Personal Finance: ಕ್ರೆಡಿಟ್ ಕಾರ್ಡ್ ಇಲ್ವಾ? ಅದ್ರ ಲಾಭ ತಿಳಿದ್ರೆ ಬಿಡೋದಿಲ್ಲ

By Suvarna NewsFirst Published Sep 6, 2022, 5:25 PM IST
Highlights

ಬ್ಯಾಂಕ್ ನಲ್ಲಿ ಅಕೌಂಟ್ ಇಲ್ಲದ ಎಷ್ಟೋ ಮಂದಿ ನಮ್ಮ ದೇಶದಲ್ಲಿದ್ದಾರೆ. ಹಾಗೆ ನಾಲ್ಕೈದು ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರೂ ಇದ್ದಾರೆ. ಬ್ಯಾಂಕ್ ಸೇವೆ ಬಗ್ಗೆ ತಿಳಿಯಲು ಜನರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಸಕ್ತಿ ತೋರ್ತಿದ್ದಾರೆ. ಕ್ರೆಡಿಟ್ ಕಾರ್ಡ್ ಬಗ್ಗೆಯೂ ಜನರು ಮಾಹಿತಿ ಕಲೆ ಹಾಕ್ಬೇಕಿದೆ.   
 

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಯಾರ ಬಳಿ ಇರೋದಿಲ್ಲ ಹೇಳಿ. ಬಹುತೇಕ ಎಲ್ಲರೂ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಹೊಂದಿರ್ತಾರೆ. ಕೆಲವರು ಒಂದಲ್ಲ, ಎರಡು ಮೂರು ಕ್ರೆಡಿಟ್ ಕಾರ್ಡ್ ಇಟ್ಟುಕೊಂಡಿರ್ತಾರೆ. ಇಷ್ಟಿದ್ರೂ ಕೆಲವರಿಗೆ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಬಗ್ಗೆ ಸರಿಯಾಗಿ ತಿಳಿದಿರೋದಿಲ್ಲ. ಬ್ಯಾಂಕ್ ಕೊಡ್ತಿದೆ ಎನ್ನುವ ಕಾರಣಕ್ಕೆ ಕೆಲವರು ಕಾರ್ಡ್ ಇಟ್ಟುಕೊಂಡಿರ್ತಾರೆ. ಮತ್ತೆ ಕೆಲವರು ಅದನ್ನು ಸರಿಯಾಗಿ ಬಳಸಲು ಕಲಿತಿರೋದಿಲ್ಲ. ನಾವಿಂದು ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಕೆಲ ವಿಷ್ಯಗಳನ್ನು ನಿಮಗೆ ಹೇಳ್ತೇವೆ. 

ಕ್ರೆಡಿಟ್ ಕಾರ್ಡ್ (Credit Card) ಪ್ರಯೋಜನ ಏನು ಗೊತ್ತಾ? : ದೇಶ ಡಿಜಿಟಲ್ (Digital) ಆಗ್ತಿದೆ. ದೇಶ ಡಿಜಿಟಲೀಕರಣಗೊಳ್ತಿದ್ದರೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚಾಗಲು, ಅದಕ್ಕೆ ಸಿಗ್ತಿರುವ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ (Cashback), ರಿವಾರ್ಡ್ ಪಾಯಿಂಟ್‌ಗಳು, ಉಡುಗೊರೆ ಕಾರ್ಡ್‌ಗಳು, ವೋಚರ್‌ಗಳು ಕೂಡ ಕಾರಣವಾಗಿದೆ. ನಿಮ್ಮ ಬಳಿಯೂ ಕ್ರೆಡಿಟ್ ಕಾರ್ಡ್ ಇದ್ದರೆ ಅದ್ರ ಕೆಲ ಪ್ರಯೋಜನವನ್ನು ನೀವು ತಿಳಿದುಕೊಳ್ಳಿ.

ಶಾಪಿಂಗ್ ಸುಲಭ (Easy Shopping) : ಕ್ರೆಡಿಟ್ ಕಾರ್ಡ್ ಇದ್ದರೆ ನಿಮ್ಮ ಶಾಪಿಂಗ್ ಸುಲಭ. ನೀವು ಖರೀದಿಸಿದ ವಸ್ತುವಿನ ಶುಲ್ಕವನ್ನು ಆ ಕ್ಷಣ ನೀಡ್ಬೇಕೆಂದಿಲ್ಲ. ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದ್ರೆ ಬಿಲ್ ಪಾವತಿಗೆ 1 ತಿಂಗಳ ಸಮಯ ನಿಮಗೆ ಸಿಗಲಿದೆ. ಹಾಗಾಗಿ ಮೊದಲು ವಸ್ತು ಖರೀದಿಸಿ ನಂತ್ರ ಬಿಲ್ ಪಾವತಿ ಮಾಡ್ಬಹುದು. ಆದ್ರೆ ಕ್ರೆಡಿಟ್ ಕಾರ್ಡ್ ನಲ್ಲಿ ಈ ಸೌಲಭ್ಯವಿದೆ ಎನ್ನುವ ಕಾರಣಕ್ಕೆ ನೀವು ಮಿತಿ ಮೀರಿ ಖರೀದಿ ಮಾಡಲು ಹೋಗ್ಬೇಡಿ. ಯಾಕೆಂದ್ರೆ ಕೊನೆಯಲ್ಲಿ ಕೂಡ ಹಣ ಪಾವತಿ ಮಾಡುವವರು ನೀವೇ ಎಂಬ ಸಂಗತಿ ನಿಮಗೆ ತಿಳಿದಿರಲಿ. 

