ಅತೀ ಹೆಚ್ಚಿನ ವೃತ್ತಿಪರರು ಕೆಲಸ ಮಾಡಲು ಬಯಸುವ, ಕೆಲಸ ಮಾಡುತ್ತಿರುವ ಭಾರತದ ಟಾಪ್ 20 ಸ್ಟಾರ್ಟ್ಅಪ್ ಕಂಪನಿ ಪಟ್ಟಿ ಪ್ರಕಟಗೊಂಡಿದೆ. ಲಿಂಕ್ಡ್‌ಇನ್ ಡೇಟಾ ಆಧಾರಿತ ಈ ಕಂಪನಿಗಳಲ್ಲಿ ಯಾವುದು ಮೊದಲ ಸ್ಥಾನ ಪಡೆದಿದೆ.
ಬೆಂಗಳೂರು(ಸೆ.28): ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾಗಿರುವ ಲಿಂಕ್ಡ್ ಇನ್ 2023 ನೇ ಸಾಲಿನ ಟಾಪ್ 20 ಭಾರತೀಯ ಸ್ಟಾರ್ಟ್ ಅಪ್ ಕಂಪನಿ ಪಟ್ಟಿ ಬಿಡುಗಡೆ ಮಾಡಿದೆ. ಲಿಂಕ್ಡ್ ಇನ್ ಡೇಟಾ ಆಧರಿಸಿ ಜಾಗತಿಕವಾಗಿ ವೃತ್ತಿಪರರು ಕೆಲಸ ಮಾಡಲು ಬಯಸುವ ಉದಯೋನ್ಮುಖ ಕಂಪನಿಗಳ ವಾರ್ಷಿಕ ಪಟ್ಟಿ ಇದಾಗಿದೆ. ಈ ಪಟ್ಟಿಯಲ್ಲಿ ಝೆಪ್ಟೋ ಮೊದಲ ಸ್ಥಾನ ಪಡೆದುಕೊಂಡಿದೆ.
ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಲಿಂಕ್ಡ್ ಇನ್ ನಲ್ಲಿ 950+ ಮಿಲಿಯನ್ ಸದಸ್ಯರು ತೆಗೆದುಕೊಂಡಿರುವ ಬಿಲಿಯನ್ ಕ್ರಮಗಳ ಆಧಾರದ ಮೇಲೆ ವಿಶಿಷ್ಟವಾದ ಲಿಂಕ್ಡ್ ಇನ್ ಡೇಟಾದಿಂದ ಈ ಟಾಪ್ ಸ್ಟಾರ್ಟಪ್ ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಂದರೆ, ಉದ್ಯೋಗಿ ಬೆಳವಣಿಗೆ, ಉದ್ಯೋಗಾಕಾಂಕ್ಷಿ ಆಸಕ್ತಿ, ಕಂಪನಿ ಮತ್ತು ಅದರ ಉದ್ಯೋಗಿಗಳಲ್ಲಿನ ಸದಸ್ಯರ ಪಾಲ್ಗೊಳ್ಳುವಿಕೆಯನ್ನು ಗಮನಿಸಿ ಲಿಂಕ್ಡ್ ಇನ್ ಟಾಪ್ ಕಂಪನಿಗಳ ಪಟ್ಟಿಯಿಂದ ಪ್ರತಿಭಾನ್ವಿತ ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಎಲಾನ್ ಮಸ್ಕ್‌ನ ಜಗತ್ತಿನಲ್ಲಿ ಸರಳತೆಯ ಸುಧಾಮೂರ್ತಿ, ಮಹಿಳಾ ಉದ್ಯಮಿಯ ಲಿಂಕ್ಡ್ ಇನ್ ಪೋಸ್ಟ್ ವೈರಲ್
2023 ನೇ ಸಾಲಿನ ಲಿಂಕ್ಡ್ ಇನ್ ಟಾಪ್ ಸ್ಟಾರ್ಟಪ್ ಗಳ ಪಟ್ಟಿ:
1 ಝೆಪ್ಟೋ
2 ಬ್ವೂಸ್ಮಾರ್ಟ್
3 ಡಿಟ್ಟೋ ಇನ್ಶೂರೆನ್ಸ್
4 ಪಾಕೆಟ್ ಎಫ್ಎಂ
5 ಸ್ಕೈರೂಟ್ ಏರೋಸ್ಪೇಸ್
6 ಗಾಕ್‌ವಿಕ್ (GoKwik)
7 ಫೈ (Fi
8 ಸ್ಪ್ರಿಂಟೋ( Sprinto)
9 ಸೂಪರ್‌ಸೋರ್ಸಿಂಗ್( Supersourcing)
10 ಗ್ರೋಥ್‌ಸ್ಕೂಲ್( GrowthSchool)
11 ಜಾರ್( Jar)
12 ಶಿಫ್ಟ್( Shyft)
13 ಟೆಕ್‌ಮಾರ್ಕ್( Teachnook)
14 ಸ್ಟಾಕ್‌ಪ್ರೋ( StockGro)
