ಪ್ರತಿಯೊಬ್ಬರೂ ನಿವೃತ್ತಿ ಬದುಕಿಗೆ ಒಂದಿಷ್ಟು ಹೂಡಿಕೆ ಮಾಡಿಡೋದು ಉತ್ತಮ. ಅದ್ರಲ್ಲೂ ಪ್ರತಿ ತಿಂಗಳು ಒಂದಿಷ್ಟು ರಿಟರ್ನ್ಸ್ ಅಥವಾ ಪಿಂಚಣಿ ಸಿಗುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಜೀವನ ದ ಇಳಿ ಸಂಜೆಯನ್ನು ನೆಮ್ಮದಿಯಿಂದ ಕಳೆಯಬಹುದು. ಎಲ್ಐಸಿ ಜೀವನ ಅಕ್ಷಯ ಯೋಜನೆ ಕೂಡ ಇಂಥದ್ದೇ ಒಂದು ಹೂಡಿಕೆ ಯೋಜನೆಯಾಗಿದೆ.
Business Desk:ನಿವೃತ್ತಿಯ ನಂತರ ಬದುಕನ್ನು ನೆಮ್ಮದಿಯಿಂದ ಕಳೆಯಲು ಮೊದಲೇ ಯೋಜನೆ ರೂಪಿಸೋದು ಅಗತ್ಯ. ಉದ್ಯೋಗ ಸಿಕ್ಕ ತಕ್ಷಣವೇ ನಿವೃತ್ತಿ ನಂತರದ ಜೀವನಕ್ಕೆ ಒಂದಿಷ್ಟು ಆದಾಯ ಸಿಗುವಂತೆ ಹೂಡಿಕೆ ಮಾಡೋದು ಉತ್ತಮ. ಹೂಡಿಕೆ ಅಥವಾ ಉಳಿತಾಯದ ಯೋಚನೆ ಬಂದ ತಕ್ಷಣ ಮಧ್ಯಮ ವರ್ಗದ ಭಾರತೀಯರು ಮೊದಲು ನೋಡೋದು ಅಪಾಯ ಕಡಿಮೆ ಇರುವ, ಉತ್ತಮ ರಿಟರ್ನ್ಸ್ ನೀಡುವ ಯೋಜನೆಗಳನ್ನು. ಇದೇ ಕಾರಣಕ್ಕೆ ಸರ್ಕಾರದ ಬೆಂಬಲಿತ ಭಾರತೀಯ ಜೀವ ವಿಮಾ ನಿಗಮದ (ಎಲ್ ಐಸಿ) ಯೋಜನೆಗಳು ಇಂದಿಗೂ ಹೂಡಿಕೆದಾರರ ಆಯ್ಕೆಗಳಲ್ಲಿ ಒಂದಾಗಿದೆ. ಎಲ್ಐಸಿ ಆಯಾ ವಯೋಮಾನದವರಿಗೆ ತಕ್ಕುದಾದ ಯೋಜನೆಗಳನ್ನು ರೂಪಿಸಿರೋದು ಕೂಡ ಎಲ್ಐಸಿಯಲ್ಲಿ ಜನರು ಹೂಡಿಕೆ ಮಾಡೋದಕ್ಕೆ ಮುಖ್ಯಕಾರಣವಾಗಿದೆ. ಅದರಲ್ಲೂ ವೃದ್ಧಾಪ್ಯದಲ್ಲಿ ಪಿಂಚಣಿ ಸಿಗುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡೋದ್ರಿಂದ ಇಳಿ ವಯಸ್ಸಿನಲ್ಲಿ ನೆಮ್ಮದಿಯ ಜೀವನ ನಡೆಸಬಹುದು. ವೃದ್ಧಾಪ್ಯದಲ್ಲಿ ಪಿಂಚಣಿ ಸಿಗುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸೋರು ಎಲ್ಐಸಿ ಜೀವನ ಅಕ್ಷಯ ಯೋಜನೆ ಆಯ್ಕೆ ಮಾಡಬಹುದು.
ಎಲ್ಐಸಿ ಜೀವನ ಅಕ್ಷಯ ಯೋಜನೆಯಲ್ಲಿ (LIC Jeevan Akshay Policy) ನೀವು ಒಮ್ಮೆ ಹೂಡಿಕೆ (Invest) ಮಾಡಿದ್ರೆ ಸಾಕು ನಿವೃತ್ತಿ ಬಳಿಕ ಪ್ರತಿ ತಿಂಗಳು ಸುಮಾರು 36,000ರೂ. ಪಿಂಚಣಿ (Pension) ಪಡೆಯಬಹುದು. ಎಲ್ಐಸಿ ಜೀವನ ಅಕ್ಷಯ ಯೋಜನೆಯನ್ನು ಮತ್ತೆ ಪ್ರಾರಂಭಿಸಿದೆ. ಈ ಪಾಲಿಸಿ ವೈಯಕ್ತಿ, ಸಿಂಗಲ್ ಪ್ರೀಮಿಯಂ, ನಾನ್ ಲಿಂಕ್ಡ್ ಹಾಗೂ ಸಹಭಾಗಿತ್ವ ಹೊಂದಿರದ ವರ್ಷಾಶನ ಯೋಜನೆಯಾಗಿದೆ.
ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.77ಕ್ಕೆ ಇಳಿಕೆ; ಬಡ್ಡಿ ದರ ಏರಿಕೆಗೆ ಕಡಿವಾಣ ಬೀಳುತ್ತಾ?
