ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರೋದು ತಲೆನೋವು ಎಂದೇ ನಾವು ಭಾವಿಸುತ್ತೇವೆ.ಆದ್ರೆ ಅವುಗಳನ್ನು ವ್ಯವಸ್ಥಿತವಾಗಿ ಬಳಸಿದ್ರೆ ಖರ್ಚಿನಲ್ಲೂ ಉಳಿತಾಯ ಮಾಡಬಹುದು.
ಬ್ಯಾಂಕ್ ಬ್ಯಾಲೆನ್ಸ್ (Bank balance) ಝೀರೋ ಆಗಿದ್ರೂ, ಕೈಯಲ್ಲಿ ನಯಾಪೈಸೆ ನಗದು ಇಲ್ಲದಿದ್ರೂ ಪಾಕೆಟ್‌ನಲ್ಲಿ ಕ್ರೆಡಿಟ್ ಕಾರ್ಡ್ (Credit card) ಇದ್ರೆ ಸಾಕು. ಜಗತ್ತನ್ನೇ ಸುತ್ತಿ ಬರೋವಷ್ಟು ಧೈರ್ಯ. ಹೌದು, ಕ್ರೆಡಿಟ್ ಕಾರ್ಡ್ (Credit card) ಕಷ್ಟಕಾಲದ ಅಪತ್ಬಾಂಧವ. ಅದ್ರಲ್ಲೂಹಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಅದನ್ನು ಜವಾಬ್ದಾರಿಯುತವಾಗಿ ಬಳಸೋ ಕಲೆ ಗೊತ್ತಿದ್ರೆ ಅಂಥ ವ್ಯಕ್ತಿಗಳು ಖರ್ಚು ಮಾಡೋದಕ್ಕಿಂತ ಉಳಿತಾಯ (Saving)ಮಾಡೋದೇ ಹೆಚ್ಚು. ವಿವಿಧ ಕ್ರೆಡಿಟ್ ಕಾರ್ಡ್‌ಗಳು ವಿಭಿನ್ನವಾದ ವಿಶೇಷ ಸೌಲಭ್ಯಗಳನ್ನು (Perks) ಹೊಂದಿರುತ್ತವೆ. ಉದಾಹರಣೆಗೆ ಒಂದು ಬ್ಯಾಂಕ್‌ನ (Bank) ಕ್ರೆಡಿಟ್ ಕಾರ್ಡ್ ಬಳಸಿ ನಿರ್ದಿಷ್ಟ ಆನ್‌ಲೈನ್ (Online) ತಾಣದಲ್ಲಿ ಶಾಪಿಂಗ್ (Shopping) ಮಾಡಿದ್ರೆ ಆಕರ್ಷಕ ಡಿಸ್ಕೌಂಟ್ (Discount) ಸೌಲಭ್ಯವಿರುತ್ತೆ. ಇನ್ನು ಕೆಲವು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿದ್ರೆ ಗಿಫ್ಟ್ ವೋಚರ್ (Gift voucher) ಸಿಗುತ್ತೆ. ಕೆಲವು ಕ್ರೆಡಿಟ್ ಕಾರ್ಡ್ ಬಳಸಿದ್ರೆ ಕೊನೆಯಲ್ಲಿ ನೀವು ಗಳಿಸಿದ ಪಾಯಿಂಟ್‌ಗಳ (Points) ಆಧಾರದಲ್ಲಿ ನಿರ್ದಿಷ್ಟ ಮೊತ್ತವನ್ನು ನಿಮಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಹೀಗೆ ನಿಮ್ಮ ಬಳಿಯಿರೋ ಪ್ರತಿ ಕ್ರೆಡಿಟ್ ಕಾರ್ಡ್‌ನ ವಿಶೇಷ ಸೌಲಭ್ಯಗಳ ಬಗ್ಗೆ ಅರಿತು ಬಳಸಿದ್ರೆ ಖರ್ಚಿನಲ್ಲೂ ಒಂದಿಷ್ಟು ಉಳಿತಾಯ ಮಾಡಬಹುದು.
ಬಿಲ್ ಪಾವತಿ ದಿನಾಂಕ ಮರೆತು ಹೋದ್ರೆ?
