Price Hike ಪೆಟ್ರೋಲ್‌, ಡೀಸೆಲ್‌,ಎಲ್‌ಪಿಜಿ ಬೆಲೆ ಏರಿಕೆ, 4 ತಿಂಗಳ ಬಳಿಕ ದರ ಪರಿಷ್ಕರಣೆ!

Published : Mar 23, 2022, 02:31 AM IST
Price Hike ಪೆಟ್ರೋಲ್‌, ಡೀಸೆಲ್‌,ಎಲ್‌ಪಿಜಿ ಬೆಲೆ ಏರಿಕೆ, 4 ತಿಂಗಳ ಬಳಿಕ ದರ ಪರಿಷ್ಕರಣೆ!

ಸಾರಾಂಶ

- ಎಲ್‌ಪಿಜಿ .50, ಪೆಟ್ರೋಲ್‌, ಡೀಸೆಲ್‌ ತಲಾ 80 ಪೈ.ಏರಿಕೆ - ಬೆಂಗಳೂರಲ್ಲಿ 14.2 ಕೇಜಿ ಸಿಲಿಂಡರ್‌ ದರ 952.ಗೆ ಏರಿಕೆ - ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಭರ್ಜರಿ ಶಾ  

ನವದೆಹಲಿ(ಮಾ.23): ಪಂಚ ರಾಜ್ಯ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಸರ್ಕಾರ ರಚನೆ ಪ್ರಕ್ರಿಯೆ ಶುರುವಾದ ಬೆನ್ನಲ್ಲೇ, ಇತ್ತ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಭರ್ಜರಿ ಶಾಕ್‌ ನೀಡಿದೆ. ಮಂಗಳವಾರದಿಂದಲೇ ಜಾರಿಯಾಗುವಂತೆ ಅಡುಗೆ ಅನಿಲದ ಸಿಲಿಂಡರ್‌ ಬೆಲೆಯನ್ನು ಭರ್ಜರಿ 50 ರು. ಏರಿಸಲಾಗಿದ್ದರೆ, ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕೂಡ ತಲಾ 80 ಪೈಸೆ ಏರಿಕೆ ಮಾಡಲಾಗಿದೆ. ತನ್ಮೂಲಕ ಕಳೆದ ನಾಲ್ಕು ತಿಂಗಳ ನಂತರ ತೈಲ ಮತ್ತು ಇಂಧನ ದರದ ಪರಿಷ್ಕರಣೆಯಾದಂತಾಗಿದೆ..

ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ಇಲ್ಲದ 14.2 ಕೇಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆ 949.50 ರು.ಗೆ ತಲುಪಿದೆ. ಇನ್ನು ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕ್ರಮವಾಗಿ 96.21ರು. ಮತ್ತು 87.47 ರು. ಗೆ ಹೆಚ್ಚಿದೆ. ಇನ್ನು ಬೆಂಗಳೂರಿನಲ್ಲಿ ಎಲ್‌ಪಿಜಿ ದರ 952.50. ಮತ್ತು ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಕ್ರಮವಾಗಿ 101.42 ರು. ಮತ್ತು 85.80 ರು. ತಲುಪಿದೆ.

ಕಚ್ಚಾತೈಲ ದರ 140 ಡಾಲರ್‌ನಿಂದ 99.84 ಡಾಲರ್‌ಗೆ ಭಾರೀ ಇಳಿಕೆ!

ಇನ್ನು 5 ಕೇಜಿ ಸಿಲಿಂಡರ್‌ ಬೆಲೆ 349 ರು. ಆಗಿದ್ದರೆ, 10 ಕೇಜಿ ಸಿಲಿಂಡರ್‌ ಬೆಲೆ 669 ರು. ಆಗಿದೆ. 19 ಕೇಜಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ 2003.50 ರು. ನಷ್ಟಾಗಿದೆ. ಏತನ್ಮಧ್ಯೆ ಎಲ್‌ಪಿಜಿ ಅನಿಲ ಮತ್ತು ತೈಲ ದರ ಏರಿಕೆ ಖಂಡಿಸಿ ಲೋಕಸಭೆಯಲ್ಲಿ ಕಾಂಗ್ರೆಸ್‌, ಟಿಎಂಸಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಸಭಾತ್ಯಾಗ ಮಾಡಿದರು.

ಕಳೆದ ಅಕ್ಟೋಬರ್‌ನಲ್ಲಿ ಎಲ್‌ಪಿಜಿವನ್ನು ಮತ್ತು ಕಳೆದ ನವೆಂಬರ್‌ನಲ್ಲಿ ತೈಲ ದರವನ್ನು ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಅದಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದ್ದರೂ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಅನಿಲ ಮತ್ತು ತೈಲ ದರ ಸ್ಥಿರವಾಗಿತ್ತು.

