LPG Cylinder| LPG ಗ್ರಾಹಕರಿಗೆ ಗುಡ್‌ನ್ಯೂಸ್‌, ಈಗ ಪ್ರತಿ ಸಿಲಿಂಡರ್ ಬೆಲೆ 300ರೂ. ಅಗ್ಗ!

Published : Nov 23, 2021, 08:52 PM ISTUpdated : Nov 23, 2021, 09:01 PM IST
LPG Cylinder| LPG ಗ್ರಾಹಕರಿಗೆ ಗುಡ್‌ನ್ಯೂಸ್‌, ಈಗ ಪ್ರತಿ ಸಿಲಿಂಡರ್  ಬೆಲೆ 300ರೂ. ಅಗ್ಗ!

ಸಾರಾಂಶ

* ಗಗನಕ್ಕೇರಿದ್ದ ಎಲ್‌ಪಿಜಿ ಸಿಲಿಂಡರ್ ದರ * ಗ್ರಾಹಕರ ಮೇಲಿನ ಹೊರೆ ಇಳಿಸಲು ಮುಂದಾದ ಸರ್ಕಾರ * ಇನ್ನು ಪ್ರತಿ ಸಿಲಿಂಡರ್ ಬೆಲೆ 300 ರೂಪಾಯಿ ಅಗ್ಗ

ನವದೆಹಲಿ(ನ.23): LPG ಸಿಲಿಂಡರ್ ಬೆಲೆ (LPG Price) ಗಗನಕ್ಕೇರುತ್ತಿದ್ದು, ಕೆಲವೆಡೆ ಸಿಲಿಂಡರ್ ಬೆಲೆ 1000 ರೂಪಾಯಿ ಗಡಿಯನ್ನು ಮುಟ್ಟುವ ಹಂತದಲ್ಲಿದೆ. ಹೀಗಿರುವಾಗ, ಪ್ರತಿ ಸಿಲಿಂಡರ್‌ಗೆ 300 ರೂಪಾಯಿಗಳವರೆಗೆ ಉಳಿಸುವ ಅವಕಾಶ ಇಲ್ಲಿದೆ. ಹೌದು ಪ್ರಯೋಜನವನ್ನು ಪಡೆಯಲು ಬಯಸುವ ಗ್ರಾಹಕರು LPG ಸಿಲಿಂಡರ್‌ ಸಬ್ಸಿಡಿಗಾಗಿ (Subsidy) ಅರ್ಜಿ ಸಲ್ಲಿಸಬಹುದು ಮತ್ತು ರೂ 300 ವರೆಗೆ ಉಳಿಸಬಹುದು. ಇದು ದೇಶಾದ್ಯಂತ ಅನೇಕ ಕುಟುಂಬಗಳಿಗೆ ಸಮಾಧಾನ ಕೊಟ್ಟಿದೆ. ಕೆಲ ಸಮಯದ ಹಿಂದೆ, ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್‌ಗೆ 594ರೂ  ಕ್ಕೆ ಲಭ್ಯವಿತ್ತು, ಆದರೀಗ ಇದು 834 ರೂ ನಿಂದ ಸುಮಾರು 1,000 ರೂಪಾಯಿ ಗಡಿ ತಲುಪಿದೆ. ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಮೇಲೆ ಸಬ್ಸಿಡಿಯ ಲಾಭವನ್ನು ಪಡೆಯುತ್ತಿರುವ ಗ್ರಾಹಕರು ತಕ್ಷಣದ ಫಲಾನುಭವಿಗಳಾಗುತ್ತಾರೆ. ಪ್ರಯೋಜನಗಳನ್ನು ಪಡೆಯಲು, ಅವರು ತಮ್ಮ ಸಬ್ಸಿಡಿ ಖಾತೆಯನ್ನು ತಮ್ಮ ಆಧಾರ್ ಕಾರ್ಡ್‌ನೊಂದಿಗೆ (Aadhar card) ಲಿಂಕ್ ಮಾಡಬೇಕು.

ಪೆಟ್ರೋಲ್ ಡೀಸೆಲ್ ಬಳಿಕ ಇದೀಗ LPG ಸಿಲಿಂಡರ್ ಬೆಲೆ ಇಳಿಕೆಗೆ ಒತ್ತಾಯ!