ಇರೋ ಒಂದು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ (Bill payment) ದಿನಾಂಕವೇ ಮರೆತು ಹೋಗುತ್ತೆ. ಹೀಗಿರೋವಾಗ ಅನೇಕ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ರೆ ಬಿಲ್ ಪೇಮೆಂಟ್ ಡೇಟ್ ಮರೆತು ಹೋಗಿ ದಂಡ (Fine) ಬೀಳೋದು ಗ್ಯಾರಂಟಿ ಅನ್ನೋದು ಬಹುತೇಕರ ಅಭಿಪ್ರಾಯ. ಇದೇ ಕಾರಣಕ್ಕೆ ಅನೇಕರು ಒಂದೇ ಕ್ರೆಡಿಟ್ ಕಾರ್ಡ್ ಸಾಕಪ್ಪ ಎಂದು ಬೇರೆ ಕಾರ್ಡ್ ಕೊಳ್ಳೋ ಗೋಜಿಗೆ ಹೋಗೋದಿಲ್ಲ. ನಿಜ, ಕ್ರೆಡಿಟ್ ಕಾರ್ಡ್‌ಗಳ ಬಿಲ್ ಪಾವತಿ ದಿನಾಂಕ ನೆನಪಿಟ್ಟುಕೊಳ್ಳೋದು ಖಂಡಿತಾ ಕಷ್ಟ. ಆದ್ರೆ ಕೆಲವು ಮಾರ್ಗಗಳನ್ನು ಅನುಸರಿಸಿದ್ರೆ ಖಂಡಿತಾ ಇದು ಅಸಾಧ್ಯವಾದ ಕೆಲಸವೇನಲ್ಲ.
undefined
ಕಾರ್ಡ್‌ಗಳ ಆಟೋ ಡೆಬಿಟ್‌ಗೆ ಇಂದಿನಿಂದ ಹೊಸ ನಿಯಮ
ಮೂರು ಹಂತಗಳನ್ನು ಪಾಲಿಸಿ
ಹಂತ 1: ವರ್ಗೀಕರಿಸಿ
ನಿಮ್ಮ ಬಳಿಯಿರೋ ಕ್ರೆಡಿಟ್ ಕಾರ್ಡ್‌ಗಳನ್ನು ಎರಡು ವರ್ಗಗಳಲ್ಲಿ ವಿಂಗಡಿಸಿ- ವೈಯಕ್ತಿಕ (Personal) ಹಾಗೂ ವ್ಯವಹಾರ (Business). ಇದು ನಿಮ್ಮ ಕಾರ್ಡ್‌ಗಳ ಪರಿಣಾಮಕಾರಿ ಬಳಕೆಯ ಮೊದಲ ಹೆಜ್ಜೆ. ಅಲ್ಲದೆ, ಅವುಗಳಿಂದ ಸಿಗೋ ಪ್ರಯೋಜನಗಳು ಹಾಗೂ ಸೌಲಭ್ಯಗಳನ್ನು ಸರ್ಮಪಕವಾಗಿ ಬಳಸಿಕೊಳ್ಳಲು ಕೂಡ ಸಾಧ್ಯವಾಗುತ್ತದೆ.
ಒಮ್ಮೆ ಕಾರ್ಡ್‌ಗಳನ್ನು ಹೀಗೆ ವರ್ಗೀಕರಿಸಿದ (Categorise) ಬಳಿಕ ಅವುಗಳ ಪ್ರಯೋಜನಗಳು ಹಾಗೂ ಯಾವುದಕ್ಕೆ ಬಳಸಬೇಕು ಎಂಬುದನ್ನು ನಿರ್ಧರಿಸಿ. ಅಂದ್ರೆ ಯಾವ ಕಾರ್ಡ್ ಬಳಸಿ ವಿದ್ಯುತ್ (Electricity), ನೀರು(Water) ಬಿಲ್‌ಗಳನ್ನು ಪಾವತಿಸುತ್ತೀರಿ? ಶಾಪಿಂಗ್‌ಗೆ (Shopping) ಯಾವ ಕಾರ್ಡ್ ಬೆಸ್ಟ್? ಹೀಗೆ ಆಯಾ ಕಾರ್ಡ್‌ಗಳನ್ನು ಅವುಗಳಿಂದ ಸಿಗೋ ವಿಶೇಷ ಸೌಲಭ್ಯಗಳನ್ನು ಅರಿತು ಬಳಸೋ ಬಗ್ಗೆ ಮೊದಲೇ ಯೋಜನೆ ರೂಪಿಸಿಕೊಂಡ್ರೆ ಉತ್ತಮ ಕ್ಯಾಶ್‌ಬ್ಯಾಕ್ (Cashback) ಸಿಗುತ್ತದೆ.
