LPG Cylinder Price: ಎಲ್ ಪಿಜಿ ಗ್ರಾಹಕರಿಗೆ ಶುಭಸುದ್ದಿ; ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 36ರೂ. ಇಳಿಕೆ

By Suvarna NewsFirst Published Aug 1, 2022, 10:13 AM IST
Highlights

*ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ
*14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ
*ಸ್ಥಳೀಯ ತೆರಿಗೆಗಳ ಆಧಾರದಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ
 

ನವದೆಹಲಿ (ಆ.1): ಪ್ರತಿ ತಿಂಗಳ ಮೊದಲ ದಿನ ಎಲ್ ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗೋದು ಸಾಮಾನ್ಯ. ಅದರಂತೆ ಇಂದು (ಆ.1) ಕೂಡ ನವದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ವಾಣಿಜ್ಯ  (ಕಮರ್ಷಿಯಲ್) ಸಿಲಿಂಡರ್ ಬೆಲೆಯಲ್ಲಿ 36ರೂ. ಇಳಿಕೆ ಮಾಡಲಾಗಿದೆ. ಆದರೆ,  14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಮರ್ಷಿಯಲ್ ಸಿಲಿಂಡರ್ ಹೊಸ ದರ ಆಗಸ್ಟ್  1ರಿಂದಲೇ ಜಾರಿಗೆ ಬರಲಿದೆ. ಇಂದಿನಿಂದ ದೇಶದ ರಾಜಧಾನಿ ನವದೆಹಲಿಯಲ್ಲಿ19 ಕೆಜಿ ಎಲ್ ಪಿಜಿ ಕಮರ್ಷಿಯಲ್ ಸಿಲಿಂಡರ್  ಬೆಲೆ  1,976ರೂ. ಇರಲಿದೆ. ಇನ್ನು ಕೋಲ್ಕತ್ತದಲ್ಲಿ 2,095.50ರೂ., ಮುಂಬೈನಲ್ಲಿ 1,936.50 ರೂ. ಹಾಗೂ ಚೆನ್ನೈನಲ್ಲಿ 2,141ರೂ. ಇರಲಿದೆ. ಇಂಡಿಯನ್ ಆಯಿಲ್ ಇಂದು ಪ್ರಕಟಿಸಿರುವ ಪರಿಷ್ಕೃತ ದರ ಪಟ್ಟಿ ಅನ್ವಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 36ರೂ. ಕಡಿತ ಮಾಡಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುತ್ತಿರೋದು ಇದು ಮೂರನೇ ಬಾರಿ. ಜುಲೈ 1ರಂದು 19 ಕೆಜಿ ಎಲ್ ಪಿಜಿ ಕಮರ್ಷಿಯಲ್ ಸಿಲಿಂಡರ್  ಬೆಲೆಯಲ್ಲಿ 198ರೂ. ಇಳಿಕೆ ಮಾಡಲಾಗಿತ್ತು. ಇನ್ನು ಜುಲೈ 6ರಂದು 8.50ರೂ. ಇಳಿಕೆ ಮಾಡಲಾಗಿತ್ತು. 

ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ
ವ್ಯಾಟ್ ಸೇರಿದಂತೆ ಸ್ಥಳೀಯ ತೆರಿಗೆಗಳನ್ನು ಆಧರಿಸಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಅಧಿಕ ತೆರಿಗೆಯಿರುವ ರಾಜ್ಯದಲ್ಲಿ ಸಹಜವಾಗಿ ಬೆಲೆ ಹೆಚ್ಚಿರುತ್ತದೆ. 

ಏಷ್ಯಾದ ಶ್ರೀಮಂತ ಪುರುಷ ಮಾತ್ರವಲ್ಲ, ಮಹಿಳೆ ಕೂಡ ಭಾರತೀಯರೆ;ಹುಯಿಯಾನ್ ಹಿಂದಿಕ್ಕಿದ ಸಾವಿತ್ರಿ ಜಿಂದಾಲ್

ಗೃಹ ಬಳಕೆ ಸಿಲಿಂಡರ್ ಬೆಲೆ ಸ್ಥಿರ
14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಮಾಡಿಲ್ಲ. ಜುಲೈ 6ರಂದು ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 50ರೂ. ಹೆಚ್ಚಳ ಮಾಡಲಾಗಿತ್ತು. ಮೇನಲ್ಲಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಎರಡು ಬಾರಿ ಹೆಚ್ಚಳ ಮಾಡಲಾಗಿತ್ತು. ಮೇ 7ರಂದು 50 ರೂ. ಹೆಚ್ಚಳ ಮಾಡಿದ್ದರೆ, ಮೇ 19 ರಂದು  3.50 ರೂ. ಏರಿಕೆ ಮಾಡಲಾಗಿತ್ತು. ಹೀಗಾಗಿ ನವದೆಹಲಿಯಲ್ಲಿ (New Delhi) 14 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ 1,053ರೂ., ಮುಂಬೈನಲ್ಲಿ (Mumbai) 1,052.50ರೂ., ಕೋಲ್ಕತ್ತದಲ್ಲಿ (Kolkata) 1,079ರೂ. ಹಾಗೂ ಚೆನ್ನೈನಲ್ಲಿ (Chennai) 1068.50 ರೂ. ಇದೆ. 

2022ನೇ ಸಾಲಿನಲ್ಲಿ153ರೂ. ಏರಿಕೆ
ಕೇಂದ್ರ ಸರ್ಕಾರ ಕೆಲವು ಸಮಯದಿಂದ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡುತ್ತಿದೆ. ದೇಶದಲ್ಲಿ  ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿದೆ. ಸಬ್ಸಿಡಿ ರಹಿತ ಎಲ್ ಪಿಜಿ ಇಲಿಂಡರ್ ಬೆಲೆಯಲ್ಲಿ 2022ನೇ ಸಾಲಿನಲ್ಲಿ ಈ ತನಕ ಒಟ್ಟು 153ರೂ. ಏರಿಕೆಯಾಗಿದೆ. 

ಸ್ತ್ರೀ ಸಂಘಗಳ ಉತ್ಪನ್ನಗಳಿಗೆ ಮೀಶೋ ಬ್ರಾಂಡಿಂಗ್‌: ಸಿಎಂ ಬೊಮ್ಮಾಯಿ

ಇಂಧನ ಬೆಲೆ ಸ್ಥಿರ
ದೇಶದಲ್ಲಿ ಮೇ 21ರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸ್ಥಿರವಾಗಿದೆ. ಆಗಸ್ಟ್ ಮೊದಲ ದಿನವಾದ ಇಂದು ಕೂಡ ಇವೆರಡರ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು ಜನಸಾಮಾನ್ಯರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ಒದಗಿಸಿದೆ. ಮೇ 21ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಸರ್ಕಾರ ಪೆಟ್ರೋಲ್ ದರವನ್ನು ಪ್ರತಿ ಲೀಟರ್ ಗೆ 8ರೂ. ಹಾಗೂ ಡೀಸೆಲ್ ದರವನ್ನು ಪ್ರತಿ ಲೀಟರ್ ಗೆ 6 ರೂ. ಕಡಿತಗೊಳಿಸಿತ್ತು. 

click me!