Price Hike : ಬೇಸಿಗೆ ಬಂತು, ಗಗನಕ್ಕೇರಿದ ನಿಂಬೆ ಬೆಲೆ, ಬಳಕೆ ಮಿತಿಯಲ್ಲಿರಲಿ!

By Suvarna News  |  First Published Mar 13, 2023, 4:45 PM IST

ನಿಂಬೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಪಾನಕದಿಂದ ಹಿಡಿದು, ಅನೇಕ ಆಹಾರ ತಯಾರಿಕೆಗೆ ನಿಂಬೆ ಹಣ್ಣು ಬೇಕೇಬೇಕು. ದಿನಕ್ಕೆ ಮೂರ್ನಾಲ್ಕು ನಿಂಬೆ ಹಣ್ಣು ಖಾಲಿ ಮಾಡೋರು ನೀವಾಗಿದ್ರೆ ಎಚ್ಚೆತ್ತುಕೊಳ್ಳಿ. ಇಲ್ಲ ಅಂದ್ರೆ ನಿಮ್ಮ ಜೇಬು ಖಾಲಿಯಾಗೋದು ಗ್ಯಾರಂಟಿ.
 


ಇನ್ನೇನು ಬೇಸಿಗೆ ಶುರುವಾಗ್ತಿದೆ. ನಿಧಾನವಾಗಿ ಬಿಸಿಲ ಧಗೆ ಹೆಚ್ಚಾಗ್ತಿದೆ. ಜನರಲ್ಲಿ ಬಾಯಾರಿಕೆ, ಸುಸ್ತು ಜಾಸ್ತಿಯಾಗುತ್ತಿದೆ. ಬಿಸಿಲಿನಿಂದ ನೆಮ್ಮದಿ ಪಡೆಯಲು ಜನರು ಎಳನೀರು, ಜ್ಯೂಸ್ ಜೊತೆಗೆ ನಿಂಬೆ ಹಣ್ಣಿನ ಪಾನಕ ಸೇವನೆ ಮಾಡಲು ಇಷ್ಟಪಡ್ತಾರೆ. ಬೇಸಿಗೆ ಬಂತೆಂದ್ರೆ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತದೆ. ಭಾರತದ ಎಲ್ಲ ಭಾಗಗಳಲ್ಲಿ ನಿಂಬೆ ಹಣ್ಣಿನ ಬಳಕೆ ಹೆಚ್ಚಿದೆ. ಜನರು ಆರೋಗ್ಯಕರ ನಿಂಬೆ ಪಾನಕ ಸೇವನೆ ಮಾಡಲು ಆದ್ಯತೆ ನೀಡ್ತಾರೆ. ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಬೆಲೆ ಏರಿಕೆಯಾಗ್ಲೇಬೇಕು. ಈಗ ಅದೇ ಆಗಿದೆ. ನಿಂಬೆ ಹಣ್ಣಿನ ಬೆಲೆ ಬೇಸಿಗೆ ಆರಂಭದಲ್ಲಿಯೇ ಆಕಾಶ ಮುಟ್ತಿದೆ. 

ದೆಹಲಿ (Delhi) ಮಾರುಕಟ್ಟೆಯಲ್ಲಿ ಇಷ್ಟಾಗಿದೆ ನಿಂಬೆ ಹಣ್ಣಿನ ಬೆಲೆ : ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ನಿಂಬೆ (Lemon) ಹಣ್ಣಿಗೆ ಹೆಚ್ಚು ಬೇಡಿಕೆಯಿದೆ. ಕಳೆದ ಒಂದೆರಡು ವಾರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಿಂಬೆ ಹಣ್ಣು ಮಾರಾಟವಾಗ್ತಿದೆ. ಇಲ್ಲಿ ಈಗ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದೆ. ದೆಹಲಿ ಮಾರುಕಟ್ಟೆಯಲ್ಲಿ ಜನವರಿ ತಿಂಗಳಿನಲ್ಲಿ ನಿಂಬೆ ಹಣ್ಣು ಕೆ.ಜಿಗೆ 80 ರಿಂದ 100 ರೂಪಾಯಿ ಒಳಗಿತ್ತು. ಆದ್ರೆ ಈ ವಾರ ನಿಂಬೆ ಹಣ್ಣಿನ ಬೆಲೆ ಕೆ.ಜಿಗೆ 150ರಿಂದ 170 ರೂಪಾಯಿಯಾಗಿದೆ. 

Tap to resize

Latest Videos

ಏರ್ ಟೆಲ್, ಜಿಯೋಗೆ BSNL ಟಕ್ಕರ್; 150 ದಿನಗಳ ಪ್ಲ್ಯಾನ್ ಕೇವಲ 397ರೂ.ಗೆ!

ರಿಟೇಲ್ (Retail) ನಲ್ಲಿ ಇಷ್ಟು ರೂಪಾಯಿಗೆ ಮಾರಾಟವಾಗ್ತಿದೆ ನಿಂಬು : ಸಗಟು ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದ ಕಾರಣ ರಿಟೇಲ್ ಮಾರುಕಟ್ಟೆಯಲ್ಲಿ ಕೂಡ ನಿಂಬೆ ಹಣ್ಣಿನ ಬೆಲೆ ದುಬಾರಿಯಾಗಿದೆ. ಎರಡು ವಾರಗಳ ಹಿಂದೆ 10 ರೂಪಾಯಿಗೆ ಮೂರರಿಂದ ನಾಲ್ಕು ನಿಂಬೆ ಹಣ್ಣು ಸಿಗ್ತಿತ್ತು. ಆದ್ರೆ ಈ ವಾರ 10 ರೂಪಾಯಿಗೆ ಚಿಕ್ಕದಾದ್ರೆ ಎರಡು ನಿಂಬೆ ಹಣ್ಣು ಸಿಗ್ತಿದೆ. ಅದೇ ಗಾತ್ರದಲ್ಲಿ ದೊಡ್ಡದಿರುವ ಹಾಗೂ ಒಳ್ಳೆ ಬಣ್ಣದ ನಿಂಬೆ ಹಣ್ಣಿನ ಬೆಲೆ ಒಂದಕ್ಕೆ 10 ರಿಂದ 15 ರೂಪಾಯಿಯಾಗಿದೆ.