ಹಂತ 2: ದಾಖಲೀಕರಣ
ನಿಮ್ಮ ಬಳಿಯಿರೋ ಕ್ರೆಡಿಟ್ ಕಾರ್ಡ್‌ಗಳ ಮಾಹಿತಿಯ ಒಂದು ಸ್ಪ್ರೆಡ್ ಶೀಟ್ ಸಿದ್ಧಪಡಿಸಿ. ಇದ್ರಲ್ಲಿ ಕಾರ್ಡ್‌ಗಳ ಕುರಿತ ಎಲ್ಲ ಮೂಲ ಮಾಹಿತಿಗಳಿರಲಿ. ಹೀಗೆ ಮಾಡೋದ್ರಿಂದ ನಿಮ್ಮ ಬಳಿ ಯಾವೆಲ್ಲ ಕ್ರೆಡಿಟ್ ಕಾರ್ಡ್‌ಗಳಿವೆ, ಬಿಲ್ ಪಾವತಿಯ ಡೆಡ್‌ಲೈನ್ ಯಾವಾಗ ಎಂದು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಹಾಗಾದ್ರೆ ಸ್ಪ್ರೆಡ್‌ಶೀಟ್‌ನಲ್ಲಿ ಯಾವೆಲ್ಲ ಮಾಹಿತಿಗಳಿರಬೇಕು.
ಕ್ರೆಡಿಟ್ ಕಾರ್ಡ್ ಹೆಸರು
ಯಾರು ಬಳಕೆ ಮಾಡಿದ್ದು (ನೀವು ಅಥವಾ ನಿಮ್ಮ ಸಂಗಾತಿ)
ಯಾವಾಗ ಬಳಸಿದ್ದು
ಕ್ರೆಡಿಟ್ ಲಿಮಿಟ್ (Credit Limit)
ವಾರ್ಷಿಕ ಶುಲ್ಕ (Annual Fee)
ವಾರ್ಷಿಕ ಶುಲ್ಕ ವಿಧಿಸಿದ ದಿನಾಂಕ
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಇಎಂಐ ಆಯ್ಕೆ ಮಾಡಿದ್ರಾ?
ಹಂತ 3: ಪರಿಶೀಲನೆ
ಅನೇಕ ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿರೋವಾಗ ಪ್ರತಿ ತಿಂಗಳು ಅನೇಕ ಬಿಲ್‌ಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಹೀಗಿರೋವಾಗ ಬಿಲ್‌ಗಳು ಮಿಸ್ ಆಗೋದು ಕಾಮನ್. ಇದ್ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತ ಹಾಗೂ ಪಾವತಿ ದಿನಾಂಕ ಮಿಸ್ ಆಗೋ ಸಾಧ್ಯತೆಯಿರುತ್ತದೆ. ಆದಕಾರಣ ನಿಮ್ಮ ಬಳಿಯಿರೋ ಎಲ್ಲ ಕ್ರೆಡಿಟ್ ಕಾರ್ಡ್ ಬಳಕೆಯ ಸ್ಟೇಟ್‌ಮೆಂಟ್ ಪ್ರತಿ ತಿಂಗಳು ನಿಮ್ಮ ಮೇಲ್‌ಗೆ ಬರುವಂತೆ ವ್ಯವಸ್ಥೆ ಮಾಡಿ. ಅಲ್ಲದೆ, ಚಿuಣomಚಿಣe biಟಟ ಠಿಚಿಥಿmeಟಿಣs ಆಯ್ಕೆ ಮಾಡಿಕೊಳ್ಳಿ. ಇದ್ರಿಂದ ಕ್ರೆಡಿಟ್ ಕಾರ್ಡ್‌ಗಳ ಬಿಲ್ ಪಾವತಿ ಡೆಡ್‌ಲೈನ್ ಮೀರೋ ಸಾಧ್ಯತೆ ತಪ್ಪುತ್ತದೆ. ಇನ್ನು ಮರೆಯದೆ ಪ್ರತಿ ತಿಂಗಳು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಚೆಕ್ ಮಾಡಿ. ಇದ್ರಿಂದ ಎಷ್ಟು ಬಡ್ಡಿ ವಿಧಿಸಿದ್ದಾರೆ ಅಥವಾ ಏನಾದ್ರೂ ಆಫರ್ ನೀಡಿದ್ದಾರಾ ಎಂಬುದು ತಿಳಿಯುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಜವಾಬ್ದಾರಿಯುತವಾಗಿ ಬಳಸಿದಾಗ ಖಂಡಿತಾ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಬಹುದು.