ಎಲ್ಲರೂ ಕೈ ತುಂಬಾ ಸಂಬಳ ಸಿಗುವ ಕೆಲಸದ ಹುಡುಕಾಟದಲ್ಲಿರುತ್ತಾರೆ. ಗೌತಮ್ ಅದಾನಿಯವರ ಕಂಪನಿಯ ಈ ನೌಕರರು ತಿಂಗಳಿಗೆ 10 ಲಕ್ಷಕ್ಕೂ ಅಧಿಕ ಸಂಬಳವನ್ನು ಪಡೆದುಕೊಳ್ಳುತ್ತಾರೆ.
ನವದೆಹಲಿ: ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಗೌತಮ್ ಅದಾನಿ, ಹಣದಲ್ಲಿ ಮಾತ್ರವಲ್ಲ ಹೃದಯದಲ್ಲಿಯೂ ಶ್ರೀಮಂತರು. ಗೌತಮ್ ಅದಾನಿ ಒಡೆತನದ ಪನಿಯ ನೌಕರರ ಅಂದಾಜು ಸರಾಸರಿ ಸಂಬಳ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗೋದು ನಿಜ. ಕಾಗ್ನಿಜೆಂಟ್ ಅಂತಹ ಜಾಗತೀಕ ಕಂಪನಿಗಳು ಹೊಸಬರನ್ನು 2.5 ಲಕ್ಷ ರೂಪಾಯಿ ಪ್ಯಾಕೇಜ್‌ನಲ್ಲಿ ನೇಮಕ ಮಾಡಿಕೊಳ್ಳುತ್ತವೆ. ಗೌತಮ್ ಅದಾನಿಯವರ ಇಂಡಿಯಾ ಇಂಡಸ್ಟ್ರಿ ಗ್ರೂಪ್ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಅಂದಾಜು ಸಂಬಳ 10 ಲಕ್ಷ ರೂಪಾಯಿಗೂ ಅಧಿಕವಾಗಿದೆ ಎಂದು ವಾರ್ಷಿಕ ವರದಿಯಲ್ಲಿ ತಿಳಿದು ಬಂದಿದೆ.
ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಉದ್ಯೋಗಿಗಳ ಸ್ಯಾಲರಿ ಪ್ಯಾಕೇಜ್ 10 ಲಕ್ಷ ರೂಪಾಯಿಗಿಂತಲೂ ಹೆಚ್ಚಾಗಿದೆ. ಅದಾನಿ ಸಮೂಹ ಸಂಸ್ಥೆಯ 2024ರ ಆರ್ಥಿಕ ವರ್ಷದ ವಾರ್ಷಿಕ ವರದಿ ಪ್ರಕಟವಾಗಿದೆ. ಈ ವರದಿಯ ಪ್ರಕಾರ, ಪುರುಷ ಸಿಬ್ಬಂದಿಯ ಬೇಸಿಕ್ ಸ್ಯಾಲರಿ ಪ್ಯಾಕೇಜ್ 10.35 ಲಕ್ಷ ರೂಪಾಯಿ ಆಗಿದೆ. ಇನ್ನು ಮಹಿಳಾ ಸಿಬ್ಬಂದಿಯ ಸರಾಸರಿ ಸಂಬಳ 9.25 ಲಕ್ಷ ರೂಪಾಯಿ ಆಗಿದೆ. ಈ ಸಂಬಳದ ಜೊತೆ ಅದಾನಿ ಗ್ರೂಪ್ ತನ್ನ ನೌಕರರಿಗೆ ಹಲವು ಸೌಲಭ್ಯಗಳನ್ನು ನೀಡುತ್ತದೆ. ಸಂಬಳದ ಜೊತೆ ಸೌಲಭ್ಯಗಳನ್ನು ಲೆಕ್ಕ ಹಾಕಿದ್ರೆ ಸಂಬಳ ಹೆಚ್ಚಾಗುತ್ತದೆ.
undefined
ಈ ಕಂಪನಿಯ ಮ್ಯಾನೇಜ್ಮೆಂಟ್ ಲೆವಲ್‌ನಲ್ಲಿ ನಿಯುಕ್ತರಾಗಿರುವ ಪುರುಷ ಸಿಬ್ಬಂದಿಯ ಸಂಬಳ 41.48 ಲಕ್ಷ ರೂಪಾಯಿ ಆಗಿದೆ. ಈ ಸಂಬಳದಲ್ಲಿ ಬೇಸಿಕ್ ಮತ್ತು ಇನ್‌ಸೆಂಟಿವ್ ಸಹ ಸೇರ್ಪಡೆಯಾಗಿರುತ್ತದೆ. ಮ್ಯಾನೇಜ್ಮೆಂಟ್ ಲೆವಲ್‌ನಲ್ಲಿಯೇ ಕೆಲಸ ಮಾಡುವ ಮಹಿಳಾ ಸಿಬ್ಬಂದಿ 40.42 ಲಕ್ಷ ರೂಪಾಯಿಯವರೆಗೂ ಪ್ಯಾಕೇಜ್ ಪಡೆದುಕೊಳ್ಳುತ್ತಾರೆ. ಎಕ್ಸಿಕ್ಯೂಟಿವ್ ಲೆವಲ್‌ನಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯೇ ಹೆಚ್ಚು ಸಂಬಳ ಪಡೆಯುತ್ತಾರೆ. ಈ ಮಟ್ಟದಲ್ಲಿರುವ ಮಹಿಳಾ ಸಿಬ್ಬಂದಿ ಪ್ಯಾಕೇಜ್ 169.83 ಲಕ್ಷ ರೂಪಾಯಿ ಆಗಿದ್ರೆ, ಪುರುಷರು 151.46 ಕೋಟಿ ರೂಪಾಯಿ ಪ್ಯಾಕೇಜ್ ಪಡೆಯುತ್ತಾರೆ.
ಭಾರತದಲ್ಲಿ ಹೆಚ್ಚು ಟ್ಯಾಕ್ಸ್ ಪಾವತಿದಾರರು ಯಾರು? ಅಂಬಾನಿ, ಅದಾನಿ ಇವರಲ್ಲಿ ಭಾರತ ಸರ್ಕಾರದ ಖಜಾನೆ ತುಂಬಿಸೋರು ಯಾರು?
ಕಂಪನಿಯ ಆರ್ಥಿಕ ವರದಿ ಪ್ರಕಾರ, ಗೌತಮ್ ಅಂಬಾನಿಯವರು ತಮ್ಮದೇ ಕಂಪನಿಯಲ್ಲಿ ಹಿಂದಿನ ವರ್ಷ 2.46 ಕೋಟಿ ರೂಪಾಯಿ ಸಂಬಳ ಪಡೆದುಕೊಂಡಿದ್ದರು. ಇದರಲ್ಲಿ 2.19 ಕೋಟಿ ರೂ. ಸಂಬಳವಾಗಿದ್ದರೆ, 27 ಲಕ್ಷ ಇತರೆ ಭತ್ಯೆ ಆಗಿತ್ತು. ಕಂಪನಿಯು ನಿರ್ವಹಣಾ ಮಟ್ಟದ ಉದ್ಯೋಗಿಗಳ ವೇತನವನ್ನು ಸರಾಸರಿ ಶೇಕಡಾ 12 ರಷ್ಟು ಹೆಚ್ಚಿಸಿದೆ, ಆದರೆ ಮ್ಯಾನೇಜ್‌ಮೆಂಟ್ ಮಟ್ಟದ ಉದ್ಯೋಗಿಗಳ ಸರಾಸರಿ ಹೆಚ್ಚಳವು ಶೇಕಡಾ 5.37 ರಷ್ಟಿದೆ.
ಅದಾನಿ ಗ್ರೂಪ್ 8 ವಿವಿಧ ವಲಯಗಳಲ್ಲಿ ವ್ಯವಹಾರ ನಡೆಸುತ್ತಿದೆ. ಇದರಲ್ಲಿ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, ಅದಾನಿ ಸೋಲಾರ್-ವಿಂಡ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ ಮತ್ತು ಎಸ್‌ಇಜೆಡ್, ಅದಾನಿ ಎನರ್ಜಿ ಸೊಲ್ಯೂಷನ್ಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ವಿಲ್ಮಾರ್, ಅದಾನಿ ಪವರ್ ಸೇರಿವೆ.
ಕೋಟಿ ಕೋಟಿ ಇದ್ರೂ ರಾತ್ರೋ ರಾತ್ರಿ ಫುಟ್‌ಪಾತ್‌ನಲ್ಲಿ ಕಾಣಿಸಿಕೊಂಡ ಅಂಬಾನಿ ದಂಪತಿ