ಮಾಸಿಕ 36,000ರೂ. ಪಿಂಚಣಿ ಪಡೆಯಲು ಹೀಗೆ ಮಾಡಿ
ಈ ಪಾಲಿಸಿಯಿಂದ ಮಾಸಿಕ 36,000ರೂ. ಪಿಂಚಣಿ ಪಡೆಯಲು ನೀವು ಸಮ ಪ್ರಮಾಣದಲ್ಲಿ ಜೀವನಕ್ಕೆ ವರ್ಷಾಶನ ಪಾವತಿಸುವ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಆಗ ನಿಮಗೆ ಪ್ರತಿ ತಿಂಗಳು ದೊಡ್ಡ ಮೊತ್ತದ ಪಿಂಚಣಿ ಲಭಿಸುತ್ತದೆ. ನಿಮಗೆ 45 ವರ್ಷವಾಗಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದ್ರೆ 71,26,000ರೂ. ದೊಡ್ಡ ಮೊತ್ತದ ಪ್ರೀಮಿಯಂ ಪಾವತಿಸಬೇಕು. ನಿವೃತ್ತಿ ಬಳಿಕ ನಿಮಗೆ ಮಾಸಿಕ 36,429ರೂ. ಪಿಂಚಣಿ ಲಭಿಸುತ್ತದೆ. ಪಾಲಿಸಿದಾರ ಮೃತಪಟ್ಟ ಬಳಿಕ ಪಿಂಚಣಿ ಸ್ಥಗಿತಗೊಳ್ಳುತ್ತದೆ.
ವಯಸ್ಸಿನ ಮಿತಿ ಎಷ್ಟು?
35ರಿಂದ 85 ವಯಸ್ಸಿನ ನಡುವಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ವಿಶೇಷ ಚೇತನ ವ್ಯಕ್ತಿಗಳು ಕೂಡ ಈ ಪಾಲಿಸಿ ಪ್ರಯೋಜನ ಪಡೆಯಬುದು.
ಪಿಂಚಣಿ ಲೆಕ್ಕಾಚಾರ
ಎಲ್ಐಸಿ ಜೀವನ ಅಕ್ಷಯ ಯೋಜನೆಯಲ್ಲಿ 10 ವಿಧದ ಆಯ್ಕೆಗಳಿವೆ. ನಿಮ್ಮ ಆಯ್ಕೆ ಆಧರಿಸಿ ಹಾಗೂ ವಯಸ್ಸಿನ ಆಧಾರದಲ್ಲಿ ಪಿಂಚಣಿ (Pension) ಮೊತ್ತ ಬದಲಾಗುತ್ತದೆ. ಉದಾಹರಣೆಗೆ ನೀವು 71 ವರ್ಷದವರಾಗಿದ್ರೆ 6,10,800ರೂ. ಮೊತ್ತದ ಒಂದೇ ಪ್ರೀಮಿಯಂ ಪಾವತಿಸಬೇಕು. ಇದರಲ್ಲಿ ನಿಮಗೆ 6ಲಕ್ಷ ರೂ. ಅಷ್ಯೂರ್ಡ್ ಮೊತ್ತ ಸಿಗುತ್ತದೆ. ವಾರ್ಷಿಕ ಪಿಂಚಣಿ 76,650ರೂ. ಆಗಿರುತ್ತದೆ. ಇನ್ನು ಅರ್ಧವಾರ್ಷಿಕ ಪಿಂಚಣಿ 37,000ರೂ.-35,000ರೂ. ಆಗಿರುತ್ತದೆ. ತ್ರೈಮಾಸಿಕ ಪಿಂಚಣಿ 18,225ರೂ. ಆಗಿರುತ್ತದೆ. ಇನ್ನು ಮಾಸಿಕ ಪಿಂಚಣಿ 6,000ರೂ. ಆಗಿರುತ್ತದೆ. ವಾರ್ಷಿಕ 12,000ರೂ. ಪಿಂಚಣಿ ಸಿಗುವ ಆಯ್ಕೆ ಕೂಡ ಇದೆ.
Twitter Blue Tick: ಬ್ಲೂ ಟಿಕ್‌ಗೆ ಭಾರತೀಯರು ಹಣ ನೀಡ್ತಾರಾ? ತಜ್ಞರ ಅಭಿಪ್ರಾಯ ಹೀಗಿದೆ ನೋಡಿ
ಸಣ್ಣ ಮೊತ್ತ ಕೂಡ ಹೂಡಿಕೆ ಮಾಡಬಹುದು
ಎಲ್ಐಸಿ ಜೀವನ ಅಕ್ಷಯ ಯೋಜನೆಯಲ್ಲಿ ಸಣ್ಣ ಮೊತ್ತ ಕೂಡ ಹೂಡಿಕೆ (Invest) ಮಾಡಬಹುದು. ಇದ್ರಿಂದ ನೀವು ವಾರ್ಷಿಕ 12,000ರೂ. ಪಿಂಚಣಿ ಪಡೆಯಬಹುದು. ಇದಕ್ಕೆ ನೀವು ಒಮ್ಮೆಗೆ ಒಂದು ಲಕ್ಷ ರೂ. ಹೂಡಿಕೆ ಮಾಡಿದ್ರೆ ಸಾಕು. ಈ ಯೋಜನೆಯಲ್ಲಿ ಹೂಡಿಕೆಗೆ ನಿರ್ದಿಷ್ಟ ಗರಿಷ್ಠ ಮಿತಿಯಿಲ್ಲ.