Business Idea: ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸಬೇಕೆ? ಈ ವ್ಯಾಪಾರವು 95% ಸಕ್ಸಸ್ ರೇಟ್ ಹೊಂದಿದ್ದು, ದಿನಕ್ಕೆ 2 ರಿಂದ 3 ಸಾವಿರ ರೂಪಾಯಿ ಆದಾಯ ಗಳಿಸಬಹುದು.
Less Capital More Profit: ಯಾವುದೇ ವ್ಯವಹಾರ ಆರಂಭಿಸಬೇಕಾದ್ರೆ ಅದು ಸಕ್ಸಸ್ ಆಗುತ್ತಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಗೊಂದಲ ಇರುತ್ತದೆ. ಸಕ್ಸಸ್ ರೇಟ್ ಎಂಬ ನಿಖರತೆ ಸಿಗದ ಹಿನ್ನೆಲೆ ಹೊಸಬರು ಮಾರುಕಟ್ಟೆಗೆ ಪ್ರವೇಶಿಸಲು ಹಿಂದೇಟು ಹಾಕುತ್ತಾರೆ. ಆದ್ರೆ ಇಂದು ನಾವು ಹೇಳುತ್ತಿರುವ ಬ್ಯುಸಿನೆಸ್ ಸಕ್ಸಸ್ ರೇಟ್ ಶೇಕಡಾ 90 ರಿಂದ 95ರಷ್ಟಿದೆ. ವರ್ಷದ 12 ತಿಂಗಳು ಈ ವ್ಯವಹಾರಕ್ಕೆ ಬೇಡಿಕೆ ಇರುತ್ತದೆ. ನಿಮಗೆ ಬೇಸರ ಅನ್ನಿಸಿದಾಗ ಬಾಗಿಲು ಹಾಕಿಕೊಂಡು ವಿಶ್ರಾಂತಿ ಪಡೆದುಕೊಳ್ಳಬಹುದು. ಈ ವ್ಯವಹಾರದಲ್ಲಿ ದಿನಕ್ಕೆ ಕನಿಷ್ಠ 2 ರಿಂದ 3 ಸಾವಿರ ರೂಪಾಯಿ ಆದಾಯ ಸಿಗುತ್ತದೆ. ಈ ವ್ಯವಹಾರಕ್ಕೆ ನೀವು ಹಾಕುವ ಬಂಡವಾಳದ ಮೇಲೆ ನಿಮ್ಮ ಲಾಭದ ಪ್ರಮಾಣ ಏರಿಕೆಯಾಗುತ್ತದೆ.
ಈ ಸಿಂಪಲ್ ವ್ಯವಹಾರವನ್ನು ನೀವಿರುವ ಪ್ರದೇಶದಲ್ಲಿಯೇ ಆರಂಭಿಸಬಹುದು. ನಿಮ್ಮ ನಡವಳಿಕೆ ಮತ್ತು ಮಾತುಗಳು ಸಹ ಈ ವ್ಯಾಪಾರದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಣ್ಣ ಪ್ರಮಾಣದಲ್ಲಿ ಈ ಬ್ಯುಸಿನೆಸ್ ಆರಂಭಿಸಿ ಕಡಿಮೆ ಸಮಯದಲ್ಲಿಯೇ ವ್ಯಾಪಾರವನ್ನು ವಿಸ್ತರಿಸಿಕೊಳ್ಳಬಹುದು. ಒಂದು ವೇಳೆ ನೀವು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ರೆ, ಸಮೀಪದ ಪಟ್ಟಣಗಳಲ್ಲಿ ಈ ವ್ಯವಹಾರ ಆರಂಭಿಸಬಹುದು.
