ಶಿಸ್ತುಬದ್ಧ ಹೂಡಿಕೆಗೆ ಎಲ್ಐಸಿ ತಂದಿದೆ ಹೊಸ ಪಿಂಚಣಿ ಯೋಜನೆ; ಏನಿದು ನ್ಯೂ ಪೆನ್ಷನ್ ಫ್ಲಸ್? ಇಲ್ಲಿದೆ ಮಾಹಿತಿ

By Suvarna NewsFirst Published Sep 6, 2022, 6:39 PM IST
Highlights

ಇಂದಿನ ಜೊತೆಗೆ ಮುಂದಿನ ಬಗ್ಗೆಯೂ ಇಂದು ಯೋಚಿಸಬೇಕಾದ ಅಗತ್ಯವಿದೆ. ಹೀಗಾಗಿ ಇಂದು ಬಹುತೇಕರು ನಿವೃತ್ತಿ ಬದುಕಿಗಾಗಿ ಉದ್ಯೋಗ ಸಿಕ್ಕ ತಕ್ಷಣವೇ ಉಳಿತಾಯ ಮಾಡಲು ಪ್ರಾರಂಭಿಸುತ್ತಾರೆ.ಇದನ್ನು ಗಮನಿಸಿಯೇ ಎಲ್ಐಸಿ 'ನ್ಯೂ ಪೆನ್ಷನ್ ಫ್ಲಸ್ ' ಎಂಬ ಹೊಸ ಪಾಲಿಸಿಯನ್ನು ಪರಿಚಯಿಸಿದೆ. 

ನವದೆಹಲಿ (ಸೆ.6): ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಭವಿಷ್ಯದ ಆರ್ಥಿಕ ಭದ್ರತೆ ಬಗ್ಗೆ ಯೋಚಿಸುತ್ತಾರೆ. ಮುಂದಿನ ಬದುಕಿಗೆ ಆರ್ಥಿಕ ಯೋಜನೆ ರೂಪಿಸುತ್ತಾರೆ. ಶಿಸ್ತು ಹಾಗೂ ಕ್ರಮಬದ್ಧವಾಗಿ ಆದಾಯದಲ್ಲಿ ಒಂದಿಷ್ಟು ಭಾಗವನ್ನು ಉಳಿಸುತ್ತಾರೆ ಕೂಡ. ಇಂದಿನ ಪೀಳಿಗೆಯ ಈ ಅಭ್ಯಾಸವನ್ನು ಗಮನಿಸಿ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಸೆ.5ರಂದು 'ನ್ಯೂ ಪೆನ್ಷನ್ ಫ್ಲಸ್ ' ಎಂಬ ವೈಯಕ್ತಿಕ ಪಿಂಚಣಿ ಯೋಜನೆಯನ್ನು ರೂಪಿಸಿದೆ. ಈ ಯೋಜನೆ ಪಾಲಿಸಿದಾರರಿಗೆ ವ್ಯವಸ್ಥಿತ ಹಾಗೂ ಶಿಸ್ತುಬದ್ಧ ವಿಧಾನದಲ್ಲಿ ಉಳಿತಾಯ ಮಾಡಲು ನೆರವು ನೀಡಲಿದೆ. ಇನ್ನು ಈ ಉಳಿತಾಯವನ್ನು ನೀವು ಅವಧಿಯ ಕೊನೆಯಲ್ಲಿ ವರ್ಷಾಶನ ಯೋಜನೆ ಖರೀದಿಸುವ ಮೂಲಕ ನಿಯಮಿತ ಆದಾಯದ ಮೂಲವನ್ನಾಗಿ ಕೂಡ ಪರಿವರ್ತಿಸಿಕೊಳ್ಳಬಹುದು. ನೀವು ಈ ಯೋಜನೆಯನ್ನು ಒಂದೇ ಪ್ರೀಮಿಯಂ ಪಾವತಿ ಪಾಲಿಸಿಯಾಗಿ ಅಥವಾ ನಿಯಮಿತ ಪ್ರೀಮಿಯಂ ಪಾವತಿ ಪಾಲಿಸಿಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಪಾಲಿಸಿ ಅವಧಿಯಲ್ಲಿ ಪ್ರೀಮಿಯಂ ಅನ್ನು ನಿಯಮಿತ ಪಾವತಿ ಆಯ್ಕೆ ಅಡಿಯಲ್ಲಿ ಪಾವತಿಸಬಹುದು. ಕನಿಷ್ಠ ಹಾಗೂ ಗರಿಷ್ಠ ಪ್ರೀಮಿಯಂ ಮಿತಿ, ಪಾಲಿಸಿ ಅವಧಿ ಹಾಗೂ ವಯಸ್ಸಿನ ಆಧಾರದಲ್ಲಿ ಪಾಲಿಸಿದಾರ ಪ್ರೀಮಿಯಂ ಮೊತ್ತ ಹಾಗೂ ಪಾಲಿಸಿ ಅವಧಿಯನ್ನು ಆಯ್ಕೆ ಮಾಡಬಹುದು. 

ಇನ್ನು ಈ ಪಾಲಿಸಿಯಲ್ಲಿ ಪ್ರೀಮಿಯಂಗಳನ್ನು ನಾಲ್ಕು ವಿವಿಧ ಮಾದರಿಯ ನಿಧಿಗಳಲ್ಲಿ ಒಂದರಲ್ಲಿ ಹೂಡಿಕೆ ಮಾಡಲು ಪಾಲಿಸಿದಾರರಿಗೆ ಅವಕಾಶ ನೀಡಲಾಗಿದೆ. ಇನ್ನು ಈ ಪಾಲಿಸಿಯಲ್ಲಿ ಭರವಷೆ ನೀಡಿರುವ ನಿಗದಿತ ಹೆಚ್ಚುವರಿ ಮೊತ್ತವನ್ನು ಕೂಡ ಪಾಲಿಸಿದಾರರಿಗೆ ಪಾವತಿಸಲಾಗುತ್ತದೆ. ಇದು ವಾರ್ಷಿಕ ಪ್ರೀಮಿಯಂನ ಶೇಕಡವಾರು ಲೆಕ್ಕದಲ್ಲಿ ನೀಡಲಾಗುತ್ತದೆ. ಅಂದರೆ ನಿಯಮಿತ ಪ್ರೀಮಿಯಂ ಆಯ್ಕೆ ಮಾಡಿಕೊಂಡವರಿಗೆ ಇದು ಶೇ.5.0-15.5ರಷ್ಟಿರುತ್ತದೆ. ಇನ್ನು ಒಂದೇ ಪ್ರೀಮಿಯಂ ಪಾವತಿ ಮಾಡೋರಿಗೆ ಪಾಲಿಸಿಯ ನಿರ್ದಿಷ್ಟ ಅವಧಿ ಪೂರ್ಣಗೊಂಡ ಬಳಿಕ ಶೇ. 5ರಷ್ಟು ಹೆಚ್ಚುವರಿ ಮೊತ್ತ ಪಾವತಿಸಲಾಗುತ್ತದೆ. 

Personal Finance: ಕ್ರೆಡಿಟ್ ಕಾರ್ಡ್ ಇಲ್ವಾ? ಅದ್ರ ಲಾಭ ತಿಳಿದ್ರೆ ಬಿಡೋದಿಲ್ಲ

ಈ ವರ್ಷದ ಮೇನಲ್ಲಿ ಎಲ್ಐಸಿ (LIC) ಐಪಿಒ (IPO) ನಡೆದಿತ್ತು. 21,000 ಕೋಟಿ ರೂ. ಗಾತ್ರದ ಭಾರತದ (India) ಅತೀದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಗಳಿಸಿದ ಎಲ್ಐಸಿ ಐಪಿಒ ಮೇ 4 ರಿಂದ ಮೇ 9 ರ ತನಕ ಒಟ್ಟು 6 ದಿನಗಳ ಕಾಲ ನಡೆದಿತ್ತು. ಈ ಐಪಿಒಗೆ ಹೂಡಿಕೆದಾರರಿಂದ (Investors) ಭರ್ಜರಿ ಸ್ಪಂದನೆ ಸಿಕ್ಕಿತು. ಆರು ದಿನಗಳ ಬಿಡ್ಡಿಂಗ್ ನ (Bidding) ಕೊನೆಯಲ್ಲಿ ಎಲ್ಐಸಿ ಷೇರುಗಳು  2.95 ಬಾರಿ ಸಬ್ ಸ್ಕ್ರೈಬ್ (Subscribe) ಆಗಿವೆ. ಷೇರುಗಳು (Shares) ಅತ್ಯಧಿಕ ಬೆಲೆ ಶ್ರೇಣಿಯಲ್ಲಿ ಮಾರಾಟವಾಗುವ ಜೊತೆಗೆ ಸ್ಥಳೀಯ ಹೂಡಿಕೆದಾರರಿಂದ (Investors) ಭಾರೀ ಬೇಡಿಕೆ ವ್ಯಕ್ತವಾಗಿತ್ತು. 16.2 ಕೋಟಿ ಈಕ್ವಿಟಿ ಷೇರುಗಳ ಗಾತ್ರದ ಐಪಿಒಗೆ 47.83 ಕೋಟಿ ಬಿಡ್ಡಿಂಗ್ ಗಳು ಸಲ್ಲಿಕೆ ಆಗಿದ್ದವು. ಎಲ್ಐಸಿ ಐಪಿಒನಲ್ಲಿ ಪ್ರತಿ ಷೇರಿನ ವಿತರಣ ಬೆಲೆ  949 ರೂ.ನಿಗದಿಪಡಿಸಲಾಗಿತ್ತು. ಆದರೆ, ಪಾಲಿಸಿದಾರರಿಗೆ ಪ್ರತಿ ಷೇರಿನ ಮೇಲೆ  60 ರೂ. ಹಾಗೂ ಚಿಲ್ಲರೆ ಹೂಡಿಕೆದಾರರು ಹಾಗೂ ಎಲ್ಐಸಿ ಉದ್ಯೋಗಿಗಳಿಗೆ ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿತ್ತು.

ಭಾರತದಲ್ಲಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಹೆಚ್ಚುತ್ತಾ? ಸರ್ಕಾರಕ್ಕೆ ಇಪಿಎಫ್ಒ ನೀಡಿದ ಸಲಹೆ ಏನು?

ಬಾಂಬೆ ಷೇರು ಮಾರುಕಟ್ಟೆಯಲ್ಲಿ (BSE) ಮಂಗಳವಾರ (ಸೆ.6) ಎಲ್ಐಸಿಯ (LIC) ಪ್ರತಿ ಷೇರು 653.10ರೂ.ಗೆ ಟ್ರೇಡ್ ಆಗುತ್ತಿದೆ. ಇದು ಈ ಹಿಂದಿನ ದಿನಕ್ಕೆ ಹೋಲಿಸಿದ್ರೆ ಶೇ. 0.99ರಷ್ಟು ಇಳಿಕೆ ದಾಖಲಿಸಿದೆ.ಎಲ್ಐಸಿಯ ಪ್ರಸ್ತುತ ಮಾರುಕಟ್ಟೆ ಬಂಡವಾಳ 5,53,721.92ಲಕ್ಷ ಕೋಟಿ ರೂ. ಆಗಿದೆ. ಮೇನಲ್ಲಿ ಮಾರುಕಟ್ಟೆಗೆ ಲಿಸ್ಟ್ ಆದ ದಿನ ಎಲ್ಐಸಿ ಮೌಲ್ಯದ ಆಧಾರದಲ್ಲಿ ಐದನೇ ಅತೀದೊಡ್ಡ ಕಂಪನಿಯಾಗಿತ್ತು. ಎಲ್ಐಸಿ ಪ್ರತಿ  ಷೇರು ಮಂಗಳವಾರ ಬಿಎಸ್ ಇಯಲ್ಲಿ ಶೇ.8.61 ಡಿಸ್ಕೌಂಟ್ ಗೆ 867.20 ರೂ.ಗೆ ದಿನದ ಪ್ರಾರಂಭ ಮಾಡಿತ್ತು. 


 

click me!