Phoebe Gates: ರೂಪದಲ್ಲೂ,ಗುಣದಲ್ಲೂಅಪ್ಪನಿಗೆ ತಕ್ಕ ಮಗಳು

By Suvarna News  |  First Published Nov 23, 2021, 1:57 PM IST

ಬಿಲ್ ಗೇಟ್ಸ್ (Bill Gates)ಹಾಗೂ ಮೆಲಿಂಡಾ ಗೇಟ್ಸ್ (Melinda Gates) ದಂಪತಿ ಹಿರಿಯ ಮಗಳು ಜೆನ್ನಿಫರ್ (Jennifer)ಅದ್ದೂರಿ ವಿವಾಹ ಇತ್ತೀಚೆಗೆ ಜಗತ್ತಿನ ಗಮನ ಸೆಳೆದಿತ್ತು. ಆದ್ರೆ ಈ ದಂಪತಿಯ ಕಿರಿಯ ಮಗಳ ಬಗ್ಗೆ ಬಹುತೇಕರಿಗೆ ಹೆಚ್ಚಿನ ಮಾಹಿತಿಯಿಲ್ಲ.


ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಹಾಗೂ ಮೆಲಿಂಡಾ ಗೇಟ್ಸ್ (Melinda Gates) ದಂಪತಿ (Couple) ವಿಚ್ಛೇದನ (Divorce) ಪಡೆದಿದ್ರೂ ಇತ್ತೀಚೆಗೆ ತಮ್ಮ ಮೊದಲ ಮಗಳ ಮದುವೆಯನ್ನು ಅದ್ದೂರಿಯಾಗಿ (Lavish) ನಡೆಸಿದ್ದರು. ಈ ದಂಪತಿಯ ಹಿರಿಯ ಪುತ್ರಿ (Elder daughter) ಜೆನ್ನಿಫರ್ (Jennifer) ಈಜಿಪ್ಟ್ನ ಅಶ್ವಾರೋಹಿ (equestrian) ನಯೆಲ್ ನಸ್ಸರ್ (Nayel Nassar) ಅವರನ್ನು ವರಿಸೋ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದರು.ಆದ್ರೆ ಇವರ ಕಿರಿಯ ಪುತ್ರಿ ಫೋಬೆ (Phoebe) ಪರಿಚಯ ಬಹುತೇಕರಿಗಿಲ್ಲ. ಸೋಷಿಯಲ್ ಮೀಡಿಯಾದಿಂದ (Social Media) ಅಂತರ ಕಾಯ್ದುಕೊಂಡಿರೋ ಫೋಬೆ ಬಹುತೇಕ ತಂದೆ ಗೇಟ್ಸ್ ಹವ್ಯಾಸಗಳನ್ನೇ ಬೆಳೆಸಿಕೊಂಡಿರೋದು ವಿಶೇಷ. ಈಕೆ ಬಗ್ಗೆ ತಿಳಿಯಲೇಬೇಕಾದ ಅನೇಕ ಆಸಕ್ತಿಕರ ಸಂಗತಿಗಳಿವೆ.

ಎಲ್ಲರಂತೆ ಬಾಲ್ಯ
ವಿಶ್ವದ ಶ್ರೀಮಂತ ವ್ಯಕ್ತಿಯ ಮನೆ ಹೇಗಿರುತ್ತೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ವಾಷಿಂಗ್ಟನ್ (Washington) ನಲ್ಲಿರೋ 124 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಲೇಕ್ಫ್ರಂಟ್ ಇಕೋ ಮ್ಯಾನ್ಷಿನ್  (lakefront eco-mansion ) ಅಥವಾ ಕ್ಯಾನಾಡು 2.0 (Xanadu 2.0) ಎಂದೇ ಖ್ಯಾತಿ ಹೊಂದಿರೋ ಬಂಗಲೆಯಲ್ಲಿ ಪಾಲಕರೊಂದಿಗೆ 19 ವರ್ಷದ ಫೋಬೆ ವಾಸಿಸುತ್ತಿದ್ದಾರೆ. ಕೃತಕ ಬೀಚ್, ಜೀವಂತ ಮೀನುಗಳಿರೋ ಕೃತಕ ಜಲಪಾತ, ಈಜುಕೊಳ ಮುಂತಾದ ಐಷಾರಾಮಿ ಸವಲತ್ತುಗಳು ಈ ಬಂಗಲೆಯಲ್ಲಿವೆ. ಇಷ್ಟೆಲ್ಲ ಸವಲತ್ತುಗಳಿದ್ರೂ ಗೇಟ್ಸ್ ದಂಪತಿ ತಮ್ಮ ಮಕ್ಕಳನ್ನು ಸಾಮಾನ್ಯರಂತೆ ಬೆಳೆಸಿದ್ದಾರೆ. ಪಾತ್ರೆ ತೊಳೆಯೋದ್ರಿಂದ ಹಿಡಿದು ಪ್ರತಿ ಮನೆಗೆಲಸಗಳನ್ನು ಮಕ್ಕಳಿಗೆ ಕಲಿಸಿದ್ದಾರೆ. ಹೀಗಾಗಿ ಫೋಬೆ ಸೇರಿದಂತೆ ಗೇಟ್ಸ್ ಮಕ್ಕಳು ಮನೆಗೆಲಸಗಳನ್ನು ಮಾಡಿಯೇ ಬೆಳೆದವರು.