ಗ್ರಾಹಕರ ಜೇಬು ಬಿಸಿ ಮಾಡ್ತಿದೆ ಚಿನ್ನ-ಬೆಳ್ಳಿ, ತೈಲ ದರಗಳು ಯಥಾಸ್ಥಿತಿ

ಬೆಂಗಳೂರಲ್ಲಿ ದರ
ಎಲ್‌ಪಿಜಿ 953 ರು.
ಪೆಟ್ರೋಲ್‌ 101.42 ರು.
ಡೀಸೆಲ್‌ 85.80 ರು.

ಸಗಟು ಡೀಸೆಲ್‌ ಲೀ.ಗೆ 25 ರು. ಹೆಚ್ಚಳ
ಸಗಟು ಬಳಕೆದಾರರಿಗೆ ಪೂರೈಕೆ ಮಾಡುವ ಡೀಸೆಲ್‌ನ ಬೆಲೆಯನ್ನು ಪ್ರತಿ ಲೀಟರ್‌ಗೆ 25 ರು. ಹೆಚ್ಚಳ ಮಾಡಲಾಗಿದೆ. ಇದು ಕೆಎಸ್‌ಆರ್‌ಟಿಸಿಯಂಥ ಸಗಟು ಖರೀದಿದಾರರಿಗೆ ಬಿಸಿ ಮುಟ್ಟಿಸಿದೆ. ಆದರೆ ಪೆಟ್ರೋಲ್‌-ಡೀಸೆಲ್‌ ಬಂಕ್‌ಗಳಲ್ಲಿ ಡೀಸೆಲ್‌ ಖರೀದಿ ಮಾಡುವ ಸಾಮಾನ್ಯ ಖರೀದಿದಾರರಿಗೆ ದರ ಹೆಚ್ಚಿಸದೇ ಸಾಮಾನ್ಯ ದರವನ್ನೇ ಮುಂದುವರಿಸಲಾಗಿದೆ.

2021ರ ನ.4ರ ನಂತರ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಪರಿಷ್ಕರಣೆ ಆಗಿಲ್ಲ. ಆದರೆ ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 40% ಹೆಚ್ಚಳವಾಗಿದ್ದು, 100 ಡಾಲರ್‌ ದಾಟಿದೆ. ಹೀಗಾಗಿ ತೈಲ ಕಂಪನಿಗಳು ಭಾರೀ ನಷ್ಟಅನುಭವಿಸತೊಡಗಿವೆ. ಇದನ್ನು ಸರಿದೂಗಿಸಲು ಸಗಟು ಡೀಸೆಲ್‌ ದರವನ್ನು ಲೀಟರ್‌ಗೆ 25 ರು.ನಷ್ಟುಸರ್ಕಾರ ಹೆಚ್ಚಿಸಿದೆ. ಇದರಿಂದಾಗಿ ಮುಂಬೈನಲ್ಲಿ ಸಾಮಾನ್ಯ ಪೆಟ್ರೋಲ್‌ ಪಂಪ್‌ಗಳಲ್ಲಿ ಡೀಸೆಲ್‌ ಬೆಲೆ 94.14 ರು. ಇದ್ದರೆ, ಸಗಟು ಡೀಸೆಲ್‌ ಬೆಲೆ 122.05 ರು.ಗೆ ಏರಿದೆ. ದೇಶದ ಇತರೆಡೆ ಕೂಡ ಇದೇ ರೀತಿ ದರ ಹೆಚ್ಚಿದೆ.

ಯುದ್ಧದಿಂದ ಭಾರತದ ಆರ್ಥಿಕತೆಗೆ ಭಾರೀ ಹೊಡೆತ
ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿರುವ ಕಾರಣ ವಿಶ್ವಾದ್ಯಂತ ದೂರಗಾಮಿ ಪರಿಣಾಮ ಬೀರಲಿದೆ. ಇದಕ್ಕೆ ಭಾರತ ಕೂಡ ಹೊರತಲ್ಲ. ದೇಶದಲ್ಲಿ ಪೆಟ್ರೋಲ್‌ ಹಾಗೂ ಅಗತ್ಯವಸ್ತುಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರುವ ಸಾಧ್ಯತೆ ಇದೆ. ಇನ್ನು ಹಣದುಬ್ಬರ ಹೆಚ್ಚಿ ಆರ್ಥಿಕತೆಗೆ ಹೊಡೆತ ಬೀಳಲಿದೆ ಹಾಗೂ ಷೇರುಪೇಟೆ ಕುಸಿತ ಕಂಡು, ಹೂಡಿಕೆದಾರರಿಗೆ ಭಾರೀ ನಷ್ಟಉಂಟಾಗುವ ಸಂಭವವಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು