ಖಾದ್ಯ ತೈಲಗಳ ಬೆಲೆ ಇಳಿಸುವಂತೆ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ

By Kannadaprabha NewsFirst Published May 5, 2023, 12:01 PM IST
Highlights

ಅಂತಾರಾಷ್ಟ್ರೀಯವಾಗಿ ಖಾದ್ಯ ತೈಲಗಳ ಬೆಲೆ ಕಡಿಮೆಯಾಗಿರುವುದರಿಂದ ಗ್ರಾಹಕರ ಹಿತದೃಷ್ಟಿಯಿಂದ ದೇಶೀಯವಾಗಿಯೂ ಬೆಲೆ ಇಳಿಕೆ ಮಾಡುವಂತೆ ಖಾದ್ಯತೈಲ (edible oils) ಕಂಪನಿಗಳಿಗೆ ಕೇಂದ್ರ ಸರ್ಕಾರ ಗುರುವಾರ ಸೂಚನೆ ನೀಡಿದೆ. ಅದರ ಬೆನ್ನಲ್ಲೇ ಕೆಲ ಕಂಪನಿಗಳು ದರ ಇಳಿಕೆಯ ನಿರ್ಧಾರ ಪ್ರಕಟಿಸಿವೆ.

ನವದೆಹಲಿ: ಅಂತಾರಾಷ್ಟ್ರೀಯವಾಗಿ ಖಾದ್ಯ ತೈಲಗಳ ಬೆಲೆ ಕಡಿಮೆಯಾಗಿರುವುದರಿಂದ ಗ್ರಾಹಕರ ಹಿತದೃಷ್ಟಿಯಿಂದ ದೇಶೀಯವಾಗಿಯೂ ಬೆಲೆ ಇಳಿಕೆ ಮಾಡುವಂತೆ ಖಾದ್ಯತೈಲ (edible oils) ಕಂಪನಿಗಳಿಗೆ ಕೇಂದ್ರ ಸರ್ಕಾರ ಗುರುವಾರ ಸೂಚನೆ ನೀಡಿದೆ. ಅದರ ಬೆನ್ನಲ್ಲೇ ಕೆಲ ಕಂಪನಿಗಳು ದರ ಇಳಿಕೆಯ ನಿರ್ಧಾರ ಪ್ರಕಟಿಸಿವೆ.

2021-22ನೇ ಸಾಲಿನಲ್ಲಿ 1.75 ಲಕ್ಷ ಕೋಟಿ ರು. ಮೌಲ್ಯದ ಖಾದ್ಯ ತೈಲನ್ನು ಭಾರತದ ಕಂಪನಿಗಳು ಆಮದು ಮಾಡಿಕೊಂಡಿವೆ. ಈ ಕಂಪನಿಗಳು ಪಾಮ್‌ ಎಣ್ಣೆಯನ್ನು (Palm Oil) ಮಲೇಷ್ಯಾ (Malaysia) ಮತ್ತು ಇಂಡೋನೇಷ್ಯಾದಿಂದ (Indonesia) ಹಾಗೂ ಸೋಯಾಬೀನ್‌ ಎಣ್ಣೆಯನ್ನು (soybean) ಅರ್ಜೇಂಟೀನಾ (Argentina) ಮತ್ತು ಬ್ರೆಜಿಲ್‌ನಿಂದ (Brazil) ಆಮದು ಮಾಡಿಕೊಳ್ಳುತ್ತವೆ. ಈ ತೈಲಗಳ ಬೆಲೆ ಅಂತಾರಾಷ್ಟ್ರೀಯವಾಗಿ ಇಳಿಕೆಯಾಗಿರುವುದರಿಂದ ಬೆಲೆ ಇಳಿಕೆ ಮಾಡಲು ಸರ್ಕಾರ ಸೂಚಿಸಿದೆ. ಧಾರಾ ಹೆಸರಿನಲ್ಲಿ ಅಡಿಗೆಎಣ್ಣೆಯನ್ನು ಮಾರಾಟ ಮಾಡುವ ಮದರ್‌ ಡೈರಿ ಈಗಾಗಲೇ ಬೆಲೆಯನ್ನು 15ರಿಂದ 20 ರು. ಇಳಿಕೆ ಮಾಡಿರುವುದಾಗಿ ಘೋಷಿಸಿದೆ.

Health Tips: ಆಗಾಗ ಆರೋಗ್ಯ ಹದಗೆಡ್ತಿದ್ಯಾ? ಅಡುಗೆಗೆ ಬಳಸೋ ಎಣ್ಣೆ ಸರಿಯಿದ್ಯಾ ಚೆಕ್ ಮಾಡ್ಕೊಳ್ಳಿ

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಕಡಲೆಕಾಯಿ (groundnut) ಎಣ್ಣೆ ಪ್ರತಿ ಕೇಜಿಗೆ 189.13 ರು., ಸಾಸಿವೆ ಎಣ್ಣೆ ಕೇಜಿಗೆ 150.84 ರು., ವನಸ್ಪತಿ ಕೇಜಿಗೆ 132.62 ರು., ಸೋಯಾಬೀನ್‌ ಎಣ್ಣೆ (soybean) 138.2 ರು., ಸೂರ್ಯಕಾಂತಿ ಎಣ್ಣೆ 145.15 ರು. ಮತ್ತು ಪಾಮ್‌ ಎಣ್ಣೆ 110.05 ರು.ನಷ್ಟಿದೆ.

ಬಳಸಿದ ಎಣ್ಣೆಯನ್ನೆ ಮತ್ತೆ ಮತ್ತೆ ಬಳಸ್ತಿದೀರಾ? ಆರೋಗ್ಯಕ್ಕೆ ಅಪಾಯವಿದೆ ಎಚ್ಚರ 

ಕೇಂದ್ರದ ಸೂಚನೆ ಬೆನ್ನಲ್ಲೇ ದರ ಇಳಿಸಿದ ಕಂಪನಿಗಳು

ಕೇಂದ್ರದ ಸೂಚನೆಯ ಬೆನ್ನಲೇ  ವಿವಿಧ ಕಂಪನಿಗಳು ಅಡುಗೆ ಎಣ್ಣೆ ದರವನ್ನು ಇಳಿಕೆ ಮಾಡಿವೆ. ಮದರ್ ಡೈರಿ  ಸಂಸ್ಥೆಯ ಧಾರ ಅಡುಗೆ ಎಣ್ಣೆಯ ದರ ಲೀಟರ್‌ಗೆ 15 ರಿಂದ 20 ರೂಪಾಯಿವರೆಗೆ ಇಳಿಕೆ ಆಗಲಿದೆ. ಮುಂದಿನ ವಾರದಿಂದ ಇಳಿಕೆಯಾದ ದರದ ಎಣ್ಣೆ ಪ್ಯಾಕೇಟ್‌ಗಳು ಮಾರುಕಟ್ಟೆಯಲ್ಲಿ ಸಿಗಲಿದೆ.  ಧಾರಾ ಸಂಸ್ಥೆಯ ಸೋಯಾಬೀನ್ ಎಣ್ಣೆ ದರ  ಒಂದು ಲೀಟರ್ ಪ್ಯಾಕ್‌ಗೆ 170 ರೂ ಇದ್ದು, 150 ರೂಗೆ ಇಳಿಕೆ ಆಗಿದೆ.  ಹಾಗೆಯೇ ಧಾರಾದ ಅಕ್ಕಿ ಹೊಟ್ಟಿನ ಸಂಸ್ಕರಿಸಿದ ಎಣ್ಣೆ ದರ  ಲೀಟರ್‌ಗೆ 190 ರೂಪಾಯಿ ಇದ್ದು, 170ಕ್ಕೆ ಇಳಿಕೆ ಆಗಿದೆ. ತಕ್ಷಣದಿಂದ  ಜಾರಿಗೆ ಬರುವಂತೆ ಮದರ್ ಡೇರಿಗೆ ಸೇರಿದ ಧಾರಾ ಸಂಸ್ಥೆ ಎಣ್ಣೆ ದರ ಇಳಿಕೆ ಮಾಡಿದೆ. 

click me!