15 ಎಕ್ಸ್ಪೋನೆಂಟ್ ಎನರ್ಜಿ( Exponent Energy)
16 ಹೌಸರ್( Housr)
17 ಆ್ಯಕಿಜಾಬ್( AccioJob)
18 ಟ್ರಾವ್‌ಕ್ಲಾನ್( TravClan)
19 ಡಾಟ್‌ಪೇ( DotPe)
20 ಫಾಸಾ( Fasa)
ಈ ವರ್ಷದ ಟಾಪ್ ಸ್ಟಾರ್ಟಪ್ ಪಟ್ಟಿಯಲ್ಲಿ ಝೆಪ್ಟೋ(Zepto) ಮೊದಲ ಸ್ಥಾನದಲ್ಲಿದೆ. 2021 ರಲ್ಲಿ ಆರಂಭವಾದ ಗ್ರಾಹಕರ ಮನೆ ಬಾಗಿಲಿಗೆ ದಿನಸಿಯನ್ನು ತಲುಪಿಸುವ ಇ-ಕಾಮರ್ಸ್ ಆ್ಯಪ್ ಆಗಿರುವ ಈ ಕಂಪನಿ 2022 ರಲ್ಲಿ 4 ನೇ ಸ್ಥಾನದಲ್ಲಿತ್ತು. ಭಾರತದ ಮೊದಲ ಎಲೆಕ್ಟ್ರಿಕ್ ರೈಡ್-ಶೇರಿಂಗ್ ಕಂಪನಿಯಾಗಿರುವ ಬ್ಲೂಸ್ಮಾರ್ಟ್ (BluSmart) ಈ ಪ್ರತಿಷ್ಠಿತ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಫಿನ್ಟೆಕ್ ಭಾರತದ ಟಾಪ್ ಸ್ಟಾರ್ಟಪ್ ಪಟ್ಟಿ 2023 ರಲ್ಲಿ ಮೇಲುಗೈ ಮುಂದುವರಿಸಿದೆ. ನಾಲ್ಕು ಸ್ಟಾರ್ಟಪ್ ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ. ಅವುಗಳೆಂದರೆ, ಡಿಟ್ಟೋ ಇನ್ಸೂರೆನ್ಸ್ 3 ನೇ ಸ್ಥಾನ, Fi – 7 ನೇ ಸ್ಥಾನ, ಜಾರ್- 11 ನೇ ಸ್ಥಾನ ಮತ್ತು ಸ್ಟಾಕ್ ಗ್ರೋ – 14 ನೇ ಸ್ಥಾನದಲ್ಲಿವೆ. ಇದು ಕ್ಷೇತ್ರದ ಸ್ಥಿತಿಸ್ಥಾಪಕತಯ್ವವನ್ನು ಪ್ರತಿಬಿಂಬಿಸುತ್ತದೆ ಮತ್ತು ಸವಾಲಿನ ಮಾರುಕಟ್ಟೆ ಇದ್ದಾಗ್ಯೂ ಹೂಡಿಕೆದಾರರ ಹೂಡಿಕೆಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.
ದೇಶ ಸುತ್ತೋಕೆ ಲಕ್ಷ ಲಕ್ಷ ಸಂಬಳ ಬರೋ ಲಿಂಕ್ಡ್‌ಇನ್ ಕೆಲಸ ತೊರೆದ ಯುವತಿ
ಈ ವರ್ಷದ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಪ್ರಮುಖ ಉದ್ಯಮವೆಂದರೆ ಎಜುಟೆಕ್. ಗ್ರೋಥ್ ಸ್ಕೂಲ್- 10 ನೇ ಸ್ಥಾನ, ಟೀಚ್ ನೂಕ್ -13 ನೇ ಸ್ಥಾನ ಮತ್ತು ಆಕ್ಸಿಯೋಜಾಬ್- 17 ನೇ ಸ್ಥಾನದಲ್ಲಿವೆ. ವೃತ್ತಿಪರರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಎಐ ಸೇರಿದಂತೆ ತಂತ್ರಜ್ಞಾನಗಳಲ್ಲಿ ಕ್ಷಿಪ್ರಗತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಸಂಬಂಧ ಉಂಟಾಗುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಈ ಎಜುಟೆಕ್ ಕಂಪನಿಗಳು ಸಕ್ರಿಯವಾಗಿವೆ.