಜ್​ ಬರುತ್ತದೆ. ಬೈ ಮಿಸ್ಟೆಕ್​ ನಿಮ್ಮ ಅಕೌಂಟ್​ಗೆ ದುಡ್ಡು ಹಾಕಿಬಿಟ್ಟಿದ್ದೇನೆ. ದಯವಿಟ್ಟು ಅದನ್ನು ರಿಟರ್ನ್​ ಮಾಡಿ ಎಂದು.

Tap to resize

Latest Videos

ಇಂಟರ್​ನೆಟ್​ ಇಲ್ಲದೆಯೂ ಬ್ಯಾಂಕಿಂಗ್​ ವ್ಯವಹಾರ ಫೋನ್​ನಲ್ಲಿ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ...

ಇಷ್ಟೇ ಆಗಿದ್ದರೆ ಪರವಾಗಿಲ್ಲ. ನಿಮ್ಮನ್ನು ಮಾತಿನಲ್ಲಿಯೇ ಮರಳು ಮಾಡುವ ಅವರು, ನಾನು ಅಮೌಂಟ್​ ಕಳಿಸುತ್ತೇನೆ. ಅದನ್ನೇ ರಿಟರ್ನ್​ ಮಾಡಿ ಎನ್ನುತ್ತಾರೆ. ನೀವು ಅಯ್ಯೋ ಪಾಪ ಯಾರೋ ತಪ್ಪಾಗಿ ಕಳುಹಿಸಿದ್ದಾರೆ ಎಂದುಕೊಂಡು ಅವರು ಕಳಿಸಿದ ಕಲೆಕ್ಷನ್​ ರಿಕ್ವೆಸ್ಟ್​ ಅನ್ನು ಸರಿಯಾಗಿ ನೋಡದೇ ಪೇ ಮಾಡಿಬಿಡುತ್ತೀರಾ. ಅಲ್ಲೇ ಮೋಸ ಹೋಗುವುದು. ಅವರು ನಿಮಗೆ 200 ಕಳುಹಿಸಿದ್ದರೆ, ಬರೆಯುವಾಗಿ 2000 ಎಂದು ಬರೆದಿರುತ್ತಾರೆ. ಅದನ್ನು ನೀವು ಗಮನಿಸುವುದೇ ಇಲ್ಲ. ಮಾತಿನಲ್ಲಿ ಮರುಳು ಮಾಡುವ ಅವರು ನಿಮ್ಮನ್ನು ಸುಲಭದಲ್ಲಿ ವಂಚಿಸುತ್ತಾರೆ. ಇಷ್ಟೇ ಅಲ್ಲದೇ, ಅವರು ಕಲೆಕ್ಷನ್​ ರಿಕ್ವೆಸ್ಟ್​ ಕಳುಹಿಸಿದ ಬಳಿಕ ಒಂದು OTP ಬರುತ್ತದೆ. ಅದನ್ನು ಹೇಳಲು ನಿಮಗೆ ಹೇಳುತ್ತಾರೆ. ಆಗ ನೀವು ಅಯ್ಯೋ ಪಾಪ ಎಂದುಕೊಂಡು ಆ ಓಟಿಪಿ ಹೇಳಿದರೆ, ನಿಮ್ಮ ಬ್ಯಾಂಕ್​ನಲ್ಲಿ ಇರುವ ಎಲ್ಲಾ ಹಣವೂ ಗುಳುಂ ಆಗಿಬಿಡುತ್ತದೆ!

ಇದಕ್ಕೆ Jumped deposit scam ಎಂದು ಹೆಸರಿಸಲಾಗಿದೆ. ಈ ಹಿನ್ನೆಲೆಯಲ್ಲಿ, ನಿಮಗೆ ಯಾವುದೋ ದುಡ್ಡು ಕ್ರೆಡಿಟ್​ ಆಗಿರುವ ಮೆಸೇಜ್​ ಬಂದರೆ, ಕೂಡಲೇ ಬ್ಯಾಂಕ್​ ಬ್ಯಾಲೆನ್ಸ್​ ಚೆಕ್​  ಮಾಡಲು ಹೋಗಬೇಡಿ. 15-20 ನಿಮಿಷದ ಒಳಗೆ ಆ ಖದೀಮರು ಕಳುಹಿಸಿರುವ ಓಟಿಪಿ ಅವಧಿ ಮುಗಿಯುತ್ತದೆ. ನೀವು ಬ್ಯಾಲೆನ್ಸ್​ ಚೆಕ್​  ಮಾಡಲು ಹೋದರೆ, ಸುಲಭದಲ್ಲಿ ನಿಮ್ಮನ್ನು ವಂಚಿಸಿಬಿಡುತ್ತಾರೆ. ಒಂದು ವೇಳೆ ಬ್ಯಾಲೆನ್ಸ್​ ಚೆಕ್​ ಮಾಡೇ ಬಿಟ್ಟಿರಿ ಎಂದುಕೊಳ್ಳಿ. ಆಗ ಅವರು ಕಳುಹಿಸುವ ಕಲೆಕ್ಷನ್​ ರಿಕ್ವೆಸ್ಟ್​ನಲ್ಲಿ ಇರುವ ಹಣ ಚೆನ್ನಾಗಿ ನೋಡಿ, ಓಟಿಪಿ ಯಾವುದೇ ಕಾರಣಕ್ಕೂ ಹೇಳಲೇಬೇಡಿ. ಮಾತಿನಲ್ಲಿ ಅವರು ಮರಳು ಮಾಡಲು ಶುರು ಮಾಡಿದರೆ, ಅವರಿಗೆ ರಿಪ್ಲೈ ಮಾಡಲು ಹೋಗಲೇಬೇಡಿ. ಇದಾಗಲೇ ಹಲವು ಸುಶಿಕ್ಷಿತರೇ ಈ ವಂಚನೆಗೆ ಬಲಿಯಾಗಿದ್ದಾರೆ. ಒಮ್ಮೆ ಹಣ ಹೋದರೆ ಅದು ಬರುವುದು ಎಷ್ಟು ಕಷ್ಟ ಎನ್ನುವುದು ಗೊತ್ತೇ ಇದೆಯಲ್ವಾ? 

ಪ್ರತಿಯೊಬ್ಬರೂ ಲಕ್ಷಾಧೀಶ್ವರರಾಗಲು SBIನಿಂದ ಹೊಸ ಯೋಜನೆ 'ಹರ್​ ಘರ್​ ಲಖ್​ಪತಿ': ವಿವರ ಇಲ್ಲಿದೆ...

click me!