ಪ್ರತಿಷ್ಠಿತ ಆ್ಯಪಲ್ ಕಂಪನಿಗೆ ಇನ್ನು ಭಾರತೀಯ ಮೂಲದ ಕೆವನ್ ಪರೇಖ್ ಸಿಎಫ್ಒ!

By Chethan KumarFirst Published Aug 27, 2024, 10:55 PM IST
Highlights

ಜಗತ್ತಿನ ಪ್ರತಿಷ್ಠಿತ ಕಂಪನಿಗಳ ಪ್ರಮುಖ ಹುದ್ದೆಯಲ್ಲಿ ಭಾರತೀಯರೇ ಮೇಲುಗೈ ಸಾಧಿಸಿದ್ದಾರೆ ಅನ್ನೋ ಹೆಗ್ಗಳಿಕೆ ಮಾತಿಗೆ ಮತ್ತೊಂದು ಸೇರಿಕೊಂಡಿದೆ. ಇದೀಗ ಪ್ರತಿಷ್ಠಿತ ಆ್ಯಪಲ್ ಕಂಪನಿಗೆ ಇನ್ನು ಭಾರತೀಯ ಮೂಲದ ಕೆವನ್ ಪರೇಖ್ ಸಿಎಫ್ಒ.
 

ಕ್ಯಾಲಿಫೋರ್ನಿಯಾ(ಆ.27) ಗೂಗಲ್, ಮೈಕ್ರೋಸಾಫ್ಟ್, ಆಡೋಬ್ ಇಂಕ್, ಐಬಿಎಂ, ಮೈಕ್ರಾನ್ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಟೆಕ್ ಹಾಗೂ ಇತರ ಕಂಪನಿಗಳ ಸಿಇಒ ಭಾರತೀಯರು. ಹಲವು ಕಂಪನಿಗಳ ಪ್ರಮುಖ ಹುದ್ದೆಯಲ್ಲಿ ಭಾರತೀಯರೇ ತುಂಬಿದ್ದಾರೆ. ಇದೀಗ ಪ್ರತಿಷ್ಠಿತ ಕಂಪನಿಗಳ ಭಾರತೀಯ ಪ್ರಮುಖರ ಲಿಸ್ಟ್‌ಗೆ ಇದೀಗ ಮತ್ತೊಬ್ಬ ಸಾಧಕ ಸೇರಿಕೊಂಡಿದ್ದಾರೆ. ಆ್ಯಪಲ್ ಕಂಪನಿಯ ಮುಂದಿನ ಸಿಎಫ್ಒ ಆಗಿ ಭಾರತೀಯ ಮೂಲದ ಕೆವನ್ ಪರೇಖ್ ಆಯ್ಕೆಯಾಗಿದ್ದಾರೆ. ಜನವರಿ 1, 2025ರಂದು ಕೆವನ್ ಪರೇಖ್ ಆ್ಯಪಲ್ ಸಿಎಫ್ಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಆ್ಯಪಲ್ ಕಂಪನಿಯ ಚೀಫ್ ಫಿನಾನ್ಶಿಯಲ್ ಆಫೀಸರ್ ಆಗಿ ಕೆವನ್ ಪರೇಕ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಲಿ ಸಿಎಫ್ಒ ಲುಕಾ ಮಯೆಸ್ಟ್ರಿ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಕೆವನ್ ಪರೇಖ್ ಆಯ್ಕೆಯಾಗಿದ್ದಾರೆ. ಆ್ಯಪಲ್ ಸಿಇಒ ಟಿಮ್ ಕುಕ್ ಈ ಮಾಹಿತಿ ನೀಡಿದ್ದಾರೆ. ಸದ್ಯ ಆ್ಯಪಲ್ ಕಂಪನಿಯ ಆರ್ಥಿಕ ಯೋಜನೆ ಹಾಗೂ ಆನಾಲಿಸ್ ಉಪಾಧ್ಯಕ್ಷರಾಗಿರುವ ಕೆವನ್ ಪರೇಖ್ ಮುಂದಿನ ವರ್ಷದ ಆರಂಭದಿಂದ ಚೀಫ್ ಫಿನಾನ್ಶಿಯಲ್ ಆಫೀಸರ್ ಆಗಿ ಬಡ್ತಿ ಪಡೆಯಲಿದ್ದಾರೆ. 2013ರಿಂದು ಲುಕಾ ಆ್ಯಪಲ್ ಕಂಪನಿಯ ಸಿಎಫ್ಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Latest Videos

 ಬೆಂಗಳೂರಿನ ಈ ಸಿಇಒ ನೀವು ಕೇಳಿದಷ್ಟು ಸ್ಯಾಲರಿ ಕೊಡ್ತಾರೆ, ಚೌಕಾಸಿ ಮಾತೇ ಇಲ್ಲ!

ಕೆವನ್ ಪರೇಖ್ ಕಳೆದ 11 ವರ್ಷದಿಂದ ಆ್ಯಪಲ್ ಕಂಪನಿಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದಾರೆ. ಅದರಲ್ಲೂ ಫಿನಾನ್ಶಿಯಲ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಗೆ ಕವೆನ್ ಪರೇಖ್ ಹೆಗಲಿಗಿದೆ. ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಸೈನ್ಸ್ ಇನ್ ಎಲೆಕ್ಟ್ರಿಕ್ ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ. ಚಿಕಾಗೋ ಯುನಿವರ್ಸಿಟಿಯಿಂದ ಎಂಬಿಎ ಪದವಿಯನ್ನೂ ಪಡೆದಿದ್ದಾರೆ. 

52 ವರ್ಷದ ಕೆವನ್ ಪರೇಖ್ ಆ್ಯಪಲ್ ಕಂಪನಿಯಲ್ಲಿ ಕಳೆದ 11 ವರ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದಾರೆ. ಇನ್‌ವೆಸ್ಟರ್ ರಿಲೇಶನ್, ಮಾರ್ಕೆಟ್ ರಿಸರ್ಚ್, ಅನಾಲಿಸ್ ವಿಂಗ್‌ನಲ್ಲೂ ಕೆಲಸ ಮಾಡಿದ್ದಾರೆ. ಆ್ಯಪಲ್ ಕಂಪನಿ ಸೇರಿಕೊಳ್ಳುವ ಮೊದಲು ಕೆವನ್ ಪರೇಖ್ ಥಾಮ್ಸನ್ ರಾಯಿಟರ್ಸ್ ಹಾಗೂ ಜನರಲ್ ಮೋಟಾರ್ಸ್ ಕಂಪನಿಯಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿದ್ದಾರೆ.

ಕೆವನ್ ಪರೇಖ್ ಆ್ಯಪಲ್ ಕಂಪನಿಯ ಭಾಗವಾಗಿ 11 ವರ್ಷಗಳು ಉರುಳಿದೆ. ಆ್ಯಪಲ್ ಕಂಪನಿಯ ಎಲ್ಲಾ ಸೂಕ್ಷ್ಮತೆಗಳನ್ನು ಅರಿತುಕೊಂಡಿದ್ದಾರೆ. ಹಲವು ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಆ್ಯಪಲ್ ಆರ್ಥಿಕತೆಯಲ್ಲಿ ಶಿಸ್ತು, ಯೋಜನೆ ಎಲ್ಲವೂ ಕಂಪನಿಯ ಅಭಿವೃದ್ಧಿಗೆ ಪೂರಕವಾಗಿದೆ. ಇದೀಗ ಹೊಸ ಜವಾಬ್ದಾರಿಯನ್ನು ಪರೇಖ್ ಯಶಸ್ವಿಯಾಗಿ ನಿರ್ವಹಿಸಲಿದ್ದಾರೆ ಎಂದು ಸಿಇಒ ಟಿಮ್ ಕುಕ್ ಹೇಳಿದ್ದಾರೆ.

ಉದ್ಯೋಗಕ್ಕಾಗಿ ರೆಸ್ಯೂಮ್ ಜೊತೆ ಫಿಜಾ ಕಳುಹಿಸಿದ ಅಭ್ಯರ್ಥಿ, ವಿನೂತನ ಐಡಿಯಾಗೆ ಬಾಸ್ ಇಂಪ್ರೆಸ್!

click me!