ಇಂದು ಜನರು ಶುಚಿಯಾದ ಮತ್ತು ತಾಜಾ ತರಕಾರಿ ಎಷ್ಟೇ ದುಬಾರಿಯಾದ್ರೂ ಖರೀದಿಸುತ್ತಾರೆ. ತರಕಾರಿ ವ್ಯಾಪಾರ ವಾರದ ಎಲ್ಲಾ ದಿನಗಳಲ್ಲಿಯೂ ನಡೆಯುತ್ತದೆ. ರೈತರಿಂದ ಅಥವಾ ಎಪಿಎಂಸಿ ಮಾರುಟ್ಟೆಗಳಿಂದ ನೇರವಾಗಿ ತರಕಾರಿ ಖರೀದಿ ಮಾಡಿ ಮಾರಾಟ ಮಾಡೋದರಿಂದ ಲಾಭದ ಪ್ರಮಾಣ ಹೆಚ್ಚಳವಾಗುತ್ತದೆ. ಸೀಸನ್‌ಗಳಿಗೆ ತಕ್ಕಂತೆ ಸೊಪ್ಪು ಸೇರಿದಂತೆ ತರಕಾರಿ ಮಾಡೋದರಿಂದ ಗ್ರಾಹಕರ ಸಂಖ್ಯೆಯೂ ಅಧಿಕವಾಗುತ್ತದೆ.
4 ರಿಂದ 5 ಸಾವಿರ ರೂಪಾಯಿಯಲ್ಲಿ ಈ ವ್ಯವಹಾರವನ್ನು ರಸ್ತೆಬದಿಯಲ್ಲಿ ಕುಳಿತು ಆರಂಭಿಸಬಹುದು. ಇದಕ್ಕೆ ತಕ್ಕಡಿ ಸೇರಿದಂತೆ ತುಂಬಾ ಕಡಿಮೆ ಸಾಮಾಗ್ರಿಗಳು ಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಅನಾವಶ್ಯಕ ಖರ್ಚುಗಳು ಈ ವ್ಯವಹಾರದಲ್ಲಿ ಇರಲ್ಲ. ಒಂದು ವೇಳೆ ದಿನದ ಅಂತ್ಯಕ್ಕೆ ತರಕಾರಿ ಉಳಿದರೂ ಅದನ್ನು ಮನೆ ಬಳಕೆಗೆ ಬಳಸಿಕೊಳ್ಳಬಹುದು. ಈ ಮೂಲಕ ನೀವು ಮನೆಗೆ ಖರೀದಿಸುವ ತರಕಾರಿ ಹಣವನ್ನು ಉಳಿಸಬಹುದು.
ಇದನ್ನೂ ಓದಿ: 3 in 1 ಬ್ಯುಸಿನೆಸ್ ಐಡಿಯಾ; ಸ್ವಲ್ಪ ತಲೆ ಉಪಯೋಗಿಸಿದ್ರೆ ಮೂರೇ ತಿಂಗಳಲ್ಲಿ ಲಕ್ಷ ಲಕ್ಷ ಸಂಪಾದಿಸೋ ಸೂಪರ್ ವ್ಯವಹಾರ
ನೇರವಾಗಿ ಮಾರುಕಟ್ಟೆಯಲ್ಲಿ ಕುಳಿತು ತರಕಾರಿ ಮಾರಾಟ ಮಾಡೋದರ ಜೊತೆ ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳಿಗೂ ತರಕಾರಿ ಮಾರಾಟ ಮಾಡುವ ಆರ್ಡರ್ ಪಡೆಯುವ ಮೂಲಕ ಹೆಚ್ಚು ಲಾಭವನ್ನು ನಿಮ್ಮದಾಗಿಸಿಕೊಳ್ಳಬಹುದು. ತಾಜಾ ತರಕಾರಿ ನಿಮ್ಮಲ್ಲಿದ್ರೆ ಜನರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಕೊಂಚ ದುಬಾರಿಯಾದ್ರೂ ಪರವಾಗಿಲ್ಲ ಎಂದು ಫ್ರೆಶ್ ತರಕಾರಿ ಖರೀದಿಸುತ್ತಾರೆ.
Disclaimer:ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: ಎಷ್ಟೇ ಹುಡುಕಿದ್ರೂ ನೌಕರಿ ಸಿಗ್ತಿಲ್ಲವೇ? ಈ ಬ್ಯುಸಿನೆಸ್ ಮಾಡಿ ಪ್ರತಿದಿನ 2,000 ರೂ. ಗಳಿಸಿ