ಬೆಲೆ ಏರಿಕೆ ಸಾಮಾನ್ಯ ಜನರ ಮೇಲೆ ಸೃಷ್ಟಿಸಿರುವ ಒತ್ತಡವನ್ನು ನೋಡಿ, ಸಬ್ಸಿಡಿ ರೂಪದಲ್ಲಿ ನೀಡಲಾದ ವಿನಾಯಿತಿಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಈಗ ಪ್ರತಿ ಸಿಲಿಂಡರ್‌ಗೆ ಹೆಚ್ಚಿನ ರಿಯಾಯಿತಿಯ ಲಾಭವನ್ನು ಪಡೆಯುತ್ತಾರೆ. ಈ ಹಿಂದೆ ಸಿಲಿಂಡರ್ ಖರೀದಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ಕೇವಲ 20 ರಿಂದ 30 ರೂ.ಗೆ ಇಳಿಸಲಾಗಿದ್ದು, ಇದೀಗ ಮತ್ತೆ ಸುಮಾರು 300 ರೂ.ಗೆ ಏರಿಕೆ ಮಾಡಲಾಗಿದೆ.ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳುವವರಿಗೆ ಈ ಸಬ್ಸಿಡಿ ಯೋಜನೆಯಿಂದ ಗರಿಷ್ಠ ಲಾಭ ಸಿಗಲಿದೆ. ಈ ಹಿಂದೆ 174.86 ರೂ.ಗಳ ಸಹಾಯಧನವನ್ನು, ಈಗ 312.48 ರೂ.ಗೆ ಹೆಚ್ಚಿಸಲಾಗಿದೆ.

ಈ ಹಿಂದೆ ರೂ 153.86 ಸಬ್ಸಿಡಿ ಪಡೆದ ಇತರರಿಗೆ ಈಗ ರೂ 291.48 ವರೆಗೆ ಸಬ್ಸಿಡಿ ಸಿಗುತ್ತದೆ. ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ ನಿಮ್ಮ ಸಬ್ಸಿಡಿ ಹೊಂದಿರುವ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿ.

ಸಬ್ಸಿಡಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಹೇಗೆ?

* Indane LPG ಗ್ಯಾಸ್ ಸಿಲಿಂಡರ್‌ನ ಗ್ರಾಹಕರು, ಎಲ್ಲಾ ಮಾಹಿತಿಯನ್ನು ಪಡೆಯಲು  cx.indianoil.in ಗೆ ಭೇಟಿ ನೀಡಿ.

* ಭಾರತ್ ಗ್ಯಾಸ್ (Bharat Gas) ಕಂಪನಿಯ ಗ್ರಾಹಕರು ತಮ್ಮ ಅಧಿಕೃತ ವೆಬ್‌ಸೈಟ್ - ebharatgas.com ಗೆ ಭೇಟಿ ನೀಡಬಹುದು.

* ಸಂಬಂಧಪಟ್ಟ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಸಬ್ಸಿಡಿ ಹೊಂದಿರುವ ಬ್ಯಾಂಕ್ ಖಾತೆಯೊಂದಿಗೆ ನೇರವಾಗಿ ಲಿಂಕ್ ಮಾಡಬಹುದು.

ಗ್ಯಾಸ್ ಬೆಲೆ ಇಳಿಕೆಗೆ ಆಗ್ರಹ

 

ಕೇಂದ್ರ ಸರ್ಕಾರದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ನಿರ್ಧಾರವನ್ನು ಮೇನಕಾ ಗಾಂಧಿ(Maneka Gandhi) ಸ್ವಾಗತಿಸಿದ್ದಾರೆ. ಇದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದರ ಜೊತೆಗೆ LPG ಸಿಲಿಂಡರ್ ಬೆಲೆ ಕೂಡ ಇಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಮೇನಕಾ ಗಾಂಧಿ ಒತ್ತಾಯಿಸಿದ್ದಾರೆ.

ಮೇನಕಾ ಗಾಂಧಿ ಕ್ಷೇತ್ರವಾದ ದೆಹಲಿ ಬಜಾರ್ ಟೌನ್‌ಶಿಪ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೇನಕಾ ಗಾಂಧಿ, LPG ಸಿಲಿಂಡರ್ ಬೆಲೆ ಇಳಿಕೆ ಕುರಿತು ಕೇಂದ್ರವನ್ನು ಒತ್ತಾಯಿಸಿದ್ದಾರೆ. LPG ಸಿಲಿಂಡರ್ ಬೆಲೆ ಇಳಿಕೆ ಮಾಡಿದರೆ ಎಲ್ಲಾ ಕುಟುಂಬಗಳ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಮೇನಕಾ ಗಾಂಧಿ ಹೇಳಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!