ಈರುಳ್ಳಿ ತರಂಗಿಲ್ಲ, ಬೇಯಿಸಂಗಿಲ್ಲ: ಸಿಲಿಂಡರ್ ಬೆಲೆ ಏರಿದೆಯಲ್ಲ!

By Suvarna News  |  First Published Dec 3, 2019, 12:36 PM IST

ಈರುಳ್ಳಿ ದರ ಏರಿಕೆಯಿಂದ ಬೇಸತ್ತಿರುವ ಜನಸಾಮಾನ್ಯ| ಗ್ರಾಹರಕರಿಗೆ ತಟ್ಟಿದ ಎಲ್‌ಪಿಜಿ ದರ ಏರಿಕೆಯ ಬಿಸಿ| ಡಿಸೆಂಬರ್ 1ರಿಂದಲೇ ನೂತನ ದರಗಳು ಜಾರಿ| ಎಲ್‌ಪಿಜಿ ದರಗಳಲ್ಲಿ ಸರಾಸರಿ 13.20 ರೂ.ದಿಂದ 13.45 ರೂ. ಏರಿಕೆ| ದೇಶದ ಪ್ರಮುಖ ನಗರಗಳಲ್ಲಿ ಗಣನೀಯ ಏರಿಕೆ ಕಂಡ ಎಲ್‌ಪಿಜಿ ದರ| ಕಳೆದ 4 ತಿಂಗಳಲ್ಲಿ ಎಲ್‌ಪಿಜಿ ದರ ಒಟ್ಟು 118 ರೂ. ದುಬಾರಿ| 


ನವದೆಹಲಿ(ಡಿ.03): ಬೆಲೆ ಏರಿಕೆಯ ಗುಮ್ಮ ಜನಸಾಮಾನ್ಯರನ್ನು ನಿರಂತರವಾಗಿ ಕಾಡುತ್ತಿದ್ದು, ಈರುಳ್ಳಿ ದರ ಏರಿಕೆಯಿಂದ ಬೇಸತ್ತಿರುವ ಗ್ರಾಹಕರಿಗೆ ಇದೀಗ ಎಲ್‌ಪಿಜಿ ದರ ಏರಿಕೆಯ ಬಿಸಿ ತಟ್ಟಿದೆ.

ಶತಕದ ಗಡಿದಾಟಿ ಮುನ್ನಡೆದು ಕಣ್ಣೀರು ತರಿಸಿದ ಈರುಳ್ಳಿ

Tap to resize

Latest Videos

undefined

ಎಲ್‌ಪಿಜಿ ಸಿಲಿಂಡರ್’ಗಳ ಮೇಲಿನ ದರ ಏರಿಕೆಯಾಗಿದ್ದು. ಡಿಸೆಂಬರ್ 1ರಿಂದಲೇ ನೂತನ ದರಗಳು ಜಾರಿಯಾಗಿವೆ.  ದೇಶದ ವಿವಿಧ ರಾಜ್ಯಗಳಲ್ಲಿ ಎಲ್‌ಪಿಜಿ ದರಗಳಲ್ಲಿ ಸರಾಸರಿ 13.20 ರೂ.ದಿಂದ 13.45 ರೂ.ವರೆಗೆ ದರ ಏರಿಕೆಯಾಗಿದೆ. 

ಉತ್ತರ ಪ್ರದೇಶದಲ್ಲಿ  ಎಲ್‌ಪಿಜಿಯ ಬೆಲೆ 13.20 ರೂ. ಏರಿಕೆಯಾಗಿದ್ದು, 14.2 ಕೆಜಿ ಸಿಲಿಂಡರ್ ಬೆಲೆ ಈಗ 730 ರೂ. ಆಗಿದೆ. ಅಲ್ಲದೇ ವಾಣಿಜ್ಯ ಸಿಲಿಂಡರ್‌ನ ಬೆಲೆಯೂ 7.30 ರೂ. ಏರಿಕೆ ಕಂಡಿದ್ದು, 19 ಕೆಜಿ ಸಿಲಿಂಡರ್ 1295.50 ರೂ. ಆಗಿದೆ. 

5 ಕೆಜಿ ಸಣ್ಣ ಸಿಲಿಂಡರ್ ಬೆಲೆ ಕೂಡ 5.41 ರೂ. ದುಬಾರಿಯಾಗಿದ್ದು, ಸಣ್ಣ ಸಿಲಿಂಡರ್ ಬೆಲೆ ಇದೀಗ 269 ರೂ. ಆಗಿದೆ.

ಎಲ್‌ಪಿಜಿ ದರ ಏರಿಕೆ!: ಎಷ್ಟು? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ:

ರಾಷ್ಟ್ರ ರಾಜಧಾನಿ ನವ ದೆಹಲಿ: 695 ರೂ. 
ವಾಣಿಜ್ಯ ರಾಜಧಾನಿ ಮುಂಬೈ: 665 ರೂ.
ತಮಿಳುನಾಡು ರಾಜಧಾನಿ ಚೆನ್ನೈ: 714 ರೂ. 
ಪ.ಬಂಗಾಳ ರಾಜಧಾನಿ ಕೋಲ್ಕತ್ತಾ: 725 ರೂ.
ರಾಜ್ಯ ರಾಜಧಾನಿ ಬೆಂಗಳೂರು: 697.50 ರೂ. 

ಕಳೆದ 4 ತಿಂಗಳಲ್ಲಿ ಎಲ್‌ಪಿಜಿ ದರ ಒಟ್ಟು 118 ರೂ. ದುಬಾರಿಯಾಗಿರುವುದು ವಿಶೇಷ. 

ಡಿಸೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!