ಬೆಂಗಳೂರಿನಲ್ಲಿ ನಿಂಬೆ ಹಣ್ಣಿನ ಬೆಲೆ ಎಷ್ಟು ? : ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ನಿಂಬೆ ಹಣ್ಣಿನ ಬೆಲೆ ಕಡಿಮೆಯೇನಿಲ್ಲ. ಇಲ್ಲೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಒಂದು ಕೆಜಿ ನಿಂಬೆ ಹಣ್ಣಿನ ಬೆಲೆ 170 ರೂಪಾಯಿ ತಲುಪಿದೆ. ಒಂದು ನಿಂಬೆ ಹಣ್ಣಿಗೆ 10 ರೂಪಾಯಿ ನೀಡುವ ಸ್ಥಿತಿ ನಿರ್ಮಾಣವಾಗಿದೆ.

ವ್ಯಾಪಾರಸ್ಥರು ಹೇಳೋದೇನು? : ಮಾರುಕಟ್ಟೆಯಲ್ಲಿ ಎರಡು ವಾರಗಳ ಹಿಂದೆ ಎಷ್ಟು ನಿಂಬೆ ಹಣ್ಣು ಬರ್ತಿತ್ತೋ ಅಷ್ಟೇ ನಿಂಬೆ ಹಣ್ಣು ಈಗ್ಲೂ ಬರ್ತಿದೆಯಂತೆ. ಆದ್ರೆ ಬೇಡಿಕೆ ಹೆಚ್ಚಾದ ಕಾರಣ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣು ಸ್ಟಾಕ್ ಆಗ್ತಿಲ್ಲ. ಎಲ್ಲ ನಿಂಬೆ ಹಣ್ಣು ಖಾಲಿಯಾಗ್ತಿದೆ. ಹಾಗಾಗಿ ಬೆಲೆ ಏರುತ್ತಿದೆ. ಆಜಾದ್ಪುರ ಮಂಡಿಯಲ್ಲಿ 70 ರೂಪಾಯಿ ಕೆಜಿಗೆ ಸಿಗ್ತಿದ್ದ ನಿಂಬೆ ಹಣ್ಣಿನ ಬೆಲೆ ಈಗ ಮೂರುಪಟ್ಟು ಹೆಚ್ಚಾಗಿದೆಯಂತೆ.

ಇನ್ಮುಂದೆ ಎಟಿಎಂನಲ್ಲೇ ಸಿಗುತ್ತೆ ಬಿರಿಯಾನಿ: 4 ನಿಮಿಷದಲ್ಲಿ ಸಿಗುತ್ತೆ ಬಿಸಿ ಬಿಸಿ, ಸ್ವಾದಿಷ್ಟ ಆಹಾರ..!

ಗುಜರಾತ್ ಸ್ಥಿತಿ ಹೀಗಿದೆ ? : ದೇಶದಲ್ಲಿಯೇ ಅತಿ ಹೆಚ್ಚು ನಿಂಬೆ ಹಣ್ಣು ಬೆಳೆಯುವ ಪ್ರದೇಶ ಗುಜರಾತ್. ಆದ್ರೆ ಮೂರು ವರ್ಷಗಳಿಂದ ಗುಜರಾತ್ ನಲ್ಲಿ ಬಿರುಗಾಳಿ ಬೀಸಿದ ಪರಿಣಾಮ ನಿಂಬೆ ಗಿಡಗಳು ನೆಲಕಚ್ಚಿವೆ. ಅತಿ ಹೆಚ್ಚು ನಿಂಬೆಹಣ್ಣಿನ ರಫ್ತುದಾರನಾಗಿರುವ ಭಾವನಗರದಲ್ಲಿ ಶೇಕಡಾ 80ರಷ್ಟು ಗಿಡಗಳು ಚಂಡಮಾರುತಕ್ಕೆ ಸಿಲುಕಿವೆ. ಇದ್ರಿಂದಾಗಿ ಬೆಳೆ ಕಡಿಮೆಯಾಗಿದೆ. ಬೇಸಿಗೆಯಲ್ಲಿ ನಿಂಬೆ ಹಣ್ಣಿಗೆ ಬರ ಬರಲು ಇದೇ ಕಾರಣವಾಗಿದೆ. ಮಾರ್ಚ್ ನಲ್ಲಿಯೇ ನಿಂಬೆ ಹಣ್ಣಿನ ಪರಿಸ್ಥಿತಿ ಹೀಗಿದೆ. ಇನ್ನು ಏಪ್ರಿಲ್ – ಮೇನಲ್ಲಿ ನಿಂಬೆ ಹಣ್ಣಿನ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮೇ ಸಮಯದಲ್ಲಿ ಕೆ.ಜಿ ನಿಂಬೆ ಹಣ್ಣಿನ ಬೆಲೆ 200ರ ಗಡಿದಾಟಬಹುದು ಎಂದು ಅಂದಾಜಿಸಲಾಗಿದೆ.
 

click me!