Tap to resize

Latest Videos

undefined

ಜೀರೋದಿಂದ ಬಂದು ಉದ್ಯಮದಲ್ಲಿ ಹೀರೋ ಆದ ಕತೆ ಇದು

ನೃತ್ಯಗಾರ್ತಿಯಾಗೋ ಬಯಕೆ
ಫೋಬೆ ಸೇರಿದಂತೆ ಗೇಟ್ಸ್‌ ಮಕ್ಕಳೆಲ್ಲರೂ ತಂದೆ ಓದಿದ್ದ ಸಿಯಾಟೆಲ್ನ ಖಾಸಗಿ ಲೇಕ್‌ಸೈಡ್‌ ಹೈಸ್ಕೂಲ್‌ನಲ್ಲೇ (Seattle’s private Lakeside High School) ವ್ಯಾಸಂಗ ಮಾಡಿದ್ದಾರೆ. ನೃತ್ಯಗಾರ್ತಿಯಾಗೋ ಬಯಕೆ ಹೊಂದಿದ್ದ ಫೋಬೆ ನಂತರ ನ್ಯೂಯಾರ್ಕ್‌ನ ಪ್ರೊಫೇಷನಲ್‌ ಚಿಲ್ಡ್ರನ್ಸ್‌ ಸ್ಕೂಲ್‌ಗೆ (Professional Children’s School) ಸೇರಿದರು. ಕಲಾ ಪ್ರದರ್ಶನಕ್ಕೆ ಹೆಸರಾದ ದಿ ಸ್ಕೂಲ್‌ ಆಫ್‌ ಅಮೆರಿಕನ್‌ ಬಾಲೆಟ್‌ (The school of American Ballet)ಹಾಗೂ ಸುಪ್ರಸಿದ್ಧ ಜುಲಿಯರ್ಡ್‌ ಸ್ಕೂಲ್‌ನಲ್ಲಿ(Juilliard School) ಕೂಡ ಇವರು ಶಿಕ್ಷಣ ಪಡೆದಿದ್ದಾರೆ. 

ತಂದೆಗೆ ತಕ್ಕ ಮಗಳು
ಫೋಬೆ ಬೆಳೆದಿದ್ದು ತಾಯಿ ಆಸರೆಯಲ್ಲಾದ್ರೂ ಆಕೆಯ ಬದುಕಿನ ಮೇಲೆ ತಂದೆಯ ಪ್ರಭಾವ ಸಾಕಷ್ಟಿದೆ. ಇಬ್ಬರ ನಡುವೆ ಸಾಕಷ್ಟು ವಿಷಯಗಳಲ್ಲಿ ಸಾಮ್ಯತೆ ಇದೆ. ಅದ್ರಲ್ಲೂ ಪುಸ್ತಕಗಳೆಂದ್ರೆ ಫೋಬೆಗೆ ತಂದೆಯಂತೆಯೇ ಅಚ್ಚುಮೆಚ್ಚು. 2018ರಲ್ಲಿ ಇನ್ಸ್‌ಸ್ಟ್ರಾದಲ್ಲಿ ಹಂಚಿಕೊಂಡ ಪೋಸ್ಟ್‌ವೊಂದರಲ್ಲಿ ಬಿಲ್‌ ಗೇಟ್ಸ್‌ ಹೀಗೆ ಬರೆದಿದ್ದಾರೆ: ʼನನ್ನ ಮಗಳು ಫೋಬೆ ಹಾಗೂ ನಾನು ಎಲ್ಲ ವಿಧದ ಪುಸ್ತಕಗಳನ್ನು ಓದಲು ಇಷ್ಟಪಡುತ್ತೇವೆ. ನಾವಿಬ್ಬರು ಜಾನ್‌ಗ್ರೀನ್‌ ಅವರ ದೊಡ್ಡ ಅಭಿಮಾನಿಗಳಾಗಿದ್ದೇವೆ.ʼ

ಅಕ್ಕನೊಂದಿಗೆ ನಿಕಟ ಬಾಂಧವ್ಯ
ಜೆನ್ನಿಫರ್‌ ವೈವಾಹಿಕ ಬದುಕಿಗೆ ಕಾಲಿರಿಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಆಕೆಯೊಂದಿಗೆ ಫೋಬೆ ನಿಕಟ ಬಾಂಧವ್ಯ ಹೊಂದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಕ್ರಿಯಾಶೀಲರಾಗಿರೋ ಜೆನ್ನಿಫರ್ ಆಗಾಗ ಸಹೋದರಿಯೊಂದಿಗೆ ಸುತ್ತಾಡಿದ, ಮೋಜು-ಮಸ್ತಿ ಮಾಡಿದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಫೋಬೆ ಜನ್ಮದಿನದಂದು ಕೂಡ ಇನ್‌ಸ್ಟ್ರಾದಲ್ಲಿ ಶುಭ ಕೋರಿ ಪೋಸ್ಟ್‌ ಹಾಕಿದ್ದರು.