ಕ್ರೆಡಿಟ್ ಕಾರ್ಡ್ ಸಾಲ (Credit Card Loan) : ನಿಮಗೆ ಸಾಲದ ಅವಶ್ಯಕತೆ ಇದೆ ಎಂದಿಟ್ಟುಕೊಳ್ಳಿ, ಅದಕ್ಕಾಗಿ ನೀವು ಅಲ್ಲಿ, ಇಲ್ಲಿ ಅಲೆಯಬೇಕಾಗಿಲ್ಲ. ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯಬಹುದು. ನಿಮ್ಮ ಕ್ರೆಡಿಟ್ ಕಾರ್ಡ್ ಆಧಾರದ ಮೇಲೆ ಬ್ಯಾಂಕ್ ಸಾಲ ನೀಡುತ್ತದೆ. ಸಾಲ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೂರ್ ಉತ್ತಮವಾಗಿರಬೇಕು. ನೀವು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಕ್ರೆಡಿಟ್ ಬಿಲ್ ಪಾವತಿ ಮಾಡಿದ್ದರೆ ನಿಮ್ಮ ಸ್ಕೋರ್ ಹೆಚ್ಚಿರುತ್ತದೆ. ಆಗ ಬ್ಯಾಂಕ್ ಯಾವುದೇ ಸಮಸ್ಯೆ ಮಾಡದೆ ನಿಮಗೆ ಸಾಲ ನೀಡುತ್ತದೆ.

ಡೆತ್ ಕವರ್ (Death Cover) : ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ನಲ್ಲಿ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗ್ತಿದೆ. ಟರ್ಮ್ ಅಥವಾ ಆಕಸ್ಮಿಕ ಸಾವಿನ ಕವರ್ ಪ್ರಯೋಜನ ಕೂಡ ಸಿಗ್ತಿದೆ. ಇದಕ್ಕಾಗಿ ಗ್ರಾಹಕರು ಪ್ರತೇಕವಾಗಿ ಪ್ರೀಮಿಯಂ ಪಾವತಿಸಬೇಕಾಗಿಲ್ಲ. 

ಆನ್ಲೈನ್ ಶಾಪಿಂಗ್ ನಲ್ಲಿ (Online Shopping) ಭರ್ಜರಿ ಆಫರ್ : ಆನ್ಲೈನ್ ನಲ್ಲಿ ವಸ್ತುಗಳನ್ನು ಖರೀದಿ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆನ್ಲೈನ್ ಕಂಪನಿಗಳು ಸಾಕಷ್ಟು ಆಫರ್ ನೀಡ್ತವೆ. ಅದರಲ್ಲೂ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಕಂಪನಿಗಳು ಪ್ರತ್ಯೇಕ ಆಫರ್ ಗಳನ್ನು ನೀಡ್ತವೆ. ಕ್ಯಾಶ್‌ಬ್ಯಾಕ್, ಗಿಫ್ಟ್ ಕಾರ್ಡ್‌, ವೋಚರ್‌, ಪೆಟ್ರೋಲ್ ರೀಚಾರ್ಜ್‌ ಹೀಗೆ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸಾಕಷ್ಟು ಆಫರ್ ಲಭ್ಯವಿದೆ. 

ಮದುವೆ ಆಯಿತಾ? ಕೂಡಲೇ ಈ ಕೆಲಸ ಮಾಡಿ!

ಸುರಕ್ಷಿತ ವ್ಯವಹಾರ (Safety Transaction) : ಕ್ರೆಡಿಟ್ ಕಾರ್ಡ್ ಮೂಲಕ ನೀವು ಸುರಕ್ಷಿತವಾಗಿ ವ್ಯವಹಾರ ನಡೆಸಬಹುದು. ಇದ್ರಲ್ಲಿ ಒಟಿಪಿ ಹಾಗೂ ಪಿನ್ ನಂಬರ್ ನೀಡುವುದ್ರಿಂದ  ಇದು ಸುರಕ್ಷಿತ. 

ನಗದು ವಿತ್ ಡ್ರಾ ಸೌಲಭ್ಯ (Cash Withdrawal) : ಕ್ರೆಡಿಟ್ ಕಾರ್ಡ್ ಬಳಸಿ ನೀವು ಎಟಿಎಂನಿಂದ ನೇರವಾಗಿ ನಗದನ್ನು ವಿತ್ ಡ್ರಾ ಮಾಡಬಹುದು. ತುರ್ತು ಸಂದರ್ಭದಲ್ಲಿ ಇದು ನೆರವಿಗೆ ಬರಲಿದೆ. 

ವಿದೇಶದಲ್ಲಿ ಮಜಾ ಮಾಡ್ಬೇಕಂದ್ರೆ ಈ Loan ಗೆ ಅಪ್ಲೈ ಮಾಡಿ

ಇಎಂಐ ಪರಿವರ್ತನೆ  : ದೊಡ್ಡ ಪ್ರಮಾಣದಲ್ಲಿ ನೀವು ಖರೀದಿ ಮಾಡಿ, ಆ ಖರ್ಚನ್ನು ನೀವು ಇಎಂಐ ಆಗಿ ಪರಿವರ್ತನೆ ಮಾಡಿಕೊಳ್ಳಬಹುದು. ನಂತ್ರ ಕೆಲವು ತಿಂಗಳ ಸಮಯ ತೆಗೆದುಕೊಂಡು ನೀವು ಇಎಂಐ ಮೂಲಕ ಹಣ ಪಾವತಿ ಮಾಡಬಹುದು. 

click me!