ಚಾಜ್‌ ಫ್ಲೈನ್‌ ಗೆಳೆಯ 
2019ರ ಮಧ್ಯಭಾಗದಿಂದ ಫೋಬೆ ತನ್ನ ಗೆಳೆಯ ಚಾಜ್‌ ಫ್ಲೈನ್‌ (Chaz Flynn)ಜೊತೆ ಡೇಟಿಂಗ್‌ ನಡೆಸುತ್ತಿದ್ದಾರೆ. ಇವರಿಬ್ಬರೂ ಲೇಕ್‌ಸೈಡ್‌ ಸ್ಕೂಲ್‌ ಸಹಪಾಠಿಗಳು. ಸುತ್ತಾಟವನ್ನು ಇಷ್ಟಪಡೋ ಇಬ್ಬರೂ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತ ಫೋಟೋಗಳನ್ನು ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಬಿಲ್‌ ಗೇಟ್ಸ್‌ ಹಾಗೂ ಮೆಲಿಂಡಾ ಕೂಡ ಇವರಿಬ್ಬರ ಪ್ರೀತಿಗೆ ಸಮ್ಮತಿ ಸೂಚಿಸಿರೋದು ಕೂಡ ಕೆಲವೊಂದು ಪೋಸ್ಟ್‌ಗಳಿಂದ ತಿಳಿದು ಬರುತ್ತೆ.

ಒಂದೇ ಕ್ಷಣದಲ್ಲಿ 70 ಸಾವಿರ ಕೋಟಿ ನಷ್ಟ ಅನುಭವಿಸಿದ RIL!

ವಿಚ್ಛೇದನ ತಡವಾಗಲು ಮಗಳೇ ಕಾರಣ 
ಬಿಲ್‌ ಗೇಟ್ಸ್‌ ಹಾಗೂ ಮೆಲಿಂಡಾ ವಿಚ್ಛೇದನೆ ತಡವಾಗಲು ಪರೋಕ್ಷವಾಗಿ ಫೋಬೆ ಕಾರಣ ಎಂದು ಹೇಳಲಾಗುತ್ತಿದೆ. ಕಿರಿಯ ಮಗಳು ಫೋಬೆಗೆ 18 ವರ್ಷ ತುಂಬೋ ತನಕ ಕಾದು ದಂಪತಿ ವಿಚ್ಛೇದನೆ ಪಡೆದುಕೊಂಡಿದ್ದಾರಂತೆ.

ಸಾಹಸ ಅಂದ್ರೆ ಪಂಚಪ್ರಾಣ
ಬಾಯ್‌ಫ್ರೆಂಡ್‌ ಜೊತೆ ಸಾಹಸಮಯ ಪ್ರವಾಸಗಳಿಗೆ ಹೋಗೋದೆಂದ್ರೆ ಫೋಬೆಗೆ ಅಚ್ಚುಮೆಚ್ಚು. ಸಹೋದರಿ ಜೆನ್ನಿಫರ್‌ ಹಾಗೂ ಗೆಳೆಯರೊಂದಿಗಿನ ಸಾಹಸಮಯ ತಾಣಗಳ ಪ್ರವಾಸದ ಫೋಟೋಗಳನ್ನು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಶತಕೋಟಿ ಒಡತಿ
ಬಿಲ್‌ ಗೇಟ್ಸ್‌ ತನ್ನ ಮಕ್ಕಳಿಗೆ ಹೆಚ್ಚಿನ ಆಸ್ತಿ ವರ್ಗಾಯಿಸೋ ಬಯಕೆ ಹೊಂದಿರಲಿಲ್ಲ. ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಗೇಟ್ಸ್‌ ಮಕ್ಕಳಿಗೆ ಹೆಚ್ಚು ಪಿತ್ರಾರ್ಜಿತ ಸಂಪತ್ತು ಸಿಕ್ಕಿದ್ರೆ ಅವರು ಸ್ವ ಪ್ರಯತ್ನದಿಂದ ಗಳಿಸೋ ಪ್ರಯತ್ನ ಮಾಡೋದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೂ ತಂದೆ ಆಸ್ತಿಯನ್ನು ಮೂರು ಮಕ್ಕಳಿಗೆ ಹಂಚಿಕೆ ಮಾಡಿದ್ರೆ ಫೋಬೆ ಶತಕೋಟಿ ಒಡತಿ ಎಂಬುದರಲ್ಲಿ ಸಂಶಯವಿಲ್ಲ. 

click me!